ಶ್ರೀಮನ್ನಾರಾಯಣಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವದ ನಿಮಿತ್ತ ಅವರ ‘ರಥೋತ್ಸವವನ್ನು ಆಚರಿಸುವುದರ ಸಂದರ್ಭದಲ್ಲಿ ಜೀವನಾಡಿಪಟ್ಟಿಯ ಮಾಧ್ಯಮದಿಂದ ಸಪ್ತರ್ಷಿಗಳು ಮಾಡಿರುವ ಮಾರ್ಗದರ್ಶನ !

ರಥದಲ್ಲಿ ವಿರಾಜಮಾನ ವಿಷ್ಣುಸ್ವರೂಪದಲ್ಲಿರುವ ಗುರುದೇವರು ಎದುರಿಗೆ ಬಲಬದಿಯಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಎಡಬದಿಯಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು

೧. ಗುರುದೇವರ ‘ರಥೋತ್ಸವವನ್ನು ಆಚರಿಸುವಾಗ ರಥದಲ್ಲಿ ಶ್ರೀಮನ್ನಾರಾಯಣ ಸ್ವರೂಪ ಗುರುದೇವರ ಆಧ್ಯಾತ್ಮಿಕ ಆಸನದ ಎದುರಿಗೆ ಬಲಬದಿಯಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಎಡಬದಿಯಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರು ಆಸನಸ್ಥರಾಗಬೇಕು !

ಗುರುದೇವರ ಜನ್ಮತಿಥಿಯಂದು ನಮಗೆ ಗುರುದೇವರ ರಥೋತ್ಸವವನ್ನು ಆಚರಿಸಲಿಕ್ಕಿದೆ. ಈ ರಥೋತ್ಸವದ ಸಮಯದಲ್ಲಿ ರಥದಲ್ಲಿ ಗುರುದೇವರು ಕುಳಿತುಕೊಂಡಿರುವರು, ಅಲ್ಲಿ ಅವರ ಸಮೀಪ ಒಂದು ಶಂಖವನ್ನಿಡಬೇಕು. ಈ ರಥದಲ್ಲಿ ಶ್ರೀಮನ್ನಾರಾಯಣ ಸ್ವರೂಪ ಗುರುದೇವರ ಆಧ್ಯಾತ್ಮಿಕ ಆಸನದ ಎದುರಿಗೆ ಬಲಬದಿಯಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಮತ್ತು ಎಡಬದಿಯಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರು ಆಸನಸ್ಥರಾಗಬೇಕು. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಶ್ರೀಮನ್ನಾರಾಯಣಸ್ವರೂಪ ಗುರುದೇವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾಗಿದ್ದಾರೆ. – ಸಪ್ತರ್ಷಿ (ಪೂ. ಡಾ. ಟಿ ಉಲಗನಾಥನ್ ಇವರ ಮೂಲಕ, ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರ. ೧೯೭, ೭.೩.೨೦೨೨)

೨. ದೇವ-ದೇವತೆಗಳು, ಋಷಿಗಳು, ಸಪ್ತರ್ಷಿಗಳು ಮತ್ತು ವಿಷ್ಣುವಿನ ವಾಹನವಾಗಿರುವ ಗರುಡ ದೇವತೆ ಇವರು ಗುರುದೇವರ ರಥೋತ್ಸವದ ಆನಂದವನ್ನು ಪಡೆಯಲು ಆತುರರಾಗಿರುವುದು

