ಪ.ಪೂ. ಬಾಳಾಜಿ (ಪ.ಪೂ. ದಾದಾ) ಆಠವಲೆ ಮತ್ತು ಅವರ ಸಂತ ಪರಿವಾರದವರ ಛಾಯಾಚಿತ್ರಗಳಿಂದ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯವು ಪ್ರಕ್ಷೇಪಿತವಾಗುತ್ತಿರುವುದಾಗಿ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣದ ಮೂಲಕ ಸಿದ್ಧವಾಗುವುದು

ಸಂತರ ಪರಿವಾರದ ಬಗ್ಗೆ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

‘ಸನಾತನ ಪ್ರಭಾತ’ದಲ್ಲಿ ಸಂತರ ಸಾಧನಾಪ್ರವಾಸ, ಅವರ ಬೋಧನೆಗಳ ಕುರಿತು ಲೇಖನವನ್ನು ನಿಯಮಿತವಾಗಿ ಪ್ರಕಟಿಸ ಲಾಗುತ್ತದೆ. ೨೩/೦೪ ನೇ ಸಂಚಿಕೆಯಿಂದ ಪ್ರಾರಂಭವಾದ ಈ ಲೇಖನಮಾಲೆಯಿಂದ ‘ಸನಾತನ ಪ್ರಭಾತದ ಸಂಸ್ಥಾಪಕ-ಸಂಪಾದಕರಾದ ಪರಾತ್ಪರ ಗುರು ಡಾ. ಆಠವಲೆಯವರ ತಂದೆ ಪ.ಪೂ. ಬಾಳಾಜಿ (ಪ.ಪೂ. ದಾದಾ) ಆಠವಲೆಯವರ ಬಗೆಗಿನ ಲೇಖನಗಳನ್ನು ಪ್ರಕಟಿಸುತ್ತಿದ್ದೇವೆ.

ನಾವು ೨೩/೦೫ ನೇ ಸಂಚಿಕೆಯಲ್ಲಿ ಪ.ಪೂ. ಬಾಳಾಜಿ (ಪ.ಪೂ. ದಾದಾ) ಆಠವಲೆಯವರಿಗೆ ಜೀವನದುದ್ದಕ್ಕೂ ಸಂಗಾತಿಯಾಗಿದ್ದ ಅವರ ಪತ್ನಿ ಪೂ. ನಲಿನಿ (ಪೂ. ತಾಯಿ) ಆಠವಲೆ ಇವರ ವೈಶಿಷ್ಟ್ಯಗಳನ್ನು ನೋಡಿದೆವು. ಈ ವಾರ ನಾವು ಪ.ಪೂ. ಬಾಳಾಜಿ (ಪ.ಪೂ. ದಾದಾ) ಆಠವಲೆ ಮತ್ತು ಅವರ ಸಂತ ಪರಿವಾರದವರ ಛಾಯಾಚಿತ್ರಗಳಿಂದ ಸಾಕಷ್ಟು ಪ್ರಮಾಣದಲ್ಲಿ ಚೈತನ್ಯವು ಪ್ರಕ್ಷೇಪಿತವಾಗುತ್ತದೆ. ಅದನ್ನು ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್) ಈ ಉಪಕರಣದ ಮೂಲಕ ಮಾಡಿದ ನಿರೀಕ್ಷಣೆಯನ್ನು ಇಲ್ಲಿ ನೋಡುವರಿದ್ದೇವೆ.  

(ಭಾಗ ೩)

