ಕಳೆದ ೩ ದಶಕಗಳಿಂದ ಭಾರತ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವವನ್ನು ಭಯೋತ್ಪಾದನೆಯ ಕರಿನೆರಳಿನಲ್ಲಿ ಆಚರಿಸುತ್ತಿದೆ, ಇದು ಇಲ್ಲಿವರೆಗಿನ ಎಲ್ಲಾ ಪಕ್ಷದ ಆಡಳಿತಗಾರರಿಗೆ ನಾಚಿಕೆಯ ಸಂಗತಿಯಾಗಿದೆ !
ನವದೆಹಲಿ : ದೇಶದ ರಾಜಧಾನಿ ದೆಹಲಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕಾರ್ಯಕ್ರಮದ ಸಿದ್ಧತೆ ನಡೆಯುತ್ತಿರುವಾಗ ಭದ್ರತೆಯ ದೃಷ್ಟಿಯಲ್ಲಿಯೂ ಎಚ್ಚರಿಕೆಯನ್ನು ನಿರ್ವಹಿಸಲಾಗುತ್ತಿದೆ. ದೆಹಲಿ ಪೊಲೀಸರು ಕೆಂಪು ಕೋಟೆಯ ಪರಿಸರದಲ್ಲಿ ಪರಾರಿಯಾಗಿರುವ ೬ ಭಯೋತ್ಪಾದಕರ ಛಾಯಾಚಿತ್ರ ಮತ್ತು ಮಾಹಿತಿಯಿರುವ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಭಯೋತ್ಪಾದಕರು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
ಪೊಲೀಸರು ಈ ಆರೂ ಭಯೋತ್ಪಾದಕರು ಅಲ್-ಕೈದಾ ಭಯೋತ್ಪಾದಕ ಸಂಘಟನೆಗೆ ಸಂಬಂಧಪಟ್ಟವರಾಗಿದ್ದಾರೆ. ಗುಪ್ತಚರ ಇಲಾಖೆಗಳಿಂದ ಮಾಹಿತಿ ಪಡೆದ ನಂತರ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಸಮಯದಲ್ಲಿ ಈ ಭಯೋತ್ಪಾದಕರು ಕೇವಲ ದೆಹಲಿಯಲ್ಲಿ ಮಾತ್ರವಲ್ಲ, ದೇಶದ ಯಾವುದೇ ಭಾಗದಲ್ಲಿ ಕಾರ್ಯಾಚರಣೆ ನಡೆಸಬಹುದು. ರೈತರ ಚಳುವಳಿಯ ನೆಪದಲ್ಲಿ ಕೆಲವರು ದೆಹಲಿಯಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಪ್ರಯತ್ನಿಸಬಹುದು. ಇದಕ್ಕಾಗಿ ಅವರು ಡ್ರೋನ್‌ಗಳನ್ನು ಕೂಡ ಬಳಸಬಹುದು. ಆದ್ದರಿಂದ ಡ್ರೋನ್ ಹಾರಾಟವನ್ನು ಕೂಡ ನಿಷೇಧಿಸಲಾಗಿದೆ.