‘ಸ್ವರ್ಗಲೋಕದಲ್ಲಿನ ಎಲ್ಲ ದೇವ-ದೇವತೆಗಳು, ಅವರ ಗಣಗಳು ಮತ್ತು ಋಷಿಲೋಕದಲ್ಲಿನ ೮೮ ಸಾವಿರ ಋಷಿಗಳು ‘ಶ್ರೀಮನ್ನಾರಾಯಣನ ಅಂಶಾವತಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರು ಯಾವಾಗ ರಥದಲ್ಲಿ ಆರೂಢರಾಗಿ ಬರುವರು ಹಾಗೂ ಅವರಿಗೆ ಈ ರೂಪದಲ್ಲಿ ನಾರಾಯಣನ ದರ್ಶನವಾಗುವುದು, ಈ ದಿನದ ನಿರೀಕ್ಷೆಯಲ್ಲಿದ್ದಾರೆ. ಪೃಥ್ವಿಯ ಮೇಲೆ ಶ್ರೀಮನ್ನಾರಾಯಣ ಸ್ವರೂಪ ಗುರುದೇವರ ಈ ರಥೋತ್ಸವವು ನಡೆಯುವಾಗ ಎಲ್ಲ ದೇವ-ದೇವತೆಗಳು, ಋಷಿಗಳು, ಸಪ್ತರ್ಷಿಗಳು ಉಪಸ್ಥಿತರಿರುವರು. ವಿಷ್ಣುವಿನ ವಾಹನ ಗರುಡ ದೇವತೆಯು ಸಾಮಾನ್ಯ ಗರುಡನ ರೂಪದಲ್ಲಿ ಬಂದು ರಥೋತ್ಸವದ ಪರಿಸರದಲ್ಲಿ ಪ್ರದಕ್ಷಿಣೆ ಹಾಕುವುದು. ಸಾಧಕರಿಗೆ ಪಶು-ಪಕ್ಷಿಗಳ ರೂಪದಲ್ಲಿ ದೈವೀ ಸಾಕ್ಷಿ ಸಿಗುವುದು. ಶ್ರೀಮನ್ನಾರಾಯಣನ ಈ ರಥವು ಪೃಥ್ವಿಯ ಮೇಲೆ ಬರಲು ನಾವೆಲ್ಲ ಸಪ್ತರ್ಷಿಗಳು ಸಾವಿರಾರು ವರ್ಷಗಳಿಂದ ದಾರಿ ಕಾಯುತ್ತಿದ್ದೇವೆ. – ಸಪ್ತರ್ಷಿ (ಪೂ. ಡಾ. ಟಿ. ಉಲಗನಾಥನ್‌ರ ಮೂಲಕ, ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರ. ೧೯೬, ೩.೨.೨೦೨೨)

೩. ರಥೋತ್ಸವದ ಸಮಯದಲ್ಲಿ ಸನಾತನದ ಮೂವರು ಗುರುಗಳು ಧರಿಸುವ ವಸ್ತ್ರಗಳು

ಅ. ರಥೋತ್ಸವದಲ್ಲಿ ಗುರುದೇವರು ‘ಕನಕಪುಷ್ಕರಾಜ (Yellow Sapphire) ಈ ರತ್ನದ ಬಣ್ಣದ, ಅಂದರೆ ಚಿನ್ನದಂತಹ ಹಳದಿ ಬಣ್ಣದ ವಸ್ತ್ರವನ್ನು ಧರಿಸಬೇಕು.

ಆ. ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳರು ಪಂಚರತ್ನದಂತಹ ಹಸಿರು (ಉಡಿeeಟಿ ಇmeಡಿಚಿಟಜ) ಬಣ್ಣದ ವಸ್ತ್ರ ಧರಿಸಬೇಕು.

ಇ. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರು ನೇರಳೆ ಬಣ್ಣದ (Green Emerland), ಅಂದರೆ ನೇರಳೆ ಬಣ್ಣದ ವಸ್ತ್ರವನ್ನು ಧರಿಸಬೇಕು. – ಸಪ್ತರ್ಷಿ (ಪೂ.ಡಾ. ಟಿ ಉಲಗನಾಥನ್ ಇವರ ಮೂಲಕ ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರ. ೧೯೭, ೭.೩.೨೦೨೨)

ಅಖಿಲ ಮನುಕುಲದ ಕಲ್ಯಾಣಕ್ಕಾಗಿ ಕಾರ್ಯನಿರತ ಪರಾತ್ಪರ ಗುರು ಡಾಕ್ಟರ ಆಠವಲೆಯವರ ಬಗ್ಗೆ ಸಂತರ ಗೌರವೋದ್ಗಾರಗಳು ನಮಗೆ ಪೃಥ್ವಿಯಲ್ಲಿ ‘ಗುರುಗಳೆಂದರೆ ಕೇವಲ ಪರಾತ್ಪರ ಗುರು ಡಾ. ಆಠವಲೆಯವರು ಮಾತ್ರ. ಅವರ ರೂಪದಲ್ಲಿ ಸಾಕ್ಷಾತ್ ಭಗವಂತನು ‘ಗುರುಗಳಾಗಿ ಪೃಥ್ವಿಯ ಮೇಲೆ ಬಂದಿದ್ದಾನೆ. – ಸಪ್ತರ್ಷಿಗಳು, (ಸಪ್ತರ್ಷಿ ಜೀವನಾಡಿ ಪಟ್ಟಿ ವಾಚನ ಕ್ರ. ೧೫೨,೮.೧.೨೦೨೦)

ಪರಾತ್ಪರ ಗುರು ಡಾ. ಆಠವಲೆಯವರು ಕಲಿಯುಗದಲ್ಲಿನ ದೈವೀ ವಿಭೂತಿ (ಮಹಾಪುರುಷರು) ಆಗಿದ್ದಾರೆ, ಈಗ ಇದನ್ನು ವಿಶ್ವಕ್ಕೆ ಹೇಳುವ ಸಮಯ ಬಂದಿರುವುದರಿಂದ ಶ್ರೀಮನ್ನಾರಾಯಣಸ್ವರೂಪ ಗುರುದೇವರ ‘ರಥೋತ್ಸವವವನ್ನು ಆಚರಿಸಲಾಗುತ್ತಿದೆ !

