ಸಪ್ತರ್ಷಿಗಳು ಲಕ್ಷಾವಧಿ ವರ್ಷಗಳ ಹಿಂದೆ ಬರೆದಿರುವ ಜೀವನಾಡಿಪಟ್ಟಿಯಲ್ಲಿ ಸನಾತನದ ಮೂವರು ಗುರುಗಳ ಕುರಿತು ಮಾಡಿದ ಗೌರವೋದ್ಗಾರ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

ಸನಾತನ ಸಂಸ್ಥೆಯ ಮೂವರು ಗುರುಗಳು, ಎಂದರೆ ಸಚ್ಚಿದಾನಂದ ಪರಬ್ರಹ್ಮ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ! ಇವರು ಸನಾತನದ ಸಾಧಕರಿಗೆ ಲಭಿಸಿದ ಈಶ್ವರೀ ಸಂಪತ್ತಾಗಿದ್ದಾರೆ. ಸನಾತನದ ಈ ಮೂವರು ಗುರುಗಳ ಶ್ರೇಷ್ಠತೆಯು ಸನಾತನದ ಸಂತರು, ಸಾಧಕರು, ಧರ್ಮಪ್ರೇಮಿಗಳು, ಈಶ್ವರನಿಷ್ಠ ಕಲಾವಿದರು ಮತ್ತು ಧರ್ಮನಿಷ್ಠ ನ್ಯಾಯವಾದಿಗಳ ಗಮನಕ್ಕೂ ಬಂದಿದೆ; ಆದರೆ ಈ ಶ್ರೇಷ್ಠತೆಯನ್ನು ಋಷಿಲೋಕದಲ್ಲಿನ ಋಷಿಗಳ ನಿರರ್ಗಳ ಕಂಠದಿಂದ ಕೇಳುತ್ತಿರುವಾಗ ಅಥವಾ ಓದುವಾಗ ಸಾಧಕರ ಶ್ರದ್ಧೆಯು ಹೆಚ್ಚು ದೃಢವಾಗುತ್ತದೆ. ಮಹರ್ಷಿಗಳು ಇದನ್ನು ಯಥಾವತ್ತಾಗಿ ಲಕ್ಷಾವಧಿ ವರ್ಷಗಳ ಹಿಂದೆಯೇ ನಾಡಿಪಟ್ಟಿಯಲ್ಲಿ ಬರೆದಿದ್ದಾರೆ. ಸಪ್ತರ್ಷಿಗಳು ನಾಡಿಪಟ್ಟಿಯಲ್ಲಿ ಸನಾತನದ ೩ ಗುರುಗಳ ಕುರಿತು ಮಾಡಿದ ಗೌರವೋದ್ಗಾರಗಳನ್ನು ನಾವು ಅರಿತುಕೊಳ್ಳೋಣ.

೧. ಸಪ್ತರ್ಷಿಗಳು ಸಪ್ತರ್ಷಿ ಜೀವನಾಡಿಪಟ್ಟಿಯಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಆಗಾಗ ಮಾಡಿದ ಗೌರವೋದ್ಗಾರ !

೧ ಅ. ‘ತಿರುಪತಿ’ಯ ವೆಂಕಟೇಶನಂತೆ ಪರಾತ್ಪರ ಗುರು ಡಾ. ಆಠವಲೆಯವರು ಗೋವಾದಲ್ಲಿನ ಒಂದು ಬೆಟ್ಟದ ಮೇಲೆ ವಿರಾಜಮಾನರಾಗಿರುವುದು :

‘ತಿರುಪತಿಯಲ್ಲಿ ಶ್ರೀನಿವಾಸನ (ಶ್ರೀ ಬಾಲಾಜಿಯ ಅಥವಾ ಶ್ರೀ ವೆಂಕಟೇಶನ) ಅವತಾರವಾಗಿ ೩ ಸಾವಿರಕ್ಕಿಂತಲೂ ಹೆಚ್ಚು ವರ್ಷಗಳಾದವು. ಪರಾತ್ಪರ ಗುರು ಡಾ. ಆಠವಲೆಯವರು ಸಾಕ್ಷಾತ್ ಶ್ರೀನಿವಾಸನ ರೂಪವಾಗಿದ್ದಾರೆ. ಗೋವಾದಲ್ಲಿನ ಸನಾತನದ ‘ರಾಮನಾಥಿ’ ಆಶ್ರಮವು ಈಗಿನ ಕಲಿಯುಗದಲ್ಲಿನ ‘ತಿರುಪತಿ’ಯಾಗಿದೆ. ಸಾಧಕರು ತಿರುಪತಿಗೆ ಹೋಗುವ ಆವಶ್ಯಕತೆಯಿಲ್ಲ. ಶ್ರೀ ವೆಂಕಟೇಶನು ‘ತಿರುಪತಿ’ಯ ಬೆಟ್ಟದ ಮೇಲೆ ಹೇಗೆ ನಿಂತಿದ್ದಾನೆಯೋ, ಅದೇ ರೀತಿ ಶ್ರೀವಿಷ್ಣುವಿನ ಅವತಾರವಾಗಿರುವ ಪರಾತ್ಪರ ಗುರು ಡಾ. ಆಠವಲೆಯವರು ‘ರಾಮನಾಥಿ’, ಗೋವಾದಲ್ಲಿನ ಒಂದು ಬೆಟ್ಟದ ಮೇಲೆ ವಿರಾಜಮಾನರಾಗಿದ್ದಾರೆ.’ (ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರಮಾಂಕ ೧೩೮ (೧೭.೨.೨೦೨೨))

