ಶಿಷ್ಯನು ಗುರುಗಳ ಸೇವೆಯನ್ನು ಮಾಡಬೇಕಾಗಿರುತ್ತದೆ. ಸನಾತನದಲ್ಲಿ ಮಾತ್ರ ಪರಾತ್ಪರ ಗುರು ಡಾಕ್ಟರರು ಸ್ವತಃ ತಾವೇ ಸಾಧಕರಿಗೆ ಎಲ್ಲ ರೀತಿಯಲ್ಲಿ ಸಹಾಯ ಮಾಡುತ್ತಾರೆ. ಕೇವಲ ಗುರು ಎಂದು ಅಲ್ಲ, ಆದರೆ ತಾಯಿ, ತಂದೆ, ಬಂಧು, ಸ್ನೇಹಿತ ಹೀಗೆ ಅನೇಕ ಬಾಂಧವ್ಯದಿಂದ ಪರಾತ್ಪರ ಗುರು ಡಾಕ್ಟರರು ಸಾಧಕರಿಗೆ ಆಧಾರವನ್ನು ಕೊಡುತ್ತಾರೆ. ಅವರ ಕೋಣೆಯಲ್ಲಿ ಕಸವನ್ನು ಗುಡಿಸುವ ಸಾಧಕಿಗೆ ಸಹಾಯವಾಗಬೇಕಂದು ಕುರ್ಚಿಯನ್ನು ಎತ್ತುವುದರಿಂದ ಹಿಡಿದು ಕೆಲವು ಪ್ರಸಂಗಗಳಲ್ಲಿ ಸಾಧಕರ ಸಮಯ ವ್ಯರ್ಥವಾಗಬಾರದೆಂದು ರೋಗಿಗಳ ಸೇವೆಯನ್ನು ಮಾಡುವಂತಹ ಕೃತಿಗಳನ್ನೂ ಸಾಧಕರ ಜೊತೆಯಲ್ಲಿ ಮೊದಲು ಮಾಡುತ್ತಿದ್ದರು. ಸಾಧಕರಿಗೆ ಸಾಧನೆ ಮಾಡಲು ಅನುಕೂಲವಾದ ವಾತಾವರಣವು ನಿರ್ಮಾಣವಾಗಬೇಕೆಂದು ಅವರು ಸತತವಾಗಿ ಪ್ರಯತ್ನಿಸುತ್ತಿರುತ್ತಾರೆ. ಕೇವಲ ಸಾಧಕರದ್ದು ಮಾತ್ರವಲ್ಲ ಅವರ ಕುಟುಂಬದವರ ಕಾಳಜಿಯನ್ನು ಸಹ ಅವರು ಅಷ್ಟೇ ಪ್ರೇಮದಿಂದ ತೆಗೆದುಕೊಳ್ಳುತ್ತಾರೆ. ಅವರು ಕೇವಲ ಸ್ಥೂಲದಿಂದ ಮಾತ್ರವಲ್ಲದೆ ಸೂಕ್ಷ್ಮದಿಂದಲೂ ಸಾಧಕರ ಕಾಳಜಿಯನ್ನು ತೆಗೆದುಕೊಳ್ಳುತ್ತಾರೆ. ನಂತರ ಸಾಧಕರಿಗೆ ಸಾಧನೆಯ ಮುಂದಿನ ದಿಶೆ ಸಿಗುತ್ತಲೇ ಇರುತ್ತದೆ. ಆದರೆ ಅವರ ಕುಟುಂಬದವರು ಆ ಸಾಧಕನ ಸಾಧನೆಗೆ ಅನುಕೂಲವಾದ ವಾತಾವರಣವನ್ನು ಮೂಡಿಸಿ ಒಂದು ರೀತಿಯ ತ್ಯಾಗವನ್ನೇ ಮಾಡಿರುತ್ತಾರೆ. ಆದುದರಿಂದ ಕುಟುಂಬದವರ ಮೃತ್ಯು ನಂತರದ ಪ್ರವಾಸವು ಸುಖಕರವಾಗಬೇಕೆಂದು ಪ್ರಯತ್ನಿಸುವ ಪರಾತ್ಪರ ಗುರು ಡಾ. ಆಠವಲೆಯವರು ಮೋಕ್ಷಗುರುಗಳಾಗಿದ್ದಾರೆ ! ಸನಾತನದ ಪ್ರತಿಯೊಬ್ಬ ಸಾಧಕರು ಒಂದಲ್ಲ ಒಂದು ರೂಪದಲ್ಲಿ ಗುರುಗಳ ಈ ಪ್ರೀತಿಯನ್ನು ಅನುಭವಿಸಿದ್ದಾರೆ. ಅದರಲ್ಲಿನ ಕೆಲವು ಹೃದಯಸ್ಪರ್ಶಿಯಾದಂತಹ ಪ್ರಸಂಗಗಳನ್ನು ಇಲ್ಲಿ ಕೊಡುತ್ತಿದ್ದೇವೆ.