ಯಾರು ‘ಅಧ್ಯಾತ್ಮದ ಶಿಖರದಲ್ಲಿ ಇದ್ದಾರೆಯೋ, ಯಾರು ಜ್ಞಾನಿಗಳಲ್ಲಿ ಸರ್ವ ಶ್ರೇಷ್ಠ ಜ್ಞಾನಿಗಳಾಗಿದ್ದಾರೆಯೋ, ಯಾರಿಗೆ ಇತರ ಜೀವಗಳಿಗೆ ಅನುಗೃಹವನ್ನು ನೀಡುವ ಕ್ಷಮತೆಯಿದೆಯೋ, ಯಾರಿಗೆ ಅಹಂಕಾರಿ ಜೀವಗಳ ಅಹಂಕಾರವನ್ನು ಕಡಿಮೆ ಮಾಡುವ ರಹಸ್ಯ ತಿಳಿದಿದೆಯೋ, ಯಾರು ವೈದ್ಯರಿಗೂ ವೈದ್ಯರಾಗಿದ್ದಾರೆಯೋ, ಯಾರು ಅತ್ಯಂತ ಕರುಣಾಮಯಿ ಆಗಿದ್ದಾರೆಯೋ, ಇಂತಹ ವೈಶಿಷ್ಟ್ಯಗಳಿರುವ ‘ಪರಾತ್ಪರ ಗುರು ಡಾ. ಆಠವಲೆಯವರು ಕಲಿಯುಗದ ದೈವೀ ವಿಭೂತಿಯಾಗಿದ್ದಾರೆ. ಇದನ್ನು ಈಗ ಜಗತ್ತಿಗೆ ಹೇಳುವ ಸಮಯ ಬಂದಿದೆ. ಅದಕ್ಕಾಗಿಯೆ ಈ ವರ್ಷ ಶ್ರೀಮನ್ನಾರಾಯಣಸ್ವರೂಪ ಗುರುದೇವರ ರಥೋತ್ಸವವಿದೆ. – ಸಪ್ತರ್ಷಿ (ಪೂ. ಡಾ. ಟಿ ಉಲಗನಾಥನ್‌ರ ಮೂಲಕ ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರ. ೨೦೧, ೧೩.೫.೨೦೨೨)


ರಥೋತ್ಸವದಲ್ಲಿ ‘ಶ್ರೀರಾಮ ಸಾಲಿಗ್ರಾಮ ಪಲ್ಲಕ್ಕಿ ಇಡುವ ಬಗ್ಗೆ ಸಪ್ತರ್ಷಿಗಳು ಹೇಳಿದ ಅಂಶಗಳು

‘ಶ್ರೀರಾಮ ಸಾಲಿಗ್ರಾಮ’ದ ಪಲ್ಲಕಿ(ಗೋಲದಲ್ಲಿ ಸಾಲಿಗ್ರಾಮವನ್ನು ದೊಡ್ಡದು ಮಾಡಿ ತೋರಿಸಲಾಗಿದೆ)

೧. ೧೦.೪.೨೦೨೨ ರ ಶ್ರೀರಾಮನವಮಿಯಂದು ನೇಪಾಳದ ಹಿಮಾಲಯದಲ್ಲಿನ ಸಾಲಿಗ್ರಾಮ ಕ್ಷೇತ್ರವಾಗಿರುವ ದಾಮೋದರ ಕುಂಡದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರಿಗೆ ‘ಶ್ರೀರಾಮ ಸಾಲಿಗ್ರಾಮ ಸಿಕ್ಕಿತು.

