ಸದಾ ಭಾವಾವಸ್ಥೆಯಲ್ಲಿರುವ ಸನಾತನದ ಸಂತರಾದ ಪೂ. ವಿನಾಯಕ ಕರ್ವೆಮಾಮಾ

ಮಂಗಳೂರಿನ ಸೇವಾಕೇಂದ್ರದಲ್ಲಿ ಇರುವ ಸನಾತನ ಸಂತರಾದ ಪೂ. ವಿನಾಯಕ ಕರ್ವೇ ಮಾಮಾರವರಿಂದ ಕಲಿತ ಅಂಶವನ್ನು ಬರೆಯಲು ಪ್ರಯತ್ನಿಸುತ್ತಿದ್ದೇನೆ. ಆಶ್ವಯುಜ ಕೃಷ್ಣ ಪಕ್ಷ ಚತುರ್ಥಿ (೨೪.೧೦.೨೧೨೧)ಯಂದು ಇರುವ ಅವರ ಹುಟ್ಟುಹಬ್ಬದ ನಿಮಿತ್ತ ಅವರ ಚರಣಗಳಲ್ಲಿ ಸಮರ್ಪಣೆ.

ಪೂ.  ವಿನಾಯಕ ಕರ್ವೇಮಾಮಾನವರ ದಿನಚರಿಯು ಬಹಳ ಆದರ್ಶವಾಗಿದೆ. ನಿಯಮಿತ ಪ್ರಾಣಾಯಾಮ, ವ್ಯಾಯಾಮ, ಯೋಗ, ಬಿಸಿಲಿನಲ್ಲಿ ಕುಳಿತು ಉಪಾಯ ಮಾಡುವುದು ಇವೆಲ್ಲವನ್ನೂ ನಿಯಮಿತವಾಗಿ ಮಾಡುತ್ತಾರೆ. ಅದರಲ್ಲಿ ವ್ಯತ್ಯಯ ಇರುವುದಿಲ್ಲ. ಆಹಾರ ಸೇವನೆಯ ವಿಷಯದಲ್ಲಿಯೂ ಪೂ. ಮಾಮಾ ಎಲ್ಲ ಆಯುರ್ವೇದಿಕ ನಿಯಮಗಳ ಪಾಲನೆಯನ್ನು ಮಾಡುತ್ತಾರೆ. ಪ್ರತಿಯೊಂದು ಸಮಯವನ್ನು ಚಾಚುತಪ್ಪದೇ ಪಾಲಿಸುತ್ತಾರೆ. ಶಾರೀರಿಕ ಸುದೃಢತೆಗಾಗಿ ನಿಯಮಿತ ವ್ಯಾಯಾಮ ಪ್ರಾಣಾಯಾಮ ಮಾಡುವುದು

ಅಧ್ಯಾತ್ಮಿಕ ಉಪಾಯದ ಸಮಯದಲ್ಲಿ ಬೆನ್ನಿಗೆ ಆಧಾರ ನೀಡದೇ ೧ ಗಂಟೆಕಾಲ ಕುಳಿತುಕೊಳ್ಳುವುದು

ಅವರು ಸಾಧಕರಿಗಾಗಿ ಆಧ್ಯಾತ್ಮಿಕ ಉಪಾಯವನ್ನು ಮಾಡುತ್ತಾರೆ. ಆಗ ಪೂ. ಮಾಮಾನವರು ಖುರ್ಚಿಯನ್ನು ಬಳಸದೇ ಒಂದು ಬಟ್ಟೆಯ ಆಸನದ ಮೇಲೆ ಹಿಂದೆ ಒರಗದೇ ೧ ಗಂಟೆಗಳ ಕಾಲ ನೇರ ಕುಳಿತುಕೊಳ್ಳುತ್ತಾರೆ. ಅಲ್ಲದೇ ಇತರ ಸತ್ಸಂಗಗಳ ಸಮಯದಲ್ಲಿಯೂ ಅವರು ಆಸನಕ್ಕೆ ಒರಗದೇ ಕುಳಿತುಕೊಳ್ಳುತ್ತಾರೆ. ಸತತ ಈಶ್ವರನೊಂದಿಗೆ ಅನುಸಂಧಾನದಲ್ಲಿರುವುದರಿಂದ ಅದು ಅವರಿಗೆ ಸಾಧ್ಯವಾಗುತ್ತಿದೆ ಅನಿಸುತ್ತಿದೆ.

