‘ಗುರುಗಾಥಾ ಸತ್ಸಂಗ’ ಸಮಾರಂಭದಲ್ಲಿ ಶ್ರೀಸತ್‌ಶಕ್ತಿ(ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಮಾಡಿದ ಮಾರ್ಗದರ್ಶನ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ರಾಮನಾಥಿಯ ಸನಾತನದ ಆಶ್ರಮದ ಅನ್ನಪೂರ್ಣಾ ಕಕ್ಷೆಯಲ್ಲಿ ಸೇವೆಯನ್ನು ಮಾಡುವ ಪ್ರೇಮಮಯಿ, ಉತ್ಸಾಹ ಮತ್ತು ಶರಣಾಗತ ಭಾವವಿರುವ ಶ್ರೀಮತಿ ಮಂಗಲಾ ಪುರಾಣಿಕ ಇವರು ಶೇ. ೬೨ ರಷ್ಟು ಮತ್ತು ವಿವಿಧ ಕಾವ್ಯಗಳನ್ನು ರಚಿಸಿ ಪರಾತ್ಪರ ಗುರುದೇವರ ಬಗ್ಗೆ ಅಪಾರ ಭಾವವನ್ನು ವ್ಯಕ್ತಪಡಿಸುವ ಮತ್ತು ಕೃತಜ್ಞತೆಯಿಂದ ನಿರಂತರ ಗುರುಚರಣಗಳಲ್ಲಿ ಲೀನವಾಗಿರುವ ಶ್ರೀಮತಿ ಮಂದಾಕಿನಿ ಚೌಧರಿ (ಸನಾತನದ ಸಂತರಾದ ಪೂ. (ಸೌ.) ಸಂಗೀತಾ ಜಾಧವ ಇವರ ತಾಯಿ) ಇವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದರು. ಪರಾತ್ಪರ ಗುರು ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ೧೫ ಮಾರ್ಚ ೨೦೨೨ ರಂದು ‘ಗುರುಗಾಥಾ ಸತ್ಸಂಗ’ದಲ್ಲಿ ಈ ಆನಂದವಾರ್ತೆಯನ್ನು ಘೋಷಿಸಿದರು. ಈ ಸತ್ಸಂಗದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶಸಿಂಗಬಾಳ ಇವರು ಮಾಡಿದ ಮಾರ್ಗದರ್ಶನವನ್ನು ಇಲ್ಲಿ ಕೊಡಲಾಗಿದೆ.

೧. ಸಾಧನೆಯಲ್ಲಿ ಬರುವ ಏರಿಳಿತಗಳ ಕಡೆಗೆ ಸಕಾರಾತ್ಮಕತೆಯಿಂದ ಮತ್ತು ಕಲಿಯುವ ವೃತ್ತಿಯನ್ನಿಟ್ಟು ವೇಗದಿಂದ ಮುಂದೆ ಹೋಗಬೇಕು !

