ಪಾಕಿಸ್ತಾನದಲ್ಲಿ ೧೮ ವರ್ಷ ಆಗುವ ಮೊದಲೇ ಧರ್ಮವನ್ನು ಬದಲಾಯಿಸುವುದರ ಮೇಲೆ ನಿಷೇಧ ಹೇರುವ ಪ್ರಸ್ತಾವನೆಗೆ ಓರ್ವ ಸಚಿವರಿಂದ ವಿರೋಧ

ಸಚಿವ ನೂರ್ ಉಲ್ ಹಕ್ ಕಾದರಿ

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಧಾರ್ಮಿಕ ವಿಷಯದ ಸಚಿವ ನೂರ್ ಉಲ್ ಹಕ್ ಕಾದರಿ ಇವರು ೧೮ ವರ್ಷ ಆಗುವ ಮೊದಲೇ ಧರ್ಮವನ್ನು ಬದಲಾಯಿಸುವುದರ ಮೇಲೆ ನಿಷೇಧ ಹೇರುವ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

೧. ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಸಿನೆಟ ಸಂಸದೀಯ ಸಮಿತಿಯ ಸದಸ್ಯ ಕಾದರಿಯವರು, ೧೮ ವರ್ಷ ಆಗುವ ಮೊದಲು ಧರ್ಮವನ್ನು ಬದಲಾಯಿಸುವುದು ಆ ವ್ಯಕ್ತಿಯ ಇಚ್ಛೆಯ ಮೇಲೆ ಅವಲಂಬಿಸಿರುತ್ತದೆ. ಆತನನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಯಾರಾದರು ೧೪ ವರ್ಷ ಆದನಂತರ ಬೇರೆ ಧರ್ಮವನ್ನು ಸ್ವೀರಿಸಲು ಬಯಸಿದ್ದರೆ, ಅದರ ಮೇಲೆ ನಿಷೇಧ ಹೇರಲು ಸಾಧ್ಯವಿಲ್ಲ. ೧೮ ವರ್ಷ ಆಗುವ ಮೊದಲೇ ಧರ್ಮವನ್ನು ಬದಲಾಯಿಸುವ ಬಗ್ಗೆ ನಿಷೇಧ ತರುವುದಕ್ಕೆ ನಾನು ಬೆಂಬಲಿಸುವುದಿಲ್ಲ. ಇಸ್ಲಾಂನಲ್ಲಿ ೧೮ ವರ್ಷ ಆಗುವ ಮೊದಲೇ ಧರ್ಮವನ್ನು ಬದಲಾಯಿಸಿದ ಅನೇಕ ಉದಾಹರಣೆಗಳಿವೆ; ಆದರೆ ವಿವಾಹವಾಗಲು ಯೋಗ್ಯವಾದ ವಯಸ್ಸು ಇರುವ ಅಂಶವನ್ನು ಕಾನೂನಿನ ಪ್ರಕಾರ ನಿಯಂತ್ರಣದಲ್ಲಿಡಬಹುದು ಮತ್ತು ಅದಕ್ಕಾಗಿ ‘ಕೌನ್ಸಿಲ್ ಆಫ್ ಇಸ್ಲಾಮಿಕ್ ಐಡಿಯಾಲಾಜಿ’ಯೊಂದಿಗೆ ಚರ್ಚೆ ಮಾಡಬಹುದು.

. ಪಾಕಿಸ್ತಾನದ ಸಿಂಧ ಪ್ರಾಂತ್ಯದಲ್ಲಿ ಹಿಂದೂಗಳು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಈ ಸ್ಥಳದಲ್ಲಿ ಮತಾಂತರವಾಗುವ ಘಟನೆ ಮತ್ತೆ ಮತ್ತೆ ನಡೆಯುತ್ತಿದೆ. ಆದ್ದರಿಂದಲೇ ಕಳೆದ ಎಷ್ಟೋ ವರ್ಷಗಳಿಂದ ಈ ಅಂಶ ಬಾಕಿ ಉಳಿದಿದೆ. ಈ ಬಗ್ಗೆ ಕಾದರಿಯವರು ಮಾತನಾಡುತ್ತಾ. ”ಯಾರಾದರು ಬಲವಂತವಾಗಿ ಮತಾಂತರಿಸುತ್ತಿದ್ದರೆ, ಅದರ ಬಗ್ಗೆ ತನಿಖೆ ನಡೆಸಲಾಗುವುದು.” (ಪಾಕಿಸ್ತಾನದಲ್ಲಿ ವಾಸಿಸುವ ಎಷ್ಟೋ ಹಿಂದೂ ಹಾಗೂ ಕ್ರೈಸ್ತ ಯುವತಿಯರನ್ನು ಅಪಹರಿಸಿ ಮತಾಂತರಿಸುವುದು ದಿನನಿತ್ಯ ನಡೆಯುತ್ತಲೇ ಇದೆ. ಇಂತಹ ಎಷ್ಟು ಪ್ರಕರಣಗಳ ಬಗ್ಗೆ ತನಿಖೆ ನಡೆದಿದೆ ? ಹಾಗೂ ಇಲ್ಲಿಯವರೆಗೆ ಎಷ್ಟು ಜನರಿಗೆ ಶಿಕ್ಷೆಯಾಗಿದೆ ? ೧೮ ವರ್ಷಗಳು ಪೂರ್ಣಗೊಳ್ಳುವ ಮೊದಲು ಮತಾಂತರವನ್ನು ನಿಷೇಧಿಸುವ ಪ್ರಸ್ತಾಪವನ್ನು ಸಚಿವ ಕಾದರಿ ವಿರೋಧಿಸುವುದರಿಂದ ಚಿಕ್ಕ ವಯಸ್ಸಿನ ಹಿಂದೂ ಅಥವಾ ಕ್ರಿಶ್ಚಿಯನ್ ಹುಡುಗಿಯರನ್ನು ಸುಲಭವಾಗಿ ಮತಾಂತರಗೊಳಿಸುವ ಮೂಲಕ ಎರಡೂ ಧರ್ಮಗಳ ಸಮುದಾಯವನ್ನು ಸರ್ವನಾಶ ಮಾಡುವ ಉದ್ದೇಶವಿದೆ. – ಸಂಪಾದಕರು)

೩. ಪಾಕಿಸ್ತಾನದ ಸಿನೆಟ್‍ನಲ್ಲಿನ ಅಲ್ಪಸಂಖ್ಯಾತ ಸಮುದಾಯದ ಸದಸ್ಯ ದನೇಶ ಕುಮಾರ ಇವರು ಸಮಿತಿಗೆ, ಬಲುಚಿಸ್ತಾನದಲ್ಲಿನ ದಲಬಂದಿನ ಪ್ರದೇಶದಲ್ಲಿ ಓರ್ವ ಧಾರ್ಮಿಕ ಮುಖಂಡ ಮತಾಂತರಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಹೇಳಿದರು. (ಇಂತಹ ನಾಯಕರ ಮೇಲೆ ಪಾಕಿಸ್ತಾನ ಎಂದೂ ಕ್ರಮ ಕೈಗೊಳ್ಳುವುದಿಲ್ಲ, ಇದು ಅಷ್ಟೇ ಸತ್ಯವಿದೆ ! – ಸಂಪಾದಕರು)