ಸನಾತನ ಸಂಸ್ಥೆಯ ವತಿಯಿಂದ ಭಾರತದಾದ್ಯಂತ ನಡೆಸಲಾಗುತ್ತಿರುವ ‘ಜ್ಞಾನಶಕ್ತಿ ಪ್ರಸಾರ ಅಭಿಯಾನದ ನಿಮಿತ್ತ ಸನಾತನದ ಸಂತ ಪೂ. ರಮಾನಂದ ಗೌಡ ಇವರು ಸನಾತನದ ಅಮೂಲ್ಯ ಗ್ರಂಥ ಸಂಪತ್ತನ್ನು ಪ್ರತಿಯೊಬ್ಬರ ವರೆಗೆ ತಲುಪಿಸಲು ನಡೆಸಿದ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ !

ಗುರುಕೃಪೆಯಿಂದ ಸನಾತನದ ಧರ್ಮಪ್ರಚಾರಕರಾದ ಪೂ. ರಾಮಾನಂದ ಗೌಡ ( ಸನಾತನದ ೭೫ ನೇ ಸಮಷ್ಟಿ ಸಂತರು) ಇವರ ಮಾರ್ಗದರ್ಶನಕ್ಕನುಸಾರ ರಾಜ್ಯದಲ್ಲಿ ಸೆಪ್ಟೆಂಬರ್ ೧ ರಿಂದ ೩೦ ರ ವರೆಗೆ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಮಾನ’ವನ್ನು ನಡೆಸಲಾಯಿತು. ಅನಂತರ ಇದನ್ನು ಅಕ್ಟೋಬರ್ ೩೧ ರ ವರೆಗೆ ವಿಸ್ತರಿಸಲಾಯಿತು. ಈ ಲೇಖನದಲ್ಲಿ ಪೂ ರಮಾನಂದ ಗೌಡ ಇವರಿಗೆ ಅಭಿಯಾನದ ಸಂಕಲ್ಪನೆ ಹೇಗೆ ಬಂದಿತು ? ಅವರು ತಳಮಳದಿಂದ ಮತ್ತು ಪರಿಶ್ರಮ ತೆಗೆದುಕೊಂಡು ಈ ಅಭಿಯಾನದ ಸುನಿಯೋಜನೆಯನ್ನು ಹೇಗೆ ಮಾಡಿದರು ಮತ್ತು ಅದರಿಂದ ನಮಗೇನು ಕಲಿಯಲು ಸಿಕ್ಕಿತು ? ಎಂಬುದನ್ನು ನೀಡಲಾಗಿದೆ.

ಪ.ಪೂ. ಗುರುದೇವರು ಒಂದು ಗ್ರಂಥದಲ್ಲಿ ‘ಕಾಲಾನುಸಾರ ಸನಾತನ ಧರ್ಮದ ಜ್ಞಾನದೆಡೆಗೆ ಜೀವಗಳು ಆಕರ್ಷಿತವಾಗುತ್ತವೆ’ ಎಂದು ಹೇಳಿದ್ದಾರೆ. ಈ ಅಭಿಯಾನ ನಡೆಸುವಾಗ ‘ಅನೇಕರು ಈ ಜ್ಞಾನದೆಡೆಗೆ ಆಕರ್ಷಿತರಾಗುತ್ತಿದ್ದಾರೆ’ ಎಂಬುದು ನಮ್ಮ ಗಮನಕ್ಕೆ ಬಂದಿತು. ಅದರಿಂದ ನಮಗೆ ಪ.ಪೂ. ಗುರುದೇವರ ಮೇಲಿನ ವಾಕ್ಯ ಅನುಭವಿಸಲಿಕ್ಕಾಯಿತು.

(ಭಾಗ ೧)