೧. ಸಾಧಕರ ಕಾಲಿಗೆ ಗುಂಡುಸೂಜಿ ತಗಲಬಾರದೆಂದು; ಅದನ್ನು ತಾವೇ ಸ್ವತಃ ತೆಗೆಯುವುದು
‘೨೮.೨೨೦೦೩ ರಂದು ಆಶ್ರಮದಲ್ಲಿ ಸತ್ಸಂಗವಿತ್ತು. ಸಾಧಕರು ತಪ್ಪು ಹೇಳಲಿಕ್ಕೆಂದು ನಿಲ್ಲುವ ಜಾಗದಲ್ಲಿ, ಒಂದು ಗುಂಡುಸೂಜಿಯು ಬಿದ್ದಿತ್ತು. ಒಂದಿಬ್ಬರು ಅದನ್ನು ನೋಡಿದರೂ ಅದನ್ನು ಎತ್ತಲಿಲ್ಲ. ಸತ್ಸಂಗ ಪ್ರಾರಂಭ ವಾದ ನಂತರ ಪರಾತ್ಪರ ಗುರು ಡಾಕ್ಟರರು ಅದನ್ನು ನೋಡಿದ ತಕ್ಷಣವೇ ತಾವೇ ಹೋಗಿ ಅದನ್ನು ಎತ್ತಿಟ್ಟರು. ಅವರಿಗೆ ‘ಸಾಧಕರ ಕಾಲಿಗೆ ತಗಲಬಾರದೆಂಬ, ಕಾಳಜಿಯಿತ್ತು.
ವಿದೇಶಿ ಸಾಧಕನಿಗೆ ನಿವಾಸಕ್ಕೆಂದು ಕೊಟ್ಟ ಕೋಣೆಯ ವ್ಯವಸ್ಥೆಯನ್ನು ಪರಾತ್ಪರ ಗುರು ಡಾ. ಆಠವಲೆಯವರು ಸ್ವತಃ ನೋಡಿದ್ದಾರೆಂದು ತಿಳಿದಾಗ ಸಾಧಕನ ಕೃತಜ್ಞತಾಭಾವವು ಹೆಚ್ಚಾಗುವುದು
‘ಎಸ್.ಎಸ್.ಆರ್.ಎಫ್.ನ ಸಂಪಾದಕರಾದ ಶ್ರೀ. ಶಾನ್ ಕ್ಲಾರ್ಕ (ಆಧ್ಯಾತ್ಮಿಕ ಮಟ್ಟ ಶೇ. ೬೪) ಮೊದಲು ಆಸ್ಟ್ರೇಲಿಯಾದಲ್ಲಿ ಇರುವಾಗ ಸ್ವಲ್ಪ ಸಮಯಕ್ಕಾಗಿ ರಾಮನಾಥಿ ಆಶ್ರಮಕ್ಕೆ ಬರುತ್ತಿದ್ದರು. ಆಗ ನಾವು ಅದಷ್ಟು ಮಟ್ಟಿಗೆ ಒಳ್ಳೆಯ ರೀತಿಯಲ್ಲಿ ಅವರ ಕೋಣೆಯನ್ನು ಸ್ವಚ್ಛ ಮಾಡುತ್ತಿದ್ದೆವು, ಆದರೂ ಶಾನ್ ಅಣ್ಣನಿಗೆ ಕೊಟ್ಟಿದ್ದ ಕೋಣೆಯನ್ನು ನೋಡಲಿಕ್ಕೆ ಪರಾತ್ಪರ ಗುರು ಡಾ. ಆಠವಲೆಯವರು ಪದೇಪದೇ ಬರುತ್ತಿದ್ದರು. ಅದರಲ್ಲಿ ಉಳಿದ ತಪ್ಪುಗಳನ್ನು ಅವರು ನಮ್ಮ ಗಮನಕ್ಕೆ ತಂದು ಕೊಡುತ್ತಿದ್ದರು. ‘ಶಾನ್ ಅಣ್ಣನಿಗೆ ಬರೆಯುವುದಕ್ಕಾಗಿ ಯಾವ ಮೇಜನ್ನು ಇಡಬೇಕು ? ಬೆಡ್‌ಶೀಟ್ ಮತ್ತು ಹೊದಿಕೆ ಇವುಗಳ ಬಣ್ಣವು