ಸತತ ಕಲಿಯುವ ಸ್ಥಿತಿಯಲ್ಲಿರುವುದು

ಶ್ರೀಮತಿ ಅಶ್ವಿನಿ ಪ್ರಭು

ಆಪತ್ಕಾಲದ ತಯಾರಿ ದೃಷ್ಟಿಯಿಂದ ಒಂದು ವಿಷಯದಲ್ಲಿ ಅವರು ನನ್ನಲ್ಲಿ ಮಾಹಿತಿ ಕೇಳಿದ್ದರು. ಅದರ ಎಲ್ಲ ಮಾಹಿತಿಯನ್ನು ಅವರೇ ತಯಾರಿಸಿದ್ದರು. ಆದರೂ ಅದನ್ನು ಪ್ರತಿಸಲ ತೋರಿಸುತ್ತಿದ್ದರು ಹಾಗೂ ಅದರಲ್ಲಿ ಮಾಡಬೇಕಾದ ತಿದ್ದುಪಡಿಯ ಬಗ್ಗೆ ನಮ್ರತೆಯಿಂದ ಕೇಳುತ್ತಿದ್ದರು. ಅಲ್ಲದೇ ಅವರು ನನಗೆ ಅಡಚಣೆಯಾಗಬಾರದೆಂದು ಅವರು ಸೇವಾಕೇಂದ್ರದ ಪಕ್ಕದಲ್ಲಿರುವ ನಮ್ಮ ಮನೆಗೆ ಸ್ವತಃ ಬರುತ್ತಿದ್ದರು.. ಅವರ ಆ ನಮ್ರತೆ, ಕಲಿಯುವ ವೃತ್ತಿ, ಕಡಿಮೆತನ ತೆಗೆದುಕೊಳ್ಳುವ ಪದ್ಧತಿಯಿಂದ ನನಗೆ ಬಹಳಷ್ಟು ಕಲಿಯಲು ಸಿಕ್ಕಿತು. ಅಲ್ಲದೇ ನೆನಪಿನಿಂದ ನನ್ನನ್ನು ಕರೆದು ಪ್ರಸಾದವನ್ನು ನೀಡಿದರು.

ಸನಾತನ ನಿರ್ಮಿತ ಗ್ರಂಥಗಳಷ್ಟೇ ಅಲ್ಲದೇ ಇತರ ಆಧ್ಯಾತ್ಮಿಕ ಗ್ರಂಥಗಳ ಬಗ್ಗೆಯೂ ಜ್ಞಾನವಿರುವುದು

ಸನಾತನ ಗ್ರಂಥಗಳ ಹೆಚ್ಚಿನ ಎಲ್ಲ ಗ್ರಂಥಗಳ ಬಗ್ಗೆ ಅವರ ಅಧ್ಯಯನವಾಗಿದೆ. ಎಲ್ಲ ಗ್ರಂಥಗಳ ಬಗ್ಗೆ ಅವರು ಬಿಡುವಿನ ಸಮಯದಲ್ಲಿ ಓದಿ ಗುರುಗಳು ಕೊಟ್ಟ ಜ್ಞಾನವನ್ನು ಕೃತಜ್ಞತಾಭಾವದಿಂದ ಅಧ್ಯಯನ ಮಾಡುತ್ತಿರುತ್ತಾರೆ. ಅದರಲ್ಲಿನ ವಿಷಯಗಳು ಮಾತ್ರವಲ್ಲ, ಅದರ ಬೆಲೆ, ಭಾಷೆ ಎಲ್ಲವೂ ಅವರಿಗೆ ನೆನಪಿರುತ್ತದೆ. ಸೇವಾಕೇಂದ್ರಕ್ಕೆ ಗ್ರಂಥ ಖರೀದಿಸಲು ಬರುವವರಿಗೂ ಹಣ ಪಾವತಿಸುವಾಗ ಅವರು ಯಾವುದೇ ರೀತಿಯ ಕ್ಯಾಲ್ಕುಲೇಟರ್ ಇತ್ಯಾದಿ ಉಪಯೋಗಿಸದೇ ತಕ್ಷಣ ಲೆಕ್ಕ ಮಾಡುತ್ತಾರೆ. ಕೇವಲ ಸನಾತನದ ಗ್ರಂಥಗಳು ಮಾತ್ರವಲ್ಲ, ದಾಸಬೋಧದಂತಹ ಗ್ರಂಥಗಳು ಸಹ ಅವರಿಗೆ ಕಂಠಪಾಠವಿದೆ. ಅವರನ್ನು ಸಂತರೆಂದು ಘೋಷಿಸಿದಾಗ ಅವರೊಂದಿಗೆ ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮಕ್ಕೆ ಹೋಗಿದ್ದೆವು. ಆಗ ಅವರು ದಾರಿಯಲ್ಲಿ ನಿರಂತರವಾಗಿ ‘ಮನಾಚೆ ಶ್ಲೋಕವನ್ನು (ಸಂತ ರಾಮದಾಸಸ್ವಾಮಿ ವಿರಚಿತ ಮರಾಠಿ ಶ್ಲೋಕ) ಹೇಳಿ ನಮಗೆಲ್ಲ ಆನಂದವನ್ನು ನೀಡಿ ಪ್ರವಾಸವನ್ನು ಆಧ್ಯಾತ್ಮಿಕವನ್ನಾಗಿಸಿದ್ದರು.

