ಚಂಡೀಗಡ್ ನಲ್ಲಿ ಮುಸಲ್ಮಾನ ಮಹಿಳೆಯಿಂದ ಸಿಖ್ ಪತಿಗೆ ಮತಾಂತರಗೊಳ್ಳುವಂತೆ ಒತ್ತಡ

ಪತಿಯಿಂದ ಹೆಂಡತಿಯ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ

ಮುಸಲ್ಮಾನ ಯುವಕ ಹಿಂದೂ ಯುವತಿಯನ್ನು ಪ್ರೇಮದ ಬಲೆಯಲ್ಲಿ ಸೆಳೆದು ಮತಾಂತರಿಸುತ್ತಾರೆ, ಹಾಗೂ ಮುಸಲ್ಮಾನ ಯುವತಿಯು ಸಿಖ್ ಹಾಗೂ ಹಿಂದೂ ಯುವಕನನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ಅವರನ್ನು ಮತಾಂತರಿಸಲು ಪ್ರಯತ್ನಿಸುತ್ತಾರೆ, ಇದೂ ಕೂಡಾ ಲವ್ ಜಿಹಾದ್’ ಆಗಿದೆ !

ಚಂಡೀಗಡ್ – ಇಲ್ಲಿಯ ಓರ್ವ ಮುಸಲ್ಮಾನ ಮಹಿಳೆಯು ಸಿಖ್ ವ್ಯಕ್ತಿಯೊಂದಿಗೆ ಮದುವೆಯಾಗಿ ಆತನ ಮೇಲೆ ಹಾಗೂ ಅವರ ಚಿಕ್ಕಮಕ್ಕಳನ್ನು ಇಸ್ಲಾಂ ಸ್ವೀಕಾರ ಮಾಡುವಂತೆ ಒತ್ತಡ ಹೇರಿದ್ದಳು. ಆದ್ದರಿಂದ ಈ ಸಿಖ್ ವ್ಯಕ್ತಿಯು ಸ್ಥಳಿಯ ಸಿವಿಲ್ ಕೋರ್ಟ್‍ನಲ್ಲಿ ಹೆಂಡತಿ ಮತ್ತು ಅತ್ತೆಯ ಕಡೆಯ ವ್ಯಕ್ತಿಯ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ನ್ಯಾಯಾಲಯವು ಹೆಂಡತಿ ಹಾಗೂ ಅತ್ತೆಯ ಕಡೆಯ ವ್ಯಕ್ತಿಗೆ ನೋಟಿಸ್ ನೀಡಿದ್ದು ಈ ಬಗ್ಗೆ ಜುಲೈ ೨೦ ರಂದು ಆಲಿಕೆ ನಡೆಯಲಿದೆ.

೨೦೦೮ ರಲ್ಲಿ ಇವರಿಬ್ಬರಲ್ಲಿ ಸ್ನೇಹ ಬೆಳೆದಿತ್ತು. ಆ ಸಮಯದಲ್ಲಿ ಮಹಿಳೆಯು ಸಿಖ್ ವ್ಯಕ್ತಿಯ ಮುಂದೆ ಮದುವೆಯ ಪ್ರಸ್ತಾಪನೆಯನ್ನು ಇಟ್ಟಿದ್ದಳು; ಆದರೆ ಆತ ಆಕೆ ಬೇರೆ ಧರ್ಮದವರಾಗಿರುವ ಕಾರಣ ಆತ ತಿರಸ್ಕರಿಸಿದ್ದ. ಆಗ ಮಹಿಳೆಯು ಆತನ ಧಾರ್ಮಿಕ ಶ್ರದ್ಧೆಗೆ ಎಂದೂ ಅಡ್ಡಿ ಪಡಿಸುವುದಿಲ್ಲ ಎಂದು ಆಶ್ವಾಸನೆ ನೀಡಿದ್ದಳು. ನಂತರ ಇವರಿಬ್ಬರು ಮದುವೆಯಾದರು; ಆದರೆ ಮದುವೆಯಾದ ಮೊದಲನೆಯ ದಿನದಿಂದಲೇ ಮಹಿಳೆಯು ಹಾಗೂ ಅತ್ತೆಯ ಮನೆಯ ವ್ಯಕ್ತಿಯಿಂದ ಸಿಖ್ ವ್ಯಕ್ತಿಯ ಮೇಲೆ ಮತಾಂತರವಾಗುವಂತೆ ಒತ್ತಡ ಹೇರಲು ಆರಂಭಿಸಿದ್ದರು.