ಶ್ರೀಮತಿ ಪುರಾಣಿಕ ಇವರು ಕಾರಣಾಂತರದಿಂದ ಸಾಧನೆಯಲ್ಲಿ ಸ್ವಲ್ಪ ಹಿಂದೆ ಬಿದ್ದಿದ್ದರು; ಆದರೆ ಪುನಃ ಗುರುಚರಣಗಳ ಧ್ಯೇಯವನ್ನು ತಲುಪಲು ಅವರು ಪ್ರತಿಯೊಂದು ಅಡೆತಡೆಗಳ ಮೇಲೆ ಜಿಗುಟುತನದಿಂದ ಪ್ರಯತ್ನಿಸಿ ಪರಿಹರಿಸಿದರು. ತನ್ನಲ್ಲಿ ಬದಲಾವಣೆಯಾಗಲು ಗುರುಗಳು ಅಂದರೆ ಜವಾಬ್ದಾರ ಸಾಧಕರು ಹೇಳಿದಂತೆ ಆಜ್ಞಾಪಾಲನೆ ಎಂದು ತಿಳಿದು ಸಾಧನೆಯ ಅಂಶಗಳನ್ನು ಆಚರಣೆಯಲ್ಲಿ ತಂದರು. ಇದರಿಂದಾಗಿ ದೇವರು ಅವರ ಪ್ರಗತಿಯನ್ನು ಮಾಡಿಸಿಕೊಳ್ಳುತ್ತಿದ್ದಾನೆ. ಸಾಧನೆಯನ್ನು ಮಾಡುತ್ತಿರುವಾಗ ನಮ್ಮ ಜೀವನದಲ್ಲಿ ಘಟಿಸುವ ಪ್ರತಿಯೊಂದು ಪ್ರಸಂಗವು ಮನೋಲಯದ ಕಡೆಗೆ ಕರೆದುಕೊಂಡು ಹೋಗುತ್ತಿರುತ್ತದೆ; ಆದರೆ ಪ್ರಸಂಗಗಳ ಕಡೆಗೆ ಬಹಿರ್ಮುಖತೆಯಿಂದ ನೋಡಿ ನಾವು ಮನೋಲಯದ ಪ್ರಕ್ರಿಯೆಯನ್ನು ತಡೆಯುತ್ತೇವೆ. ಸಾಧನೆಯನ್ನು ಮಾಡುವಾಗ ಘಟಿಸುವ ಪ್ರಸಂಗಗಳು ಸಾಧಕನ ಸಾಧನೆಗಾಗಿ ಈಶ್ವರೇಚ್ಛೆಯಿಂದ ಘಟಿಸುತ್ತಿರುತ್ತವೆ. ಅಂತರ್ಮುಖರಾಗಿದ್ದು ಪ್ರಸಂಗದಿಂದ ಗುರುದೇವರು ನಮಗೆ ಸಾಧನೆಯ ದೃಷ್ಟಿಯಿಂದ ಏನು ಕಲಿಸುತ್ತಿದ್ದಾರೆ, ಎಂಬುದರ ಚಿಂತನೆ ಮಾಡಬೇಕು. ನಾವು ಹೇಗೆ ಭಾವವನ್ನು ಇಡುವೆವೋ, ಹಾಗೆ ಶ್ರೀಗುರುಗಳ ತತ್ವವು ನಮ್ಮ ಸಹಾಯಕ್ಕಾಗಿ ಕಾರ್ಯನಿರತವಾಗುತ್ತದೆ.

ಸಾಧನೆಯ ಪ್ರವಾಸದಲ್ಲಿ ಏರಿಳಿತ ಆಗುತ್ತಲೇ ಇರುತ್ತವೆ; ಆದರೆ ಆನಂದ ಮತ್ತು ದುಃಖ ಈ ಎರಡೂ ಸ್ಥಿತಿಗಳಲ್ಲಿ ಸಕಾರಾತ್ಮಕ ಮತ್ತು ಸ್ಥಿರವಾಗಿರುವುದರಿಂದ ನಮ್ಮ ಮನಸ್ಸು ಸಿದ್ಧವಾಗುತ್ತಿರುತ್ತದೆ. ಹಾಗೆಯೇ ಧನುಷ್ಯದಿಂದ ಬಾಣವನ್ನು ಬಿಡುವ ಮೊದಲು ಧನುಷ್ಯದ ದಾರವನ್ನುಹಿಂದೆ ಎಳೆದರೆ, ಬಾಣವು ಸರಿಯಾದ ಗುರಿ ಮುಟ್ಟುತ್ತದೆ. ಅದೇ ರೀತಿ ಕೆಲವು ಕಾರಣಗಳಿಂದ ಪ್ರಯತ್ನಗಳು ಕಡಿಮೆ ಬಿದ್ದರೆ, ಸಾಧನೆಯಲ್ಲಿ ಸ್ವಲ್ಪ ಹಿಂದೆ ಬೀಳುತ್ತಿದ್ದರೂ, ಎದೆಗುಂದದೆ ಸಾಧನೆಯಲ್ಲಿ ಮುಂದಿನ ಪ್ರಯತ್ನಗಳನ್ನು ಉತ್ಸಾಹದಿಂದ ಮಾಡಬೇಕು.

೨. ಶಿಷ್ಯನ ಜೀವನ ಆನಂದಮಯ ಆಗಿರುವುದರಲ್ಲಿಯೇ ಗುರುಗಳ ಆನಂದವಿರುತ್ತದೆ !

