‘ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕರ್ನಾಟಕ ರಾಜ್ಯದಲ್ಲಿನ ಆಧುನಿಕ ವೈದ್ಯರಿಗಾಗಿ (ಡಾಕ್ಟರರಿಗಾಗಿ) ೮ ನವೆಂಬರ್ ೨೦೨೦ ರಂದು ‘ವೈದ್ಯಕೀಯ ಕ್ಷೇತ್ರದಲ್ಲಿ ಅಧ್ಯಾತ್ಮಶಾಸ್ತ್ರವನ್ನು ಸಮಾವೇಶಗೊಳಿಸುವುದು ಎಂಬ ವಿಷಯದಲ್ಲಿ ‘ವೆಬಿನಾರ (ಆನ್‌ಲೈನ್ ಕಾರ್ಯಕ್ರಮ) ನೆರವೇರಿತು. ಈ ವೆಬಿನಾರ್‌ಗೆ ಸಂಬಂಧಿಸಿದ ಸೇವೆಯ ನಿಮಿತ್ತ ನಮಗೆ ಸನಾತನದ ಸಂತರಾದ ಪೂ. ರಮಾನಂದ ಗೌಡ ಇವರ ಮಾರ್ಗದರ್ಶನ ಲಭಿಸಿತು. ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ಹೇಗೆ ಸಾಧಕರ ಉನ್ನತಿಯ ಬಗ್ಗೆ ಹಂಬಲವಿದೆಯೋ, ಅಂತಹ ಹಂಬಲವೇ ಅವರ ಕೃಪೆಯಿಂದ ಸಂತರಾದ ಪೂ. ರಮಾನಂದ ಗೌಡ ಇವರಲ್ಲಿಯೂ ಇದೆ. ವೆಬಿನಾರ್‌ಗೆ ಸಂಬಂಧಿಸಿದ ಸೇವೆಯನ್ನು ಮಾಡುವಾಗ ಭಗವಾನ ಶ್ರೀಕೃಷ್ಣನ ಕೃಪೆಯಿಂದ ಪೂ. ರಮಾನಂದ ಗೌಡ ಇವರಿಂದ ಕಲಿಯಲು ಸಿಕ್ಕಿದ ಅಂಶಗಳನ್ನು ಇಲ್ಲಿ ಕೊಡುತ್ತಿದ್ದೇನೆ.
ಪೂ. ರಮಾನಂದ ಗೌಡ ಇವರ ೪೬ ನೇ ಹುಟ್ಟುಹಬ್ಬದ ನಿಮಿತ್ತ ಸನಾತನ ಪರಿವಾರದ ವತಿಯಿಂದ ಅವರ ಚರಣಗಳಲ್ಲಿ ಕೃತಜ್ಞತಾಪೂರ್ವಕ ನಮಸ್ಕಾರಗಳು !
೧. ‘ಗುರುಕಾರ್ಯಕ್ಕಾಗಿ ತಮ್ಮನ್ನು ತಾವು ಹೇಗೆ ಸಮರ್ಪಿಸಿಕೊಳ್ಳಬೇಕು ? ಎಂಬುದರ ಬಗ್ಗೆ ಡಾಕ್ಟರರಿಗೆ ಕಲಿಸುವ ಪೂ. ರಮಾನಂದ ಗೌಡ !