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/51579.html

‘ಮಹಾರಾಷ್ಟ್ರವನ್ನು ಸಂತರ ಭೂಮಿಯೆಂದು ಹೇಳಲಾಗುತ್ತದೆ. ಮಹಾರಾಷ್ಟ್ರದಲ್ಲಿ ಅನೇಕ ಮಹಾನ ಸಂತಮಹಾತ್ಮರು ಆಗಿಹೋದರು. ೧೩ ನೇ ಶತಮಾನದಲ್ಲಿ ಮಹಾರಾಷ್ಟ್ರದಲ್ಲಿ ಜನ್ಮತಾಳಿದ ಸಂತ ಜ್ಞಾನೇಶ್ವರ ಮಹಾರಾಜರು ಸ್ವತಃ ಉಚ್ಚಕೋಟಿಯ ಸಂತರಾಗಿದ್ದರು ಮತ್ತು ಅವರ ತಂದೆ-ತಾಯಿ ಹಾಗೂ ಬಂಧು-ಭಗಿನಿಯರೆಲ್ಲರೂ ಸಂತರಿದ್ದರು. ಈಗಿನ ಕಲಿಯುಗದಲ್ಲಿ ಹೀಗೆಯೇ ಒಂದು ಉದಾಹರಣೆಯೆಂದರೆ `ಸನಾತನ ಸಂಸ್ಥೆ’ ಮತ್ತು `ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆ ! ಪರಾತ್ಪರ ಗುರು ಡಾ. ಆಠವಲೆ ಇವರು `ಪರಾತ್ಪರ ಗುರು’ ಪದವಿಯ ಸಂತರಾಗಿದ್ದು ಅವರ ತಂದೆ-ತಾಯಿ (ಪ.ಪೂ. ದಾದಾ ಮತ್ತು ಪೂ. (ಸೌ.) ತಾಯಿ) ಮತ್ತು ಅವರ ಹಿರಿಯ ಸಹೋದರ (ಸದ್ಗುರು ಡಾ. ವಸಂತ ಬಾಳಾಜಿ ಆಠವಲೆ ಮತ್ತು ಪೂ. ಅನಂತ ಬಾಳಾಜಿ ಆಠವಲೆ) ಇವರೆಲ್ಲರೂ ಸಂತರಾಗಿದ್ದಾರೆ. (ಪರಾತ್ಪರ ಗುರು ಡಾಕ್ಟರರ ಇಬ್ಬರು ಕಿರಿಯ ಸಹೋದರರ ಸಹ ಶೇ. ೬೦ ಕ್ಕಿಂತಲೂ ಹೆಚ್ಚಿನ ಆಧ್ಯಾತ್ಮಿಕ ಮಟ್ಟದವರಾಗಿದ್ದಾರೆ.) ಸಂತರಲ್ಲಿ ತುಂಬಾ ಚೈತನ್ಯವಿದ್ದು ಅದು ಅವರ ಛಾಯಾಚಿತ್ರಗಳಿಂದಲೂ ಪ್ರಕ್ಷೇಪಿತವಾಗುತ್ತದೆ. ಪ.ಪೂ. ದಾದಾ ಮತ್ತು ಅವರ ಸಂತ ಪರಿವಾರದವರ ಛಾಯಾಚಿತ್ರಗಳಿಂದ ಪ್ರಕ್ಷೇಪಿತವಾಗುವ ಸ್ಪಂದನಗಳನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣದ ಮೂಲಕ ಅವರ ಪರೀಕ್ಷಣೆ ಮಾಡಲಾಯಿತು. ಈ ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರದ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

ಪ.ಪೂ. ದಾದಾ ಆಠವಲೆ
ಪೂ. ನಲಿನಿ ಆಠವಲೆ
ಸದ್ಗುರು ಡಾ. ವಸಂತ ಆಠವಲೆ
ಪೂ. ಅನಂತ ಆಠವಲೆ
ಪರಾತ್ಪರ ಗುರು ಡಾ. ಆಠವಲೆ
ದಿ. ಡಾ. ಸುಹಾಸ ಆಠವಲೆ
ಶ್ರೀ. ವಿಲಾಸ ಆಠವಲೆ