‘ಗುರುಗಳ ಹೊರತು ಶಿಷ್ಯನಿಲ್ಲ ಮತ್ತು ಶಿಷ್ಯನ ಹೊರತು ಗುರುಗಳಿಲ್ಲ’, ಹೀಗೆ ಒಂದು ಗಾದೆ ಇದೆ. ‘ಶಿಷ್ಯನ ಜೀವನವು ಆನಂದವಾಗಿರುವುದ’ರಲ್ಲಿಯೇ ಗುರುಗಳ ಆನಂದವಿರುತ್ತದೆ. ‘ಪ.ಪೂ. ಗುರುದೇವರದ್ದೂ ಹೀಗೆಯೇ ಇದೆ. ಸಾಧಕರ ತೊಂದರೆಯನ್ನು ಕಡಿಮೆಯಾಗಲು ಇನ್ನು ಏನು ಮಾಡಬಹುದು ? ಸಾಧಕರಿಗೆ ಆನಂದ ಸಿಗಲು ಇನ್ನು ಏನು ಮಾಡಬಹುದು ?’, ಎಂಬ ವಿಚಾರವನ್ನುಅವರು ಸತತವಾಗಿ ಮಾಡುತ್ತಿರುತ್ತಾರೆ. ಇಂದು ನಾವೆಲ್ಲರೂ ಯಾವ ಸಾಧನೆಯ ಪ್ರಯತ್ನಗಳನ್ನು ಮಾಡುತ್ತಿದ್ದೆವೆಯೋ, ಅದರಿಂದ ನಮಗೆ ಆಗುತ್ತಿರುವ ಆನಂದವು ಕೇವಲ ಮತ್ತು ಕೇವಲ ಪ.ಪೂ. ಗುರುದೇವರ ಕೃಪಾಶೀರ್ವಾದದಿಂದಲೇ ಆಗಿದೆ !

೩. ರಜ-ತಮ ಪ್ರಧಾನ ವಾತಾವರಣದಲ್ಲಿಯೂ ತಳಮಳದಿಂದ ಸಾಧಕರ ಕಾಳಜಿಯನ್ನು ತೆಗೆದುಕೊಳ್ಳುವ ಪರಾತ್ಪರ ಗುರು ಡಾ. ಆಠವಲೆಯವರನ್ನು ಹೊರತು ಯಾರಿದ್ದಾರೆ ?

ಗುರುದೇವರ ಪ್ರತಿಯೊಂದು ಶ್ವಾಸವು ಸಾಧಕರಿಗಾಗಿಯೇ ಇರುತ್ತದೆ. ಅವರಿಗೆ ಪ್ರತಿಯೊಂದು ಕ್ಷಣ ಸಾಧಕರು ಮತ್ತು ಸಾಧಕರೇ ಕಣ್ಣು ಮುಂದೆ ಕಾಣುತ್ತಾರೆ. ಗುರುಗಳ ಪ್ರತಿಯೊಂದು ದಿನ ಮತ್ತು ಪ್ರತಿಯೊಂದು ವಿಚಾರವು ಅವರ ಸಾಧಕರಿಗಾಗಿಯೇ ಇರುತ್ತದೆ. ‘ಇಂದು ಸಾಧಕರಿಗಾಗಿ ಏನು ಮಾಡಲಿ ?’, ‘ಸಮಷ್ಟಿಗಾಗಿ ಏನು ಕೊಡಲಿ ?’, ಎಂಬುದರ ಬಗ್ಗೆಯೇ ಅವರ ತಳಮಳವಿರುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರ ಅಪಾರ ಕೃಪೆಯಿಂದ ಮತ್ತು ಅವರು ಕೊಡುತ್ತಿರುವ ಪ್ರೀತಿಯಿಂದಲೇ ಸಾಧಕರ ಜೀವನದಲ್ಲಿ ಆಮೂಲಾಗ್ರ ಬದಲಾವಣೆ ಆಗುತ್ತಿದೆ. ಸಾಧಕರ ಜೀವನವು ಆನಂದವಾಗಿದ್ದು ಅವರು ಈ ಘೋರ ಕಲಿಯುಗದಲ್ಲಿ ರಜ-ತಮ ವಾತಾವರಣದಲ್ಲಿರುತ್ತಿದ್ದರೂ ಮುಕ್ತವಾಗಿ ಉಸಿರಾಡುತ್ತಿದ್ದಾರೆ. ಸನಾತನದ ಪ್ರತಿಯೊಬ್ಬ ಸಾಧಕನ ಮತ್ತು ಅವರ ಕುಟುಂಬದವರ ಬಗ್ಗೆಯೂ ಅವರು ಕಾಳಜಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ರೀತಿ ಕಾಳಜಿಯನ್ನು ತೆಗೆದುಕೊಳ್ಳುವವರು ಈ ಪೃಥ್ವಿಯ ಮೇಲೆ ಬೇರೆ ಯಾರಿದ್ದಾರೆ ?