ಸಂತರ ಬಗ್ಗೆ ಗುರುಭಾವವಿರುವುದು

ಒಮ್ಮೆ ಕಾರವಾರದಲ್ಲಿರುವ ಅವರ ಮನೆಗೆ ಸನಾತನದ ಸಂತರಾದ ಪೂ. ಉಮೇಶಣ್ಣರೊಂದಿಗೆ ಹೋಗಿದ್ದೆವು. ಆಗ ಸಾಕ್ಷಾತ್ ಪ.ಪೂ. ಡಾಕ್ಟರರೇ ಅವರ ಮನೆಗೆ ಬಂದಿದ್ದಾರೆಂಬಂತೆ ಅವರ ಭಾವವಿತ್ತು. ಸಂತರು ಮನೆಗೆ ಬರುವವರಿದ್ದಾರೆ ಎಂಬ ಭಾವದಿಂದ ಅವರು ಎಲ್ಲ ರೀತಿಯ ತಯಾರಿಯನ್ನು ಅತ್ಯಂತ ಭಾವಪೂರ್ಣವಾಗಿ ಮಾಡಿದ್ದರು. ಪೂ. ಉಮೇಶ ಅಣ್ಣನವರನ್ನು ನೋಡಿದ ತಕ್ಷಣ ಅವರ ಭಾವವು ಉಕ್ಕಿ ಬಂದಿತ್ತು. ಕೇವಲ ಒಂದು ಕ್ಷಣದ ಆ ಭೇಟಿಯು ಅವಿಸ್ಮರಣೀಯವಾಗಿತ್ತು. ಸೇವಾಕೇಂದ್ರದಲ್ಲಿ ಕೆಲವೊಮ್ಮೆ ಸಾಧಕರಿಗಾಗಿ ಸನಾತನದ ಧರ್ಮಪ್ರಚಾರಕರಾದ ಪೂ. ರಮಾನಂದ ಅಣ್ಣನವರ ಸತ್ಸಂಗವಿರುತ್ತದೆ. ಆಗ ಅವರು ಸತತವಾಗಿ ಭಾವಾವಸ್ಥೆಯಲ್ಲಿರುತ್ತಾರೆ.

ಪೂ. ಕರ್ವೇ ಮಾಮಾನವರ ಆಧ್ಯಾತ್ಮಿಕ ನುಡಿಗಳು

ಅ. ಪೂ. ಮಾಮಾರವರು ‘ಲೆಸ್ ಲಗೇಜ್ ಮೊರ್ ಕಂಪರ್ಟ (ಕಡಿಮೆ ಸಾಮಾನು ಇದ್ದಷ್ಟು ಹೆಚ್ಚು ಸುಖ) ಎಂದು ಯಾವಾಗಲೂ ಹೇಳುತ್ತಾರೆ. ಆಗ ನನಗೆ ಪ್ರಾರಬ್ಧ ಕಡಿಮೆಯಾದಷ್ಟು ಹೆಚ್ಚು ಆನಂದ ಎಂದು ಅವರ ಮಾತಿನ ಭಾವಾರ್ಥ ಇರಬೇಕು ಅನಿಸಿತು

