‘ಸನಾತನ ಅಮೂಲ್ಯ ಗ್ರಂಥಗಳನ್ನು ಎಲ್ಲರ ವರೆಗೆ ತಲುಪಿಸಲು ಸನಾತನದ ೭೫ ನೇ ಸಮಷ್ಟಿ ಸಂತರಾದ ಪೂ. ರಮಾನಂದ ಗೌಡ (೪೫ ವರ್ಷ) ಇವರ ಮಾರ್ಗದರ್ಶನಕ್ಕನುಸಾರ ಕರ್ನಾಟಕ ರಾಜ್ಯದಲ್ಲಿ ನಡೆಸಲಾದ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ !

ಸನಾತನ ಸಂಸ್ಥೆಯ ವತಿಯಿಂದ ಭಾರತದಾದ್ಯಂತ ನಡೆಸಲಾಗುತ್ತಿರುವ ‘ಜ್ಞಾನಶಕ್ತಿ ಪ್ರಸಾರ ಅಭಿಯಾನ’ದ ನಿಮಿತ್ತ

ಸನಾತನ ಗ್ರಂಥಗಳ ಮುಖಪುಟ

‘ಗುರುಕೃಪೆಯಿಂದ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ (ಸನಾತನದ ೭೫ ನೇ ಸಮಷ್ಟಿ ಸಂತರು) ಇವರ ಮಾರ್ಗದರ್ಶಕ್ಕನುಸಾರ ಕರ್ನಾಟಕ ರಾಜ್ಯದಲ್ಲಿ ೧.೯.೨೦೨೧ ರಿಂದ ೩೧. ೧೦.೨೦೨೧ ಈ ಕಾಲಾವಧಿಯಲ್ಲಿ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ವನ್ನು ಹಮ್ಮಿಕೊಳ್ಳಲಾಗಿದೆ. ಹಿಂದಿನ ಲೇಖನದಲ್ಲಿ ಪೂ. ರಮಾನಂದ ಗೌಡ ಇವರಿಗೆ ಈ ಅಭಿಯಾನದ ಸಂಕಲ್ಪನೆ ಹೇಗೆ ಹೊಳೆಯಿತು ? ಅವರು ತಳಮಳದಿಂದ ಮತ್ತು ಪರಿಶ್ರಮ ತೆಗೆದುಕೊಂಡು ಈ ಅಭಿಯಾನದ ನಿಯೋಜನೆಯನ್ನು ಹೇಗೆ ಮಾಡಿದರು ಮತ್ತು ಅದರಿಂದ ನಮಗೆ ಯಾವ ಅಂಶಗಳು ಕಲಿಯಲು ಸಿಕ್ಕಿದವು ?’, ಎಂಬ ಬಗ್ಗೆ ಕೊಡಲಾಗಿತ್ತು. ಈ ಲೇಖನದಲ್ಲಿ ಪೂ. ರಮಾನಂದ ಗೌಡ ಇವರು ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ವು ಯಶಸ್ವಿಯಾಗಲೆಂದು ಪ್ರತಿಯೊಂದು ಹಂತದ ಸೇವೆಗಳ ಚಿಂತನೆಯನ್ನು ಹೇಗೆ ಮಾಡಬೇಕು?’, ಈ ಬಗ್ಗೆ ಮಾಡಿದ ಮಾರ್ಗದರ್ಶನವನ್ನು ಇಲ್ಲಿ ಕೊಡಲಾಗಿದೆ.

(ಭಾಗ – ೨)

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/51647.html
ಪೂ. ರಮಾನಂದ ಗೌಡ

ಸೇವೆಗಳ ನಿಯೋಜನೆ ಮಾಡುವಾಗ ಸಾಧಕರಿಗೆ ಎಲ್ಲ ಅಂಶಗಳು ತನ್ನಷ್ಟಕ್ಕೆ ಹೊಳೆಯುತ್ತಿದ್ದು ‘ಇದು ಈಶ್ವರನ ನಿಯೋಜನೆಯಿಂದಲೇ ನಡೆಯುತ್ತಿದೆ’, ಎಂದು ಗಮನಕ್ಕೆ ಬರುವುದು !

