ಪ್ರತಿಯೊಂದು ಜೀವವನ್ನು ಅಪಾರವಾಗಿ ಪ್ರೀತಿಸುವ ಪರಾತ್ಪರ ಗುರು ಡಾ. ಆಠವಲೆ

ಸಾಧಕರಿಗಾಗಿ ಕಾಲದೊಂದಿಗೂ ಹೋರಾಡುವ ಸಾಕ್ಷಾತ್ ಶ್ರೀಮನ್ನಾರಾಯಣಸ್ವರೂಪ ಗುರುದೇವರಿರುವಾಗ ನಮಗೇಕೆ ಕಾಲದ ಭಯ ? ಹೇ ಭಗವಂತ, ನೀವು ನಮ್ಮ ಜೀವನದಲ್ಲಿ ಬಂದಿದ್ದೀರಿ, ಇದಕ್ಕಿಂತ ದೊಡ್ಡಭಾಗ್ಯ ಇನ್ನೇನಿಲ್ಲ ! ನಿಮ್ಮ ಕೋಮಲ ಚರಣಗಳಲ್ಲಿ ಅನಂತಾನಂತ ಕೃತಜ್ಞತೆಗಳು !

ಸಾಧಕ ಜೀವಗಳನ್ನು ಭಕ್ತರಸದಲ್ಲಿ ಮುಳುಗಿಸುವ ಶ್ರೀಮನ್ ನಾರಾಯಣಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರ ದಿವ್ಯ ಆನಂದಮಯ ‘ರಥೋತ್ಸವ’

ರಥದಲ್ಲಿನ ಶ್ರೀಗುರುಗಳ ನಯನಮನೋಹರ ರೂಪವನ್ನು ನೋಡಿ ಸಾಧಕರು ಸ್ತಬ್ಧರಾದರು ! ಸಾಧಕರ ವಿಲಕ್ಷಣ ಭಾವಜಾಗೃತಿಯಾಯಿತು. ಗುರುಗಳನ್ನು ಶ್ರೀವಿಷ್ಣುವಿನ ರೂಪದಲ್ಲಿ ನೋಡಿದ ಸಾಧಕರ ಮುಖದ ಮೇಲಿನ ಕೃತಜ್ಞತಾಭಾವವು ಶಬ್ದಾತೀತವಾಗಿತ್ತು !

‘ಪ್ರಸಂಗಗಳು ಪ್ರತ್ಯಕ್ಷ ಘಟಿಸುತ್ತಿವೆ’, ಎಂಬುದರ ಅನುಭೂತಿಯನ್ನು ನೀಡುವ ಮತ್ತು ಜೀವಂತಿಕೆ ಬಂದಿರುವ ಪರಾತ್ಪರ ಗುರು ಡಾ. ಆಠವಲೆಯವರ ರಥೋತ್ಸವದ ಚೈತನ್ಯಮಯ ಛಾಯಾಚಿತ್ರಗಳು !

ಯಾವುದು ಸಾಕ್ಷಾತ್ ಈಶ್ವರನಿಗೆ ಸಂಬಂಧಿಸಿರುತ್ತದೆಯೋ, ಅದು ಮಾಯೆಗೆ ಸಂಬಂಧಿಸಿರುವುದಿಲ್ಲ, ಅದು ಶಾಶ್ವತವಾಗಿರುತ್ತದೆ. ಅದು ಚಿರಂತನವಾಗಿ ಉಳಿಯುವ ಮತ್ತು ಆತ್ಮಾನಂದವನ್ನು ನೀಡುವುದಾಗಿರುತ್ತದೆ. ಆದ್ದರಿಂದ ಸಾತ್ತ್ವಿಕ ಘಟಕಗಳಲ್ಲಿ ಜೀವಂತಿಕೆಯು ಕಾಣಿಸುತ್ತದೆ.

ರಥೋತ್ಸವ ನೆರವೇರಿದ ನಂತರ ಸಪ್ತರ್ಷಿಗಳ ಪ್ರೀತಿಮಯ ವಾಣಿಯಿಂದ ಬೆಳಕಿಗೆ ಬಂದ ಪರಾತ್ಪರ ಗುರು ಡಾ. ಆಠವಲೆಯವರ ಅವತಾರಿ ಕಾರ್ಯದ ಮಹತ್ವ !

ಶ್ರೀಮನ್ನಾರಾಯಣನ ಅವತಾರವಾಗಿರುವ ಪರಾತ್ಪರ ಗುರು ಡಾ. ಆಠವಲೆಯವರ (ಗುರುದೇವರ) ರಥವು ಆಶ್ರಮದಿಂದ ಹೊರಗೆ ಬಂದ ಕ್ಷಣವೇ, ಪೃಥ್ವಿಯ ಮೇಲಿನ ಎಲ್ಲ ಜಾಗೃತ ದೇವಸ್ಥಾಗಳ, ತೀರ್ಥಕ್ಷೇತ್ರಗಳ, ೫೧ ಶಕ್ತಿಪೀಠಗಳ, ೧೨ ಜ್ಯೋತಿರ್ಲಿಂಗಗಳಲ್ಲಿನ ಚೈತನ್ಯಕ್ಕೆ ನವಜಾಗೃತಿ ದೊರಕಿತು.

ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವದ ನಿಮಿತ್ತ ನಡೆದ ಶ್ರೀವಿಷ್ಣು ರೂಪದ ದಿವ್ಯ ರಥೋತ್ಸವವೆಂದರೆ ಈಶ್ವರನ ಅದ್ಭುತ ಲೀಲೆಯ ಅನುಭವ !

ಸಪ್ತರ್ಷಿಗಳು, ‘೨೨.೫.೨೦೨೨ ರಂದು ನಮಗೆ ಪರಾತ್ಪರ ಗುರು ಡಾ. ಆಠವಲೆಯವರ ರಥೋತ್ಸವವನ್ನು ಆಚರಿಸುವ ಮೊದಲು ‘ಸಮುದ್ರದಿಂದ ಈ ರಥವು ತೇಲುತ್ತಾ ಬರುವುದು, ಸಾಮಾನ್ಯವಾದ ಸಂಗತಿಯಲ್ಲ, ಯೋಗಾಯೋಗವಲ್ಲ. ಇದು ದೈವೀ ಅನುಭೂತಿಯಾಗಿದೆ, ಎಂದರು.

ಶ್ರೀಮನ್ನಾರಾಯಣಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರ ಅವತಾರಿ ಕಾರ್ಯದ ಮಹತ್ವ

ಮುಂಬರುವ ಕಾಲದಲ್ಲಿ ಎಲ್ಲ ಸಾಧಕರು ಮತ್ತು ಸಮಾಜವು ಶ್ರೀವಿಷ್ಣುವಿನ ಈ ಅವತಾರದ ಜೊತೆಗೆ, ಅಂದರೆ ಪರಾತ್ಪರ ಗುರು ಡಾ. ಆಠವಲೆ (ಗುರುದೇವರೊಂದಿಗಿನ) ಇವರೊಂದಿಗಿದ್ದ ತಮ್ಮ ಪರಿಚಯವನ್ನು ಹೇಳುವರು, ಗುರುದೇವರ ಕಾರ್ಯದ ಬಗ್ಗೆ ಮಾತನಾಡುವರು ಮತ್ತು ಅವರ ನೆನಪುಗಳನ್ನು ಹೇಳುವರು.

ಶ್ರೀಮನ್ನಾರಾಯಣನ ಅವತಾರರಾದ ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಸಾಧಕರ ಆರ್ತ ಮತ್ತು ಕಳಕಳಿಯ ಪ್ರಾರ್ಥನೆ !