ಶ್ರೀಮತಿ ಮಂದಾಕಿನಿ ಚೌಧರಿ ಅಜ್ಜಿಯವರಲ್ಲಿಆಂತರಿಕ ಸಾಧನೆ, ತಳಮಳ ಮತ್ತು ಭಾವವಿರುವುದು

ಶ್ರೀಮತಿ ಚೌಧರಿಅಜ್ಜಿಯವರಿಂದ ಎಲ್ಲ ಸಾಧಕರು ಕಲಿಯುವುದು ಆವಶ್ಯಕವಿದೆ. ವಯೋವೃದ್ಧರಾಗಿದ್ದರೂ ಯಾವುದೇ ರೀತಿಯ ಸೌಲಭ್ಯವನ್ನು ಪಡೆಯದೇ ಅವರು ಆಶ್ರಮದ ಕಾರ್ಯಪದ್ಧತಿಗಳನ್ನು ಪಾಲಿಸುತ್ತಾರೆ. ಅವರು ಇತರ ಸಂಪ್ರದಾಯಕ್ಕನುಸಾರ ಸಾಧನೆಯನ್ನುಮಾಡುತ್ತಿದ್ದರೂ ಸನಾತನ ಸಂಸ್ಥೆಯು ಹೇಳುತ್ತಿರುವ ಸಾಧನೆಯಉದ್ದೇಶವನ್ನು ಗಮನದಲ್ಲಿಟ್ಟು ಸಾಧನೆಯನ್ನು ಅಂಗೀಕರಿಸಿದರು. ಗುರುಗಳು ಹೇಳಿದ ಸಾಧನೆಯು ಆತ್ಮೋದ್ಧಾರದ್ದಾಗಿದೆ.

ಪರಾತ್ಪರ ಗುರುದೇವರು ಸಾಧಕರಿಗೆ ಪ್ರತಿಯೊಂದು ವಿಷಯದಲ್ಲಿ ಆನಂದವನ್ನು ಕೊಡುವುದು

ಆಶ್ರಮದಲ್ಲಿದ್ದು ಸಾಧನೆಯನ್ನು ಮಾಡುತ್ತಿರುವಾಗ ನಮ್ಮಲ್ಲಿ ಪ್ರೀತಿ ಅಥವಾ ಸಹಜತೆ (ಸ್ವಾಭಾವಿಕತೆ) ಇರಬೇಕು. ಭಗವಂತನು ಗುಣಗಳ ಗಣಿಯಾಗಿದ್ದಾನೆ; ಆದರೆ ನಾವು ಅದನ್ನು ಗುರುತಿಸುವುದಿಲ್ಲ; ಆದ್ದರಿಂದ ಅವನೇ ಆ ದೈವೀ ಗುಣಗಳನ್ನು ನಮಗೆ ತೋರಿಸುತ್ತಾನೆ. ಭಗವಂತನು ನಮ್ಮ ಮುಂದೆ ತೋರಿಸುವ ಈ ಜ್ಞಾನ ಮತ್ತು ಅವನಲ್ಲಿನ ದೈವೀ ಗುಣಗಳನ್ನು ಸ್ವತಃದಲ್ಲಿ ಅಂಗೀಕರಿಸೋಣ. ಶಿಷ್ಯನ ಪ್ರಗತಿಯಲ್ಲಿ ಗುರುಗಳ ಆನಂದವಿರುತ್ತದೆ. ಗುರುಗಳಿಗೆ ‘ಸಾಧಕರಿಗೆ ಎಷ್ಟು ಆನಂದ ಕೊಡಲಿ’, ಎಂದೆನಿಸುತ್ತದೆ. ಪರಾತ್ಪರ ಗುರುದೇವರು ಅವರ ಉಚ್ಚಆಧ್ಯಾತ್ಮಿಕ ಸ್ಥಿತಿಯಲ್ಲಿದ್ದರೂ ಸಾಧಕರಿಗೆ ಪ್ರತಿಯೊಂದು ವಿಷಯದಲ್ಲಿ ಆನಂದವನ್ನು ಕೊಡುತ್ತಿರುತ್ತಾರೆ.

ಸಾಧನೆ ಎಂದರೆ ಆನಂದ ಮತ್ತು ಅದನ್ನು ಪಡೆಯುವಲ್ಲಿ ಎದುರಾಗುವ ಅಡತಡೆಗಳನ್ನು ಎದುರಿಸಬೇಕು !

ದೇವರು ನಿರ್ಮಿಸಿದ ಜಗತ್ತಿನಲ್ಲಿ ಪ್ರತಿಯೊಂದು ವಿಷಯವು ಕಲಿಯುವಂತಿದೆ. ನಮ್ಮಲ್ಲಿ ಕಲಿಯುವ ಸ್ಥಿತಿಯು ಕಡಿಮೆ ಇದ್ದರೆ, ಸಾಧನೆಯ ಒಂದು ಹಂತದಲ್ಲಿ ನಿರಾಶೆ ಬರುತ್ತದೆ. ಆದುದರಿಂದ ಸಾಧಕನು ಸತತವಾಗಿ ಕಲಿಯುವ ಸ್ಥಿತಿಯಲ್ಲಿರಬೇಕು. ಸತತವಾಗಿ ಕಲಿಯುವುದು ಅಂದರೇ ಸತತವಾಗಿ ಆನಂದದಿಂದಿರುವುದು ! ಪರಾತ್ಪರ ಗುರುದೇವರು ಚಿಕ್ಕ ಚಿಕ್ಕ ವಿಷಯಗಳಿಂದ ಕಲಿತು ಅದರಿಂದ ಆನಂದ ಪಡೆಯುತ್ತಾರೆ, ಆ ರೀತಿ ಆನಂದವನ್ನು ನಾವು ಪಡೆಯಲು ಪ್ರಯತ್ನಿಸಬೇಕು. ಸಾಧನೆ ಎಂದರೆ ಆನಂದ ! ಅದನ್ನು ಅನುಭವಿಸಲು ಸಾಧನೆಯಲ್ಲಿ ಬರುವ ಅಡತಡೆಗಳನ್ನು ಜಿಗುಟುತನದಿಂದ ಎದುರಿಸುತ್ತಾನೆಯೋ, ಅವನೇ ನಿಜವಾದ ಸಾಧಕ !

ಯಾವುದೇ ಸೇವೆಯನ್ನು ದೇವರ ಪೂಜೆಯೇ ಆಗಿದೆ ಎಂಬ ಭಾವವನ್ನಿಟ್ಟು ಮಾಡಬೇಕು !

ನಮಗೆ ಯಾವುದೇ ಸೇವೆಯನ್ನು ಕೊಟ್ಟರೂ ಅದು ದೇವರ ಪೂಜೆಯೇ ಆಗಿದೆ ಎಂಬ ಭಾವವನ್ನಿಡಬೇಕು. ದೇವರ ಪೂಜೆಯನ್ನು ಮಾಡುವಾಗ ಯಾವ ರೀತಿ ಭಾವವಿರುತ್ತದೆಯೋ, ಅದೇ ಭಾವವು ಸೇವೆಯನ್ನು ಮಾಡುವಾಗ ನಮ್ಮಲ್ಲಿರಬೇಕು. ಸತ್ಸಂಗದ ಸಮಯದಲ್ಲಿ ದೇವಿ-ದೇವತೆಗಳು ಮತ್ತು ಋಷಿ-ಮುನಿಗಳು ಬರುತ್ತಿರುವುದರಿಂದ ನಾವು ಅಲ್ಲಿ ಸಮಯಕ್ಕೆ ಸರಿಯಾಗಿ ಉಪಸ್ಥಿತರಿರುತ್ತೇವೆಯೇ ?, ಎಂಬುದನ್ನು ಸಾಧಕರು ಗಮನಿಸಬೇಕು. ನಾವು ಯಾವುದೇ ಸೇವೆಯನ್ನು ಮಾಡುತ್ತಿದ್ದರೂ, ಅದು ದುರುಸ್ತಿ ಮಾಡುವ ಸೇವೆಯಾಗಿರಲಿ, ಅಡುಗೆ ಮಾಡುವ ಸೇವೆಯಾಗಿರಲಿ, ಗಣಕಯಂತ್ರದ ಸೇವೆಯಾಗಿರಲಿ ಅಥವಾ ಪ್ರಸಾರದ ಸೇವೆಯಾಗಿರಲಿ ನಾವು ಅದನ್ನು ದೇವರ ಪೂಜೆ ಎಂಬ ಭಾವದಿಂದಲೇ ಮಾಡಬೇಕು. ‘ಪ್ರತಿಯೊಂದು ಸೇವೆಯಲ್ಲಿ ಸಾಕ್ಷಾತ್ ಭಗವಂತನಿದ್ದಾನೆ’, ಎಂಬ ಭಾವವನ್ನಿಟ್ಟರೆ ಸೇವೆಯ ಸಂಪೂರ್ಣ ಫಲನಿಷ್ಪತ್ತಿ ಸಿಗುತ್ತದೆ ! ಸೇವೆಯನ್ನು ಮಾಡುವಾಗ ಮನಸ್ಸು ಅಥವಾ ಗಮನವು ಬೇರೆ ಕಡೆಗೆ ಇದ್ದರೆ, ನಾವು ಮನಸ್ಸನ್ನು ಪ್ರಯತ್ನಪೂರ್ವಕವಾಗಿ ಗುರುಚರಣಗಳತ್ತ ತರಬೇಕು.