ಗೋವಾದಲ್ಲಿನ ಸನಾತನದ ‘ರಾಮನಾಥಿ’ ಆಶ್ರಮ

೧ ಆ. ಪರಾತ್ಪರ ಗುರು ಡಾ. ಆಠವಲೆಯವರು ಸ್ವಯಂ ಪರಬ್ರಹ್ಮ ಸ್ವರೂಪರಾಗಿದ್ದು ಅವರ ಪ್ರತಿಯೊಂದು ಅವತಾರದಲ್ಲಿ ಸಪ್ತರ್ಷಿಗಳು ಅವರ ಜೊತೆಯಲ್ಲಿರುವುದು : ‘ಶಂಖಚಕ್ರಧಾರಿ ಶ್ರೀಮನ್ನಾರಾಯಣನ ಅವತಾರವಾಗಿರುವ ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಸಪ್ತರ್ಷಿಗಳಿಂದ ಕೋಟಿ ಕೋಟಿ ವಂದನೆಗಳು ! ಶ್ರೀಕೃಷ್ಣನ ಜೊತೆಯಲ್ಲಿ ಹೇಗೆ ಪಾಂಡವರಿದ್ದರೋ, ಶ್ರೀರಾಮನ ಜೊತೆಯಲ್ಲಿ ಹೇಗೆ ವಾನರರಿದ್ದರೋ, ಅದೇ ರೀತಿ ಈಗ ಗುರುದೇವರ (ಪರಾತ್ಪರ ಗುರು ಡಾ. ಆಠವಲೆಯವರ) ಜೊತೆಯಲ್ಲಿ ಸನಾತನದ ಸಾಧಕರಿದ್ದಾರೆ. ಶ್ರೀಮತ್ಪರಮಹಂಸ ಚಂದ್ರಶೇಖರಾನಂದ, ಶ್ರೀ ಅನಂತಾನಂದ ಸಾಯಿಶ, ಪ.ಪೂ. ಭಕ್ತರಾಜ ಮಹಾರಾಜರು ಮತ್ತು ಪ.ಪೂ. ರಾಮಾನಂದ ಮಹಾರಾಜರು ಈ ನಾಲ್ಕು ಗುರುಗಳ ನಂತರ ಬಂದಿರುವ ಪರಾತ್ಪರ ಗುರು ಡಾ. ಆಠವಲೆಯವರು ಸ್ವಯಂ ಪರಬ್ರಹ್ಮಸ್ವರೂಪವಾಗಿದ್ದಾರೆ. ಪ್ರತಿಯೊಂದು ಅವತಾರದಲ್ಲಿ ನಾಡಿಪಟ್ಟಿಯ ಮಾಧ್ಯಮದಿಂದ ಸಪ್ತರ್ಷಿಗಳು ನಿಮ್ಮ ಜೊತೆಯಲ್ಲಿದ್ದರು. ಶ್ರೀಕೃಷ್ಣನ ಜೊತೆಯಲ್ಲಿ ಸುದಾಮನಿದ್ದನು, ಹಾಗೆ ನಾವು ಸಪ್ತರ್ಷಿಗಳು ಗುರುದೇವರ ಜೊತೆಯಲ್ಲಿ ಬಂದಿದ್ದೇವೆ.’ (ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರ. ೧೪೫ (೧೭.೫.೨೦೨೦))

