ಉತ್ತರ ಭಾರತದಲ್ಲಿ ಸನಾತನ ಸಂಸ್ಥೆಯ ‘ಜ್ಞಾನಶಕ್ತಿ ಪ್ರಸಾರ ಅಭಿಯಾನ’ದ ಉದ್ಘಾಟನೆ !

ಸಮಾಜದ ಪ್ರತಿಯೊಂದು ಘಟಕಕ್ಕೆ ಅಗತ್ಯವಿರುವ ಸನಾತನದ ಸರ್ವಾಂಗಸ್ಪರ್ಶಿ ಗ್ರಂಥ ಸಂಪತ್ತಿನ ಲಾಭವನ್ನು ಪಡೆದುಕೊಳ್ಳಿ ! – ಪೂ. ನಿಲೇಶ ಸಿಂಗಬಾಳ, ಧರ್ಮಪ್ರಚಾರಕರು, ಹಿಂದೂ ಜನಜಾಗೃತಿ ಸಮಿತಿ

‘ಜ್ಞಾನಶಕ್ತಿ ಪ್ರಸಾರ ಅಭಿಯಾನ’ವನ್ನು ದೀಪಪ್ರಜ್ವಲನೆ ಮಾಡಿ ಉದ್ಘಾಟಿಸುವಾಗ, ಪೂ. ನಿಲೇಶ ಸಿಂಗಬಾಳ

ವಾರಣಾಸಿ (ಉತ್ತರಪ್ರದೇಶ) – ಸನಾತನ ಸಂಸ್ಥೆಯು ಅಧ್ಯಾತ್ಮಶಾಸ್ತ್ರ, ಧರ್ಮಾಚರಣೆ, ದಿನನಿತ್ಯದ ಆಚರಣೆಗೆ ಸಂಬಂಧಿಸಿದ ಚಟುವಟಿಕೆಗಳು, ಭಾರತೀಯ ಸಂಸ್ಕೃತಿ ಇತ್ಯಾದಿ ಅನೇಕ ವಿಷಯಗಳ ಕುರಿತು ಅಮೂಲ್ಯ ಮತ್ತು ಸಮಗ್ರ ಗ್ರಂಥಗಳನ್ನು ಪ್ರಕಟಿಸಿದೆ. ಸನಾತನದ ಗ್ರಂಥಗಳ ದಿವ್ಯ ಜ್ಞಾನವನ್ನು ಸಮಾಜದವರೆಗೆ ತಲುಪಿಸಲು ಸಂಸ್ಥೆಯ ವತಿಯಿಂದ ಸಂಪೂರ್ಣ ಭಾರತದಾದ್ಯಂತ ‘ಜ್ಞಾನಶಕ್ತಿ ಪ್ರಸಾರ ಅಭಿಯಾನ’ವನ್ನು ನಡೆಸಲಾಗುತ್ತಿದೆ. ಈ ಗ್ರಂಥಗಳು ಸಮಾಜದ ಪ್ರತಿಯೊಬ್ಬ ಜಿಜ್ಞಾಸುವಿಗೆ, ಮುಮುಕ್ಷು, ಸಾಧಕ ಹೀಗೆ ಎಲ್ಲರಿಗೂ ತಲುಪಿ ಅವರ ಜೀವನದ ಕಲ್ಯಾಣವಾಗಬೇಕೆಂದು ಈ ಉಪಕ್ರಮವನ್ನು ಆರಂಭಿಸಲಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಗೃಹಿಣಿಯರು, ನ್ಯಾಯವಾದಿಗಳು, ವೈದ್ಯರು, ಆಧುನಿಕ ವೈದ್ಯರು, ಪತ್ರಕರ್ತರು, ಆಡಳಿತಾಧಿಕಾರಿಗಳು, ಉದ್ಯೋಗಿಗಳು, ಕೈಗಾರಿಕೋದ್ಯಮಿಗಳು, ದೇಶಪ್ರೇಮಿಗಳು ಜೊತೆಗೆ ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚು ಹೆಚ್ಚು ಜಿಜ್ಞಾಸುಗಳು ಈ ಗ್ರಂಥಗಳ ಲಾಭವನ್ನು ಪಡೆದುಕೊಳ್ಳಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ಧರ್ಮ ಪ್ರಚಾರಕ ಪೂ. ನಿಲೇಶ ಸಿಂಗಬಾಳ ಮನವಿ ಮಾಡಿದರು.

ಅಕ್ಟೋಬರ್ 10 ರ ಬೆಳಿಗ್ಗೆ ಆಯೋಜಿಸಲಾಗಿದ್ದ ‘ಜ್ಞಾನಶಕ್ತಿ ಪ್ರಸಾರ ಅಭಿಯಾನ’ದ ಆನ್‍ಲೈನ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ‘ಸನಾತನ ಸಂಸ್ಥೆ’ಯ ಯೂಟ್ಯೂಬ್ ಚಾನೆಲ್ ಮೂಲಕ ಈ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಯಿತು. ಪೂ. ಸಿಂಗಬಾಳ ಇವರ ಶುಭಹಸ್ತದಿಂದ ದೀಪಪ್ರಜ್ವಲನೆ ಮಾಡಿ ‘ಜ್ಞಾನ ಶಕ್ತಿ ಪ್ರಸಾರ ಅಭಿಯಾನ’ವನ್ನು ಉದ್ಘಾಟಿಸಲಾಯಿತು.