೧೫.೪.೨೦೨೨ ರಂದು ಚೆನ್ನೈಯಲ್ಲಿ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರು ಈ ಸಾಲಿಗ್ರಾಮವನ್ನು ಪೂ. ಡಾ. ಟಿ. ಉಲಗನಾಥನ್‌ರಿಗೆ ತೋರಿಸಲು ಕೊಂಡೊಯ್ದಿದ್ದರು. ಆಗ ಸಪ್ತರ್ಷಿ ಗಳು ಈ ಸಾಲಿಗ್ರಾಮದ ಬಗ್ಗೆ ಮುಂದಿನ ಅಂಶಗಳನ್ನು ಹೇಳಿದರು. – ಶ್ರೀ. ವಿನಾಯಕ ಶಾನಭಾಗ

೨. ಈ ‘ಸಾಲಿಗ್ರಾಮವು ಪೃಥ್ವಿಯ ಮೇಲಿನ ಶ್ರೀವಿಷ್ಣುವಿನ ಸಾಕ್ಷಾತ್ ರೂಪವಾಗಿದೆ. ಇಂದಿನ ರಥೋತ್ಸವದಲ್ಲಿ ಶ್ರೀಮನ್ನಾರಾಯಣಸ್ವರೂಪ ಗುರುದೇವರ ರಥದ ಎದುರಿಗೆ ಒಂದು ಪಲ್ಲಕ್ಕಿ ಇರಬೇಕು. ಆ ಪಾಲಕಿಯಲ್ಲಿ ದಾಮೋದರ ಕುಂಡದಲ್ಲಿ ಸಿಕ್ಕಿರುವ ‘ಶ್ರೀರಾಮ ಸಾಲಿಗ್ರಾಮವನ್ನು ಇಡಬೇಕು. ಶ್ರೀವಿಷ್ಣುವಿನ ಕೃಪೆಯಿಂದ ಸನಾತನ ಸಂಸ್ಥೆಗೆ ‘ಸುವರ್ಣ ರೇಖೆಯಿರುವ ಶ್ರೀರಾಮ ಸಾಲಿಗ್ರಾಮ ಲಭಿಸಿದೆ. ಸುವರ್ಣ ರೇಖೆಯು ಸಾಕ್ಷಾತ್ ಶ್ರೀವಿಷ್ಣುವಿನ ರೇಖೆ ಆಗಿದೆ. ಅದು ಶ್ರೀವಿಷ್ಣುವಿನ ಬ್ರಹ್ಮಾಂಡವನ್ನು ನಡೆಸುವ ಬ್ರಹ್ಮನಾಡಿಯೇ ಆಗಿದೆ. ಭಗೀರತನ ಪ್ರಯತ್ನದಿಂದ ‘ಗಂಗೆ ಶಿವನ ಜಟೆಯಿಂದ ಪೃಥ್ವಿಯ ಮೇಲೆ ಬಂದಳು. ‘ಶ್ರೀರಾಮ ಸಾಲಿಗ್ರಾಮವು ಶಿವನ ಜಟೆಯಲ್ಲಿನ ಗಂಗೆಯಲ್ಲಿ ನಿರ್ಮಾಣವಾಗಿರುವ ಸಾಲಿಗ್ರಾಮವಾಗಿದೆ. ಈ ಸಾಲಿಗ್ರಾಮವು ಸತ್ಯಯುಗದಲ್ಲಿ ಪೃಥ್ವಿಯ ಮೇಲೆ ಬಂದಿದೆ.

೩. ಕಲಿಯುಗದಲ್ಲಿ ಭಗವಂತನಿಗೆ ಸನಾತನದ ಮೂವರೂ ಗುರುಗಳಿಂದ ತನ್ನ ಪೂಜೆಯನ್ನು ಮಾಡಿಸಿಕೊಳ್ಳಲಿಕ್ಕಿದೆ; ಆದ್ದರಿಂದ ಅವನು ಈಗ ಸಾಲಿಗ್ರಾಮದ ರೂಪದಲ್ಲಿ ಸನಾತನ ಸಂಸ್ಥೆಯಲ್ಲಿ ಬಂದಿದ್ದಾನೆ. ಕಲಿಯುಗದಲ್ಲಿನ ರಾಮರಾಜ್ಯದ ಸ್ಥಾಪನೆಗಾಗಿ ಈ ಸಾಲಿಗ್ರಾಮ ಬಂದಿದೆ.


ಜನ್ಮೋತ್ಸವದ ನಿಮಿತ್ತ ರಾಜ್ಯದ ವಿವಿಧ ಜಿಲ್ಲೆಗಳಲ್ಲಾದ ಹಿಂದೂ ಐಕ್ಯತಾ ಮೆರವಣಿಗೆಗೆ ಸಮಾಜದಿಂದ ದೊರೆತ ಅತ್ಯುತ್ತಮ ಸ್ಪಂದನ !