೧. ಪೂ. ರಮಾನಂದ ಗೌಡ ಇವರಿಗೆ ಈ ಅಭಿಯಾನದ ಸಂಕಲ್ಪನೆ ಬಂದ ಪರಿ

೧ ಅ. ‘ಸಾಧಕರಿಂದ ಹೆಚ್ಚು ಸೇವೆ ಹೇಗೆ ಮಾಡಿಸುವುದು ?’ ಎಂದು ಪೂ. ರಮಾನಂದ ಗೌಡ ಇವರ ಮನಸ್ಸಿನಲ್ಲಿ ವಿಚಾರ ಬರುವುದು ಮತ್ತು ಅದಕ್ಕಾಗಿ ಅವರು ಗುರುದೇವರ ಚರಣಗಳಲ್ಲಿ ಪ್ರಾರ್ಥಿಸುವುದು : ಗುರುಪೂರ್ಣಿಮೆಯ ಕಾಲಾವಧಿಯಲ್ಲಿ ಎಲ್ಲ ಸಾಧಕರು ತುಂಬ ಉತ್ಸಾಹದಿಂದ, ತಳಮಳದಿಂದ ಮತ್ತು ಆಯೋಜನಾಬದ್ಧವಾಗಿ ಸೇವೆ ಮಾಡಿದ್ದರು. ಗುರುಪೂರ್ಣಿಮೆಯಾದ ನಂತರ ಸಾಧಕರ ಸೇವೆಯ ದೃಷ್ಟಿಯಿಂದ ಪ್ರಯತ್ನವು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಅವರಿಂದ ಸೀಮಿತ ಪ್ರಮಾಣದಲ್ಲಿ ಸೇವೆಯಾಗುತ್ತಿತ್ತು. ಹಾಗಾಗಿ ‘ಸಾಧಕರಿಂದ  ಹೆಚ್ಚು ಸೇವೆ ಮಾಡುವುದು ? ಅವರನ್ನು ಹೇಗೆ ಮುಂದೆ ಕರೆದೊಯ್ಯುವುದು ?’ ಎಂಬ ವಿಚಾರಗಳು ಪೂ. ರಮಾನಂದ ಅಣ್ಣನವರ ಮನಸ್ಸಿನಲ್ಲಿ ಬರುತ್ತಿತ್ತು ಮತ್ತು ಅದಕ್ಕಾಗಿ ಅವರು ಗುರುದೇವರ ಚರಣಗಳಲ್ಲಿ ಪ್ರಾರ್ಥನೆಯನ್ನು ಮಾಡುತ್ತಿದ್ದರು.

೧ ಆ. ‘ಸನಾತನದ ಗ್ರಂಥ ಸಂಪತ್ತಿನ ಜ್ಞಾನವನ್ನು ಸಮಾಜದ ವರೆಗೆ ತಲುಪಿಸಲು ‘ಗ್ರಂಥ ಅಭಿಯಾನ ಮಾಡಬಹುದು’ ಎಂಬ ವಿಚಾರ ಪೂ. ರಮಾನಂದ ಗೌಡ ಇವರ ಮನಸ್ಸಿನಲ್ಲಿ ಬರುವುದು : ಪೂ. ಅಣ್ಣನವರು ಒಂದು ದಿನ ಧ್ಯಾನಮಂದಿರದಲ್ಲಿ ಕುಳಿತಿದ್ದರು. ಅಗ ಅವರಿಗೆ ಸನಾತನದ ಗ್ರಂಥಗಳ ಬಗ್ಗೆ ಮುಂದಿನ ವಿಚಾರಗಳು ಬರುತ್ತಿದ್ದವು, ‘ಸನಾತನದ ಗ್ರಂಥ ಸಂಪತ್ತು ವಿಫುಲವಾಗಿದೆ. ಅದರಲ್ಲಿ ಅಮೂಲ್ಯ ಜ್ಞಾನವಿದೆ. ಆ ಜ್ಞಾನವನ್ನು ಸಮಾಜದ ಪ್ರತಿಯೊಬ್ಬ ಜಿಜ್ಞಾಸುವಿನವರೆಗೆ ತಲುಪಿಸಲು ನಾವು ಕಡಿಮೆ ಬೀಳುತ್ತಿದ್ದೇವೆ. ಅದಕ್ಕಾಗಿ ನಾವು ಹೇಗೆ ಪ್ರಯತ್ನಿಸಬಹುದು ?

