ನಾಮಘೋಷದೊಂದಿಗೆ ಹರಿನಾಮದ ಪ್ರಸಾರ ಮಾಡೋಣ ನಾಮಜಪಿಸುತ್ತಾ ಶ್ರೀಮನ್ನಾರಾಯಣನಿಗೆ ಮೊರೆಯಿಡೋಣ
ಶ್ರೀಮನ್ನಾರಾಯಣರ ಭಕ್ತಿಯನ್ನು ಕಲಿಸುವ, ಚಿತ್ತವೃತ್ತಿಯನ್ನು ಜಾಗೃತಗೊಳಿಸುವ ದಿವ್ಯ ರಥೋತ್ಸವ !
ಶ್ರೀಮನ್ನಾರಾಯಣಸ್ವರೂಪ ಪರಾತ್ಪರ ಗುರು ಡಾ. ಆಠವಲೆ ಯವರ ದಿವ್ಯ ರಥೋತ್ಸವದಲ್ಲಿ ವಿವಿಧ ಗುಂಪುಗಳಲ್ಲಿನ ಸಾಧಕ-ಸಾಧಕಿಯರು ಶ್ರೀವಿಷ್ಣುವಿನ ಗುಣಸಂಕೀರ್ತನೆಯನ್ನು ಮಾಡಿ ಶ್ರೀವಿಷ್ಣುತತ್ತ್ವವನ್ನು ಆವಾಹನೆ ಮಾಡಿದರು. ವಿಶೇಷವೆಂದರೆ ಎಷ್ಟೋ ಸಾಧಕರಿಗೆ ತಮ್ಮ ಮುಂದಿರುವ ರಥದಲ್ಲಿ ಪರಾತ್ಪರ ಗುರು ಡಾಕ್ಟರರ ಛಾಯಾಚಿತ್ರವಿರದೇ ಅವರು ಪ್ರತ್ಯಕ್ಷ ಉಪಸ್ಥಿತರಿದ್ದಾರೆ, ಎಂದೂ ಗೊತ್ತಿರಲಿಲ್ಲ, ಆದರೂ ಅವರ ಭಾವಜಾಗೃತಿಯಾಗುತ್ತಿತ್ತು. ಪೂರ್ಣ ವಾತಾವರಣವು ನಾರಾಯಣಮಯವಾಗಿತ್ತು. ‘ನಾರಾಯಣ ನಾರಾಯಣ ಗುರುವರ ನಾರಾಯಣ ಈ ಸುಮಧುರ ರಾಗವನ್ನು ಹಾಡುತ್ತಾ ಮಾರ್ಗಕ್ರಮಣ ಮಾಡುವ ರಥೋತ್ಸವವನ್ನು ನೋಡಿ ಇತರರ ಭಾವವು ಜಾಗೃತವಾಗುತ್ತಿತ್ತು.
ರಥೋತ್ಸವದ ಸಮಾಪ್ತಿಯ ಸಮಯದಲ್ಲಿ ಆಶ್ರಮಕ್ಕೆ ಹಿಂದಿರುಗುತ್ತಿರುವ ಶ್ರೀಗುರುಗಳ ದಿವ್ಯ ರಥ
ವರ್ಷದಾದ್ಯಂತ ದೇವಸ್ಥಾನದಲ್ಲಿರುವ ವಾರ್ಷಿಕ ಪಲ್ಲಕ್ಕಿಯ ಉತ್ಸವದ ಸಮಯದಲ್ಲಿ ಭಗವಂತನು ಭಕ್ತರನ್ನು ಭೇಟಿಯಾಗಲು ತಾನೇ ಹೋಗುತ್ತಾನೆ. ಆ ಸಮಯದಲ್ಲಿ ಭಕ್ತ ಮತ್ತು ಭಗವಂತ ಇವರಿಬ್ಬರಿಗೂ ಭೇಟಿಯಿಂದ ಅಪಾರ ಆನಂದ ಸಿಗುತ್ತದೆ. ಅದೇ ರೀತಿಯಲ್ಲಿ ಪರಾತ್ಪರ ಗುರು ಡಾ. ಆಠವಲೆ ಮತ್ತು ಸಾಧಕರಿಗೆ ಪರಸ್ಪರರ ಭೇಟಿಯಾಗಿ ಅಪಾರ ಆನಂದ ದೊರಕಿತು !
ಮಾಡೋಣ ಅರ್ಚನೆ, ಪೂಜೆ, ನೃತ್ಯ ಮತ್ತು ಗಾಯನ | ಭಾವವನ್ನು ಅರ್ಪಿಸೋಣ, ಪ್ರಸನ್ನರಾಗುವರು ಶ್ರೀಮನ್ನಾರಾಯಣ
ಶ್ರೀಮನ್ನಾರಾಯಣಸ್ವರೂಪ ಗುರುದೇವರ ‘ನ ಭೂತೋ, ನ ಭವಿಷ್ಯತಿ ಎಂಬ ದಿವ್ಯ ರಥೋತ್ಸವ !
ಇಂದಿನವರೆಗೆ ಮಹರ್ಷಿಗಳ ಆಜ್ಞೆಯಿಂದ ಪರಾತ್ಪರ ಗುರುದೇವರ ದಿವ್ಯತ್ವವನ್ನು ಬೆಳಕಿಗೆ ತರುವ ವಿವಿಧ ಸಮಾರಂಭಗಳನ್ನು ಸಾಧಕರು ಅನುಭವಿಸಿದ್ದಾರೆ. ಆ ಎಲ್ಲ ಸಮಾರಂಭಗಳಲ್ಲಿ ಈ ವರ್ಷದ ಸಮಾರಂಭವು ಅದ್ವಿತೀಯವಾಗಿತ್ತು !
ಸನಾತನದ ೩ ಗುರುಗಳ ಚೈತನ್ಯದಾಯಿ ಅಸ್ತಿತ್ವ, ವಿವಿಧ ಭಕ್ತಿಗುಂಪುಗಳು, ಸಾಧಕಿಯರ ಭಾವನೃತ್ಯಗಳು, ತಾಳಗಳ ಧ್ವನಿ ಇವುಗಳ ಮೂಲಕ ಇಡೀ ಸೃಷ್ಟಿಯಲ್ಲಿ ಚೈತನ್ಯದ ಪ್ರಸಾರಣವಾಯಿತು. ಹಿಂದಿನ ೨ ದಿನ ಮಳೆ ಬಿದ್ದುದರಿಂದ ಭೂಮಿ, ನಿಸರ್ಗ, ಲತೆಗಳು-ಬಳ್ಳಿಗಳೂ ಶುಭ್ರ ವಸ್ತ್ರಗಳನ್ನು ತೊಟ್ಟು ಭಗವಂತನ ದರ್ಶನಕ್ಕೆ ಹಾತೊರೆಯುತ್ತಿರುವ ದೃಶ್ಯವು ಕಂಡು ಬಂದಿತು.