೧ ಇ. ಪರಾತ್ಪರ ಗುರು ಡಾ. ಆಠವಲೆಯವರು ಪೃಥ್ವಿಯ ಆಧ್ಯಾತ್ಮಿಕ ಸಿಂಹಾಸನದ ಮೇಲೆ ವಿರಾಜಮಾನರಾಗಿರುವುದು : ‘ತ್ರೇತಾಯುಗದಲ್ಲಿ ಶ್ರೀವಿಷ್ಣುವು ಶ್ರೀರಾಮನ ರೂಪದಲ್ಲಿ ಕ್ಷತ್ರಿಯ ಕುಲದಲ್ಲಿ ಜನ್ಮ ತಾಳಿದನು ಮತ್ತು ದ್ವಾಪರಯುಗದಲ್ಲಿ ಶ್ರೀಕೃಷ್ಣನ ರೂಪದಲ್ಲಿ ಯಾದವ ಕುಲದಲ್ಲಿ ಜನ್ಮ ತಾಳಿದನು. ಈಗಿನ ಕಲಿಯುಗದಲ್ಲಿ ಶ್ರೀವಿಷ್ಣುವು ‘ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆ’ ಇವರ ರೂಪದಲ್ಲಿ ಜನ್ಮ ತಾಳಿದ್ದಾರೆ. ಪ್ರಸ್ತುತ ಗುರುದೇವರು (ಪರಾತ್ಪರ ಗುರು ಡಾ. ಆಠವಲೆ) ಸಂಪೂರ್ಣ ಪೃಥ್ವಿಯ ಆಧ್ಯಾತ್ಮಿಕ ಸಿಂಹಾಸನದ ಮೇಲೆ ವಿರಾಜಮಾನರಾಗಿದ್ದಾರೆ. ಸಾಕ್ಷಾತ್ ಭಗವಂತನು ಪೃಥ್ವಿಯ ಮೇಲೆ ಬಂದರೆ, ಅವನು ಹೇಗೆ ಕಾಣಿಸಬಹುದು ? ಅವನು ‘ಪರಾತ್ಪರ ಗುರು ಡಾ. ಆಠವಲೆ’ ಇವರಂತೆಯೇ ಕಾಣಿಸುವನು.

ನಾಡಿಪಟ್ಟಿಯನ್ನು ಓದುವಾಗ ಪೂ. ಡಾ. ಓಂ ಉಲಗನಾಥನ್ ಇವರು

೧ ಇ ೧. ಪ್ರತಿ ೧೦೦೦ ವರ್ಷಗಳಿಗೊಮ್ಮೆ ಭಗವಾನ ಶ್ರೀವಿಷ್ಣುವು ಪೃಥ್ವಿಯ ಮೇಲೆ ಅವತರಿಸುವುದು : ಪ್ರತಿ ೧೦೦೦ ವರ್ಷಗಳಿಗೊಮ್ಮೆ ಭಗವಾನ ಶ್ರೀವಿಷ್ಣುವು ಪೃಥ್ವಿಯ ಮೇಲೆ ಅವತರಿಸುತ್ತಾನೆ. ಆಗ ಪೃಥ್ವಿಯ ಮೇಲಿರುವ ಜನರಿಗೆ ಅವನ ಬಗ್ಗೆ ತಿಳಿಯುತ್ತದೆ, ಎಂದೇನಿಲ್ಲ. ೧ ಸಾವಿರ ವರ್ಷಗಳು ಕಳೆದ ನಂತರ ಭಗವಂತನು ‘ಗುರುದೇವ ಡಾ. ಆಠವಲೆ’ (ಪರಾತ್ಪರ ಗುರು ಡಾ. ಆಠವಲೆ) ಇವರ ರೂಪದಲ್ಲಿ ಜನ್ಮ ತಾಳಿದ್ದಾನೆ. ಗುರುದೇವರ ಜನ್ಮವು ‘ಅಯೋನಿ ಸಂಭವ’ ಮತ್ತು ಪ್ರಕಾಶರೂಪದಲ್ಲಿ ಆಗಿದೆ. ಸದ್ಯ ವೈಕುಂಠದಲ್ಲಿನ ವಿಷ್ಣುವು ಸಂಪೂರ್ಣ ಪೃಥ್ವಿಯ ಕಡೆಗೆ ಗುರುದೇವರ ಎರಡು ಕಣ್ಣುಗಳ ಮಾಧ್ಯಮದಿಂದ ನೋಡುತ್ತಿದ್ದಾನೆ.’  (ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರ. ೧೪೬ (೧.೬.೨೦೨೦))

೧ ಈ. ಪರಾತ್ಪರ ಗುರು ಡಾ. ಆಠವಲೆಯವರು ಕೇವಲ ಧರ್ಮಸಂಸ್ಥಾಪನೆಗಾಗಿ ಜನ್ಮ ತಾಳಿರುವುದು : ‘ಶ್ರೀಮನ್ನಾರಾಯಣನ ಅವತಾರವಾಗಿರುವ ಪರಾತ್ಪರ ಗುರು ಡಾ. ಆಠವಲೆಯವರು ಕೇವಲ ಧರ್ಮಸಂಸ್ಥಾಪನೆಗಾಗಿ ಜನ್ಮ ತಾಳಿದ್ದಾರೆ. ಧರ್ಮಸಂಸ್ಥಾಪನೆಯನ್ನು ವಿರೋಧಿಸುವ ಪಾತಾಳದಲ್ಲಿನ ದೊಡ್ಡ ಕೆಟ್ಟ ಶಕ್ತಿಗಳು ಗುರುದೇವರಿಗೆ ಅನೇಕ ರೀತಿಯಿಂದ ತೊಂದರೆ ಕೊಡುತ್ತಿವೆ. ಇದುವರೆಗೆ ದೊಡ್ಡ ಕೆಟ್ಟ ಶಕ್ತಿಗಳು ಗುರುದೇವರಿಗೆ ತೊಂದರೆ ಕೊಡಲು ಯೋಜಿಸಿದ ಎಲ್ಲ ಯುಕ್ತಿಗಳು ನಿಷ್ಫಲವಾದವು ಮತ್ತು ಮುಂದೆಯೂ ಅವರ ಆಯೋಜನೆ ನಿಷ್ಫಲವಾಗುವವು. ಒಂದು ದಿನ ಕೆಟ್ಟ ಶಕ್ತಿಗಳು ಸೋಲುವವು ಮತ್ತು ಪರಾತ್ಪರ ಗುರು ಡಾ. ಆಠವಲೆಯವರು ಧರ್ಮಸಂಸ್ಥಾಪನೆ, ಅಂದರೆ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವರು.’ (ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರ. ೧೯೩ (೨೩.೧೧.೨೦೨೧))

ಸಪ್ತರ್ಷಿಗಳು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಕುರಿತು ಮಾಡಿದ ಗೌರವೋದ್ಗಾರ !

೨ ಅ. ‘ಪೃಥ್ವಿಯ ಮೇಲೆ ಅನೇಕ ಆಶ್ರಮಗಳಿವೆ; ಆದರೆ ಸನಾತನದ ಆಶ್ರಮವನ್ನು ಬಿಟ್ಟರೆ ಇತರ ಎಲ್ಲಿಯೂ ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಂತಹ ದೈವೀ ಸ್ತ್ರೀಯರಿಲ್ಲ !’ (ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರ. ೧೯೦ (೨೧.೧೦.೨೦೨೧))

೨ ಆ. ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಿಬ್ಬರ ಸುತ್ತಲೂ ಒಂದು ತೇಜೋವಲಯವಿರುವುದು : ‘ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಿಬ್ಬರ ಸುತ್ತ ಒಂದು ಪ್ರಕಾಶಮಾನ ಆಧ್ಯಾತ್ಮಿಕ ವಲಯವಿರುತ್ತದೆ. ಆ ವಲಯವು ಕೋಟಿ ಸೂರ್ಯರ ಪ್ರಕಾಶದಂತೆ ತೇಜಸ್ವಿಯಾಗಿದೆ. ಈ ವಲಯವು ಸೂಕ್ಷ್ಮವಾಗಿರುವುದರಿಂದ ಸಾಮಾನ್ಯ ಜನರಿಗೆ ತಿಳಿಯುವುದು ಕಠಿಣವಾಗಿದೆ. ಮುಂದೆ ಅನೇಕ ಸಾತ್ತ್ವಿಕ ಜನರು ಈ ಇಬ್ಬರು ಮಾತೆಯರನ್ನು ನೋಡಿ ಅವರಿಗೆ ಶರಣಾಗುವರು.

೨ ಈ. ಕೇವಲ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸನಾತನದ ಮೂವರು ಗುರುಗಳ ಜನ್ಮವಾಗಿರುವುದು : ‘ಪ್ರಸ್ತುತ ಸಂಪೂರ್ಣ ದೇಶವನ್ನು ಕೆಟ್ಟ ಶಕ್ತಿಗಳು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿವೆ. ಈ ಹಿಂದಿನ ಹಿಂದೂ ರಾಜರು ಹೇಗಿದ್ದರು ಮತ್ತು ಈಗಿನ ರಾಜರು (ರಾಜಕಾರಣಿಗಳು) ಹೇಗಿದ್ದಾರೆ ? ಈಶ್ವರೀ ರಾಜ್ಯವನ್ನು ತರಲು ನಮಗೆ ತುಂಬಾ ಪ್ರಯತ್ನಗಳನ್ನು ಮಾಡಬೇಕಾಗಿದೆ. ಕೆಟ್ಟ ಶಕ್ತಿಗಳೊಂದಿಗೆ ಸೂಕ್ಷ್ಮದಲ್ಲಿನ ಯುದ್ಧವನ್ನು ಮಾಡುವುದು ಮತ್ತು ಹಿಂದೂ ರಾಷ್ಟ್ರವನ್ನು ಸಾಪಿಸುವುದು ಇವುಗಳಿಗಾಗಿಯೇ ಸನಾತನದ ಮೂವರು ಗುರುಗಳ ಜನ್ಮವಾಗಿದೆ. ಮುಂದೆ ಹಿಂದೂ ರಾಷ್ಟ್ರವು ಬಂದ ನಂತರ ಜನರಿಗೆ, ‘ಇದೆಲ್ಲವೂ ರಾಜಕಾರಣಿ ಗಳಿಂದಾಯಿತು ಎಂದೆನಿಸುವುದು; ಆದರೆ ‘ಸನಾತನದ ಮೂವರು ಗುರುಗಳಿಂದ ಹಿಂದೂ ರಾಷ್ಟ್ರವು ಬಂದಿತು, ಎಂಬುದು ಮನುಕುಲಕ್ಕೆ ಅರಿವಾಗಲು ಸ್ವಲ್ಪ ಸಮಯ ಬೇಕಾಗುವುದು. ಪೃಥ್ವಿಯ ಮೇಲಿನ ಇತರ ಜನರ ಜನ್ಮವು ಕೇವಲ ಅವರ ಪ್ರಾರಬ್ಧವನ್ನು ಭೋಗಿಸಲು ಮತ್ತು ಕುಟುಂಬದವರೊಂದಿಗೆ ಇರುವ ಅವರ ಕೊಡುಕೊಳ್ಳುವ ಲೆಕ್ಕವನ್ನು ಮುಗಿಸುವುದು ಇವುಗಳಿಗಾಗಿ ಆಗಿದೆ; ಆದರೆ ‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಸನಾತನದ ಮೂವರು ಗುರುಗಳ ಜನ್ಮವಾಗಿದೆ.