ತಿಳಿ ಬಣ್ಣದ್ದಾಗಿರಬೇಕು ಮತ್ತು ಎರಡೂ ಒಂದೇ ಬಣ್ಣದ್ದಾಗಿರಬೇಕು. ಕೋಣೆಗೆ ಬಂದ ಮೇಲೆ ಅವರಿಗೆ ಸಂತೋಷವೆನಿಸಬೇಕು. ವಿದೇಶದಲ್ಲಿ ಅವರಿಗೆ ಒಳ್ಳೆಯ ಕೋಣೆಗಳಲ್ಲಿ ವಾಸಿಸುವ ರೂಢಿ ಇರುತ್ತದೆ, ಇದೆಲ್ಲವನ್ನು ಅವರು ಹೇಳುತ್ತಿದ್ದರು. ಕೋಣೆಯೆಲ್ಲ ಸರಿಯಾದ ನಂತರ, ನನ್ನ ಮನಸ್ಸಿನಲ್ಲಿ ‘ಈ ಕೋಣೆಯು ಚೈತನ್ಯದಿಂದ ತುಂಬಿ ಹೋಯಿತು. ಅಣ್ಣನಿಗೆ ವಿದೇಶದಲ್ಲಿ ಇದಕ್ಕಿಂತಲೂ ಒಳ್ಳೆಯ ಕೋಣೆಗಳು ಇರಬಹುದು; ಆದರೆ ಸಾಕ್ಷಾತ ಪರಾತ್ಪರ ಗುರು ಡಾಕ್ಟರರು ಬಂದು ಹೋದ ಕೋಣೆಯು ಚೈತನ್ಯದಿಂದ ತುಂಬಿ ಹೋಗಿದೆ. ಅದು ಇನ್ಯಾವ ದೇಶದಲ್ಲೂ ಸಿಗುವುದಿಲ್ಲ ಎಂಬ ವಿಚಾರ ಬಂತು. ಶಾನ್ ಅಣ್ಣ ಆಶ್ರಮಕ್ಕೆ ಬರುವ ಮೊದಲು “ನಾನು ಇಷ್ಟು ಸಾಮಾನುಗಳನ್ನು ಆಶ್ರಮದಲ್ಲಿ ತಂದರೆ ನಡೆಯು ತ್ತದೆಯಲ್ಲ ? ನನಗೆ ಒಂದು ಡ್ರಾವರ್ ಸಿಗಬಹುದಾ ? ನನ್ನ ಸಾಮಾನಿನಿಂದ ಇತರ ಸಾಧಕರಿಗೆ ಅನಾನುಕೂಲವಾಗುವುದಿಲ್ಲವಲ್ಲ ? ಎಂದು ಕೇಳುತ್ತಿದ್ದರು. ಪ್ರತ್ಯಕ್ಷವಾಗಿ ಅವರಿಗೆ ಕೊಟ್ಟ ಕೋಣೆಯನ್ನು ನೋಡಿದಾಗ ಅವರಿಗೂ ಬಹಳ ಆಶ್ಚರ್ಯವಾಯಿತು. ‘ಆ ಕೋಣೆಯಲ್ಲಿ ಬಹಳ ಚೈತನ್ಯದ ಅರಿವಾಗುತ್ತದೆ, ಎಂದು ಅವರು ತಾವಾಗಿಯೇ ಹೇಳಿದರು. ‘ಈ ಕೋಣೆಯನ್ನು ಸಾಕ್ಷಾತ ಪರಾತ್ಪರ ಗುರು ಡಾಕ್ಟರರು ನಮ್ಮಿಂದ ಸ್ವಚ್ಛತೆ ಮಾಡಿಸಿಕೊಂಡರು, ಎಂದು ತಿಳಿದ ನಂತರ ಅವರ ಮುಖz ಮೇಲಿನ ಕೃತಜ್ಞತೆಯ ಭಾವವು ಇನ್ನೂ ಹೆಚ್ಚಾಯಿತು. ಪರಾತ್ಪರ ಗುರು ಡಾಕ್ಟರರಿಗೆ ಸಾಧಕರ ಮೇಲಿರುವ ಪ್ರೀತಿಯನ್ನು ನೋಡಿ ನನಗೂ ಕೃತಜ್ಞತೆ ಏನಿಸಿತು.
