ಭಯೋತ್ಪಾದಕರಿಗೆ ಒದಗಿಸಲಾಗುವ ಹಣಕಾಸು ಹಾಗೂ ತಾಂತ್ರಿಕ ಸಹಾಯವನ್ನು ತಡೆಗಟ್ಟಲು ಪ್ರಯತ್ನಿಸುವೆವು !

ಸಂಯುಕ್ತ ರಾಷ್ಟ್ರ ಸುರಕ್ಷಾ ಪರಿಷತ್ತಿನ ಅಧ್ಯಕ್ಷನಾಗಿರುವ ಭಾರತದ ಶುಭಾರಂಭ !

ಬಲಭಾಗದಲ್ಲಿ  ಟಿ.ಎಸ್. ತಿರುಮೂರ್ತಿ

ನ್ಯೂಯಾರ್ಕ್ (ಅಮೇರಿಕಾ) – ಸಂಯುಕ್ತ ರಾಷ್ಟ್ರ ಸುರಕ್ಷಾ ಪರಿಷತ್ತಿನ ಅಧ್ಯಕ್ಷನಾಗಿ ಕೆಲಸ ಮಾಡುವಾಗ ಭಾರತವು ಭಯೋತ್ಪಾದಕರಿಗೆ ಒದಗಿಸಲಾಗುವ ಹಣಕಾಸು ಹಾಗೂ ಆಕ್ರಮಣಕ್ಕಾಗಿ ಬಳಸಲಾಗುವ ಅತ್ಯಾಧುನಿಕ ತಂತ್ರಗಳನ್ನು ತಡೆಯುವ ಕೆಲಸ ಮಾಡಲಿದೆ, ಎಂದು ಸಂಯುಕ್ತ ರಾಷ್ಟ್ರದಲ್ಲಿನ ಭಾರತದ ಶಾಶ್ವತ ರಾಯಭಾರಿ ಟಿ.ಎಸ್. ತಿರುಮೂರ್ತಿಯವರು ನುಡಿದರು. ಭಾರತವು ಆಗಸ್ಟ್ ತಿಂಗಳಿಗಾಗಿ ಅಧ್ಯಕ್ಷನಾಗಿದೆ, ಹಾಗೂ ವರ್ಷ 2021-22 ರ ಕಾಲದ ತಾತ್ಕಾಲಿಕ ಸದಸ್ಯನಾಗಿದೆ. ಸದಸ್ಯ ದೇಶಗಳಿಗೆ ಒಂದೊಂದು ತಿಂಗಳಿಗಾಗಿ ಅಧ್ಯಕ್ಷಪದವಿ ಸಿಗುತ್ತಿರುತ್ತದೆ.

ಸಂಯುಕ್ತ ರಾಷ್ಟ್ರಗಳ ಕಾರ್ಯಕ್ರಮದ ವಿಷಯವಾಗಿ ತಿರುಮೂರ್ತಿಯವರು, ಸಮುದ್ರ ಸುರಕ್ಷೆ, ಭಯೋತ್ಪಾದನೆಯನ್ನು ಎದುರಿಸುವುದು ಹಾಗೂ ಶಾಂತಿಪಾಲನೆಗೆ ಪ್ರಾಧಾನ್ಯತೆ ನೀಡಲಾಗುವುದು ಎಂದು ಹೇಳಿದರು. ಪ್ರಧಾನಮಂತ್ರಿ ಮೋದಿಯವರು ‘ಸಮುದ್ರ ಸುರಕ್ಷೆ’ಯ ಮೇಲೆ ಆಗಸ್ಟ್ 9 ರಂದು ನಡೆಯಲಿರುವ ಚರ್ಚೆಯಲ್ಲಿ ಅಧ್ಯಕ್ಷಸ್ಥಾನವನ್ನು ಅಲಂಕರಿಸಲಿದ್ದಾರೆ. ವಿದೇಶಾಂಗ ವ್ಯವಹಾರಗಳ ಮಂತ್ರಿ ಎಸ್. ಜಯಶಂಕರರವರು ಆಗಸ್ಟ್ 18 ರಂದು ‘ಶಾಂತಿ ಪಾಲನೆ ಹಾಗೂ ತಂತ್ರಜ್ಞಾನ’ದ ಬಗ್ಗೆ ಆಯೋಜಿಸಿರುವ ಚರ್ಚಾಕೂಟದ ಅಧ್ಯಕ್ಷಪದವಿಯನ್ನು ವಹಿಸಲಿದ್ದಾರೆ. ಆಗಸ್ಟ್ 19 ರಂದು ಜಯಶಂಕರರು ಸಂಯುಕ್ತ ರಾಷ್ಟ್ರದ ಮುಖ್ಯ ಕಾರ್ಯದರ್ಶಿಯಾದ ಆಂತೊನಿಯೋ ಗುಟ್ರೆಸರವರ ಐಸಿಸ್ ಮೇಲಿನ (ಇಸ್ಲಾಮಿಕ್ ಸ್ಟೇಟ್ ಅಂದರೆ ಇಸ್ಲಾಮಿಕ್ ರಾಜ್ಯದ) ವರದಿಯ ವಿಷಯದ ಚರ್ಚೆಯಲ್ಲಿಯೂ ಭಾಗವಹಿಸಲಿದ್ದಾರೆ.