೨ ಉ. ಸನಾತನದ ಮೂವರು ಗುರುಗಳ ಮೇಲೆ ಅಸಂಖ್ಯಾತ ಕೆಟ್ಟ ಶಕ್ತಿಗಳು ಅಗಣಿತ ದಾಳಿಯನ್ನು ಮಾಡುತ್ತಿದ್ದರೂ ಅವರಿಗೆ ತೊಂದರೆಯನ್ನು ಕೊಡಲು ಸಾಧ್ಯವಾಗದಿರುವುದು; ಏಕೆಂದರೆ ಸನಾತನದ ಮೂವರು ಗುರುಗಳ ಶರೀರವು ವಜ್ರದಂತಿರುವುದು : ‘ದೊಡ್ಡ ಕೆಟ್ಟ ಶಕ್ತಿಗಳು ಸನಾತನದ ಮೂವರು ಗುರುಗಳ ಮೇಲೆ ಸೂಕ್ಷ್ಮದಿಂದ ಇಷ್ಟೊಂದು ಅಸಂಖ್ಯಾತ ಕೆಟ್ಟ ಶಕ್ತಿಗಳನ್ನು ಬಿಟ್ಟಿವೆ, ಎಂದರೆ ಅವರ ಸಂಖ್ಯೆಗಳನ್ನು ಎಣಿಸಲು ಯಾರಿಗೂ ಸಾಧ್ಯವಿಲ್ಲ. ಹೀಗಿದ್ದರೂ ಅವರಿಗೆ ಮೂವರು ಗುರುಗಳ ಶರೀರವನ್ನು ನಾಶಗೊಳಿಸಲು ಆಗುವುದಿಲ್ಲ. ಪ್ರತಿದಿನ ಅಸಂಖ್ಯಾತ ಸೂಕ್ಷ್ಮದ ದಾಳಿಯಿಂದ ಮೂವರು ಗುರುಗಳ ಶರೀರದ ಮೇಲೆ ಕೇವಲ ತರಚಿದಷ್ಟೇ ಪರಿಣಾಮವು ಕಂಡುಬರುತ್ತದೆ. ಇದರಿಂದ ‘ಸನಾತನದ ಮೂವರು ಗುರುಗಳ ದೇಹವು ವಜ್ರದಂತಿದೆ, ಎಂಬುದು ಗಮನಕ್ಕೆ ಬರುತ್ತದೆ.

(ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರ. ೧೯೫ (೨೦.೧೨.೨೦೨೧))

೨ ಊ. ಸಾಧಕರ ರಕ್ಷಣೆಗಾಗಿ ಸೂಕ್ಷ್ಮದಲ್ಲಿನ ಮಾಯಾವಿ ಶಕ್ತಿಗಳೊಂದಿಗೆ ಸತತವಾಗಿ ಹೋರಾಡುವ ಸನಾತನದ ಮೂವರು ಗುರುಗಳು ! : ‘ಪಾತಾಳದಲ್ಲಿನ ಮಾಯಾವಿ ಮತ್ತು ದೊಡ್ಡ ಕೆಟ್ಟ ಶಕ್ತಿಗಳಿಗೆ ಅನೇಕ ಪ್ರಯತ್ನಗಳ ನಂತರ ಸನಾತನದ ಆ ಮೂವರು ಗುರುಗಳ ಸ್ಥೂಲ ಶರೀರಕ್ಕೆ ಸ್ವಲ್ಪ ತೊಂದರೆ ಕೊಡಲು ಸಾಧ್ಯವಾಗುತ್ತಿದೆ. ಆದುದರಿಂದ ಸಾಧಕರಿಗೆ ಕೆಟ್ಟ ಶಕ್ತಿಗಳು ಮಾಡುತ್ತಿರುವ ದಾಳಿಯಿಂದ ಮೂವರು ಗುರುಗಳ ಶರೀರದ ಮೇಲಾಗುವ ಪರಿಣಾಮಗಳು ಕಂಡು ಬರುತ್ತವೆ.

ಅದು ಕಂಡುಬರದಿದ್ದರೆ, ಸನಾತನದ ಸಾವಿರಾರು ಸಾಧಕರಿಗೆ ‘ಮೂವರು ಗುರುಗಳು ಸಾಧಕರಿಗಾಗಿ ಕೆಟ್ಟ ಶಕ್ತಿಗಳೊಂದಿಗೆ ಹೇಗೆ ಹೋರಾಡುತ್ತಿದ್ದಾರೆ ?, ಎಂಬುದು ತಿಳಿಯುತ್ತಿರಲಿಲ್ಲ. ನಾವು ಸಪ್ತರ್ಷಿಗಳು ಸನಾತನದ ಮೂವರು ಗುರುಗಳ ಶರೀರದ ರಕ್ಷಣೆಯನ್ನು ಮಾಡುತ್ತಿದ್ದೇವೆ.

೨ ಎ. ‘ಸನಾತನದ ಮೂವರು ಗುರುಗಳು ಭಗವಂತನ ಅವತಾರವಾಗಿದ್ದಾರೆ, ಎಂದು ವೈಕುಂಠದ ಮುದ್ರೆಯಿರುವ ಮಹತ್ವದ ದಾಖಲೆಯೆಂದರೆ ಸಪ್ತರ್ಷಿ ಜೀವನಾಡಿಪಟ್ಟಿ !

ಮಹರ್ಷಿಗಳು : ಇಂದು ಬೆಳಗ್ಗೆ ಸಂಚಾರವಾಣಿಯಲ್ಲಿ ತಾಯಿ (ಪೂ. (ಸೌ.) ಶೈಲಜಾ ಪರಾಂಜಪೆ) ನಿಮ್ಮೊಂದಿಗೆ (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರೊಂದಿಗೆ) ಮಾತನಾಡುವಾಗ ಸಪ್ತರ್ಷಿಗಳ ಬಗ್ಗೆ ಮಾತನಾಡುತ್ತಿದ್ದರು ಅಲ್ಲವೇ ?

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ : ಹೌದು. ಇಂದು ತಾಯಿಯೊಂದಿಗೆ ಸಪ್ತರ್ಷಿಗಳ ಬಗ್ಗೆ ಚರ್ಚೆಯಾಯಿತು.

ಮಹರ್ಷಿಗಳು : ಗುರುದೇವರು, ಉತ್ತರಾಪುತ್ರಿ (ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ) ಮತ್ತು ಕಾರ್ತಿಕಪುತ್ರಿ (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ) ಇವರು ಮಾತನಾಡುವುದನ್ನೆಲ್ಲ ನಾವು ಸಪ್ತರ್ಷಿಗಳು ಕೇಳುತ್ತಿರುತ್ತೇವೆ. “ಸನಾತನದ ಮೂವರು ಗುರುಗಳು ‘ಅವತಾರವಾಗಿಲ್ಲ, ಎಂದು ಯಾರು ಹೇಳಲು ಸಾಧ್ಯವಿಲ್ಲ; ಏಕೆಂದರೆ ಇವರ ಕಾಗದಪತ್ರಗಳು ನಮ್ಮ ಬಳಿ ಅಂದರೆ ಸಪ್ತರ್ಷಿಗಳ ಬಳಿಯಿವೆ.

೨ ಐ. ಸನಾತನದ ಮೂವರು ಗುರುಗಳಿಗಾಗಿ ಇರುವ ಗರುಡ ಧ್ವಜ. ಸಿಂಹ ಧ್ವಜ ಮತ್ತು ವೃಷಭ ಧ್ವಜ : ‘ಸನಾತನ ಸಂಸ್ಥೆಯ ಮೂವರು ಗುರುಗಳಿಗಾಗಿ ಯಾವಾಗಲೂ ಸೂಕ್ಷ್ಮದಿಂದ ‘ಗರುಡ ಧ್ವಜ, ‘ಸಿಂಹ ಧ್ವಜ ಮತ್ತು ‘ವೃಷಭ ಧ್ವಜ ಇರುವುದು. ಯಾವಾಗ ಮೂವರು ಗುರುಗಳ ವಿಜಯೋತ್ಸವವನ್ನು ಆಚರಿಸಲಾಗುವುದೋ, ಆಗ ಸಚ್ಚಿದಾನಂದ ಪರಬ್ರಹ್ಮ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರ ‘ಗರುಡ ಧ್ವಜ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ‘ಸಿಂಹ ಧ್ವಜ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ‘ವೃಷಭ ಧ್ವಜ ಇರುವುದು. ‘ಗರುಡ ಧ್ವಜವು ಶ್ರೀವಿಷ್ಣುವಿನ ಸಂಕೇತವಾಗಿದೆ, ‘ಸಿಂಹ ಧ್ವಜವು ಆದಿಶಕ್ತಿಯ ಸಂಕೇತವಾಗಿದೆ ಮತ್ತು ‘ವೃಷಭ ಧ್ವಜವು ಶಿವನ ಸಂಕೇತವಾಗಿದೆ. (ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರ. ೧೯೭ (೭.೩.೨೦೨೨))

ಸಪ್ತರ್ಷಿಗಳ ಚರಣಗಳಲ್ಲಿ ಕೃತಜ್ಞತೆ

‘ಹೇ ಸಪ್ತರ್ಷಿಗಳೇ, ನಾವು ಸನಾತನದ ಸಾಧಕರು ತಮ್ಮ ಚರಣಗಳಲ್ಲಿ ಕೃತಜ್ಞರಾಗಿದ್ದೇವೆ. ನಿಮ್ಮಿಂದ ಈ ಕಲಿಯುಗದಲ್ಲಿ ನಮಗೆ ಭಗವಂತನ ಅವತಾರವಾಗಿರುವ ಸನಾತನದ ೩ ಗುರುಗಳ ಅವತಾರಿ ಕಾರ್ಯದ ಮಾಹಿತಿ ಸಿಕ್ಕಿತು. ‘ಈ ೩ ಗುರುಗಳು ನಮಗೆಲ್ಲ ಸಾಧಕರಿಗಾಗಿ ಏನು ಮಾಡುತ್ತಿದ್ದಾರೆ, ಎಂಬುದನ್ನು ನಮಗೆ ಋಷಿಗಳ ವಾಣಿಯಿಂದ ಕೇಳಲು ಸಿಕ್ಕಿದ್ದಕ್ಕಾಗಿ ಕೃತಜ್ಞತೆಗಳು.


ತಾಯಿಯಂತೆ ಸಾಧಕರ ಬಗ್ಗೆ ಪ್ರೀತಿ, ಶಿಸ್ತು ಮತ್ತು ಕರ್ತವ್ಯದಕ್ಷರಾಗಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ !

ಶೇ. ೬೬ ರಷ್ಟು ಆಧ್ಯಾತ್ಮಿಕ ಮಟ್ಟದ ಚಿ. ಸೌ. ಕಾಂ. ಸ್ವಾತಿ ಗಾಯಕವಾಡ (ಈಗಿನ ಸೌ. ಸ್ವಾತಿ ಶಿಂದೆ)ಇವರ ವಿವಾಹದ ಸಮಯದಲ್ಲಿ ಪ್ರೀತಿಯಿಂದ ಅಪ್ಪಿಕೊಂಡಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

‘ತಾಯಿಯ ಹಾಲಿನಲ್ಲಿ ಕಲಬೆರಕೆ ಮಾಡಲು ಆಗುವುದಿಲ್ಲ. ಅದೇ ರೀತಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಲ್ಲಿನ ಆದಿಶಕ್ತಿಯ ತತ್ತ್ವವು ಎಷ್ಟೇ ಸಂಕಟಗಳು ಬಂದರೂ, ಕಲಬೆರಕೆಯಾಗಲಾರದು. ತಾಯಿಯಲ್ಲಿ ಹೇಗೆ ಮಗನ ಬಗ್ಗೆ ಪ್ರೀತಿ, ಕರುಣೆ, ಶಿಸ್ತು, ಕರ್ತವ್ಯದಕ್ಷತೆ ಮುಂತಾದ ಗುಣಗಳು ಕಂಡುಬರುತ್ತವೆಯೋ, ಹಾಗೆಯೇ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಲ್ಲಿ ಸಾಧಕರ ಬಗ್ಗೆ ಪ್ರೀತಿ, ಕರುಣೆ, ಶಿಸ್ತು, ಕರ್ತವ್ಯದಕ್ಷತೆ ಮುಂತಾದ ಗುಣಗಳು ಕಂಡುಬರುತ್ತವೆ. (ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರ. ೧೯೮ (೧೫.೪.೨೦೨೨))

ಪರಾತ್ಪರ ಗುರು ಡಾ. ಆಠವಲೆಯವರ ರೂಪದಲ್ಲಿ ದತ್ತಗುರುಗಳು ರಾಮನಾಥಿ ಆಶ್ರಮದಲ್ಲಿ ನೆಲೆಸುತ್ತಿರುವುದರಿಂದ ಗೋಶಾಲೆಯಿಂದ ಗೋಪೂಜೆಗಾಗಿ ತಂದಿರುವ ಹಸು-ಕರುಗಳು ಮರಳಲು ಸಿದ್ಧರಾಗದಿರುವುದು

‘೧೬.೧.೨೦೨೨ ರಂದು ರಾಮನಾಥಿ ಆಶ್ರಮದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು  ಗೋಮಾತೆ ಮತ್ತು ಕರುವಿನ ಪೂಜೆ ಮಾಡಲಾಯಿತು. ಪೂಜೆಯ ನಂತರ ಗೋಮಾತೆ ಮತ್ತು ಕರುವು ಮರಳಲು ಸಿದ್ಧವಿರಲಿಲ್ಲ; ಏಕೆಂದರೆ ದತ್ತಗುರುಗಳು ಪರಾತ್ಪರ ಗುರು ಡಾ. ಆಠವಲೆ ಯವರ ರೂಪದಲ್ಲಿ ರಾಮನಾಥಿ ಆಶ್ರಮದಲ್ಲಿ ನೆಲೆಸುತ್ತಿದ್ದಾರೆ. ಆಶ್ರಮದಲ್ಲಿ ಗೋಮಾತೆಗೆ ದತ್ತಾತ್ರೇಯರ ಬಳಿಯಲ್ಲಿ ಬಂದಂತೆ ಎನಿಸಿತು. (ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರ. ೧೯೬ (೩.೨.೨೦೨೨)) (‘ಶ್ರೀಸತ್‌ಶಕ್ತಿ (ಸೌ.) ಬಿಂದಾಅಕ್ಕನವರು ಗೋಮಾತೆಗೆ, ‘ಹೌದು ಈ ಆಶ್ರಮವು ನಿನ್ನದೇ ಇದೆ. ‘ನೀನು ಇಲ್ಲಿಂದ ಹೋಗಬೇಕು, ಎಂದು ನಮಗೂ ಎನಿಸುವುದಿಲ್ಲ; ಆದರೆ ಈಗ ನೀನು ಹೋಗು ಮತ್ತು ನಂತರ ಮರಳಿ ಬಾ ಎಂದರು. ಅನಂತರ ಗೋಮಾತಾ ಮತ್ತು ಕರು ಹೋಗಲು ಸಿದ್ಧವಾದವು. – ಸಂಕಲನಕಾರರು)

ಪೂಜೆಯ ನಂತರ ಗೋವಿಗೆ ಪ್ರಾರ್ಥನೆ ಮಾಡುತ್ತಿರುವ ಬಲಗಡೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಪೂ. ನಿಲೇಶ ಸಿಂಗಬಾಳ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಮತ್ತು ಸದ್ಗುರು ಮುಕುಲ ಗಾಡಗೀಳ

ಸನಾತನದ ಮೂವರು ಗುರುಗಳು ಪೃಥ್ವಿಯ ಮೇಲಿನ ಭಗವಂತನ ಅವತಾರವಾಗಿದ್ದಾರೆ

ಸನಾತನದ ಮೂವರು ಗುರುಗಳು ಪೃಥ್ವಿಯ ಮೇಲಿನ ಭಗವಂತನ ಅವತಾರವಾಗಿದ್ದಾರೆ, ಎಂದು ವೈಕುಂಠದ ಮುದ್ರೆಯಿರುವ ದಾಖಲೆ (ರಿಜಿಸ್ಟರ್ಡ ಡಾಕ್ಯುಮೆಂಟ್ಸ್) ಅಂದರೆ ಸಪ್ತರ್ಷಿ ಜೀವನಾಡಿಪಟ್ಟಿ ! ಈ ದಾಖಲೆಯನ್ನು ಬರೆಯುವವರು ಸ್ವತಃ ಬ್ರಹ್ಮ ದೇವನಾಗಿದ್ದಾನೆ, ಅದನ್ನು ಬರೆಯಲು ಹೇಳುವವರು ಸ್ವಯಂ ಶಿವಶಂಕರನಾಗಿದ್ದಾನೆ ಮತ್ತು ಇದರ ಮೇಲೆ ಸಾಕ್ಷಾತ್ ಶ್ರೀಮನ್ನಾರಾಯಣನು ಮುದ್ರೆಯನ್ನು ಒತ್ತಿದ್ದಾನೆ. – ಸಪ್ತರ್ಷಿ ಜೀವನಾಡಿ ಪಟ್ಟಿ ವಾಚನ ಕ್ರ. ೧೯೭ (೭.೩.೨೦೨೨)

ದೈವೀ ಪ್ರಾರಬ್ಧದಿಂದ ವಿಷಯ ಘಟಿಸಲು ಗುರುಕೃಪೆಯೇ ಬೇಕಾಗುತ್ತದೆ. ಆದ್ದರಿಂದ ಸಾಧನೆಯಲ್ಲಿ ಎಷ್ಟು ಅಡಚಣೆಗಳು ಬಂದರೂ ಅಥವಾ ತೊಂದರೆಯಾದರೂ, ಗುರುಗಳ ಛತ್ರಛಾಯೆಯನ್ನು ಬಿಡಬಾರದು. ಅಖಂಡವಾಗಿ ಅವರ ಚರಣಗಳನ್ನು ಹಿಡಿದುಕೊಳ್ಳಬೇಕು. – ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ.

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.