೩. ಸಾಧಕರಿಗೆ ಕೋಣೆಗೆ ಕರೆದು ತಿನಿಸನ್ನು ಕೊಡುವುದು ಮತ್ತು ಒತ್ತಾಯ ಮಾಡಿ (ಪ್ರೀತಿಯಿಂದ) ಬಡಿಸುವುದು
ಸುಖಸಾಗರ ಆಶ್ರಮದಲ್ಲಿ ಮರುದಿನ ಕೆಲವು ಸಾಧಕರಿಗೆ ಕೋಣೆಗೆ ಕರೆದು ಪರಾತ್ಪರ ಗುರು ಡಾಕ್ಟರರು ಬಹಳಷ್ಟು ತಿನಿಸನ್ನು ತಿನ್ನಲು ಕೊಟ್ಟರು. ನಾವು ನಾಚುತ್ತಿದ್ದವು. ಅವರು ಬೇರೆ ಬೇರೆಯ ತಮಾಷೆಯ ಪ್ರಸಂಗಗಳನ್ನು ಹೇಳಿ ನಮ್ಮನ್ನು ನಗಿಸಿ ನಮ್ಮ ಅಂಜಿಕೆಯನ್ನು ಕಡಿಮೆ ಮಾಡುತ್ತಿದ್ದರು. ‘ನಮ್ಮ ಜೊತೆಯಲ್ಲಿ ಅವರೂ ತಿಂಡಿ ತಿನ್ನಬೇಕು, ಎಂದು ನಮಗೆ ಅನಿಸುತ್ತಿತ್ತು. ಅದಕ್ಕೆ ಅವರು, “ಪ್ರತಿದಿನ ನೀವು ನನಗೆ ಬಡಿಸುತ್ತೀರಿ. ಇಂದು ನನಗೆ ನಿಮಗೆ ಬಡಿಸುವ ಅವಕಾಶವು ಸಿಕ್ಕಿದೆ. ಮೊದಲು ನಿಮಗೆ ತೃಪ್ತಿ ಮಾಡುತ್ತೇನೆ. ನಂತರ ನಾನು ತೆಗೆದುಕೊಳ್ಳುತ್ತೇನೆ, ಎಂದರು. ನಮ್ಮ ತಟ್ಟೆಗಳನ್ನು ಸಹ ಎತ್ತಲು ಅವರು ಕೇಳುತ್ತಿದ್ದರು; ಆದರೆ ನಾವು ಕೊಡಲಿಲ್ಲ. ಕೊನೆಗೆ ಅವರು, “ನನಗೆ ಭಂಡಾರದಲ್ಲಿ ಸೇವೆಯನ್ನು ಮಾಡಿದ ಆನಂದವು ಸಿಕ್ಕಿತು. ಹಿಂದೆ ಪ.ಪೂ. ಭಕ್ತರಾಜ ಮಹಾರಾಜರ ಭಂಡಾರದಲ್ಲಿ ನಾನೂ ಇತರರಿಗೆ ಇದೇ ರೀತಿಯಲ್ಲಿ ಒತ್ತಾಯ ಮಾಡಿ ಬಡಿಸುತ್ತಿದ್ದೆ. ಈಗ ಆರೋಗ್ಯದ ತೊಂದರೆಯಿಂದ ಭಂಡಾರಕ್ಕೆ ಹೋಗಲು ಆಗುವುದಿಲ್ಲ; ಆದರೆ ದೇವರು ಆ ಆನಂದವನ್ನೂ ಕೊಟ್ಟನು, ಎಂದರು. ಹೀಗೆ ಅವರು ನುಡಿದ ನಂತರ ನನಗೆ ಇನ್ನೂ ನಾಚಿಕೆಯಾಯಿತು. ‘ಸಾಕ್ಷಾತ ದೇವರಾಗಿದ್ದೂ ಅವರು ನಮ್ಮ ಸೇವೆಯನ್ನು ಮಾಡುವುದರಲ್ಲಿ ಆನಂದ ವನ್ನು ಪಡೆಯುತ್ತಿದ್ದರು ಮತ್ತು ನನಗೆ ನನ್ನ ಸೇವೆಯನ್ನೂ ಪರಿಪೂರ್ಣ ಮಾಡಲು ಬರುವುದಿಲ್ಲ, ಇದರ ದುಃಖವಾಗುತ್ತಿತ್ತು. ಕೃತಜ್ಞತೆಯಿಂದ ತುಂಬಿದ ಅಂತಃಕರಣದಿಂದ ಮತ್ತು ಪ.