‘ದೇವಭೂಮಿ ಉತ್ತರಾಖಂಡವನ್ನು ಇಸ್ಲಾಮೀಕರಣ ಮಾಡುವ ಪಿತೂರಿ !’ ಈ ವಿಷಯದಲ್ಲಿ ‘ಆನ್‌ಲೈನ್’ ವಿಶೇಷ ಸಂವಾದ

ಉತ್ತರಾಖಂಡದ ಹಿಂದೂಗಳ ಭೂಮಿಯಲ್ಲಾಗುತ್ತಿರುವ ಅತಿಕ್ರಮಣಗಳು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಅಪಾಯದ ಗಂಟೆ ! – ನ್ಯಾಯವಾದಿ ಉಮೇಶ ಶರ್ಮಾ, ಸರ್ವೋಚ್ಚ ನ್ಯಾಯಾಲಯ

ಹಿಂದೂಗಳ ಭೂಮಿಯಲ್ಲಿ ವ್ಯವಸ್ಥಿತವಾಗಿ ಅತಿಕ್ರಮಣ ಮಾಡಲಾಗುತ್ತಿದೆ. ಮುಸಲ್ಮಾನರಿಂದ ಅನೇಕ ಸ್ಥಳಗಳಲ್ಲಿ ಹಿಂದೂಗಳ ಮತ್ತು ಸರಕಾರಿ ಜಮೀನುಗಳನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ, ಸಮಯಕ್ಕೆ ಸರಿಯಾಗಿ ಪೊಲೀಸ್-ಆಡಳಿತಕ್ಕೆ ದೂರು ನೀಡುವುದರ ಮೂಲಕ ಅದನ್ನು ನಿಲ್ಲಿಸಬಹುದು. ಉತ್ತರಾಖಂಡದ ಹಿಂದೂಗಳ ಭೂಮಿಯಲ್ಲಿ ನಿಯೋಜಿತ ಅತಿಕ್ರಮಣಗಳು ಹಿಂದೂಗಳಿಗೆ ಅಪಾಯದ ಗಂಟೆಯಾಗಿದೆ. ಅಲ್ಲದೆ, ಉತ್ತರಾಖಂಡ ರಾಜ್ಯವು ನೇಪಾಳ ಮತ್ತು ಚೀನಾದ ಗಡಿಗೆ ತಾಗಿರುವುದರಿಂದ, ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಇದು ತುಂಬಾ ಅಪಾಯಕಾರಿಯಾಗಿದೆ, ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಉಮೇಶ ಶರ್ಮಾ ಇವರು ಹೇಳಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ದೇವಭೂಮಿ ಉತ್ತರಾಖಂಡದ ಇಸ್ಲಾಮೀಕರಣದ ಪಿತೂರಿ !’ ಎಂಬ ವಿಶೇಷ ‘ಆನ್‌ಲೈನ್’ ಸಂವಾದದಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ಸಮಿತಿಯ ಜಾಲತಾಣ Hindujagruti.org, ಯೂಟ್ಯೂಬ್ ಮತ್ತು ಟ್ವಿಟರ್‌ನಲ್ಲಿ 5,500 ಜನರು ಪ್ರತ್ಯಕ್ಷವಾಗಿ ವೀಕ್ಷಿಸಿದ್ದಾರೆ.