‘ವೆಬಿನಾರಕ್ಕೆ ಸಂಬಂಧಪಟ್ಟ ಸೇವೆಯು ಪೂ. ರಮಾನಂದ ಗೌಡ ಇವರ ಸತ್ಸಂಗದಿಂದ ಪ್ರಾರಂಭವಾಯಿತು. ಈ ಆಪತ್ಕಾಲದಲ್ಲಿ (ಸಾಧನೆಯ ಸಂಧಿಕಾಲದಲ್ಲಿ) ಸಮಾಜದಲ್ಲಿನ ಸಾತ್ತ್ವಿಕ ವ್ಯಕ್ತಿಗಳನ್ನು ಸಾಧನೆಯ ಕಡೆಗೆ ಹೊರಳಿಸುವ ಅವಕಾಶ ದೊರಕಬೇಕೆಂದು ಕರ್ನಾಟಕ ರಾಜ್ಯದಲ್ಲಿನ ಸನಾತನದ ಮಾರ್ಗದರ್ಶನಕ್ಕನುಸಾರ ಸಾಧನೆ ಮಾಡುವ ಎಲ್ಲ ಆಧುನಿಕ ವೈದ್ಯರಿಗೆ (ಡಾಕ್ಟರರಿಗೆ) ಪೂ. ರಮಾನಂದ ಗೌಡನವರ ಸತ್ಸಂಗ ಲಭಿಸಿತು. ಈ ಸಮಯದಲ್ಲಿ ಪೂ. ರಮಾನಂದ ಅಣ್ಣನವರು ‘ಡಾಕ್ಟರರು ತಮ್ಮ ಕೌಶಲ್ಯ ಮತ್ತು ತಮ್ಮ ಸಾಮಾಜಿಕ ಘನತೆಯನ್ನು ಗುರುಕಾರ್ಯಕ್ಕಾಗಿ ಹೇಗೆ ಸಮರ್ಪಿಸಿಕೊಳ್ಳಬೇಕು ?, ಎಂಬುದರ ಬಗ್ಗೆ ಮಾರ್ಗದರ್ಶನ ಮಾಡಿದರು.
೨. ಪೂ. ರಮಾನಂದ ಗೌಡ ಇವರು ಕಡಿಮೆ ಕಾಲಾವಧಿಯಲ್ಲಿ ಪರಿಣಾಮಕಾರಿ ಕೃತಿಗಳನ್ನು ಮಾಡುವ ತಳಮಳವನ್ನು ಸಾಧಕರ ಮನಸ್ಸಿನಲ್ಲಿ ಬಿಂಬಿಸುವುದು
ಪೂ. ರಮಾನಂದಣ್ಣವರ ವಾಣಿಯಲ್ಲಿ ಎಷ್ಟು ಚೈತನ್ಯವಿದೆ ಎಂದರೆ, ಅವರ ಮಾರ್ಗದರ್ಶನಕ್ಕೆ ಡಾಕ್ಟರರು ತುಂಬಾ ಉತ್ಸ್ಫೂರ್ತತೆಯಿಂದ ಸ್ಪಂದಿಸಿದರು. ಪ್ರತಿಯೊಬ್ಬ ಡಾಕ್ಟರರು ಅವರ ಸಂಪರ್ಕಕ್ಕೆ ಬರುವ ಡಾಕ್ಟರರು, ಸಾಧನೆಯಲ್ಲಿ ಆಸಕ್ತಿ ಇರುವವರು, ಹಾಗೆಯೇ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯದ ಪರಿಚಯವಿರುವ ಹಿತಚಿಂತಕರು, ವಾಚಕರು, ಜಿಜ್ಞಾಸುಗಳನ್ನು ಮತ್ತು ಧರ್ಮಪ್ರೇಮಿಗಳನ್ನು, ಸಾಧಕರು ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರ ಸಹಾಯದಿಂದ ಸಂಪರ್ಕಿಸುವ ಆಯೋಜನೆಯನ್ನು ಮಾಡಿದರು. ಅತ್ಯಂತ ಕಡಿಮೆ ಸಮಯದಲ್ಲಿ ಪರಿಣಾಮಕಾರಿ ಸೇವೆಯನ್ನು ಮಾಡುವ ತಳಮಳ ಪೂ. ರಮಾನಂದಣ್ಣನವರು ಸಾಧಕರು ಮತ್ತು ಕಾರ್ಯಕರ್ತರಲ್ಲಿ ನಿರ್ಮಾಣ ಮಾಡಿದರು.