ಆ. ಅಧ್ಯಾತ್ಮದ ಒಂದು ಅಂಶವಾದ ಕೊಡುಕೊಳ್ಳುವಿಕೆಯ ಬಗ್ಗೆ  (give and take) ಹೀಗೆ ಹೇಳಿದರು. ನಾವು ಕೇವಲ ‘ಗಿವ್ ಗಿವ್’ (ಕೊಡುವುದು) ಮಾಡಬೇಕು ‘ಟೇಕ್'(ತೆಗೆದುಕೊಳ್ಳುವುದು) ಮಾಡಬಾರದು. ಅಂದರೆ ಮಾಯೆಯ ಲೆಕ್ಕಾಚಾರವನ್ನೆಲ್ಲ ಬೇಗ ಬೇಗ ಮುಗಿಸಬೇಕು. ಹೊಸ ಲೆಕ್ಕಾಚಾರವನ್ನು ಮಾಡಿಕೊಳ್ಳಬಾರದು. ದೋಷ ಅಹಂಗಳನ್ನೆಲ್ಲ ಬೇಗ ಬೇಗ ಗುರುಚರಣಗಳಲ್ಲಿ ಅರ್ಪಿಸಿ ಬಿಡಬೇಕು ಮತ್ತು ಶಕ್ತಿ ಭಕ್ತಿ ಚೈತನ್ಯವನ್ನು ಪಡೆಯಬೇಕು ಎಂದು ಅನಿಸಿತು. ಗುರುಗಳು ಕೊಟ್ಟಿದ್ದನ್ನೆಲ್ಲ (ಜ್ಞಾನ) ಇತರರಿಗೆ ಕೊಟ್ಟು ಬಿಡಬೇಕು, ನಮ್ಮಲ್ಲಿ ಏನೂ ಇಟ್ಟುಕೊಳ್ಳಬಾರದು ಎಂದೂ ಅವರ ಮಾತಿನಲ್ಲಿ ಅನಿಸುತ್ತಿತ್ತು.

ಆನಂದದಿಂದ ಸೇವೆ ಮಾಡುವುದು

ಅವರು ಕುಂಕುಮವನ್ನು ತುಂಬಿಸುವ ಸೇವೆಯನ್ನು ಮಾಡುತ್ತಿರುತ್ತಾರೆ. ಅದನ್ನು ನಿರಂತರ ನಾಮ ಜಪಿಸುತ್ತಾ ಆನಂದದಿಂದ ಮಾಡುತ್ತಿರುತ್ತಾರೆ. ಅದರಲ್ಲಿ ಯಾವುದೇ ತಕರಾರು ಇರುವುದಿಲ್ಲ. ಪ.ಪೂ. ಡಾಕ್ಟರರ ಕೃಪೆಯಿಂದಲೇ ನಮಗೆ ಇಂತಹ ಸಂತರ ಒಡನಾಟ ಹಾಗೂ ಅವರ ಚೈತನ್ಯ ಮತ್ತು ಕಲಿಯುವ ಅವಕಾಶವು ಸಿಗುತ್ತಿದೆ. ಅವರಿಂದ ಕಲಿತು ನಮ್ಮಿಂದಲೂ ಗುರುಗಳಿಗೆ ಅಪೇಕ್ಷಿತ ಸಾಧನೆಯಾಗಲಿ ಎಂದು ಪರಬ್ರಹ್ಮ ಸ್ವರೂಪೀ ಗುರುದೇವರ ಚರಣಗಳಲ್ಲಿ ಪ್ರಾರ್ಥಿಸುತ್ತಾ ಅನಂತಾನಂತ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತಿದ್ದೇನೆ.

– ಶ್ರೀಮತಿ ಅಶ್ವಿನಿ ಪ್ರಭು, ಮಂಗಳೂರು (೧೦.೧೦.೨೦೨೧)

ಪ.ಪೂ. ಭಕ್ತರಾಜ ಮಹಾರಾಜರ ಭಜನೆಗಳ ತಾಳಕ್ಕನುಸಾರ ಪೂ. ವಿನಾಯಕ ಕರ್ವೆಯವರು (೭೯ ವರ್ಷ) ಭಾವಾವಸ್ಥೆಯಲ್ಲಿ ನೃತ್ಯ ಮಾಡುವ ವಿಡಿಯೋ ನೋಡುವಾಗ ಬಂದ ಅನುಭೂತಿ

ಪ.ಪೂ. ಭಕ್ತರಾಜ ಮಹಾರಾಜರ ಭಜನೆಯ ತಾಳಕ್ಕೆ ಮೈಮರೆತು ನೃತ್ಯ ಮಾಡುತ್ತಿರುವ ಪೂ. ವಿನಾಯಕ ಕರ್ವೆಮಾಮಾರವರ ಭಾವಾವಸ್ಥೆ

