ಅಫ್ಘಾನಿಸ್ತಾನದಲ್ಲಿ ತಾಲಿಬಾನ್‍ಗೆ ಸಹಾಯ ಮಾಡಲು ಹೋದ ಪಾಕಿಸ್ತಾನದ ಮದರಸಾಗಳ ಯುವಕರನ್ನು ಕೊಲ್ಲಲ್ಪಡುತ್ತಿದ್ದಾರೆ !

ಪಾಕಿಸ್ತಾನದ ಗೃಹ ಸಚಿವರಿಂದ ಸ್ವೀಕೃತಿ !

ಪಾಕಿಸ್ತಾನವು ತಾಲಿಬಾನ್‍ಗೆ ಸಹಾಯ ಮಾಡುತ್ತಿದೆ ಎಂಬುದು ಬಹಿರಂಗವಾಗಿದೆ !

ಮೃತಪಟ್ಟ ಜಿಹಾದಿ ಯುವಕರು

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಮದರಸಾಗಳಿಂದ ಅನೇಕ ಜಿಹಾದಿ ಯುವಕರು ತಾಲಿಬಾನ್ ಗೆ ಸಹಾಯ ಮಾಡಲು ಅಫ್ಘಾನಿಸ್ತಾನಕ್ಕೆ ಹೋಗಿದ್ದು, ಅವರಲ್ಲಿ ಅನೇಕರು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ. ಅವರ ಶವಗಳನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತಿದೆ. ಮದರಸಾದ ಸಂಚಾಲಕರಾಗಿರುವ ಮೌಲ್ವಿಗಳು (ಇಸ್ಲಾಮಿಕ್ ಧಾರ್ಮಿಕ ನಾಯಕರು) ಈ ಯುದ್ಧಕ್ಕೆ ‘ಜಿಹಾದ್’ ಎಂದು ಹೇಳುತ್ತಿದ್ದಾರೆ. ಅವರು ಸಂಪೂರ್ಣ ಪಾಕಿಸ್ತಾನದಲ್ಲಿ ಬೆಂಬಲವನ್ನು ಪಡೆಯುತ್ತಿದ್ದಾರೆ, ಜೊತೆಗೆ ತಾಲಿಬಾನ್‍ಗಾಗಿ ಹಣವನ್ನು ಸಂಗ್ರಹಿಸುತ್ತಿದ್ದಾರೆ.

ಪಾಕಿಸ್ತಾನದ ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್ ಪಖ್ತುಂಖ್ವಾ ಮತ್ತು ಬಲೂಚಿಸ್ತಾನ ಪ್ರಾಂತ್ಯಗಳ ಸ್ಥಳೀಯರು ಹೇಳಿದ ಪ್ರಕಾರ, ಪಾಕಿಸ್ತಾನಿ ಯುವಕರು ತಾಲಿಬಾನ್ ಜೊತೆಗೆ ಅಫ್ಘಾನ್ ಸೇನೆಯೊಂದಿಗೆ ಹೋರಾಡುತ್ತಿರುವಾಗ ಹೆಚ್ಚಿನ ಸಂಖ್ಯೆಯಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಮೃತಪಟ್ಟ ಜಿಹಾದಿ ಯುವಕರನ್ನು ದಫನ್ ಮಾಡುವಾಗ ದೊಡ್ಡ ಸಂಖ್ಯೆಯಲ್ಲಿ ಜನರು ಉಪಸ್ಥಿತರಿರುತ್ತಾರೆ ಎಂದು ಹೇಳಿದ್ದಾರೆ. ಪಾಕಿಸ್ತಾನದ ಗೃಹಸಚಿವ ಶೇಖ ರಶೀದ ಇವರು, ಕೆಲವು ಭಯೋತ್ಪಾದಕರ ಶವಗಳನ್ನು ಪಾಕಿಸ್ತಾನಕ್ಕೆ ತರಲಾಗುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ.