ತಮ್ಮ ಧರ್ಮದ ಪ್ರಚಾರ ಮಾಡುವಾಗ ಇತರ ಧರ್ಮಗಳನ್ನು ಅವಮಾನಿಸುವ ಅಧಿಕಾರ ಯಾವುದೇ ಧರ್ಮಕ್ಕೆ ಇಲ್ಲ ! – ಕರ್ನಾಟಕ ಉಚ್ಚನ್ಯಾಯಾಲಯ

ತಮ್ಮ ಧರ್ಮದ ಪ್ರಚಾರ ಮಾಡುವಾಗ ಇತರೆ ಧರ್ಮಗಳನ್ನು ಅವಮಾನಿಸುವ ಮೂಲಭೂತ ಅಧಿಕಾರವನ್ನು ಯಾವುದೇ ಧರ್ಮಕ್ಕೆ ನೀಡಲಾಗುವುದಿಲ್ಲ. ಯಾವುದೇ ಧರ್ಮಗುರುಗಳು ಅಥವಾ ಯಾವುದೇ ವ್ಯಕ್ತಿಯು ಸ್ವಂತ ಧರ್ಮದ ಪ್ರಚಾರ ಮಾಡುವಾಗ ಇತರ ಧರ್ಮದ ಅವಮಾನ ಆಗದಂತೆ ಎಚ್ಚರ ವಹಿಸಬೇಕು ಎಂದು ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಎಚ್.ಪಿ. ಸಂದೇಶ ಇವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.