ಪೂ. ವಿನಾಯಕ ಕರ್ವೆ ಇವರು ಪ.ಪೂ. ಭಕ್ತರಾಜ ಮಹಾರಾಜರು ಭಜನೆಗಳನ್ನು ಹಾಡುವಾಗ ಚಿತ್ಪಾವನ ಅವಸ್ಥೆಯಲ್ಲಿರುತ್ತಾರೆ. ಚಿತ್ಪಾವನ ಅವಸ್ಥೆಯೆಂದರೆ ಯಾವಾಗ ಚಿತ್ತವು ಚೈತನ್ಯದ ಪ್ರವಾಹದಲ್ಲಿ ಒಂದಾಗಿ ಕಾರ್ಯ ಮಾಡುತ್ತದೆಯೋ, ಆಗ ಜೀವದ ನಾಲ್ಕೂ ದೇಹಗಳು ಪರಸ್ಪರ ಏಕರೂಪವಾಗಿ ಸ್ವಯಂಭೂ ಕಾರ್ಯವನ್ನು ಮಾಡುತ್ತವೆ. ಪ.ಪೂ. ಭಕ್ತರಾಜ ಮಹಾರಾಜರ ಭಜನೆಗಳನ್ನು ಕೇಳುವಾಗ ಸನಾತನದ ಸಂತರಾದ ಪೂ. ವಿನಾಯಕ ಕರ್ವೆ ಇವರು ಇದೇ ಸ್ಥಿತಿಯನ್ನು ಅನುಭವಿಸಿದರು. ಇದರ ಬಗ್ಗೆ  ಶೆರನ್ ಸಿಕ್ವೆರಾ ಇವರಿಗೆ ಬಂದ ಅನುಭೂತಿಯನ್ನು ನೋಡೋಣ.

ಪೂ. ಕರ್ವೆ ಇವರ ಕೈಗಳ ಬೆರಳುಗಳಲ್ಲಿ ಬಿಳಿ ಪ್ರಕಾಶ ಕಾಣಿಸುವುದು

‘ಪ.ಪೂ. ಭಕ್ತರಾಜ ಮಹಾರಾಜರು’ ಹಾಡಿದ ಭಜನೆಗಳ ರಾಗಕ್ಕನುಸಾರ ಸನಾತನದ ೨೩ ನೇ ಸಂತರಾದ ಪೂ. ವಿನಾಯಕ ರಘುನಾಥ ಕರ್ವೆಯವರು ಭಾವದಿಂದ ಕುಣಿಯತೊಡಗುತ್ತಾರೆ. ೨೪.೮.೨೦೧೯ ರಂದು ಅವರ ವಿಡಿಯೋವನ್ನು ನೋಡಿದಾಗ ನನಗೆ, ಭಜನೆಯ ತಾಳಕ್ಕನುಸಾರ ನೃತ್ಯ ಮಾಡುವಾಗ ಪೂ. ಕರ್ವೆಯವರ ಕೈಗಳ ಬೆರಳುಗಳಿಂದ ಬಿಳಿ ಪ್ರಕಾಶವು ಪ್ರಕ್ಷೇಪಿತವಾಗುತ್ತಿರುವ ಜೊತೆಗೆ ಅವರ ಬೆರಳುಗಳ ಉಗುರುಗಳೂ ತೇಜಸ್ವಿ ಮತ್ತು ಪ್ರಕಾಶಮಾನವಾಗಿ ಕಾಣಿಸುತ್ತಿದ್ದವು. ಅವರ ನೃತ್ಯವು ನಿಂತಾಗ ಅವರ ಬೆರಳುಗಳಿಂದ ಪ್ರಕ್ಷೇಪಿತವಾಗುವ ಪ್ರಕಾಶವು ಕಡಿಮೆಯಾಗುತ್ತಾ ಹೋಯಿತು ಮತ್ತು ಉಗುರುಗಳ ಬಣ್ಣವು ಮೊದಲಿನಂತಾಯಿತು’, ಎಂದೆನಿಸಿತು. ಅವರ ವಿಡಿಯೋ ನೋಡುವಾಗ ನನಗೆ ಹೆಚ್ಚು ಭಾವಜಾಗೃತಿಯಾಯಿತು ಮತ್ತು ಈ ಸ್ಥಿತಿಯು ೫ ಗಂಟೆಗಳ ಕಾಲ ಉಳಿಯಿತು. – ಶೆರನ್ ಸಿಕ್ವೆರಾ, ಸನಾತನ ಆಶ್ರಮ, ರಾಮನಾಥಿ, ಗೋವಾ. (೩೦.೮.೨೦೧೯)