ರಥದೊಂದಿಗೆ ಸಾಗುತ್ತಿರುವ ಮೆರವಣಿಗೆ
ಪಲ್ಲಕಿಯಲ್ಲಿ ಛಾಯಾಚಿತ್ರ ಪೂಜೆ
ಪುಷ್ಪಗಳ ಅಲಂಕಾರ
ರಣರಾಗಿಣಿಯ ಫಲಕ ಹಿಡಿದಿರುವ ಪಡೆ

ರಾಜ್ಯದಲ್ಲಿ ನಡೆದ ಮೆರವಣಿಗೆಯಲ್ಲಿ ಬಂದ ವಿಶೇಷ ಅನುಭವಗಳು

೧. ಪುತ್ತೂರಿನಲ್ಲಿ ಹಿಂದೂ ಐಕ್ಯತಾ ವೆರವಣಿಗೆಯ ಸಮಯದಲ್ಲಿ ಸುರಕ್ಷೆಗಾಗಿ ಉಪಸ್ಥಿತರಿದ್ದ ಪೊಲೀಸರು ಸಾಧಕರನ್ನು ಉದ್ದೇಶಿಸಿ, ನೀವು ಇನ್ನಷ್ಟು ಜನರನ್ನು ಜೋಡಿಸಬಹುದು. ನಾವು ನಿಮಗೆ ಸಹಾಯ ಮಾಡುತ್ತೇವೆ, ಎಂದು ಹೇಳಿದರು

೨. ‘ಸನಾತನ ಸಂಸ್ಥೆಯು ಹಿಂದೂ ಧರ್ಮ ಮತ್ತು ರಾಷ್ಟ್ರ  ಇವುಗಳಿಗಾಗಿ ನಿಸ್ವಾರ್ಥದಿಂದ ಸೇವೆ ಮಾಡುತ್ತಿದೆ. ಸನಾತನದ ಕಾರ್ಯಕ್ಕೆ ಪ್ರತಿ ಮನೆಯಿಂದ ಸಹಾಯ ಮಾಡುವ ಅವಶ್ಯಕತೆ ಇದೆ. – ಶ್ರೀ. ದಿನಕರ ಕೆ. ಶೆಟ್ಟಿ ಕುಮಟಾ – ಹೊನ್ನಾವರ ವಿಧಾನಸಭಾ ಕ್ಷೇತ್ರ.

ಒಂದು ಜಿಲ್ಲೆಯಲ್ಲಿ ಹಿಂದೂ ಐಕ್ಯತಾ ಮೆರವಣಿಗೆಯ ಕೊನೆಯಲ್ಲಿ ಸಾಧಕರು ಪೊಲೀಸರಿಗೆ, ‘ನಮ್ಮಿಂದ ನಿಮಗೇನಾದರೂ ತೊಂದರೆ ಆಯಿತಾ ಟಿ ಎಂದು ಕೇಳಿದಾಗ, ‘ನಮ್ಮಿಂದ ನಿಮಗೇನಾದರು ತೊಂದರೆಯಾಗಿದ್ದರೆ ಕ್ಷಮಿಸಿ, ಎಂದುಪೊಲೀಸರೇ ಸಾಧಕರಿಗೆ ಹೇಳಿದರು. (ಪೊಲೀಸ್ ಇಲಾಖೆಯಲ್ಲಿಯೂ ಇಂತಹ ಸತ್‌ಶೀಲ ಮತ್ತು ಅಂತರ್ಮುಖರಾಗುವ ಸಿಬ್ಬಂದಿಯಿದ್ದಾರೆ ಎಂಬುದು ಈ ಉದಾಹರಣೆಯಿಂದ ಗಮನಕ್ಕೆ ಬರುತ್ತದೆ. ಇಂತಹ ಸಿಬ್ಬಂದಿಗಳಿಂದಾಗಿ ಪೊಲೀಸ ದಳದ ಒಳ್ಳೆಯತನ ಇನ್ನೂ ಉಳಿದಿದೆ. ಸನಾತನವು ಎಂದೂ ಯಾವುದೇ ಇಲಾಖೆಯ ವಿರುದ್ಧ ದ್ವೇಷ ಹಬ್ಬಿಸದೇ ಅದರಲ್ಲಿರುವ ತಪ್ಪುಕೃತ್ಯಗಳ ವಿರುದ್ಧ ನ್ಯಾಯಸಮ್ಮತ ಮಾರ್ಗದಿಂದ  ಜಾಗೃತಿ ಮೂಡಿಸುತ್ತದೆ. – ಸಂಪಾದಕರು)

ಅನುಭೂತಿ : ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ  ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು