ತ್ರಿಪುರಾದಲ್ಲಿ ಭಯೋತ್ಪಾದಕರ ಆಕ್ರಮಣದಲ್ಲಿ ಇಬ್ಬರು ಸೈನಿಕರು ಹುತಾತ್ಮರು!

ಸ್ವಾತಂತ್ರ್ಯ ದೊರಕಿದ 74 ವರ್ಷಗಳಲ್ಲಿ ಭಾರತವು ಒಂದಾದರು ಆತಂಕವಾದಿ ಸಂಘಟನೆಯನ್ನು ಕೊನೆಗಾಣಿಸಿದೆಯೇನು?

ಹುತಾತ್ಮರಾದ ಸೈನಿಕರು

ಅಗರತಳಾ (ತ್ರಿಪುರ)- ರಾಜ್ಯದ ಧಲಾಯಿ ಜಿಲ್ಲೆಯ ಬಾಂಗ್ಲಾದೇಶ ಗಡಿಯ ಹತ್ತಿರ ಇರುವ ಗಡಿ ಸುರಕ್ಷಾ ದಳದ ಚೌಕಿಯ ಮೇಲೆ ಆತಂಕವಾದಿಗಳು ನಡೆಸಿದ ಆಕ್ರಮಣದಲ್ಲಿ ಸೀಮಾ ಸುರಕ್ಷಾ ದಳದ ಇಬ್ಬರು ಸೈನಿಕರು ಹುತಾತ್ಮರಾದರು. ಅದರಲ್ಲಿ ಒಬ್ಬರು ಉಪನಿರೀಕ್ಷಕರು (ಸಬ್ ಇನ್ಸ್ ಪೆಕ್ಟರ್) ಇದ್ದರು. ಆತಂಕವಾದಿ ಯು ಸೈನಿಕರಿಂದ ಶಸ್ತ್ರಾಸ್ತ್ರಗಳನ್ನು ಕಳವು ಮಾಡಿದ್ದಾರೆ. ನಿಷೇದಿತ ಆತಂಕವಾದಿ ಸಂಘಟನೆ ನ್ಯಾಷನಲ್ ಲಿಬರೇಷನ್ ಫ್ರಂಟ್ ಆಫ್ ತ್ರಿಪುರ (ಎನ. ಎಲ್.ಎಫ. ಟಿ) ಇವರಿಂದ ಈ ಆಕ್ರಮಣವನ್ನು ನಡೆಸಲಾಯಿತು.