ಪೂ. ಡಾಕ್ಟರರ ಅಪಾರ ಪ್ರೀತಿಯನ್ನು ಅನುಭವಿಸಿ ‘ಈ ಪ್ರಸಂಗವನ್ನು ಹೃದಯದಲ್ಲಿ ಯಾವ ರೀತಿಯಾಗಿ ಇಡಬಹುದೆಂಬ ವಿಚಾರದಲ್ಲೇ ನಾವು ಕೋಣೆಯಿಂದ ಹೊರಗೆ ಬಂದೆವು. ನಾವು ಹೊರಗೆ ಹೋಗುವಾಗ ‘ಇಂದು ನನಗೆ ಬಹಳ ಆನಂದ ಸಿಕ್ಕಿತು !, ಎಂದು ಅವರು ಹೇಳುತ್ತಿದ್ದರು !
ಪರಾತ್ಪರ ಗುರು ಡಾ. ಆಠವಲೆಯವರು ಮತ್ತು ಸನಾತನ ಸಂತರು
ಪ.ಪೂ. (ಶ್ರೀಮತಿ) ವಿಮಲ ಫಡಕೆಅಜ್ಜಿ ಇವರ ಕೈ ಪಾರ್ಶವಾಯುವಿನಿಂದ ಅಲುಗಾಡದ ಕಾರಣ ಅವರಿಗೆ ನಮಸ್ಕಾರ ಮಾಡಲು ಸಹಾಯ ಮಾಡುವ ಪರಾತ್ಪರ ಗುರು ಡಾ. ಆಠವಲೆ !
‘ಪೂ. ಫಡಕೆ ಅಜ್ಜಿಯವರಿಗೆ ಪಾರ್ಶ್ವವಾಯು ಆಗಿದ್ದರಿಂದ ಅವರು ೧೧ ಜುಲೈ ೨೦೦೩ ರಿಂದ ಮಲಗಿಕೊಂಡೆ ಇದ್ದರು. ಆಗ ಅವರ ಒಂದು ಕೈ ಅಲುಗಾಡುತ್ತಿರಲಿಲ್ಲ. ೧೪ ಜುಲೈ ಈ ದಿನದಂದು ಗುರುಪೂರ್ಣಿಮೆಯಿತ್ತು. ಬೆಳಗಿನಿಂದಲೇ ಅಜ್ಜಿಯವರಿಗೆ, ಇಂದು ಪ.ಪೂ. ಡಾಕ್ಟರರು ನನ್ನ ಕೋಣೆಗೆ ಬರುವರು; ಆದರೆ ನನಗೆ ಸರಳವಾಗಿ ಕೈ ಜೋಡಿಸಿ ನಮಸ್ಕಾರವನ್ನು ಕೂಡ ಮಾಡಲಿಕ್ಕೆ ಬರುವುದಿಲ್ಲ ಎಂದೆನಿಸುತ್ತಿತ್ತು. ಅದರಿಂದ ಅವರಿಗೆ ಬಹಳಷ್ಟು ದುಃಖವಾಗುತ್ತಿತ್ತು. ಪೂ. ಅಜ್ಜಿಯವರು ಬೆಳಗಿನಿಂದಲೇ ಮಧ್ಯ ಮಧ್ಯ ನಮಸ್ಕಾರದ ಮುದ್ರೆಯಲ್ಲಿ ಕೈಯನ್ನು ಜೋಡಿಸಲು ಪ್ರಯತ್ನಿಸುತ್ತಿದ್ದರು. ಸಾಯಂಕಾಲ ಒಮ್ಮಲೇ ಪ.ಪೂ.ರು ಕೋಣೆಯ ಬಾಗಿಲದ ಹತ್ತಿರ ಬಂದರು. ಆಗ ಅಜ್ಜಿಯ ಗಮನವಿರಲಿಲ್ಲ. ಅವರು ಕೈ ಜೋಡಿಸುವ ಪ್ರಯತ್ನದಲ್ಲಿ ಇಷ್ಟು ತಲ್ಲೀನರಾಗಿದ್ದರೆಂದರೆ, ಅವರಿಗೆ ಪ.ಪೂ. ಡಾಕ್ಟರರು ಬಂದಿದ್ದು ತಿಳಿಯಲೇ ಇಲ್ಲ. ಆಗ ಪ.ಪೂ. ಡಾಕ್ಟರರು ನನಗೆ ಸನ್ನೆ ಮಾಡಿ ಕೇಳಿದರು, ‘ಇದೇನು ನಡೆದಿದೆ ? ನಾನು ಹೇಳಿದೆ, ‘ಅಮ್ಮಾ ನಿಮಗೆ ನಮಸ್ಕಾರವನ್ನು ಮಾಡುವ ಪ್ರಯತ್ನವನ್ನು ಮಾಡುತ್ತಿದ್ದಾಳೆ. ತಕ್ಷಣ ಪ.ಪೂ. ಡಾಕ್ಟರರು ಪೂ. ಅಜ್ಜಿಯ ಒಂದು ಕೈಯನ್ನು ಇನ್ನೊಂದು ಕೈಗೆ ಜೋಡಿಸಿ ಅಜ್ಜಿ ನಿಮ್ಮ ನಮಸ್ಕಾರ ಮುಟ್ಟಿತು . ಎಂದರು. ಆಗ ಪೂ. ಅಜ್ಜಿಗೆ ತುಂಬ ಆನಂದವಾಯಿತು. ಅದೆಷ್ಟು ಗುರು ಶಿಷ್ಯರ ಪ್ರೇಮ ! ಈಗಲೂ ಆ ದೃಶ್ಯವನ್ನು ಜ್ಞಾಪಿಸಿಕೊಂಡರೆ, ಕೃತಜ್ಞತೆಯಿಂದ ಮನಸ್ಸು ತುಂಬಿ ಹೋಗುತ್ತದೆ.
೩. ಕಾಯಿಲೆಬಿದ್ದ ವ್ಯಕ್ತಿಯ ಕಾಳಜಿಯನ್ನು ಎಲ್ಲ ರೀತಿಯಿಂದಲೂ ತೆಗೆದುಕೊಳ್ಳುವುದು
ಒಂದು ದಿನ ಪೂ. ಅಜ್ಜಿಗೆ ಬಹಳಷ್ಟು ಸಮಯ ಒಂದೇ ಜಾಗದಲ್ಲಿ ಮಲಗಿದ್ದರಿಂದ ತೊಂದರೆಯಾಗುತ್ತಿತ್ತು. ಆಗ ನಾನು ಅವರಿಗೆ ಸ್ವಲ್ಪ ಎತ್ತುವ ಪ್ರಯತ್ನವನ್ನು ಮಾಡುತ್ತಿದ್ದೆ. ಆ ಹೊತ್ತಿಗೆ ಸರಿಯಾಗಿ ಪ.ಪೂ. ಡಾಕ್ಟರರು ಕೋಣೆಗೆ ಬಂದರು ಮತ್ತು ಅವರು ನನಗೆ ಎತ್ತಲು ಸಹಾಯವನ್ನು ಮಾಡಿದರು. ಕೇವಲ ಎತ್ತಿ ಅಲ್ಲಿಯೇ ನಿಲ್ಲದೆ, ಅವರು ಪೂ. ಅಜ್ಜಿಗೆ ಕೇಳಿದರು, ‘ನಿಮಗೆ ಇನ್ನು ಸ್ವಲ್ಪ ಮೇಲೆ ಎತ್ತಬೇಕೇ ? ಈಗ ಆರಾಮ ಎನಿಸುತ್ತಿದೆಯಾ ? ಅದಕ್ಕೆ ಅಜ್ಜಿ ‘ಹೋ ಎಂದರು. ಮರುದಿನ ಅಜ್ಜಿಯವರಿಗೆ ಉಸಿರಾಡಲು ಸ್ವಲ್ಪ ತೊಂದರೆಯಾಗುತ್ತಿತ್ತು. ಅಜ್ಜಿಯವರಿಗೆ ತೊಂದರೆಯಾಗುತ್ತಿದೆ ಎಂಬ ಸಮಾಚಾರವನ್ನು ನಾನು ಡಾಕ್ಟರರಿಗೆ ಕೊಟ್ಟೆನು. ಅವರು ತಕ್ಷಣ ಕೋಣೆಗೆ ಬಂದರು. ಅವರು ಪೂ. ಅಜ್ಜಿಯನ್ನು ಸ್ಟೆಥೋಸ್ಕೋಪ್‌ನಿಂದ ಪರೀಕ್ಷಿಸಿದರು. ಆ ದೃಶ್ಯವನ್ನು ನೋಡಿ ನನಗೆ ತುಂಬ ಕೃತಜ್ಞತೆ ಎನಿಸಿತು. ತೊಂದರೆ ಹೆಚ್ಚಾಗಿರುವುದರಿಂದ ಸ್ವಲ್ಪ ಹೊತ್ತಿನೊಳಗೆ ಪೂ. ಅಜ್ಜಿಯವರನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು. ಆಸ್ಪತ್ರೆಯಲ್ಲೂ ಪ.ಪೂ. ಡಾಕ್ಟರರು ಪೂ. ಅಜ್ಜಿಯವರನ್ನು ಭೇಟಿಯಾಗಲು ಎರಡು ಸಲ ಬಂದಿದ್ದರು. ಪೂ. ಅಜ್ಜಿ ಆಸ್ಪತ್ರೆಯಿಂದ ಆಶ್ರಮಕ್ಕೆ ಬಂದ ನಂತರವೂ ಸಹ ಅವರು ಅಜ್ಜಿಯವರ ಕಾಳಜಿಯನ್ನು ತೆಗೆದುಕೊಳ್ಳುತ್ತಿದ್ದರು.
– ಸೌ. ಮನೀಷಾ ಗಾಡಗೀಳ (ಆಧ್ಯಾತ್ಮಿಕ ಮಟ್ಟ ಶೇ. ೬೫), ಸನಾತನ ಸಂಕುಲ, ದೇವದ, ಪನವೇಲ.
ಪೂ. ಮಾಯೀಣಕರ ಅಜ್ಜೀಯವರಿಗೆ ಏಳಲು ಸಹಾಯ ಮಾಡಲು ಪರಾತ್ಪರ ಗುರು ಡಾಕ್ಟರರು ಅವರ ಕೈಯನ್ನು ಹಿಡಿಯುವುದು.
‘ಒಂದು ದಿನ ಪರಾತ್ಪರ ಗುರು ಡಾಕ್ಟರರು ಪೂ. (ಶ್ರೀಮತಿ) ಶಾಲಿನಿ ಮಾಯಿಣಕರ ಅಜ್ಜಿಯವರನ್ನು ಭೇಟಿಯಾಗಲು ಬಂದಿದ್ದರು. ಅವರು ಹೊರಡುವಾಗ ಪೂ. ಅಜ್ಜಿಯವರು ಏಳಲು ಪ್ರಯತ್ನಿಸ ತೊಡಗಿದರು. ಆಗ ಅಲ್ಲಿ ಯಾರೂ ಇರಲಿಲ್ಲ; ಆದುದರಿಂದ ಅವರು ಹೊರಗೆ ನಿಂತಿದ್ದ ಸಾಧಕಿಯನ್ನು ಕರೆಯತೊಡಗಿದರು. ಆಗ ಪರಾತ್ಪರ ಗುರು ಡಾಕ್ಟರರು ಅವರಿಗೆ ಅಂದರು, “ಯಾರನ್ನು ಕರೆಯುತ್ತಿದ್ದೀರಿ ? ನಾನು ಇಲ್ಲಿ ಇದ್ದೇನಲ್ಲ ? ಮತ್ತು ಅವರೇ ಪೂ. ಅಜ್ಜಿಗೆ ಆಧಾರ ಕೊಡಲು ಪೂ. ಅಜ್ಜಿಯ ಕೈಯನ್ನು ಹಿಡಿದರು. – ಸೌ. ಅನುರಾಧಾ ಪುರೋಹಿತ (ಪೂ. (ಶ್ರೀಮತಿ) ಮಾಯೀಣಕರ ಅಜ್ಜಿಯವರ ಮಗಳು), ಸನಾತನ ಆಶ್ರಮ, ರಾಮನಾಥಿ, ಗೋವಾ.
