ದ್ರಷ್ಟಾರ ಸಂತರಾದ ಪರಾತ್ಪರ ಗುರು ಡಾ. ಆಠವಲೆಯವರು ಕೇವಲ ‘ಹಿಂದೂ ರಾಷ್ಟ್ರ ಬರುವುದು ಎಂದು ಹೇಳುವುದಿಲ್ಲ, ಅದಕ್ಕಾಗಿ ಪ್ರಯತ್ನವನ್ನೂ ಮಾಡುತ್ತಾರೆ !

ಸದ್ಗುರು ಡಾ. ಮುಕುಲ ಗಾಡಗೀಳ ‘ಭಾರತದ ವಿವಿಧ ರಾಜ್ಯಗಳಲ್ಲಿನ ಜನರ ಭಾಷೆ, ವೇಷ ಇತ್ಯಾದಿ ಗಳು ಭಿನ್ನವಾಗಿದ್ದರೂ ಎಲ್ಲ ಜನರು ಹಿಂದೂ ಧರ್ಮದವರಾಗಿದ್ದರಿಂದ ಎಲ್ಲರೂ ಒಂದೇ ಆಗಿದ್ದಾರೆ ಮತ್ತು ಅವರಲ್ಲಿ ಏಕತೆ ಇದೆ;  ಆದರೆ ಜಾತ್ಯತೀತ ಆಡಳಿತಗಾರರಿಗೆ ಹಿಂದೂ ಧರ್ಮದ ಮಹತ್ವ ತಿಳಿಯದೇ ಇದ್ದುದರಿಂದ ಅವರು ಸ್ವಾತಂತ್ರ್ಯ ಬಂದು ೭೫ ವರ್ಷ ಗಳಾಗುತ್ತಾ ಬಂದರೂ ಭಾರತವನ್ನು ‘ಹಿಂದೂ ರಾಷ್ಟ್ರ’ ವೆಂದು ಘೋಷಿಸಿಲ್ಲ. ಈ ಕಾಲದಲ್ಲಿ ಸರ್ವಧರ್ಮಸಮಭಾವದ ಡಂಗುರವನ್ನು ಬಾರಿಸುವ ರಾಜಕಾರಣಿಗಳೇ ಲಭಿಸಿದ್ದರಿಂದ ಇಲ್ಲಿನ ಬಹಳಷ್ಟು ಜನರೂ ‘ನಾವು ಹಿಂದೂಗಳಾಗಿದ್ದೇವೆ’ ಎಂಬುದನ್ನೇ ಮರೆತಿದ್ದಾರೆ. ಆದುದರಿಂದ ಹಿಂದೂಗಳು ತಾವು ಹಿಂದುಗಳಾಗಿದ್ದೇವೆ ಎಂದು ಹೇಳುವುದೂ ಇಲ್ಲ. ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾಕ್ಟರ ಆಠವಲೆಯವರು ವರ್ಷ ೨೦೧೨ ರಲ್ಲಿ ಮೊದಲ ಬಾರಿಗೆ ‘ಹಿಂದೂ ರಾಷ್ಟ್ರದ ಸ್ಥಾಪನೆಯ ಅವಶ್ಯಕತೆ ಏಕಿದೆ ?’, ಎಂಬುದನ್ನು ಹೇಳಿದರು. ಅವರು ‘ಹಿಂದೂ ರಾಷ್ಟ್ರವೆಂದರೆ ಕೇವಲ ಹಿಂದೂಗಳ ರಾಷ್ಟ್ರವಲ್ಲ, ‘ಧರ್ಮಾಚರಣಿ, ನೀತಿವಂತ ಮತ್ತು ರಾಷ್ಟ್ರಹಿತದಕ್ಷ ಪ್ರಜೆಗಳು ಮತ್ತುರಾಷ್ಟ್ರಹಿತ ದಕ್ಷ ರಾಜಕಾರಣಿಗಳು ಇರುವ ರಾಜ್ಯ’, ಎಂಬ ಪರಿಕಲ್ಪನೆಯನ್ನು ಮಂಡಿಸಿದ್ದಾರೆ. ಸ್ವಲ್ಪದರಲ್ಲಿ ಹೇಳುವುದಾದರೆ ‘ಹಿಂದೂ ರಾಷ್ಟ್ರವು ರಾಮರಾಜ್ಯದಂತೆಯೇ ಇರುವುದು’, ಎಂದು ಹೇಳಿದ್ದಾರೆ. ಅನಂತರ ಈಗ ೧೦ ವರ್ಷಗಳ ನಂತರ ಹಿಂದೂನಿಷ್ಠ ನೇತಾರರು ಮತ್ತು ಭವಿಷ್ಯಕಾರರು ‘ವರ್ಷ ೨೦೩೦ ರಲ್ಲಿ ಹಿಂದೂ ರಾಷ್ಟ್ರ ಬರುವುದಿದೆ’, ಎಂದು ಹೇಳುತ್ತಿದ್ದಾರೆ; ಆದರೆ ಅವರು ‘ಹಿಂದೂ ರಾಷ್ಟ್ರ ಬರಲು ಏನು ಮಾಡಬೇಕು ? ಎಂಬುದನ್ನು ಮಾತ್ರ ಹೇಳುವುದಿಲ್ಲ. ತದ್ವಿರುದ್ಧ ಪರಾತ್ಪರ ಗುರು ಡಾ. ಆಠವಲೆಯವರು ವರ್ಷ ೨೦೧೨ ರಲ್ಲಿ ಹಿಂದೂ ರಾಷ್ಟ್ರದ ಬಗ್ಗೆ ಕೇವಲ ಹೇಳಲಿಲ್ಲ, ಬದಲಾಗಿ ಅವರು ‘ಅದಕ್ಕಾಗಿ  ಯಾವ ಪ್ರಯತ್ನಗಳನ್ನು ಮಾಡಬೇಕು ?’ ಎಂಬುದನ್ನೂ ಹೇಳಿದರಲ್ಲದೇ ಅಂತಹ ಪ್ರಯತ್ನಗಳನ್ನು ಮುಂದೆ ಹೇಳಿದಂತೆ ಮಾಡಿಸಿಕೊಳ್ಳುತ್ತಿದ್ದಾರೆ.

ಸದ್ಗುರು (ಡಾ.) ಮುಕುಲ ಗಾಡಗೀಳ

ಕೇವಲ ೨೫ ವರ್ಷಗಳ ಅವಧಿಯಲ್ಲಿ ಸರ್ವವ್ಯಾಪಿ ಕಾರ್ಯದ ಮೂಲಕ ದೀಪಸ್ತಂಭವಾಗಿರುವ ಏಕಮೇವಾದ್ವಿತೀಯ ಸನಾತನ ಪರಿವಾರ

೧. ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಭಾರತಾದ್ಯಂತ ನೂರಾರು ಹಿಂದೂ ರಾಷ್ಟ್ರ-ಜಾಗೃತಿ ಸಭೆಗಳು ನೆರವೇರಿದವು ಮತ್ತು ಇದರಿಂದ ಜನರು ಜಾಗೃತ ಮತ್ತು ಸಂಘಟಿತರಾದರು

೨. ೨೦೧೨ ರಿಂದ ಪ್ರತಿ ವರ್ಷ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನಗಳನ್ನು ಆಯೋಜಿಸಲಾಗುತ್ತಿದೆ ಮತ್ತು ಅಲ್ಲಲ್ಲಿ ರಾಜ್ಯ ಸ್ತರದ ಅಧಿವೇಶನಗಳನ್ನೂ ಆಯೋಜಿಸಲಾಗುತ್ತಿದೆ.

೩. ಸಂತರು-ಮಹಂತರು, ಹಿಂದುತ್ವನಿಷ್ಠರು, ವ್ಯಾಪಾರಿಗಳು (ಉದ್ಯಮಿ ಗಳು) ಇಂತಹ ಎಲ್ಲರನ್ನೂ ಅವರು ಸಂಘಟಿಸಿದ್ದಾರೆ ಮತ್ತು ಅವರಿಗೆಲ್ಲರಿಗೂ ಒಟ್ಟಾಗಿ ಪ್ರಯತ್ನ ಮಾಡಲು ಹೇಳಿದ್ದಾರೆ

೪. ಶಕ್ತಿಯ ಬಲದ ಮೇಲಲ್ಲ, ದೈವೀ ಸಾಮರ್ಥ್ಯದ ಬಲದ ಮೇಲೆಯೇ ಧರ್ಮಸಂಸ್ಥಾಪನೆ ಆಗಬಹುದು ಇದನ್ನು ಒಟ್ಟಿಗೆ ಬಂದವರಿಗೆ ತಿಳಿಸಿ ಹೇಳಿ ಅವರಿಗೆ ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡಲು ಪ್ರೋತ್ಸಾಹಿಸಿದ್ದಾರೆ.

೫. ಜನರಿಗೆ ಸಹಜವಾಗಿ ಖರೀದಿಸಲು ಬರುವ ಮತ್ತು ಸುಲಭವಾಗಿ ಓದಲು ಬರುವ ರಾಷ್ಟ್ರ, ಧರ್ಮ ಮತ್ತು ಅಧ್ಯಾತ್ಮದ ವಿಷಯಗಳ ಗ್ರಂಥಗಳನ್ನು ಪ್ರಕಟಿಸಿದ್ದಾರೆ.

೬. ಇಷ್ಟೇ ಅಲ್ಲದೇ, ಅವರು ೮-೧೦ ವರ್ಷಗಳಿಂದ ಬಾಲಸಾಧಕರನ್ನೂ ಹಿಂದೂ ರಾಷ್ಟ್ರದ ಸ್ಥಾಪನೆಯ ದೃಷ್ಟಿಯಿಂದ ತಯಾರಿಸಲು ಪ್ರಾರಂಭಿಸಿದ್ದಾರೆ. ಇದೇ ಪೀಳಿಗೆಯು ಮುಂದೆ ಹಿಂದೂ ರಾಷ್ಟ್ರವನ್ನು ನಡೆಸುವುದು.

೭. ಅಧ್ಯಾತ್ಮದ ಪ್ರಚಾರವನ್ನು ಅವರು ಕೇವಲ ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಮಾಡಿದ್ದಾರೆ. ಇದರಿಂದಾಗಿ ಜಗತ್ತಿನಲ್ಲಿನ ವಿವಿಧ ಜಾತಿಧರ್ಮಗಳ ಜಿಜ್ಞಾಸುಗಳು ಸಾಧನೆಯನ್ನು ಆರಂಭಿಸಿದ್ದಾರೆ.

ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದಂತೆ ಹಿಂದೂ ರಾಷ್ಟ್ರವೂ ಬರುವುದೇ ಇದೆ, ಅದು ಈಶ್ವರನ ನಿಯೋಜನೆಯಾಗಿದೆ ಮತ್ತು ಅವನೇ ನಮ್ಮಿಂದ ಪ್ರಯತ್ನಗಳನ್ನು ಮಾಡಿಸಿಕೊಳ್ಳುತ್ತಿದ್ದಾನೆ.

– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೬.೪.೨೨)