ಪರಾತ್ಪರ ಗುರು ಡಾ. ಆಠವಲೆ ಇವರ ಅವತಾರಿ ಕಾರ್ಯ

ಪರಾತ್ಪರ ಗುರು ಡಾ. ಆಠವಲೆ

ಗುರು-ಶಿಷ್ಯರ ಸಂಬಂಧವು ಜಗತ್ತಿನಲ್ಲಿನ ಸರ್ವೋತ್ಕೃಷ್ಟ ಸಂಬಂಧವಾಗಿದೆ. ಗುರುಗಳ ಕಾರ್ಯವು ಶಿಷ್ಯ ಮತ್ತು ಸಮಾಜ ಇವುಗಳಿಗೆ ಮಾತ್ರ ಸೀಮಿತವಾಗಿರುತ್ತದೆ; ಆದರೆ ಈಶ್ವರನ ಅವತಾರವೇ ‘ಗುರುಗಳ ರೂಪದಲ್ಲಿ ಪ್ರಕಟವಾದರೆ, ‘ಅವರ ಕಾರ್ಯ ಹೇಗಿರಬಹುದು ?, ಇದರ ಪ್ರತ್ಯಕ್ಷ ಉದಾಹರಣೆ ಎಂದರೆ ‘ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರ ಅಲೌಕಿಕ ಕಾರ್ಯ ! ಆಧುನಿಕ ವೈದ್ಯರು, ಆದರ್ಶ ಪುತ್ರ, ಆದರ್ಶ ಪತಿ, ಉತ್ತಮ ಶಿಷ್ಯ, ಅನೇಕ ಗ್ರಂಥಗಳ ಸಂಕಲನಕಾರರು, ಗುರುಗಳು, ದಾರ್ಶನಿಕರು, ಸಂಶೋಧಕರು, ಇಂತಹ ಅನೇಕ ರೂಪಗಳಲ್ಲಿ ಕಾರ್ಯವನ್ನು ಮಾಡುವ ಗುರುದೇವರ (ಪರಾತ್ಪರ ಗುರು ಡಾ. ಆಠವಲೆಯವರ) ಅವತಾರಿ ಕಾರ್ಯವು ಹೇಗೆ ಅಲೌಕಿಕವಾಗಿದೆ ?, ಎಂಬುದನ್ನು ಈ ಲೇಖನದಿಂದ ತಿಳಿದುಕೊಳ್ಳುವವರಿದ್ದೇವೆ.

೧. ಪರಾತ್ಪರ ಗುರು ಡಾ. ಆಠವಲೆಯವರ ಅಲೌಕಿಕ ಅವತಾರಿ ಕಾರ್ಯವೆಂದರೆ ‘ಗುರುಕೃಪಾಯೋಗದ ನಿರ್ಮಿತಿ !

ಜನ್ಮ ಮತ್ತು ಮೃತ್ಯುವಿನ ಮಹಾಚಕ್ರವೆಂದರೆ ಕಗ್ಗತ್ತಲಿನಲ್ಲಿ ಮಹಾಸಾಗರದ ಮಧ್ಯಭಾಗದಲ್ಲಿ ಒಂದು ದೋಣಿಯಲ್ಲಿ ಸಿಕ್ಕಿಬಿದ್ದ ಹಾಗಾಗಿದೆ. ಅವತಾರರು ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತವಾಗಲು ಬಯಸುವ ಜೀವಗಳಿಗೆ ದಾರಿಯನ್ನು ತೋರಿಸುತ್ತಾರೆ. ಕಾಲಕ್ಕನುಸಾರ ಬೇರೆ ಬೇರೆ ಯೋಗಮಾರ್ಗಗಳನ್ನು ನಿರ್ಮಿಸಿ ಆ ಯೋಗಮಾರ್ಗದಿಂದ ಹೋಗುವ ಜೀವಗಳಿಗೆ ಅದರ ಫಲವನ್ನೂ ಕೊಡುತ್ತಾರೆ. ಕಲಿಯುಗದಲ್ಲಿ ‘ಜ್ಞಾನಯೋಗ, ಭಕ್ತಿಯೋಗ, ಧ್ಯಾನಯೋಗ, ಕರ್ಮಯೋಗ ಇತ್ಯಾದಿ ಮಾರ್ಗಗಳಿಂದ ಸಾಧನೆಯನ್ನು ಮಾಡುವುದು ಬಹಳ ಕಠಿಣವಾಗಿದೆ, ಇದನ್ನು ಅರಿತು ಪರಾತ್ಪರ ಗುರು ಡಾ. ಆಠವಲೆಯವರು ‘ಗುರುಕೃಪಾಯೋಗದ ನಿರ್ಮಿತಿಯನ್ನು ಮಾಡಿದರು. ಯೋಗಮಾರ್ಗದ ನಿರ್ಮಿತಿಯನ್ನು ಮಾಡುವುದೆಂದರೆ, ಒಂದು ಹೊಸ ಸೂರ್ಯನನ್ನು ನಿರ್ಮಿಸಿ ಅವನನ್ನು ಪ್ರತಿದಿನ ಪ್ರಕಾಶಮಾನ ಮಾಡಿದಂತಾಗಿದೆ. ಇಂತಹ ಕಾರ್ಯವನ್ನು ಕೇವಲ ಈಶ್ವರನ ಅವತಾರವೇ ಮಾಡಬಹುದು. – ಶ್ರೀ. ವಿನಾಯಕ ಶಾನಭಾಗ (ಆಧ್ಯಾತ್ಮಿಕ ಮಟ್ಟ ಶೇ. ೬೬),  ಚೆನ್ನೈ ತಮಿಳುನಾಡು. (೧೦.೫.೨೦೨೨)