ಭಯೋತ್ಪಾದಕರಿಂದ ದೇವಾಲಯಗಳ ಮೇಲೆ ದಾಳಿ ಮಾಡುವ ಸಂಚು !

ಜಮ್ಮು-ಕಾಶ್ಮೀರದಲ್ಲಿ ಎನ್.ಐ.ಎ.ಯಿಂದ ೧೪ ಸ್ಥಳಗಳಲ್ಲಿ ದಾಳಿ

ಶ್ರೀನಗರ (ಜಮ್ಮು-ಕಾಶ್ಮೀರ) – ರಾಜ್ಯದ ದೇವಾಲಯಗಳ ಮೇಲೆ ದಾಳಿ ಮಾಡುವ ಸಂಚನ್ನು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು ರಾಜ್ಯದ ೧೪ ಸ್ಥಳಗಳಲ್ಲಿ ದಾಳಿ ನಡೆಸಿದೆ. ಕಳೆದ ವಾರದಲ್ಲಿ ಪೊಲೀಸರು ಇಬ್ಬರು ಭಯೋತ್ಪಾದಕರನ್ನು ಸ್ಪೋಟಕ ಸಹಿತ ಬಂಧಿಸಿದ್ದರು. ಅವರು ನೀಡಿದ ಮಾಹಿತಿಯ ಮೇರೆಗೆ ಇತರ ಇಬ್ಬರನ್ನು ಬಂಧಿಸಲಾಗಿತ್ತು.. ಅವರ ವಿಚಾರಣೆಯಿಂದ ಸಿಕ್ಕಿದ ಮಾಹಿತಿಯ ಮೇರೆಗೆ ಈ ದಾಳಿಯನ್ನು ಮಾಡಲಾಗಿದೆ. ಈ ದಾಳಿಯಲ್ಲಿ ಏನೆಲ್ಲಾ ಪತ್ತೆಯಾಗಿವೆ, ಇದು ಇನ್ನೂ ಬಹಿರಂಗ ಪಡಿಸಿಲ್ಲ.