೧. ಪ.ಪೂ. ದಾದಾ ಮತ್ತು ಅವರ ಸಂತ ಪರಿವಾರದವರ ಛಾಯಾಚಿತ್ರಗಳಿಂದ ಸಾಕಷ್ಟು ಪ್ರಮಾಣದಲ್ಲಿ ಚೈತನ್ಯವು ಪ್ರಕ್ಷೇಪಿತವಾಗುವುದು : ಸರ್ವಸಾಮಾನ್ಯ ವ್ಯಕ್ತಿಯಲ್ಲಿ ರಜ-ತಮದ ಪ್ರಮಾಣವು ಹೆಚ್ಚಿರುವುದರಿಂದ ಅವನಲ್ಲಿ ಸಕಾರಾತ್ಮಕ ಸ್ಪಂದನಗಳು ಕಂಡು ಬರುವುದಿಲ್ಲ. ಸಾಧನೆಯಿಂದ ವ್ಯಕ್ತಿಯಲ್ಲಿ ರಜ-ತಮ ಕಡಿಮೆಯಾಗಿ ಅವನಲ್ಲಿನ ಸತ್ತ್ವಗುಣವು ಹೆಚ್ಚಳವಾಗುತ್ತದೆ. ಸಾಧನೆ ಮಾಡುವ ವ್ಯಕ್ತಿಯಲ್ಲಿ ಸಕಾರಾತ್ಮಕ ಸ್ಪಂದನಗಳು ಕಂಡುಬರುತ್ತವೆ ಮತ್ತು ಅವನ ಪ್ರಭಾವಳಿಯು ಸುಮಾರು ೧ ಮೀಟರ್‌ನಷ್ಟು ಇರುತ್ತದೆ. ಅವನ ಸಾಧನೆ ಹೆಚ್ಚಾಗುತ್ತ ಹೋದಂತೆ, ಅದರ ಪ್ರಮಾಣವು ಹೆಚ್ಚಳವಾಗುತ್ತದೆ. ಪರೀಕ್ಷಣೆಯಲ್ಲಿ ಸಂತರ ಛಾಯಾಚಿತ್ರಗಳಲ್ಲಿ ನಕಾರಾತ್ಮಕ ಸ್ಪಂದನಗಳು ಸ್ವಲ್ಪವೂ ಇಲ್ಲದೇ ಸಕಾರಾತ್ಮಕ ಸ್ಪಂದನಗಳು ತುಂಬಾ ಪ್ರಮಾಣದಲ್ಲಿ ಕಂಡುಬಂದವು. ಈ ಪಕ್ಕದಲ್ಲಿ ಕೊಟ್ಟಿರುವ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.

ಟಿಪ್ಪಣಿ – ಸದ್ಗುರು ಡಾ. ವಸಂತ ಆಠವಲೆಯವರ ಈ ಛಾಯಾಚಿತ್ರವು ಅವರು ‘ಸಂತ ಪದವಿ’ಯನ್ನು (ಟಿಪ್ಪಣಿ ೩) ಪ್ರಾಪ್ತವಾದ ಕಾಲದ್ದಾಗಿದೆ. ಅವರು ೯.೧೧.೨೦೧೩ ರಂದು ದೇಹತ್ಯಾಗ ಮಾಡಿದರು. ೨೦೧೭ ರಲ್ಲಿ ಅವರಿಗೆ ‘ಸದ್ಗುರು ಪದವಿಯು ಪ್ರಾಪ್ತವಾಯಿತು.

ಟಿಪ್ಪಣಿ – ಪರೀಕ್ಷಣೆಯ ಸ್ಥಳವು ಕಡಿಮೆ ಬಿದ್ದಿರುವುದರಿಂದ ಅದರ ಮುಂದೆ ಪ್ರಭಾವಳಿಯನ್ನು ನಿಖರವಾಗಿ ಅಳೆಯಲಾಗಲಿಲ್ಲ.

ಟಿಪ್ಪಣಿ – ಶೇ. ೭೦-೭೯ ರಷ್ಟು ಆಧ್ಯಾತ್ಮಿಕ ಮಟ್ಟಕ್ಕೆ ‘ಸಂತ ಪದವಿ(ಗುರು ಪದವಿ)’, ಶೇ. ೮೦-೮೯ ರಷ್ಟು ಮಟ್ಟಕ್ಕೆ ‘ಸದ್ಗುರು ಪದವಿ’ ಮತ್ತು ಶೇ. ೯೦ ರಷ್ಟು ಆಧ್ಯಾತ್ಮಿಕ ಮಟ್ಟದ ಮುಂದೆ ‘ಪರಾತ್ಪರ ಗುರು’ ಪದವಿಯು ಪ್ರಾಪ್ತವಾಗುತ್ತದೆ.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