ಪೂ. ರಮಾನಂದ ಅಣ್ಣನವರು ‘ಅಭಿಯಾನದ ಸೇವೆಯ ವ್ಯಾಪ್ತಿಯನ್ನು ಹೇಗೆ ತೆಗೆಯಬೇಕು?’, ಎಂದು ಹೇಳಿ ಎಲ್ಲರಿಗೂ ವ್ಯಾಪ್ತಿಯನ್ನು ತೆಗೆಯಲು ಹೇಳಿದರು. ಪ್ರತಿಯೊಂದು ಹಂತದಲ್ಲಿ ಪ್ರತಿಯೊಂದು ಸೇವೆಗಾಗಿ ಯೋಗ್ಯ ದಿಶೆಯನ್ನು ನೀಡಿದರು. ಆದ್ದರಿಂದ ‘ಈ ಸೇವೆಗಳ ನಿಯೋಜನೆಯನ್ನು ಮಾಡುವಾಗ ಎಲ್ಲ ಅಂಶಗಳು ತನ್ನಷ್ಟಕ್ಕೇ ಹೊಳೆಯುತ್ತಿವೆ’, ಎಂದು ಅನುಭವಕ್ಕೆ ಬರುತ್ತಿತ್ತು. ‘ಇದು ಈಶ್ವರನ ನಿಯೋಜನೆಯಿಂದಲೇ ನಡೆಯುತ್ತಿದೆ’, ಎಂದು ನಮ್ಮ ಗಮನಕ್ಕೆ ಬಂದಿತು.’ – ಶ್ರೀ. ಕಾಶಿನಾಥ ಪ್ರಭು, ಸೌ. ಮಂಜುಳಾ ರಮಾನಂದ ಗೌಡ ಮತ್ತು ಶ್ರೀ. ವಿಜಯ ರೇವಣಕರ, ಕರ್ನಾಟಕ (ಅಕ್ಟೋಬರ್ ೨೦೨೧)

ಪ.ಪೂ. ಗುರುದೇವರು ಒಂದು ಗ್ರಂಥದಲ್ಲಿ, ‘ಕಾಲಾನುಸಾರ ಸನಾತನ ಧರ್ಮದ ಜ್ಞಾನದ ಕಡೆಗೆ ಜೀವಗಳೇ ಆಕರ್ಷಿತವಾಗುತ್ತದೆ’, ಎಂದು ಬರೆದಿದ್ದಾರೆ. ಈ ಅಭಿಯಾನವನ್ನು ಹಮ್ಮಿಕೊಳ್ಳುವಾಗ ‘ಬಹಳಷ್ಟು ಜನರು ಈ ಜ್ಞಾನದ ಕಡೆಗೆ ಆಕರ್ಷಿತರಾಗುತ್ತಿದ್ದಾರೆ’, ಎಂಬುದು ನಮ್ಮ ಗಮನಕ್ಕೆ ಬಂದಿತು. ಇದರಿಂದ ನಮಗೆ ಪ.ಪೂ. ಗುರುದೇವರ ಮೇಲಿನ ವಚನವು ಅನುಭವಕ್ಕೆ ಬಂದಿತು.

೧. ಗ್ರಂಥ ಅಭಿಯಾನದ ವಿಷಯವು ಎಲ್ಲ ಸಾಧಕರ ವರೆಗೆ ತಲುಪಬೇಕು !

`ಪೂ. ರಮಾನಂದಣ್ಣನವರು, “ಪ್ರಸಾರಸೇವೆಯ ಅಂತರ್ಗತ ಗ್ರಂಥ ಅಭಿಯಾನದ ವಿಷಯವು ಎಲ್ಲ ಸಾಧಕರ ವರೆಗೆ ತಲುಪಬೇಕು. ಅದರೊಂದಿಗೆ `ಧರ್ಮಶಿಕ್ಷಣ ವರ್ಗ, ಸಾಧನಾ ಸತ್ಸಂಗ, ಧರ್ಮಪ್ರೇಮಿ ಸತ್ಸಂಗ ಇವುಗಳಲ್ಲಿ ಪಾಲ್ಗೊಳ್ಳುವವರು ಅದೇ ರೀತಿ ರಾಷ್ಟ್ರ-ಧರ್ಮಪ್ರೇಮಿ ನ್ಯಾಯವಾದಿ, ಉದ್ಯಮಿಗಳು, ವೈದ್ಯರು, ಹಿಂದೂ ಜನಜಾಗೃತಿ ಸಮಿತಿ ಮತ್ತು ಸನಾತನ ಸಂಸ್ಥೆಯ ಕನ್ನಡ ಭಾಷೆಯ ಜಾಲತಾಣವನ್ನು ನೋಡುವ ಜಿಜ್ಞಾಸುಗಳು (ಪ್ರೊಫೈಲ್ ಮೆಂಬರ್ಸ್), ಹಾಗೆಯೇ ನಮ್ಮೊಂದಿಗೆ ಜೋಡಿಸಲ್ಪಟ್ಟ ಪ್ರತಿಯೊಬ್ಬ ಧರ್ಮಪ್ರೇಮಿ’ ಇವರೆಲ್ಲರಿಗೂ ನಮ್ಮ ಗ್ರಂಥಗಳ ಮಹತ್ವ, ಜ್ಞಾನಶಕ್ತಿ ಅಭಿಯಾನದ ಮಹತ್ವ, ಹಾಗೆಯೇ ಈ ಜ್ಞಾನಶಕ್ತಿಯು ಮನೆಮನೆಗೆ ತಲುಪಿಸುವುದರ ಮಹತ್ವವನ್ನು ಹೇಳಬೇಕಾಗಿದೆ. ಈ ಅಭಿಯಾನದ ಸೇವೆಯಲ್ಲಿ ಅವರನ್ನು ಸಹ ತೊಡಗಿಸಿಕೊಳ್ಳಲು ಪ್ರಯತ್ನಿಸಬೇಕು”, ಎಂದು ಹೇಳಿದರು.