ಈ ವೇಳೆ, ವಿಶ್ವ ಹಿಂದೂ ಪರಿಷತ್ತಿನ ಉತ್ತರಾಖಂಡ ರಾಜ್ಯದ ಉಪಾಧ್ಯಕ್ಷರಾದ ಶ್ರೀ. ಪ್ರದೀಪ ಮಿಶ್ರಾ ಇವರು ಮಾತನಾಡಿ, ಉತ್ತರಾಖಂಡದಲ್ಲಿ ಮುಸಲ್ಮಾನರ ಜನಸಂಖ್ಯೆಯು ಅಲ್ಪಾವಧಿಯಲ್ಲಿ ಶೇಕಡಾ 40 ರಷ್ಟು ಹೆಚ್ಚಾಗಿದೆ. ಹರಿದ್ವಾರದ ಐದು ಕಿಲೋಮೀಟರ್ ಪ್ರದೇಶದಲ್ಲಿ ಮುಸಲ್ಮಾನರಿಗೆ ವಾಸಿಸಲು ಅವಕಾಶವಿಲ್ಲ ಎಂಬ ಸರಕಾರದ ಆದೇಶ ಇದ್ದರೂ ಅದರ ಪಾಲನೆಯಾಗುತ್ತಿಲ್ಲ. ದೇವಭೂಮಿ ಉತ್ತರಾಖಂಡವನ್ನು ಇಸ್ಲಾಮೀಕರಣಗೊಳಿಸಲು ಪಿತೂರಿ ನಡೆಸಲಾಗುತ್ತಿದೆ, ಇದನ್ನು ತಡೆಯಲು ಹಿಂದೂ ಸಮಾಜವು ಮುಂದಾಗಬೇಕು. ಹಿಂದೂ ಸಮುದಾಯದ ಜೊತೆಗೆ ಸರಕಾರವೂ ಈ ಬಗ್ಗೆ ಗಮನ ಹರಿಸಬೇಕು. ದೇವಭೂಮಿ ಉತ್ತರಾಖಂಡಕ್ಕೆ ಕಳಂಕ ತಾಗದಂತೆ ರಕ್ಷಿಸಬೇಕು ! ವಿಎಚ್‌ಪಿ, ಬಜರಂಗದಳ ಮತ್ತು ದುರ್ಗಾವಾಹಿನಿಯ ಪ್ರತಿನಿಧಿಗಳು ಇದಕ್ಕಾಗಿ ಕಾರ್ಯ ಮಾಡುತ್ತಿದ್ದಾರೆ. ಭಾರತದಲ್ಲಿ, ‘ಮುಸಲ್ಮಾನರಿಗೆ ಒಂದು ಕಾನೂನು ಮತ್ತು ಹಿಂದೂಗಳಿಗೆ ಒಂದು ಕಾನೂನು’ ಇದು ಹಿಂದೂಗಳಿಗೆ ದೊಡ್ಡ ಅಡಚಣೆಯಾಗುತ್ತಿದೆ. ಎಲ್ಲರಿಗೂ ಸಮಾನ ಕಾನೂನು ಇರಬೇಕು ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ನರೇಂದ್ರ ಸುರ್ವೆ ಇವರು ಮಾತನಾಡಿ, ಉತ್ತರಾಖಂಡದಲ್ಲಿ ಕೇವಲ ಹಿಂದೂ ದೇವಾಲಯಗಳು ಮತ್ತು ಭೂಮಿಗಳು ಮಾತ್ರವಲ್ಲದೆ ಸರಕಾರಿ ಮತ್ತು ರೈಲ್ವೆ ಭೂಮಿಯನ್ನು ಸಹ ಮುಸಲ್ಮಾನರು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ. ಉತ್ತರಪ್ರದೇಶದಲ್ಲಿ ಒಂದು ಸಾವಿರ ಹಿಂದೂಗಳನ್ನು ಮತಾಂತರಗೊಳಿಸುವಾಗ ಸಿಕ್ಕಿಬಿದ್ದ ‘ಉಮರ್ ಗೌತಮ್’ ಮೂಲತಃ ಉತ್ತರಾಖಂಡದ ‘ಶ್ಯಾಮ್ ಗೌತಮ್’ ಆಗಿದ್ದ. ಜಿಹಾದಿಗಳ ಮತಾಂತರದಿಂದ, ಆತ ಕಟ್ಟರ ಮತಾಂಧನಾಗಿದ್ದಾನೆ. ಇಂತಹ ಅನೇಕ ಹಿಂದೂಗಳು ಮುಸಲ್ಮಾನರಾಗಿರಬಹುದು. ಆದ್ದರಿಂದ ದೇವಭೂಮಿ ಉತ್ತರಾಖಂಡವನ್ನು ರಕ್ಷಿಸುವುದು ಭಾರತದಾದ್ಯಂತದ ಹಿಂದೂಗಳ ಕರ್ತವ್ಯವಾಗಿದೆ. ಒಂದು ವೇಳೆ ಇದನ್ನು ನಿಲ್ಲಿಸದಿದ್ದರೆ, ಕಾಶ್ಮೀರದಂತಹ ಪರಿಸ್ಥಿತಿಯೇ ಉತ್ತರಾಖಂಡದಲ್ಲಿಯೂ ಆಗಲು ಹೆಚ್ಚು ಸಮಯ ತಗಲುವುದಿಲ್ಲ. ಇಂದು, ದೇಶವನ್ನು ಇಸ್ಲಾಮೀಕರಣಗೊಳಿಸಲು ಪ್ರಯತ್ನಿಸಲಾಗುತ್ತಿದೆ, ಇದರ ವಿರುದ್ಧ ಹಿಂದೂಗಳು ಜಾಗರೂಕತೆಯಿಂದ ಇರುವುದು ಅಗತ್ಯವಿದೆ. ನಮ್ಮ ದೇಶದ ‘ಜಾತ್ಯತೀತ’ ವ್ಯವಸ್ಥೆಯಿಂದ ಇಂದು ಅನೇಕ ಸಮಸ್ಯೆಗಳು ಉದ್ಭವಿಸಿವೆ. ಭಾರತವನ್ನು ಇಸ್ಲಾಮಿಕ್ ರಾಷ್ಟ್ರವಾಗದಂತೆ ಉಳಿಸಲು ಭಾರತವನ್ನು ‘ಹಿಂದೂ ರಾಷ್ಟ್ರ’ವನ್ನಾಗಿ ಮಾಡಲು ಒತ್ತಾಯಿಸಬೇಕು ಎಂದರು.