ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರ ಮಾರ್ಗದರ್ಶನದಂತೆ ರಾಜ್ಯದಲ್ಲಿ ಹಮ್ಮಿಕೊಂಡ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ದ ಸಮಯದಲ್ಲಿ ಸಾಧಕರಿಗೆ ಬಂದ ಅನುಭೂತಿ ಮತ್ತು ಸಮಾಜದಿಂದ ದೊರಕಿದ ಬೆಂಬಲ !

ಪೂ. ರಮಾನಂದ ಗೌಡ

ಕರ್ನಾಟಕ ರಾಜ್ಯದಲ್ಲಿ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ (ಗ್ರಂಥ ಅಭಿಯಾನ)ವನ್ನು ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನವನ್ನು ಆರಂಭಿಸುವಾಗ ಸನಾತನದ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಸಾಧಕರಿಗೆ ಭಾವಪೂರ್ಣ ಮಾರ್ಗದರ್ಶನವನ್ನು ಮಾಡಿದರು. ಅವರು ತಮ್ಮ ಮಾರ್ಗದರ್ಶನದಲ್ಲಿ ಸನಾತನವು ಪ್ರಕಾಶಿಸಿದ ಗ್ರಂಥಗಳ ಮಹತ್ವವನ್ನು ಹೇಳಿದರು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ಮಹಾನ ಕೊಡುಗೆಯನ್ನು ನೀಡುವ ಈ ದಿವ್ಯ ಮತ್ತು ಚೈತನ್ಯದಾಯಕ ಗ್ರಂಥಗಳನ್ನು ಸಮಾಜದಲ್ಲಿ ಮನೆಮನೆಗೆ ತಲುಪಿಸುವ ಮಹತ್ವವನ್ನೂ ಗಮನಕ್ಕೆ ತಂದು ಕೊಟ್ಟರು. ‘ಇದರಿಂದ ಸಾಧಕರ ಸಾಧನೆ ಹೇಗಾಗುತ್ತದೆ ?’ ಈ ಬಗ್ಗೆಯೂ ಅವರು ಹೇಳಿದರು. ಅವರ ಮಾರ್ಗದರ್ಶನದಿಂದ ಸಾಧಕರಿಗೆ ಸ್ಫೂರ್ತಿ ದೊರಕಿ ಅವರು ಉತ್ಸಾಹದಿಂದ ಪ್ರಯತ್ನವನ್ನು ಆರಂಭಿಸಿದರು. ಈ ಅಭಿಯಾನದಲ್ಲಿ ಸಾಧಕರು ಮಾಡಿದ ಪ್ರಯತ್ನ, ಅವರಿಗೆ ಬಂದ ಅನುಭೂತಿ ಸಮಾಜದಿಂದ ದೊರೆತ ಬೆಂಬಲವನ್ನು ಇಲ್ಲಿ ನೀಡಲಾಗಿದೆ.

