ಜಿಹಾದಿ ಉಗ್ರಗಾಮಿಗಳಿಂದ ಜಮ್ಮುವಿನ ದೇವಾಲಯಗಳ ಮೇಲೆ ಆಕ್ರಮಣ ಮಾಡುವ ಷಡ್ಯಂತ್ರ !

ಜಿಹಾದಿ ಉಗ್ರಗಾಮಿಗಳಿಗೆ ಧರ್ಮ(ಪಂಥ) ಇರುವುದರಿಂದಲೇ ಅವರು ತಮ್ಮ ಧಾರ್ಮಿಕ ಸ್ಥಳಗಳ ಮೇಲಲ್ಲ, ಹಿಂದೂಗಳ ದೇವಾಲಯಗಳ ಮೇಲೆ ಆಕ್ರಮಣ ನಡೆಸಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ!

ಜಮ್ಮು (ಜಮ್ಮು-ಕಾಶ್ಮೀರ) – ಜಮ್ಮು- ಕಾಶ್ಮೀರಕ್ಕಾಗಿ ನೀಡಿದ್ದ ಅನುಚ್ಛೇದ 370 ರದ್ದುಪಡಿಸಿದ ಘಟನೆಗೆ ಆಗಸ್ಟ್ 5 ರಂದು 2 ವರ್ಷ ಪೂರ್ಣವಾಗಲಿದೆ. ಈ ನಿಮಿತ್ತ ಹಾಗೂ ಆಗಸ್ಟ್ 15 ಸ್ವಾತಂತ್ರ್ಯದಿನದ ಹಿನ್ನೆಲೆಯಲ್ಲಿ ಜಿಹಾದಿ ಉಗ್ರಗಾಮಿಗಳು ಹಿಂದೂಗಳ ದೇವಾಲಯಗಳ ಮೇಲೆ ಹಾಗೂ ಗುಂಪು ಸೇರಿರುವ ಸ್ಥಳಗಳಲ್ಲಿ ಆಕ್ರಮಣ ನಡೆಸುವ ಷಡ್ಯಂತ್ರವನ್ನು ರಚಿಸಿರುವುದರ ಗೌಪ್ಯ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಲಷ್ಕರ್-ಎ-ತೋಯಿಬಾ ಹಾಗೂ ಜೈಶ್-ಎ-ಮೊಹಮ್ಮದ್ ಎಂಬ ಉಗ್ರಗಾಮಿ ಸಂಘಟನೆಗಳು ಬಾಂಬ್‍ಸ್ಫೋಟ ಮಾಡಿ ಆಕ್ರಮಣ ನಡೆಸಲು ಪ್ರಯತ್ನಿಸಲಿವೆ ಎಂಬ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಪೊಲೀಸರಿಗೆ ಸತರ್ಕರಾಗಿರುವಂತೆ ಮುನ್ಸೂಚನೆ ನೀಡಲಾಗಿದೆ. ‘ಉಗ್ರಗಾಮಿಗಳು ಹಲ್ಲೆ ನಡೆಸಲು ಡ್ರೋನ್‍ಅನ್ನು ಬಳಸುವುದರ ಸಾಧ್ಯತೆಯಿರುವುದರಿಂದ ಡ್ರೋನ್‍ವಿರುದ್ಧ ಯುದ್ಧನೀತಿ ತಯಾರಿಸಲಾಗಿದೆ’, ಎಂದು ಪೊಲೀಸರು ಹೇಳಿದ್ದಾರೆ.