೨. ಗ್ರಂಥಗಳ ಮಹತ್ವವನ್ನು ಸುಲಭ ಪದ್ಧತಿಯಲ್ಲಿ ಹೇಳಬೇಕು

ಅ. ಪವರ್ ಪಾಯಿಂಟ್ ಪ್ರೆಸೆಂಟೇಶನ್ (ಪಿಪಿಟಿ ಮೂಲಕ, ಮಾಹಿತಿಯನ್ನು ಪ್ರಸ್ತುತ ಪಡಿಸುವ ಒಂದು ಗಣಕೀಯ ಪದ್ಧತಿ) ಮೂಲಕ ಗ್ರಂಥಗಳ ಮಹತ್ವವನ್ನು ಹೇಳುವುದು : ಪೂ. ರಮಾನಂದಣ್ಣನವರು ಸಾಧಕರಿಗೆ ಮಾರ್ಗದರ್ಶನ ಮಾಡುತ್ತಾ, `ಜಿಜ್ಞಾಸುಗಳಿಗೆ ಗ್ರಂಥಗಳ ಮಹತ್ವದ ಬಗ್ಗೆ `ಪಾವರ್ ಪಾಯಿಂಟ್ ಪ್ರೆಸೆಂಟೇಶನ್’ ಮೂಲಕ (ಪಿಪಿಟಿ ಮೂಲಕ, ಮಾಹಿತಿಯನ್ನು ಪ್ರಸ್ತುತ ಪಡಿಸುವ ಒಂದು ಗಣಕೀಯ ಪದ್ಧತಿ) ಪ್ರಸ್ತುತಿಕರಣ ಮಾಡಿ ಹೇಳಬಹುದು. ಈ ರೀತಿ ಇನ್ನೂ ನೀವು ಏನೆಲ್ಲ ಮಾಡಬಹುದು ?, ಎಂದು ಚಿಂತನೆ ಮಾಡಿರಿ”, ಎಂದು ಹೇಳಿದರು. ಅವರು ಪ್ರಸಾರ ಸೇವೆಯ ನಿಯೋಜನೆಯನ್ನು ಮಾಡಲು ಸಹ ದಿಶೆಯನ್ನು ನೀಡಿದರು.

ಆ. ‘ವಾಟ್ಸ್ ಆ್ಯಪ್’ನ ಮಾಧ್ಯಮದಿಂದ ಜ್ಞಾನಶಕ್ತಿ ಅಭಿಯಾನದ ಪ್ರಸಾರ ಮಾಡುವ ಚಿತ್ರವನ್ನು (ಲೊಗೊ) ಪ್ರಸಾರ ಮಾಡಲು ಡಿಪಿ (Display picture) ಸಿದ್ಧ ಮಾಡಬೇಕು.

ಇ. ಪ್ರತಿದಿನ ವಿವಿಧ ಗ್ರಂಥಗಳ `ಪೋಸ್ಟ್’ (ಪ್ರಸಾರ ಮಾಡುವ ಮಾಹಿತಿ) ಕಳುಹಿಸುವುದು, ಹಾಗೆಯೇ ಪ್ರಸಿದ್ಧಿಸೇವೆಯ ದೃಷ್ಟಿಯಿಂದ ಸ್ಥಳೀಯ ವಾಹಿನಿಗಳಲ್ಲಿ ದೂರಚಿತ್ರವಾಹಿನಿಯ ಪರದೆಯ ಕೆಳಗಿನ ಬದಿಯಲ್ಲಿ ವಾಕ್ಯವು ಬಲಬದಿಯಿಂದ ಎಡಬದಿಗೆ ಹೋಗುತ್ತದೆ (Scrolling) ಆ ರೀತಿ ಸಾಲನ್ನು ಕಳುಹಿಸಬೇಕು.