ಅನಂತರ ಸಾಧಕರ ಸೇವೆ ಹೆಚ್ಚಿಸಲು ಮತ್ತು ಸನಾತನದ ಗ್ರಂಥಗಳನ್ನು ಸಮಾಜದವರೆಗೆ ತಲುಪಿಸಲು ನಾವು ‘ಗ್ರಂಥ ಅಭಿಯಾನ ನಡೆಸಬಹುದು’ ಎಂಬ ವಿಚಾರ ಅವರ ಮನಸ್ಸಿನಲ್ಲಿ ಬಂದಿತು. ಅನಂತರ ಅವರ ಮನಸ್ಸಿನಲ್ಲಿ ‘ಈ ಗ್ರಂಥ ಅಭಿಯಾನ’ದ ಆಯೋಜನೆ ಹೇಗೆ ಮಾಡಬಹುದು ? ಅದರ ಅಂತರ್ಗತ ಯಾವೆಲ್ಲ ಸೇವೆಗಳು ಬರುತ್ತವೆ ಮತ್ತು ಆ ಸೇವೆಗಳ ಜವಾಬ್ದಾರಿ ಯಾರಿಗೆಲ್ಲ ಕೊಡಬಹುದು ? ಹೀಗೆ ಎಲ್ಲ ವಿಚಾರಗಳು ತನ್ನಷ್ಟಕ್ಕೆ ಬರ ತೊಡಗಿತು. ಅವರು ಈ ಅಭಿಯಾನದ ಬಗ್ಗೆ ಹೇಳುವಾಗ ‘ಅವರಿಗೆ ಇವೆಲ್ಲ ವಿಚಾರಗಳನ್ನು ಪ.ಪೂ. ಗುರುದೇವರೇ ನೀಡುತ್ತಿದ್ದಾರೆ’ ಎಂದು ನಮಗನ್ನಿಸುತ್ತಿತ್ತು.

೧ ಇ. ‘ಪ.ಪೂ. ಗುರುದೇವರು ನೀಡಿದ ಜ್ಞಾನವು ಸನಾತನ ಧರ್ಮ ಜ್ಞಾನವಾಗಿದೆ; ಹಾಗಾಗಿ ಈ ಅಭಿಯಾನಕ್ಕೆ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ ಎಂದು ಹೆಸರಿಡೋಣ ಎಂದು ಪೂ. ರಮಾನಂದ ಅಣ್ಣನವರ ಮನಸ್ಸಿನಲ್ಲಿ ವಿಚಾರ ಬಂದಿತು.

೨. ಅಭಿಯಾನ ಆರಂಭವಾಗುವ ಮೊದಲು ಪೂ. ರಮಾನಂದ ಗೌಡ ಇವರು ಸಾಧಕರಿಗೆ ಮಾಡಿದ ಮಾರ್ಗದರ್ಶನ

೨ ಅ. ಅಭಿಯಾನದ ಸೇವೆಯನ್ನು ಆಯೋಜನಾಬದ್ಧವಾಗಿ ಮಾಡಲು ಪ್ರಯತ್ನಿಸಬೇಕು ! : ಪೂ. ರಮಾನಂದ ಗೌಡ ಇವರು, ಜ್ಞಾನಶಕ್ತಿ ಅಭಿಯಾನವನ್ನು ಆರಂಭಿಸುವ ಮೊದಲು ಒಂದು ಸತ್ಸಂಗದಲ್ಲಿ ಸಾಧಕರಿಗೆ ಮಾರ್ಗರ್ಶನ ಮಾಡುವಾಗ ‘ಯಾವುದೇ ಸೇವೆ ಮಾಡುವಾಗ ಅದರ ಪೂರ್ವಸಿದ್ಧತೆ ಒಳ್ಳೆಯದಾಗಿರಬೇಕು’. ‘ಸೇವೆಯ ಆಯೋಜನೆ ಲಿಖಿತವಾಗಿರಬೇಕು, ಆಗಲೇ ಆ ಸೇವೆ ಶೇ. ೫೦ ರಷ್ಟು ಪೂರ್ಣವಾಗುತ್ತದೆ’ ಎಂದು ಗುರುದೇವರು ನಮಗೆ ಕಲಿಸಿದ್ದಾರೆ. ಆದುದರಿಂದ ಅಭಿಯಾನದ ಸೇವೆ ಆಯೋಜನಾಬದ್ಧವಾಗಿ ಮಾಡಲು ಪ್ರಯತ್ನಿಸೋಣ, ಎಂದರು.

