ಜಯಘೋಷ, ನೃತ್ಯಗಳೊಂದಿಗೆ ನೆರವೇರಿದ ನಯನಮನೋಹರ ರಥೋತ್ಸವ !
ಶ್ರೀಮನ್ನಾರಾಯಣಸ್ವರೂಪ ಪರಾತ್ಪರ ಗುರು ಡಾ. ಆಠವಲೆ ಯವರ ದಿವ್ಯ ರಥೋತ್ಸವದಲ್ಲಿ ವಿವಿಧ ಗುಂಪುಗಳಲ್ಲಿನ ಸಾಧಕ-ಸಾಧಕಿಯರು ಶ್ರೀವಿಷ್ಣುವಿನ ಗುಣಸಂಕೀರ್ತನೆಯನ್ನು ಮಾಡಿ ಶ್ರೀವಿಷ್ಣುತತ್ತ್ವವನ್ನು ಆವಾಹನೆ ಮಾಡಿದರು.
ಶ್ರೀಮನ್ನಾರಾಯಣಸ್ವರೂಪ ಪರಾತ್ಪರ ಗುರು ಡಾ. ಆಠವಲೆ ಯವರ ದಿವ್ಯ ರಥೋತ್ಸವದಲ್ಲಿ ವಿವಿಧ ಗುಂಪುಗಳಲ್ಲಿನ ಸಾಧಕ-ಸಾಧಕಿಯರು ಶ್ರೀವಿಷ್ಣುವಿನ ಗುಣಸಂಕೀರ್ತನೆಯನ್ನು ಮಾಡಿ ಶ್ರೀವಿಷ್ಣುತತ್ತ್ವವನ್ನು ಆವಾಹನೆ ಮಾಡಿದರು.
ನಿರ್ಗುಣ ಈಶ್ವರನು ಭಕ್ತರಿಗೆ ಆನಂದವನ್ನು ನೀಡಲು ಸಗುಣ ರೂಪದಲ್ಲಿ ಬರುತ್ತಾನೆ. ಆನಂದಮಯ ಅವತಾರೀ ಲೀಲೆಯನ್ನು ಮಾಡುತ್ತಾನೆ ಮತ್ತು ಪುನಃ ನಿರ್ಗುಣದಲ್ಲಿ ವಿಲೀನನಾಗುತ್ತಾನೆ. ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವವೂ ನಮ್ಮೆಲ್ಲರಿಗಾಗಿ ನಿರ್ಗುಣ ಈಶ್ವರನ ಸಗುಣ ರೂಪದ ಆನಂದವನ್ನು ಪಡೆಯುವ ಕ್ಷಣವಾಗಿದೆ.
‘ಹಿಂದೂ ರಾಷ್ಟ್ರವೆಂದರೆ ಕೇವಲ ಹಿಂದೂಗಳ ರಾಷ್ಟ್ರವಲ್ಲ, ‘ಧರ್ಮಾಚರಣಿ, ನೀತಿವಂತ ಮತ್ತು ರಾಷ್ಟ್ರಹಿತದಕ್ಷ ಪ್ರಜೆಗಳು ಮತ್ತು ರಾಷ್ಟ್ರಹಿತ ದಕ್ಷ ರಾಜಕಾರಣಿಗಳು ಇರುವ ರಾಜ್ಯ’, ಎಂಬ ಪರಿಕಲ್ಪನೆಯನ್ನು ಮಂಡಿಸಿದ್ದಾರೆ.
‘ತ್ರೇತಾಯುಗದಲ್ಲಿ ಶ್ರೀವಿಷ್ಣುವು ಶ್ರೀರಾಮನ ರೂಪದಲ್ಲಿ ಕ್ಷತ್ರಿಯ ಕುಲದಲ್ಲಿ ಜನ್ಮ ತಾಳಿದನು ಮತ್ತು ದ್ವಾಪರಯುಗದಲ್ಲಿ ಶ್ರೀಕೃಷ್ಣನ ರೂಪದಲ್ಲಿ ಯಾದವ ಕುಲದಲ್ಲಿ ಜನ್ಮ ತಾಳಿದನು. ಈಗಿನ ಕಲಿಯುಗದಲ್ಲಿ ಶ್ರೀವಿಷ್ಣುವು ‘ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆ’ ಇವರ ರೂಪದಲ್ಲಿ ಜನ್ಮ ತಾಳಿದ್ದಾರೆ.
ಜನ್ಮ ಮತ್ತು ಮೃತ್ಯುವಿನ ಮಹಾಚಕ್ರವೆಂದರೆ ಕಗ್ಗತ್ತಲಿನಲ್ಲಿ ಮಹಾಸಾಗರದ ಮಧ್ಯಭಾಗದಲ್ಲಿ ಒಂದು ದೋಣಿಯಲ್ಲಿ ಸಿಕ್ಕಿಬಿದ್ದ ಹಾಗಾಗಿದೆ. ಅವತಾರರು ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತವಾಗಲು ಬಯಸುವ ಜೀವಗಳಿಗೆ ದಾರಿಯನ್ನು ತೋರಿಸುತ್ತಾರೆ.
ಗುರುದೇವರ ರಥೋತ್ಸವದಲ್ಲಿ ಶ್ರೀಮನ್ನಾರಾಯಣ ಸ್ವರೂಪ ಗುರುದೇವರ ಆಧ್ಯಾತ್ಮಿಕ ಆಸನದ ಎದುರಿಗೆ ಬಲಬದಿಯಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಮತ್ತು ಎಡಬದಿಯಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರು ಆಸನಸ್ಥರಾಗಬೇಕು.
ವಿದೇಶಿ ಸಾಧಕನಿಗೆ ನಿವಾಸಕ್ಕೆಂದು ಕೊಟ್ಟ ಕೋಣೆಯ ವ್ಯವಸ್ಥೆಯನ್ನು ಪರಾತ್ಪರ ಗುರು ಡಾ. ಆಠವಲೆಯವರು ಸ್ವತಃ ನೋಡಿದ್ದಾರೆಂದು ತಿಳಿದಾಗ ಸಾಧಕನ ಕೃತಜ್ಞತಾಭಾವವು ಹೆಚ್ಚಾಯಿತು
ಪೂ. ರಮಾನಂದ ಅಣ್ಣನವರ ಗಮನವು ಸತತವಾಗಿ ಪ್ರತಿಯೊಬ್ಬ ಸಾಧಕನ ಕಡೆಗೆ ಇರುತ್ತಿತ್ತು. ‘ಸಾಧಕರಿಗೆ ಯಾವ ಅಡಚಣೆಗಳೂ ಇಲ್ಲವಲ್ಲ ? ಅವರ ಸೇವೆಗಳು ಸೂಕ್ತ ಸಮಯದಲ್ಲಿ ಪೂರ್ಣ ಅಗುತ್ತಿವೆಯಲ್ಲ ? ಸೇವೆಯನ್ನು ಮಾಡುವಾಗ ಆಧ್ಯಾತ್ಮಿಕ ಸಮಸ್ಯೆಗಳು ಬರುತ್ತಿಲ್ಲವಲ್ಲ ? ಎಂಬುದರ ಕಡೆಗೆ ಅವರ ಸೂಕ್ಷ್ಮ ಗಮನವಿತ್ತು
ಶ್ರೀಮನ್ನಾರಾಯಣಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರ ದಿವ್ಯ ರಥೋತ್ಸವದಲ್ಲಿ ವಿವಿಧ ಗುಂಪುಗಳಲ್ಲಿನ ಸಾಧಕ-ಸಾಧಕಿಯರು ಶ್ರೀವಿಷ್ಣುವಿನ ಗುಣಸಂಕೀರ್ತನೆಯನ್ನು ಮಾಡಿ ಶ್ರೀವಿಷ್ಣುತತ್ತ್ವದ ಆವಾಹನೆಯನ್ನು ಮಾಡಿದರು. ಅತ್ಯಂತ ಅಲೌಕಿಕವಾಗಿರುವಂತಹ ಈ ರಥೋತ್ಸವದಲ್ಲಿ ಸಾಧಕರು ಭಾವ, ಭಕ್ತಿ ಮತ್ತು ಚೈತನ್ಯದಿಂದ ತುಂಬಿರುವ ಅನುಭೂತಿಯನ್ನು ಪಡೆದರು.
ಸಾಧನೆಯನ್ನು ಮಾಡುತ್ತಿರುವಾಗ ನಮ್ಮ ಜೀವನದಲ್ಲಿ ಘಟಿಸುವ ಪ್ರತಿಯೊಂದು ಪ್ರಸಂಗವು ಮನೋಲಯದ ಕಡೆಗೆ ಕರೆದುಕೊಂಡು ಹೋಗುತ್ತಿರುತ್ತದೆ; ಆದರೆ ಪ್ರಸಂಗಗಳ ಕಡೆಗೆ ಬಹಿರ್ಮುಖತೆಯಿಂದ ನೋಡಿ ನಾವು ಮನೋಲಯದ ಪ್ರಕ್ರಿಯೆಯನ್ನು ತಡೆಯುತ್ತೇವೆ.