ಉಡುಪಿ

೧. ಸೇವೆಯನ್ನು ಮನಸ್ಸಿನಿಂದ ಸ್ವೀಕರಿಸಿ ನಿಯೋಜನೆ ಸಹಿತ ಮಾಡಿದರೆ ಈಶ್ವರನು ಸಹಾಯ ಮಾಡುತ್ತಾನೆ

ಅಭಿಯಾನ ಸೇವೆಯ ನಿಯೋಜನೆ ಆರಂಭವಾದ ಮೇಲೆ ತುಂಬಾ ಉತ್ಸಾಹ ಮತ್ತು ಆನಂದವೆನಿಸುತ್ತಿತ್ತು. ನನ್ನಲ್ಲಿ ಗ್ರಂಥಗಳ ಸಂಗ್ರಹವಿದೆ. ಗ್ರಂಥ ಅಭಿಯಾನ ಸೇವೆಯೊಂದಿಗೆ ನಿಯಮಿತ ಸೇವೆಯೂ ಇರುತ್ತಿತ್ತು. ಹಾಗೆಯೇ ಬೇರೆ ಸೇವೆಯ ಬಗ್ಗೆ ಸಾಧಕರ ಕರೆಯೂ ಬರುತ್ತಿತ್ತು ಮತ್ತು ಅಭಿಯಾನದ ಬಗ್ಗೆ ‘ಆನ್‌ಲೈನ್’ ನಲ್ಲಿ ಸಭೆ ಇರುತ್ತಿತ್ತು. ಹೀಗೆ ಎಲ್ಲವೂ ಒಮ್ಮೆಲೆ ಬಂದಾಗ ಸ್ವಲ್ಪ ಒತ್ತಡವೆನಿಸುತಿತ್ತು. ಒತ್ತಡವೆನಿಸಿದಾಗ ನನಗೆ ಯಾವ ಕಾರಣದಿಂದ ಒತ್ತಡವಾಗುತ್ತಿದೆ ಎಂದು ಅಂತರ್ಮುಖತೆಯಿಂದ ವಿಚಾರ ಮಾಡಿದಾಗ, ನನ್ನಲ್ಲಿನ ಕರ್ತೃತ್ವ, ಸ್ವೀಕಾರವೃತ್ತಿ ಕಡಿಮೆ, ನಿಯೋಜನೆ ಅಭಾವ ಮುಂತಾದ ದೋಷಗಳ ಅರಿವಾಯಿತು. ತದನಂತರ ನಿಯೋಜನೆಯನ್ನು ಒಳ್ಳೆಯ ರೀತಿಯಿಂದ ಮಾಡಿ ವ್ಯಷ್ಟಿಯನ್ನು ಚೆನ್ನಾಗಿ ಮಾಡಲು ಪ್ರಯತ್ನಿಸಿದೆನು. ಆಗ ಒತ್ತಡ ಸ್ವಲ್ಪ ಕಡಿಮೆಯಾಯಿತು ಮತ್ತು ಸೇವೆಯನ್ನೂ ಒಳ್ಳೆಯ ರೀತಿಯಿಂದ ಮಾಡಲು ಸಾಧ್ಯವಾಯಿತು. ಆಗ ಮನೆಯ ಇತರ ಸದಸ್ಯರು ಮತ್ತು ಪತಿಯವರೂ ಸಹಾಯ ಮಾಡಿದರು. ಬೆಳಗ್ಗೆ ೫ ಗಂಟೆಗೆ ಎದ್ದು ನಾವು ಹೀಗೆ ಮಾಡೋಣ ಎಂದು ಪತಿಯವರು ಹೇಳಿದರು. ಆಗ ಯಾವುದೇ ಸೇವೆ ಇರಲಿ ಮತ್ತು ನಾವು ಅದನ್ನು ಮನಸ್ಸಿನಿಂದ ಸ್ವೀಕರಿಸಿದರೆ ಮತ್ತು ನಿಯೋಜನಾಬದ್ಧವಾಗಿ ಮಾಡಿದರೆ ಈಶ್ವರನು ಸಹಾಯ ಮಾಡುತ್ತಾನೆ ಎಂದು ಗಮನಕ್ಕೆ ಬಂದಿತು.  – ಸೌ. ಪ್ರೇಮಾ, ಉಡುಪಿ.