೨ ಆ. ಜ್ಞಾನದಾನವು ಸರ್ವಶ್ರೇಷ್ಠ ದಾನವಾಗಿದೆ : ‘ಜ್ಞಾನದಾನವು ಅನ್ನದಾನ, ವಸ್ತ್ರದಾನ ಮತ್ತು ವಿದ್ಯಾದಾನಗಳಿಗಿಂತ ಸರ್ವಶ್ರೇಷ್ಠ ದಾನವಾಗಿದೆ’ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಅನ್ನದಾನವು ಒಂದು ಸಮಯ ಅಥವಾ ಒಂದು ದಿನಕ್ಕೆ ಸೀಮಿತವಾಗಿರುತ್ತದೆ. ವಸ್ತ್ರದಾನವು ಕೆಲವು ತಿಂಗಳಿಗೆ ಅಥವಾ ಒಂದು ವರ್ಷಕ್ಕೆ ಸೀಮಿತವಾಗಿರುತ್ತದೆ. ಆದರೆ ವಿದ್ಯಾದಾನವು ಒಂದು ಜನ್ಮಕ್ಕಷ್ಟೇ ಸೀಮಿತವಿರುತ್ತದೆ; ಆದರೆ ಜ್ಞಾನದಾನವು ಜೀವವನ್ನು ಮೋಕ್ಷದ ವರೆಗೆ ಕರೆದೊಯ್ಯುತ್ತದೆ. ಹಾಗಾಗಿ ಜ್ಞಾನದಾನವು ಸರ್ವಶ್ರೇಷ್ಠ ದಾನವಾಗಿದೆ.

೨ ಇ. ‘ಸನಾತನ ಧರ್ಮದ ಜ್ಞಾನಶಕ್ತಿಯ ಪ್ರಸಾರ ಮಾಡಿ ಪ್ರತಿಯೊಬ್ಬ ಜಿಜ್ಞಾಸುವರೆಗೆ ಈ ಅಮೂಲ್ಯ ಜ್ಞಾನವನ್ನು ತಲುಪಿಸುವುದು ಕಾಲಾನುಸಾರ ಸರ್ವಶ್ರೇಷ್ಠ ಸಮಷ್ಟಿ ಸೇವೆಯಾಗಿದೆ !’ : ಪ.ಪೂ. ಗುರುದೇವರು ನಮಗೆ ಗ್ರಂಥದ ಮಾಧ್ಯಮದಿಂದ ಜ್ಞಾನವನ್ನು ನೀಡಿದ್ದಾರೆ. ಈಗ ‘ಸಮಾಜಕ್ಕೆ ಹೋಗಿ ಸನಾತನ ಧರ್ಮದ ಜ್ಞಾನಶಕ್ತಿಯ ಪ್ರಸಾರ ಮಾಡಿ ಪ್ರತಿಯೊಬ್ಬ ಜಿಜ್ಞಾಸುವಿನ ವರೆಗೆ ಈ ಅಮೂಲ್ಯ ಜ್ಞಾನವನ್ನು ತಲುಪಿಸುವುದು ಕಾಲಾನುಸಾರ ಸರ್ವಶ್ರೇಷ್ಠ ಸಮಷ್ಟಿ ಸೇವೆಯಾಗಿದೆ. ಅನಂತರ ಪೂ. ಅಣ್ಣನವರು ‘ಈ ಅಭಿಯಾನದ ಅಂತರ್ಗತ ಪ್ರಸಾರ, ಸೋಶಿಯಲ್ ಮೀಡಿಯಾ, ಪ್ರಸಿದ್ಧಿ, ಆಯೋಜನೆ, ಸಾಧಕರಲ್ಲಿ ಜಾಗೃತಿ ಮೂಡಿಸುವುದು, ಈ ಸೇವೆಗಳು ಬರುತ್ತವೆ’ ಎಂದು ಹೇಳಿ ‘ಜ್ಞಾನಶಕ್ತಿ ಅಭಿಯಾನ ನಡೆಸಲು ಹೇಗೆ ಪ್ರಯತ್ನಿಸಬೇಕು?’ ಎಂಬ ಬಗ್ಗೆ ಸಾಧಕರಿಗೆ ಮಾರ್ಗದರ್ಶನ ಮಾಡಿದರು.

– ಶ್ರೀ. ಕಾಶಿನಾಥ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ.೬೯), ಸೌ. ಮಂಜುಳಾ ರಮಾನಂದ ಗೌಡ (ಆಧ್ಯಾತ್ಮಿಕ ಮಟ್ಟ ಶೇ. ೬೫) ಮತ್ತು ಶ್ರೀ. ವಿಜಯ ರೇವಣಕರ (ಆಧ್ಯಾತ್ಮಿಕ ಮಟ್ಟ ಶೇ. ೬೫), ಕರ್ನಾಟಕ (ಅಕ್ಟೋಬರ್ ೨೦೨೧)

(ಮುಂದುವರಿಯುವುದು)