ನಮ್ಮ ಜೊತೆಯಲ್ಲಿರುವ ಸಾಧಕರ ತಪ್ಪುಗಳನ್ನು ಹೇಳಿ ಪರಿಪೂರ್ಣ ಸೇವೆಯನ್ನು ಮಾಡುವ ಸಂಸ್ಕಾರವಾಗುವುದು ಮಹತ್ವದ್ದಾಗಿದೆ !

ನಾವು ಸಮಷ್ಟಿಯಲ್ಲಿ ಸೇವೆಯನ್ನು ಮಾಡುತ್ತಿರುವುದರಿಂದ ಪ್ರತಿಯೊಬ್ಬ ಸಾಧಕನಿಗೆ ಸಹ ಸಾಧಕರ ಅಥವಾ ಇತರ ಸಾಧಕರ ತಪ್ಪುಗಳು ಗಮನಕ್ಕೆ ಬರುತ್ತಿರುತ್ತವೆ; ಆದರೆ ನಾವು ಆ ಸಂಬಂಧಿತರಿಗೆ ‘ಸಾಧಕರಿಗೆ ಕಲಿಸಿದಂತಾಗುತ್ತದೆಯೋ ಏನೋ ?’, ‘ಆ ಸಾಧಕನಿಗೆ ನನ್ನ ಬಗ್ಗೆ ಏನು ಎನಿಸುವುದು ?’, ಈ ರೀತಿ ಪ್ರತಿಷ್ಠೆಯ ವಿಚಾರಗಳಿಂದ ತಪ್ಪನ್ನು ಹೇಳುವುದಿಲ್ಲ. ವಾಸ್ತವದಲ್ಲಿ ಸಾಧಕರು ಜವಾಬ್ದಾರ ಸಾಧಕರ ಸಹಾಯವನ್ನು ಪಡೆದು ತಪ್ಪುಗಳನ್ನು ಹೇಳಬೇಕು. ನಮಗೆ ಪರಿಪೂರ್ಣ ಕೃತಿಯನ್ನು ಮಾಡಿ ಸಾಧನೆಯನ್ನು ಮಾಡಬೇಕಾಗಿದೆ. ಸಾಧಕನ ಮನಸ್ಸಿನ ಮೇಲೆ ಪರಿಪೂರ್ಣ ಸೇವೆ ಮಾಡುವ ಸಂಸ್ಕಾರವಾದರೆ, ಅವನ ಸಾಧನೆಯಲ್ಲಿನ ಸಮಯವು ವ್ಯರ್ಥವಾಗುವುದಿಲ್ಲ. ನಾವು ತನ್ನೊಂದಿಗೆ ಸಹ ಸಾಧಕರ ಸಾಧನೆಯಲ್ಲಿಯೂ ಜವಾಬ್ದಾರಿಯನ್ನು ವಹಿಸಿ ಅವರಿಗೆ ಸಾಧನೆಯಲ್ಲಿ ಸಹಾಯ ಮಾಡಬೇಕು.