೨. ತಳಮಳವಿದಲ್ಲಿ ಸೇವೆ ಪೂರ್ಣ ಮಾಡುವ ಧ್ಯೇಯವಿದ್ದರೆ ಈಶ್ವರ ಸ್ವತಃ ಘಟಿಸುತ್ತಾನೆ

ಕುಂದಾಪುರದ ಹತ್ತಿರ ಕಾವ್ರಾಡಿ ಎಂಬ ಹಳ್ಳಿ ಇದೆ. ಅಲ್ಲಿ ಹೋಗಿ ಗ್ರಂಥ ನೀಡಬೇಕು ಎಂದು ವಿಚಾರ ಬರುತ್ತಿತ್ತು. ಶನಿವಾರ ಮತ್ತು ಭಾನುವಾರ ಲೌಕ್‌ಡೌನ್ ಇದ್ದ ಕಾರಣ ಅಂಗಡಿಗಳು ಮುಚ್ಚಿರುತ್ತದೆ. ಆದ್ದರಿಂದ ಶನಿವಾರ ೧೨ ಗಂಟೆ ನಂತರ ಹಳ್ಳಿಗೆ ಹೋಗುವ ನಿಯೋಜನೆ ಮಾಡಿದೆ. ನಾನು ಮತ್ತು ನನ್ನ ಪತಿ ಇಬ್ಬರೂ ಸೇವೆಗಾಗಿ ಹೊರಟೆವು. ಹೋಗುವ ದಾರಿಯಲ್ಲಿ ಇಬ್ಬರು ಧರ್ಮಾಭಿಮಾನಿಗಳನ್ನು ಭೇಟಿಯಾದಾಗ ಅವರಿಗೆ ಬಹಳ ಸಂತೋಷವಾಯಿತು. ಸನಾತನ ನಿರ್ಮಿತ ಗ್ರಂಥ, ಉತ್ಪಾದನೆ, ಪಂಚಾಂಗ ಇವುಗಳ ಬಗ್ಗೆ ವಿವರಿಸಿದೆವು. ಅವರು ಅದನ್ನು ತೆಗೆದುಕೊಂಡರು. ಅವರಿಬ್ಬರನ್ನು ಭೇಟಿಯಾದ ಮೇಲೆ ‘ಮುಂದೆ ಹಳ್ಳಿಗೆ ಹೋಗಲು ತಡವಾಗುತ್ತದೆ ಮತ್ತು ಯಾರು ಯಾರನ್ನು ಸಂಪರ್ಕಿಸುವುದು ? ಹೇಗೆ ಸಂಪರ್ಕಿಸುವುದು ?’ ಈ ರೀತಿ ಮನಸ್ಸಿನಲ್ಲಿ ವಿಚಾರ ಬರುತ್ತಿತ್ತು. ಆಗ ಪ.ಪೂ. ಗುರುದೇವರಿಗೆ ಪ್ರಾರ್ಥಿಸಿದೆ, ಹೇ ಗುರುದೇವಾ, ‘ಈಗ ನಮಗೆ ಸಮಯ ಕಡಿಮೆ ಇದೆ, ಈ ಸೇವೆಯನ್ನು ಹೇಗೆ ಪೂರ್ಣಗೊಳಿಸುವುದು ನೀವೇ ಹೇಳಿರಿ, ಮಾಡುವವರು ಮಾಡಿಸುವವರು ನೀವೇ ಆಗಿದ್ದೀರಿ’ ಹೀಗೆ ಆರ್ತತೆಯಿಂದ ಪ್ರಾರ್ಥಿಸಿದೆ. ತದನಂತರ ನಾವು ಹಳ್ಳಿಗೆ ತಲುಪಿದಾಗ ಯಾರನ್ನೆಲ್ಲ ಭೇಟಿಯಾಗಲಿಕ್ಕಿತ್ತೋ ಅವರೆಲ್ಲರೂ ಒಂದೇ ಜಾಗದಲ್ಲಿ ಇದ್ದರು. ಇಲ್ಲದಿದ್ದರೆ ಪ್ರತಿಯೊಬ್ಬರ ಮನೆಗೆ ಹೋಗಿ ವಿಷಯ ಹೇಳಬೇಕಾಗುತ್ತಿತ್ತು. ಆದರೆ ದೇವರು ಅವರೆಲ್ಲರನ್ನು ಒಂದೆಡೆ ಇರಿಸಿದ್ದರು. ಇದರಿಂದ ಕಡಿಮೆ ಸಮಯದಲ್ಲಿ ಸೇವೆ ಪೂರ್ಣವಾಯಿತು. ಈ ಅನುಭೂತಿ ನೀಡಿದ್ದಕ್ಕಾಗಿ ಗುರುಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು. – ಸೌ. ರಾಧಿಕಾ ಶ್ರೀನಿವಾಸ, ಉಡುಪಿ.