ಈ. ಗ್ರಂಥಗಳ ಮಹತ್ವವನ್ನು ಹೇಳುವ ಸಂದರ್ಶನ ನೀಡುವುದು, `ಯು ಟ್ಯೂಬ್’ ವಾಹಿನಿಯಲ್ಲಿ ವಿವಿಧ ‘ಬೈಟ್ಸ್’ (ಚಿಕ್ಕ ಸಂದರ್ಶನ ಅಥವಾ ಓರ್ವ ವ್ಯಕ್ತಿಯು ನೀಡಿದ ಮಾಹಿತಿ) ಕಳುಹಿಸಬೇಕು.

ಉ. ಪ್ರಸಿದ್ಧಿ ಫಲಕಗಳಲ್ಲಿ ಗ್ರಂಥದ ಮಾಹಿತಿಯನ್ನು ಬರೆಯವುದು, ಆಕಾಶವಾಣಿಯಲ್ಲಿ (ರೇಡಿಯೋದಲ್ಲಿ) ‘ಎಫ್.ಎಮ್.’ ಈ ವಾಹಿನಿಯಲ್ಲಿ ಪ್ರಸಾರ ಮಾಡಬೇಕು ಮತ್ತು ವಿವಿಧ ಗ್ರಂಥಗಳ ಬಗ್ಗೆ ಪತ್ರಿಕಾಪ್ರಕಟಣೆ (`ಪ್ರೆಸ್‍ನೋಟ್’) ತಯಾರಿಸಬೇಕು.

ಊ. ಪ್ರತಿಯೊಂದು ಗ್ರಂಥದ ಮಹತ್ವವನ್ನು ಹೇಳುವ ಲೇಖನವನ್ನು ಬರೆಯಬೇಕು.

ಅವರು ಸಾಧಕರಿಗೆ ‘ಈ ರೀತಿ ಇನ್ನು ಏನೆಲ್ಲ ಮಾಡಬಹುದು ?’, ಎಂಬ ಚಿಂತನೆಯನ್ನು ಮಾಡಲು ಹೇಳಿ ಈ ಸೇವೆಯನ್ನು ಪರಿಪೂರ್ಣ ಮಾಡುವ ದೃಷ್ಟಿಯಿಂದ ದಿಶೆಯನ್ನು ನೀಡಿದರು.

೩. ಸರ್ವಸಾಮಾನ್ಯರಿಂದ ಎಲ್ಲ ವರ್ಗಗಳ ಜನರ ವರೆಗೆ ಗ್ರಂಥಗಳನ್ನು ತಲುಪಿಸುವ ನಿಟ್ಟಿನಲ್ಲಿ ಗ್ರಂಥಗಳ ಕಟ್ಟು (ಬಂಡಲ್)ಗಳನ್ನು ತಯಾರಿಸಬೇಕು !

ಜ್ಞಾನಶಕ್ತಿ ಅಭಿಯಾನದಲ್ಲಿ ನಮಗೆ ಸದ್ಯದ ಕಾಲಕ್ಕಾಗಿ ಅತ್ಯಂತ ಉಪಯುಕ್ತವಾಗಿರುವ `೭೫ ದೊಡ್ಡ ಗ್ರಂಥಗಳು ಮತ್ತು ೨೫ ಕಿರುಗ್ರಂಥಗಳು’, ಹೀಗೆ ಒಟ್ಟು ೧೦೦ ಗ್ರಂಥಗಳನ್ನು (ಅಭಿಯಾನಕ್ಕಾಗಿ ಆಯ್ದ ಗ್ರಂಥಗಳು) ಜನರಿಗೆ ಪ್ರಾಧಾನ್ಯತೆಯಿಂದ ನೀಡುವ ಪ್ರಯತ್ನವನ್ನು ಮಾಡಬೇಕಾಗಿದೆ. ‘ಸಮಾಜದ ಸರ್ವಸಾಮಾನ್ಯ ವ್ಯಕ್ತಿಗಳಿಗೂ ಗ್ರಂಥಗಳು ಸಿಗಬೇಕು’, ಈ ದೃಷ್ಟಿಯಿಂದಲೂ ವಿಚಾರ ಮಾಡಬೇಕು. ‘ಗ್ರಂಥವು ಯಾರಿಗೂ ಸಿಗಲಿಲ್ಲ’, ಎಂದಾಗಬಾರದು. ಇದಕ್ಕಾಗಿ ವಿಷಯಕ್ಕನುಸಾರ ವಿವಿಧ ಕಟ್ಟು (ಬಂಡಲ್)ಗಳನ್ನು ತಯಾರಿಸಬಹುದು. ಸರ್ವಸಾಮಾನ್ಯರಿಂದ ಎಲ್ಲ ವರ್ಗಗಳ ಜನರ ವರೆಗೆ ನಮಗೆ ಗ್ರಂಥಗಳನ್ನು ತಲುಪಿಸಬೇಕಾಗಿದೆ. `ಆ ನಿಟ್ಟಿನಲ್ಲಿ ಅವರ ಕ್ಷಮತೆಗನುಸಾರವೇ ಗ್ರಂಥಗಳ ಕಟ್ಟುಗಳನ್ನು ತಯಾರಿಸಬಹುದು’, ಎಂದು ಹೇಳಿದರು.

