ಯಸ್ಯ ಸ್ಮರಣಮಾತ್ರೇಣ
ಜನ್ಮಸಂಸಾರಬನ್ಧನಾತ್ |
ವಿಮುಚ್ಯತೇ ನಮಸ್ತಸ್ಮೈ
ವಿಷ್ಣವೇ ಪ್ರಭವಿಷ್ಣವೇ ||
ಅರ್ಥ : ಯಾರು ಇಡೀ ಜಗತ್ತನ್ನು ನಿರ್ಮಿಸಿದ್ದಾನೆ, ಯಾರ ಸ್ಮರಣೆಯಿಂದ ಮನುಷ್ಯನು ಜನ್ಮ-ಮೃತ್ಯುವಿನ ಚಕ್ರಗಳಿಂದ ಮುಕ್ತನಾಗುತ್ತಾನೆಯೋ, ಅಂತಹ ಭಕ್ತವತ್ಸಲ ಶ್ರೀವಿಷ್ಣು ವಿಗೆ ನನ್ನ ಕೋಟಿ ಕೋಟಿ ನಮನಗಳು |
ಸರ್ವಮಙ್ಗಲಮಾಙ್ಗಲ್ಯೇ
ಶಿವೇ ಸರ್ವಾರ್ಥ ಸಾಧಿಕೇ |
ಶರಣ್ಯೇ ತ್ರ್ಯಮ್ಬಕೇ ಗೌರಿ
ನಾರಾಯಣಿ ನಮೋಽಸ್ತುತೇ ||
ಅರ್ಥ : ಎಲ್ಲ ಶುಭಕಾರ್ಯಗಳಲ್ಲಿ ಮಂಗಳ ಸ್ವರೂಪವಾಗಿರುವ, ಶಿವನಿಗೆ ಸಮಳಾದ ತ್ರ್ಯಂಬಕೆಗೌರಿ ಮತ್ತು ನಾರಾಯಣಿ ಹೆಸರುಗಳಿಂದ ಸಂಬೋಧಿಸಲ್ಪಟ್ಟಿರುವ ಈ ದುರ್ಗಾದೇವಿಗೆ ನಾನು ನಮಸ್ಕರಿಸುತ್ತೇನೆ |
ಶ್ರೀಮನ್ನಾರಾಯಣಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರ ದಿವ್ಯ ರಥೋತ್ಸವದಲ್ಲಿ ವಿವಿಧ ಗುಂಪುಗಳಲ್ಲಿನ ಸಾಧಕ-ಸಾಧಕಿಯರು ಶ್ರೀವಿಷ್ಣುವಿನ ಗುಣಸಂಕೀರ್ತನೆಯನ್ನು ಮಾಡಿ ಶ್ರೀವಿಷ್ಣುತತ್ತ್ವದ ಆವಾಹನೆಯನ್ನು ಮಾಡಿದರು. ಅತ್ಯಂತ ಅಲೌಕಿಕವಾಗಿರುವಂತಹ ಈ ರಥೋತ್ಸವದಲ್ಲಿ ಸಾಧಕರು ಭಾವ, ಭಕ್ತಿ ಮತ್ತು ಚೈತನ್ಯದಿಂದ ತುಂಬಿರುವ ಅನುಭೂತಿಯನ್ನು ಪಡೆದರು.
ದೇವಸ್ಥಾನದಲ್ಲಿ ವಾರ್ಷಿಕ ಪಲ್ಲಕ್ಕಿ ಉತ್ಸವದ ಸಮಯದಲ್ಲಿ ವರ್ಷವಿಡಿ ದೇವಸ್ಥಾನದಲ್ಲಿರುವ ಭಗವಂತನು ವರ್ಷಕ್ಕೊಮ್ಮೆ ಸ್ವತಃ ಭಕ್ತರಿಗೆ ಭೇಟಿಯಾಗಲು ಹೋಗುತ್ತಾನೆ. ಅದೇ ರೀತಿ ಪರಾತ್ಪರ ಗುರು ಡಾ. ಆಠವಲೆಯವರ ದರ್ಶನದಿಂದ ಮಾರ್ಗದ ಎರಡೂ ಬದಿಗೆ ನಿಂತಿರುವ ಸಾಧಕರ ಭಾವಜಾಗೃತವಾಯಿತು !