೩. ಪೂ. ರಮಾನಂದ ಅಣ್ಣನವರ ಸತ್ಸಂಗದ ಬಳಿಕ ಸೇವೆಗಳ ವಿಂಗಡಣೆಯನ್ನು ಮಾಡಿ ಸೇವೆಗಳನ್ನು ಮಾಡಿದ ನಂತರ ಸಾಧಕರಿಗೆ ತುಂಬಾ ಸಕಾರಾತ್ಮಕ ಸ್ಪಂದನ ದೊರಕುವುದು
ಸೇವೆಗಳು ವ್ಯವಸ್ಥಿತವಾಗಿ ಆಗಬೇಕೆಂದು ಪೂ. ರಮಾನಂದ ಅಣ್ಣನವರ ಸತ್ಸಂಗದ ನಂತರ ಸೇವೆಗಳ ವಿಂಗಡಣೆಯನ್ನು ಮಾಡಲಾಯಿತು ಮತ್ತು ಅದಕ್ಕನುಸಾರ ವರದಿಯನ್ನು ತೆಗೆದುಕೊಳ್ಳಲಾಗುತ್ತಿತ್ತು. ಸಮಾಜದಲ್ಲಿನ ಡಾಕ್ಟರರನ್ನು ಸಂಪರ್ಕಿಸುವುದು ಮತ್ತು ಅವರಿಗಾಗಿ ‘ಆನಲೈನ್ ಕಾರ್ಯಕ್ರಮ (ವೆಬಿನಾರ)ವನ್ನು ಆಯೋಜಿಸುವುದು, ಈ ಉಪಕ್ರಮವು ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಯೇ ಆಗುತ್ತಿತ್ತು. ಆದುದರಿಂದ ಬೆಂಬಲ ಹೇಗೆ ಸಿಗುತ್ತದೆ, ಎಂಬುದರ ಯಾವುದೇ ಅನುಮಾನ ಇರಲಿಲ್ಲ; ಆದರೆ ಸಂಪರ್ಕಗಳು ಆಗುತ್ತಾ ಹೋದಂತೆ ಎಲ್ಲ ಸಾಧಕರಿಗೆ ಮತ್ತು ಕಾರ್ಯಕರ್ತರಿಗೆ ಸಂಪರ್ಕದ ಸಮಯದಲ್ಲಿ ತುಂಬಾ ಸಕಾರಾತ್ಮಕ ಬೆಂಬಲವು ದೊರಕುತ್ತಾ ಹೋಯಿತು. ಇದರಿಂದ ಸಾಧಕರಲ್ಲಿನ ಮತ್ತು ಕಾರ್ಯಕರ್ತರಲ್ಲಿನ ಉತ್ಸಾಹವು ಇನ್ನೂ ಹೆಚ್ಚಾಯಿತು.
೪. ‘ವೆಬಿನಾರಿನ ಸೇವೆ ಹೊಸದಾಗಿತ್ತು. ಆದುದರಿಂದ ಈ ಮೊದಲು ಇಂತಹ ಸೇವೆ ಮಾಡಿದ ಇತರ ರಾಜ್ಯಗಳ ಸಾಧಕರ ಸಹಾಯವನ್ನು ಪಡೆದೆವು. ಈ ಸಾಧಕರು ವಿಷಯವನ್ನು ಮಂಡಿಸುವ ಕುರಿತು ಮತ್ತು ಕಾರ್ಯಕ್ರಮದ ಪ್ರಸಾರಕ್ಕಾಗಿ ಬೇಕಾಗುವ ತಾಂತ್ರಿಕ ಸಹಾಯವನ್ನು ಮಾಡಿದರು.