೨.  ಪ.ಪೂ. ದಾದಾ ಮತ್ತು ಪೂ. (ಸೌ.) ತಾಯಿಯವರ ಛಾಯಾಚಿತ್ರಗಳಿಂದ ಹೆಚ್ಚೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು : ಈ ಪರೀಕ್ಷಣೆಯಲ್ಲಿ ಪ.ಪೂ. ದಾದಾ ಮತ್ತು ಪೂ. (ಸೌ.) ತಾಯಿಯವರ ಛಾಯಾಚಿತ್ರಗಳಿಂದ ಹೆಚ್ಚೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗಿವೆ. ಇದು ಪ.ಪೂ. ದಾದಾ ಮತ್ತು ಪೂ. (ಸೌ.) ತಾಯಿಯವರ ಸಾಧನೆಯಿಂದ ಅಧ್ಯಾತ್ಮದಲ್ಲಿ ಹೆಚ್ಚೆಚ್ಚು ಪ್ರಗತಿ ಮಾಡಿಕೊಳ್ಳುವುದರ ಸಂಕೇತವಾಗಿದೆ. ಸಾಧನೆ ಮಾಡದಿರುವ ಸಾಮಾನ್ಯ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟವು ಶೇ. ೨೦ ರಷ್ಟಿರುತ್ತದೆ. ಸಾಧನೆ ಚೆನ್ನಾಗಿ ಮಾಡಿ ಯಾವಾಗ ವ್ಯಕ್ತಿಯ ಮಟ್ಟವು ಶೇ. ೭೦ ರಷ್ಟು ಆಗುತ್ತದೆ, ಆಗ ಅವರು ‘ಸಂತ’ರಾಗುತ್ತಾರೆ. ಸಂತರಲ್ಲಿ ಅವರ ಸಾಧನೆಯ ಚೈತನ್ಯವು ನಿರ್ಮಾಣವಾಗಿರುತ್ತದೆ. ಸಂತರ ಆಧ್ಯಾತ್ಮಿಕ ಮಟ್ಟವು ಹೆಚ್ಚುತ್ತಾ ಹೋದಂತೆ, ಅವರಿಂದ ಪ್ರಕ್ಷೇಪಿತವಾಗುವ ಚೈತನ್ಯದ ಪ್ರಮಾಣವೂ ಹೆಚ್ಚುತ್ತಾ ಹೋಗುತ್ತದೆ. ‘೨೦೧೪ ನೇ ಇಸವಿಯಲ್ಲಿ ಪ.ಪೂ. ದಾದಾರವರ ಆಧ್ಯಾತ್ಮಿಕ ಮಟ್ಟವು ಶೇ. ೮೩ ರಷ್ಟು ಮತ್ತು ಪೂ. ತಾಯಿಯವರ ಆಧ್ಯಾತ್ಮಿಕ ಮಟ್ಟವು ಶೇ. ೭೫ ರಷ್ಟಿತ್ತು’. ಪ.ಪೂ. ದಾದಾರವರು ೨೮.೧.೧೯೯೫ ರಂದು ಮತ್ತು ಪೂ. ತಾಯಿಯವರು ೩.೧೨.೨೦೦೩ ರಂದು ದೇಹತ್ಯಾಗ ಮಾಡಿದರು. (ಆಧಾರ : ಸನಾತನ ಸಂಸ್ಥೆಯು ಪ್ರಕಾಶಿಸಿದ ಗ್ರಂಥ – ಪೂ. ಬಾಳಾಜಿ ಆಠವಲೆಯವರ ವಿಚಾರಧನ : ಭಾಗ ೧ ಮತ್ತು ೨ (ಮರಾಠಿ)

ಸೌ. ಮಧುರಾ ಕರ್ವೆ

೩. ಪ.ಪೂ. ದಾದಾ ಮತ್ತು ಪೂ. (ಸೌ.) ತಾಯಿಯವರ ಸುಪುತ್ರರ ಛಾಯಾಚಿತ್ರಗಳಿಂದ ಬಹಳ ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು 