ನಾವು ಇಂದು ಈ ಪ್ರಳಯಕಾರಿ ಆಪತ್ಕಾಲದ ಹೊಸ್ತಿಲಿನಲ್ಲಿ ನಿಂತಿರುವೆವು. ನಮಗೆ ಕೇವಲ ನಿನ್ನ ಚರಣಗಳೇ ಆಧಾರವಾಗಿವೆ. ನಿನ್ನ ಸುಂದರ ಮಂದಹಾಸ ನಮ್ಮ ದುಃಖವನ್ನು ದೂರ ಮಾಡುತ್ತದೆ ಮತ್ತು ನಿನ್ನ ಮಾತುಗಳು ನಮ್ಮ ಉತ್ಸಾಹವನ್ನು ಹೆಚ್ಚಿಸುತ್ತದೆ. ನಮ್ಮೆಲ್ಲ ಸಾಧಕರ ರಕ್ಷಣೆಯನ್ನು ಮಾಡು !

ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ಮಹರ್ಷಿಗಳ ಕುರಿತಾದ ಶಿಷ್ಯಭಾವ ಮತ್ತು ಮಹರ್ಷಿಗಳಿಗೆ ಪರಾತ್ಪರ ಗುರು ಡಾ. ಆಠವಲೆಯವರು ‘ಶ್ರೀಮನ್ನಾರಾಯಣನ ಅವತಾರ’ವೆಂದು ಇರುವ ಗೌರವಭಾವ !

ಗುರುದೇವರು ಕೋಣೆಗೆ ಹೋದ ನಂತರ ತಕ್ಷಣವೇ ಆಶ್ರಮದ ಪರಿಸರದಲ್ಲಿ ಸಣ್ಣದಾಗಿ ಮಳೆ ಬೀಳಲು ಪ್ರಾರಂಭವಾಯಿತು. ಆ ಸಮಯದಲ್ಲಿ ಶ್ರೀಮನ್ನಾರಾಯಣನ ಅಪಾರ ಲೀಲೆಯನ್ನೇ ಅನುಭವಿಸಿದೆವು.

ಪರಾತ್ಪರ ಗುರು ಡಾ. ಆಠವಲೆಯವರ ೮೦ ನೇ ಜನ್ಮೋತ್ಸವದ ನಿಮಿತ್ತದಲ್ಲಿ ನೆರವೇರಿದ ರಥೋತ್ಸವದ ಬಗ್ಗೆ ಕು. ಮಧುರಾ ಭೋಸಲೆಯವರು ಮಾಡಿದ ಸೂಕ್ಷ್ಮ ಪರೀಕ್ಷಣೆ !

ರಥದ ಹಿಂದೆ ಮಹರ್ಲೋಕ, ಜನಲೋಕ, ತಪೋಲೋಕ ಹಾಗೂ ಸತ್ಯಲೋಕದಿಂದ ಅನೇಕ ಋಷಿ-ಮುನಿಗಳು ಶಂಖನಾದ ಮಾಡುತ್ತಾ ಸೂಕ್ಷ್ಮದಿಂದ ನಡೆಯುತ್ತಿರುವುದು ಅರಿವಾಯಿತು, ಹಾಗೂ ಅದರ ಮೇಲೆ ರೆಕ್ಕೆಗಳಿರುವ ‘ಗಂಧರ್ವರು’ ಹಾಗೂ ‘ಶ್ರೀವಿಷ್ಣುವಿನ ದೂತರು’ ಹಾರುತ್ತಿರುವುದು ಸೂಕ್ಷ್ಮದಿಂದ ಕಾಣಿಸಿತು.

ಜಯಘೋಷ, ನೃತ್ಯಗಳೊಂದಿಗೆ ನೆರವೇರಿದ ನಯನಮನೋಹರ ರಥೋತ್ಸವ !

ಶ್ರೀಮನ್ನಾರಾಯಣಸ್ವರೂಪ ಪರಾತ್ಪರ ಗುರು ಡಾ. ಆಠವಲೆ ಯವರ ದಿವ್ಯ ರಥೋತ್ಸವದಲ್ಲಿ ವಿವಿಧ ಗುಂಪುಗಳಲ್ಲಿನ ಸಾಧಕ-ಸಾಧಕಿಯರು ಶ್ರೀವಿಷ್ಣುವಿನ ಗುಣಸಂಕೀರ್ತನೆಯನ್ನು ಮಾಡಿ ಶ್ರೀವಿಷ್ಣುತತ್ತ್ವವನ್ನು ಆವಾಹನೆ ಮಾಡಿದರು.