ಈ ಸಮಯದಲ್ಲಿ ಪೂ. ಸಿಂಗಬಾಳ ಇವರು, ಸನಾತನವು ‘ಬಾಲಸಂಸ್ಕಾರ’ ‘ಧರ್ಮಶಾಸ್ತ್ರ ವು ಹೀಗೇಕೆ ಹೇಳುತ್ತದೆ ?’, ‘ಆಚಾರಧರ್ಮ’, ‘ದೇವತೆಗಳ ಉಪಾಸನೆ’, ‘ಆಯುರ್ವೇದ’, ‘ಧಾರ್ಮಿಕ ಹಾಗೂ ಸಾಮಾಜಿಕ ಕೃತಿಗಳಿಗೆ ಸಂಬಂಧಿಸಿದ ಗ್ರಂಥ’, ಜೊತೆಗೆ ‘ನೈಸರ್ಗಿಕ ಆಪತ್ತಿನ ಸಮಯದಲ್ಲಿ ಸ್ವಂತದ ರಕ್ಷಣೆ ಹೇಗೆ ಮಾಡಬೇಕು ?’ ಇತ್ಯಾದಿ ಅನೇಕ ವಿಷಯಗಳ 347 ಗ್ರಂಥಗಳನ್ನು ಪ್ರಕಾಶಿಸಿದೆ. ಈ ಗ್ರಂಥಗಳು ಕನ್ನಡ, ತಮಿಳು, ಮಲಯಾಳಂ, ಮರಾಠಿ, ಹಿಂದಿ, ಬಂಗಾಳಿ, ಗುಜರಾತಿ, ಇಂಗ್ಲಿಷ್ ಇತ್ಯಾದಿ 17 ಭಾಷೆಗಳಲ್ಲಿ ಲಭ್ಯವಿವೆ. ಇಲ್ಲಿಯವರೆಗೆ ಈ ಗ್ರಂಥಗಳ 82 ಲಕ್ಷ 48 ಸಾವಿರ ಪ್ರತಿಗಳನ್ನು ಮುದ್ರಿಸಲಾಗಿದೆ ಎಂದು ಹೇಳಿದರು.

ಈ ಅಭಿಯಾನದ ನಿಮಿತ್ತ ಸಂಪೂರ್ಣ ದೇಶದಲ್ಲಿ ಗ್ರಂಥ ಪ್ರದರ್ಶನಗಳು, ಸಂಪರ್ಕ ಅಭಿಯಾನಗಳು, ಗ್ರಂಥಗಳ ಮಹತ್ವವನ್ನು ವಿವರಿಸುವ ಹಸ್ತಪ್ರತಿಗಳು, ಡಿಜಿಟಲ್ ಪುಸ್ತಕಗಳು, ವಾರ್ತಾ ವಾಹಿನಿಗಳಲ್ಲಿ ವಿಶೇಷ ಕಾರ್ಯಕ್ರಮಗಳು, ‘ಸಾಮಾಜಿಕ ಮಾಧ್ಯಮ’ ಇತ್ಯಾದಿಗಳ ಮೂಲಕ ಸನಾತನದ ಗ್ರಂಥಗಳ ಪ್ರಸಾರವನ್ನು ವ್ಯಾಪಕವಾಗಿ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸಂತರ ಆಶೀರ್ವಾದ ಮತ್ತು ಗಣ್ಯರ ಶುಭ ಹಾರೈಕೆಗಾಗಿ ಅವರನ್ನು ಭೇಟಿ ಮಾಡಲಾಗುತ್ತಿದೆ. `ಸನಾತನದ ಗ್ರಂಥ ಸ್ವತಃ ಖರೀದಿ ಮಾಡಿ’, ‘ವಿವಿಧ ಮಂಗಲಕರ ಪ್ರಸಂಗದಲ್ಲಿ ಉಡುಗೋರೆ ನೀಡಿ’, ‘ಸ್ನೇಹಿತರು, ಕುಟುಂಬ ಮತ್ತು ಸಂಬಂಧಿಕರಿಗೆ ಗ್ರಂಥದ ಮಾಹಿತಿ ತಿಳಿಸಿ’, ‘ಶಾಲೆ, ಮಹಾವಿದ್ಯಾಲಯಗಳು, ಗ್ರಂಥಾಲಯ ಇತ್ಯಾದಿಗಳಲ್ಲಿ ಈ ಗ್ರಂಥವನ್ನು ಪ್ರಾಯೋಜಕವನ್ನಾಗಿ ಮಾಡಿ’, ಎಂದು ಸನಾತನ ಸಂಸ್ಥೆಯ ವತಿಯಿಂದ ಕರೆ ನೀಡಲಾಯಿತು.