ಪರಾತ್ಪರ ಗುರು ಡಾ. ಆಠವಲೆಯವರ ತಂದೆ-ತಾಯಿಯರು ಅವರ ಐವ್ವರು ಮಕ್ಕಳ ಮೇಲೆ ಬಾಲ್ಯದಿಂದಲೇ ಸಾಧನೆಯ ಸಂಸ್ಕಾರವನ್ನು ಮಾಡಿದರು. ಅವರು ಸ್ವತಃ ಅಧ್ಯಾತ್ಮದಲ್ಲಿ ಒಳ್ಳೆಯ ಪ್ರಗತಿಯನ್ನು ಮಾಡಿಕೊಂಡಿದ್ದರು ಮಾತ್ರವಲ್ಲ, ಅವರ ಐದು ಮಕ್ಕಳ ಮೇಲೆ ಸಾಧನೆಯ ಸಂಸ್ಕಾರಗಳನ್ನು ಮಾಡಿ ಅವರ ಪ್ರಗತಿಯನ್ನೂ ಮಾಡಿಸಿಕೊಂಡರು. ಈಗಿನ ಕಾಲದಲ್ಲಿ ಇಂತಹ ಉದಾಹರಣೆಗಳು ನೋಡಲು ಸಿಗುವುದು ವಿರಳ. ಪ.ಪೂ. ದಾದಾ ಮತ್ತು ಪೂ. (ಸೌ.) ತಾಯಿಯವರ ಮೂವರು ಮಕ್ಕಳು ಸಂತರಾಗಿರುವುದರಿಂದ ಅವರ ಛಾಯಾಚಿತ್ರಗಳಲ್ಲಿಯೂ ತುಂಬಾ ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗಿವೆ. ಅವರ ಹಿರಿಯ ಸುಪುತ್ರ ಸದ್ಗುರು ಡಾ. ವಸಂತ ಬಾಳಾಜಿ ಆಠವಲೆ ಇವರು ‘ಸದ್ಗುರು ಪದವಿ’ ಅವರ ಎರಡನೇ ಸುಪುತ್ರ ಪೂ. ಅನಂತ ಬಾಳಾಜಿ ಆಠವಲೆ ಇವರು ‘ಸಂತಪದವಿ’ ಮತ್ತು ಅವರ ಮೂರನೇ ಸುಪುತ್ರ ಪರಾತ್ಪರ ಗುರು ಡಾ. ಆಠವಲೆ ಇವರು ‘ಪರಾತ್ಪರ ಗುರು’ ಪದವಿಯಲ್ಲಿ ವಿರಾಜಮಾನರಾಗಿದ್ದಾರೆ. ಈ ಎಲ್ಲ ಸಂತರ ಛಾಯಾಚಿತ್ರಗಳಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಭಾವಳಿಯು ಅವರ ಆಯಾ ಸಮಯದಲ್ಲಿನ ಆಧ್ಯಾತ್ಮಿಕ ಮಟ್ಟಕ್ಕನುಸಾರವಾಗಿದೆ. ಪ.ಪೂ. ದಾದಾ ಮತ್ತು ಪೂ. (ಸೌ.) ತಾಯಿಯವರ ಸುಪುತ್ರ ಡಾ. ಸುಹಾಸ ಆಠವಲೆ ಮತ್ತು ಶ್ರೀ. ವಿಲಾಸ ಆಠವಲೆ ಇವರ ಸಾಧನೆಯಲ್ಲಿಯೂ ಪ್ರಗತಿಯಾಗುತ್ತಿದೆ. ಆದುದರಿಂದ ಅವರ ಛಾಯಾಚಿತ್ರಗಳಲ್ಲಿಯೂ ಸಕಾರಾತ್ಮಕ ಊರ್ಜೆ ಕಂಡು ಬಂದಿತು. ಈಗಿನ ಕಲಿಯುಗದಲ್ಲಿಯೂ ಇಂತಹ ಆದರ್ಶ ಸಂತ ಪರಿವಾರವನ್ನು ನೋಡಲು ಸಿಗುತ್ತಿದೆ, ಇದಕ್ಕಾಗಿ ಈಶ್ವರನ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !

ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೭.೯.೨೦೨೧)

(ಮುಂದುವರಿಯುವುದು)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ’ ಎನ್ನುತ್ತಾರೆ.