೫. ‘ವೆಬಿನಾರ್ನ ಸೇವೆಯಲ್ಲಿ ಎಲ್ಲ ಸಾಧಕರು ಕಾರ್ಯಕ್ರಮಕ್ಕಾಗಿ ಮುಂದೆ ಬಂದು ನೇತೃತ್ವವನ್ನು ವಹಿಸಿ ಸಂಘಟಿತರಾಗಿ ಪ್ರಯತ್ನಿಸುವುದು
‘ವೆಬಿನಾರ್ ನ ಸೇವೆಯಲ್ಲಿರುವ ಸಾಧಕರು ಮತ್ತು ಡಾಕ್ಟರರು ತುಂಬಾ ತಳಮಳದಿಂದ ಮತ್ತು ನೇತೃತ್ವವನ್ನು ವಹಿಸಿ ಸಂಘಟಿತರಾಗಿ ಪ್ರಯತ್ನಿಸಿದರು. ಕೆಲವು ಡಾಕ್ಟರರು ತಾವಾಗಿ ಅನೇಕ ಸಂಪರ್ಕಗಳನ್ನು ಮಾಡಿ ಆಮಂತ್ರಣವನ್ನು ನೀಡಿದರು.
೬. ‘ಪಾಲಕತ್ವ ಎಂದರೆ ಏನು ?, ಎಂಬುದನ್ನು ಪ್ರತ್ಯಕ್ಷ ಕೃತಿಯಿಂದ ಕಲಿಸುವ ಪೂ. ರಮಾನಂದ ಅಣ್ಣ!
‘ವೆಬಿನಾರ್ನ ಸೇವೆ ನಡೆಯುತ್ತಿರುವಾಗ ಪೂ. ರಮಾನಂದ ಅಣ್ಣನವರ ಗಮನವು ಸತತವಾಗಿ ಪ್ರತಿಯೊಬ್ಬ ಸಾಧಕನ ಕಡೆಗೆ ಇರುತ್ತಿತ್ತು. ‘ಸಾಧಕರಿಗೆ ಯಾವ ಅಡಚಣೆಗಳೂ ಇಲ್ಲವಲ್ಲ ? ಅವರ ಸೇವೆಗಳು ಸೂಕ್ತ ಸಮಯದಲ್ಲಿ ಪೂರ್ಣ ಅಗುತ್ತಿವೆಯಲ್ಲ ? ಸೇವೆಯನ್ನು ಮಾಡುವಾಗ ಆಧ್ಯಾತ್ಮಿಕ ಸಮಸ್ಯೆಗಳು ಬರುತ್ತಿಲ್ಲವಲ್ಲ ? ಎಂಬುದರ ಕಡೆಗೆ ಅವರ ಸೂಕ್ಷ್ಮ ಗಮನವಿತ್ತು. ಈ ವೆಬಿನಾರನಲ್ಲಿ ವಿಷಯವನ್ನು ಮಂಡಿಸುವ ಸಾಧಕರಿಗೆ ಮತ್ತು ಇತರ ಸಾಧಕರಿಗೆ ಆಧ್ಯಾತ್ಮಿಕ ತೊಂದರೆಗಳು ಬರಬಾರದೆಂದು; ಪೂ. ರಮಾನಂದ ಅಣ್ಣನವರು ನಾಮಜಪದ ಮಂಡಲ ಹಾಕುವುದು ಮತ್ತು ಇತರ ನಾಮಜಪ ಮುಂತಾದ ಉಪಾಯಗಳನ್ನು ಮಾಡಲು ಹೇಳಿದರು, ಹಾಗೆಯೇ ತಾವೂ ಎಲ್ಲರಿಗಾಗಿ ನಾಮಜಪ ಮಾಡಿದರು. ಇದರಿಂದ ಅವರಲ್ಲಿ ಸಾಧಕರ ಬಗೆಗಿರುವ ಪ್ರೀತಿ, ಸಾಧಕರ ಪಿತೃತುಲ್ಯ ಕಾಳಜಿ ವಹಿಸವುದು ಮುಂತಾದ ಗುಣಗಳು ಕಂಡು ಬಂದವು. – ಡಾ. ಅಂಜೇಶ ಕಣಗಲೇಕರ, ಬೆಳಗಾವಿ. (೧೨.೧೧.೨೦೨೦)