೪. ಪೂರ್ಣ ಅಭಿಯಾನದ ನಿಯೋಜನೆಯು ಒಳ್ಳೆಯ ಪದ್ಧತಿಯಲ್ಲಿ ಆಗಬೇಕು ಮತ್ತು ಪ್ರತಿಯೊಬ್ಬ ಸಾಧಕನು ಸೇವೆಯಲ್ಲಿ ಪಾಲ್ಗೊಳ್ಳಬೇಕು !

‘ಸಾಧಕರು ಈ ಸೇವೆಯನ್ನು ಸುಲಭ ರೀತಿಯಲ್ಲಿ ಮಾಡಬಹುದು’, ಎಂಬ ವಿಚಾರ ಮಾಡಿ ‘ನಾವು ಇದಕ್ಕಾಗಿ ಯಾವ ಕಾರ್ಯಪದ್ಧತಿಯನ್ನು ಇಟ್ಟುಕೊಳ್ಳಬಹುದು ? ಯಾವ ಧೋರಣೆಯನ್ನು ನಿಶ್ಚಿಯಿಸಬೇಕು ?’, ಎಂಬ ಚಿಂತನೆ ಮಾಡಿ `ಯೋಗ್ಯ ಪದ್ಧತಿಯಲ್ಲಿ ಆಯೋಜನೆ ಮಾಡಬೇಕು’. ಪ್ರತಿಯೊಬ್ಬ ಸಾಧಕನು ಸೇವೆಯಲ್ಲಿ ಪಾಲ್ಗೊಳ್ಳಬೇಕು. ಎಲ್ಲರೂ ಸಂಪರ್ಕಿಸುವ ಮತ್ತು ಗ್ರಂಥಗಳ ವಿತರಣೆಯ ಧ್ಯೇಯವಿಡುವುದು ಮತ್ತು ‘ಪ್ರತಿದಿನ ನಡೆಯುವ ಸೇವೆಯ ವರದಿಯನ್ನು ಆತ್ಮನಿವೇದನೆಯ ಸ್ವರೂಪದಲ್ಲಿ ರಾಜ್ಯಸ್ತರದಲ್ಲಿ ಬರಬೇಕು’, ಎಂಬ ದೃಷ್ಟಿಯಿಂದ ನಿಯೋಜನೆ ಮಾಡಲು ಚಿಂತನೆ ಮಾಡಬೇಕು. (ಈ ಚಿಂತನೆಗಾಗಿ ಪೂ. ರಮಾನಂದ ಅಣ್ಣನವರು ೧ ವಾರದ ಅವಧಿ ನೀಡಿದ್ದರು.)

– ಶ್ರೀ. ಕಾಶಿನಾಥ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೯), ಸೌ. ಮಂಜುಳಾ ರಮಾನಂದ ಗೌಡ (ಆಧ್ಯಾತ್ಮಿಕ ಮಟ್ಟ ಶೇ. ೬೫ ) ಮತ್ತು ಶ್ರೀ. ವಿಜಯ ರೇವಣಕರ (ಆಧ್ಯಾತ್ಮಿಕ ಮಟ್ಟ ಶೇ. ೬೫), (ಅಕ್ಟೋಬರ್ ೨೦೨೧)

(ಮುಂದುವರಿಯುವುದು)