ಪ.ಪೂ ದಾಸ ಮಹಾರಾಜರ ಕಾಲಿನ ಶಸ್ತ್ರಚಿಕಿತ್ಸೆ ಆದ ನಂತರ ದಿನನಿತ್ಯದ ಕೃತಿಗಳನ್ನು ಮಾಡಲು ಸಹಾಯ ಮಾಡುವ ಪರಾತ್ಪರ ಗುರು ಡಾ. ಆಠವಲೆ !
ವರ್ಷ ೨೦೦೭ ರಲ್ಲಿ ಒಂದು ಅಪಘಾತದಲ್ಲಿ ನನ್ನ ಕಾಲಿಗೆ ಬಹಳಷ್ಟು ಪೆಟ್ಟಾದುದರಿಂದ ಕಾಲಿನ ಶಸ್ತ್ರಚಿಕಿತ್ಸೆಯನ್ನು ಮಾಡಲಾಯಿತು. ಆಸ್ಪತ್ರೆಯಿಂದ ಮನೆಗೆ ಹೋಗುವುದಕ್ಕೆ ಅನುಮತಿಯು ಸಿಕ್ಕಿದ ನಂತರ ನಾನು ರಾಮನಾಥಿ ಆಶ್ರಮಕ್ಕೆ ಹೋದೆನು. ಪರಾತ್ಪರ ಗುರುದೇವರು ಸ್ವತಃ ತಾವೇ ನನ್ನನ್ನು ಕೋಣೆಗೆ ಕರೆದುಕೊಂಡು ಹೋಗುವುದಕ್ಕೆ ಬಂದಿದ್ದರು. ಪರಾತ್ಪರ ಗುರುದೇವರ ಕೋಣೆಯ ಪಕ್ಕದಲ್ಲಿ ನನ್ನ ನಿವಾಸದ ವ್ಯವಸ್ಥೆಯನ್ನು ಮಾಡಲಾಗಿತ್ತು. ನಾನು ಬಹಳಷ್ಟು ಸಲ ಅಟ್ಟದ ಮೇಲೆ ಬಂದು ಕುಳಿತುಕೊಳ್ಳುತ್ತಿದ್ದೆ. ಆಗ ಪರಾತ್ಪರ ಗುರುದೇವರು ಅಲ್ಲಿ ಬಂದು ನನ್ನ ಕಾಲಿನ ನಿರೀಕ್ಷಣೆಯನ್ನು ಮಾಡುತ್ತಿದ್ದರು. ನನ್ನ ಕಾಲುಗಳಿಗೆ ಛಿದ್ರಗಳಿದ್ದವು. ಅದಕ್ಕೆ ಅವರು ಪ್ರತಿದಿನ ಕೈಹಚ್ಚಿ ಕಾಲಿನ ನಿರೀಕ್ಷಣೆಯನ್ನು ಮಾಡುತ್ತಿದ್ದರು. ಕೆಲವೊಮ್ಮೆ ಸ್ವತಃ ಅವರೇ ನನ್ನನ್ನು ಅಟ್ಟದ ಮೇಲೆ ಕರೆದುಕೊಂಡು ಹೋಗುತ್ತಿದ್ದರು. ಆಗ ಅವರು ನನಗೆ ಕುಳಿತುಕೊಳ್ಳಲು ಕುರ್ಚಿ, ಮೇಜು (ಟೇಬಲ್) ಕಾಲುಗಳನ್ನಿಡಲು ಸಣ್ಣ ಸ್ಟೂಲ್ ಅನ್ನು ಅಟ್ಟದ ಮೇಲೆ ತರುತ್ತಿದ್ದರು. ದೇವರೇ ಭಕ್ತರ ಸೇವೆಯನ್ನು ಮಾಡುತ್ತಾನೆ, ಎಂಬುದರ ಅನುಭವವನ್ನು ಗುರುದೇವರು ನನಗೆ ನೀಡಿದರು. ದೇವರ ಮತ್ತು ಗುರುದೇವರ ಋಣವನ್ನು ನಾನು ಎಂದಿಗೂ ತೀರಿಸಲಾರೆನು.
– ಪ.ಪೂ. ದಾಸ ಮಹಾರಾಜ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೩.೮.೨೦೧೮)