ಶ್ರೀರಾಮ ಮಂದಿರದಲ್ಲಿನ ಪ್ರಾಣಪ್ರತಿಷ್ಠಾಪನೆ ಸಮಾರಂಭದ ಪ್ರಯುಕ್ತ ಸನಾತನ ಸಂಸ್ಥೆಯಿಂದ ದೇಶಾದ್ಯಂತ ಶ್ರೀ ರಾಮನಾಮ ಸಂಕೀರ್ತನೆ ಅಭಿಯಾನ !

ಜನವರಿ ೧೬ ರಿಂದ ೨೨ ಈ ಕಾಲಾವಧಿಯಲ್ಲಿ ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಜೊತೆಗೆ ವಿವಿಧ ವಿಧಿಗಳು ಆರಂಬವಾಗಲಿದೆ. ಆದ್ದರಿಂದ ಸಂಪೂರ್ಣ ದೇಶದಲ್ಲಿ ಆನಂದದ ಮತ್ತು ಉತ್ಸಾಹದ ವಾತಾವರಣವಿದೆ.

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಜನವರಿ ೧೫ ರಿಂದ ೨೧ ಈ ಸಮಯದಲ್ಲಿ ದೇಶಾದ್ಯಂತ ದೇವಸ್ಥಾನ ಸ್ವಚ್ಛತೆಯ ಉಪಕ್ರಮ ಹಮ್ಮಿಕೊಳ್ಳಲಾಗುವುದು !

ಭಗವಾನ್ ಶ್ರೀ ರಾಮ ಮತ್ತೆ ಅಯೋಧ್ಯೆಯ ಭೂವೈಕುಂಠದಲ್ಲಿ ಅವತರಿಸುವ ಪರಮ ದಿವ್ಯ ಕ್ಷಣ ಹತ್ತಿರ ಬರುತ್ತಿದೆ. ಆದ್ದರಿಂದ ದೇಶಾದ್ಯಂತ ಬಹಳ ಆನಂದದ ಮತ್ತು ರಾಮಮಯ ವಾತಾವರಣ ನಿರ್ಮಾಣವಾಗಿದೆ.

ಮಕ್ಕಳ ಹೆಸರನ್ನು ಇಡುವಾಗ ಹಿಂದೂ ಧರ್ಮಗ್ರಂಥಗಳಲ್ಲಿರುವ ಹೆಸರುಗಳನ್ನು ಆಯ್ದುಕೊಳ್ಳಬೇಕು ! – ಸ್ವಾಮಿ ವಿಶ್ವಪ್ರಸನ್ನ ತೀರ್ಥ, ಪೇಜಾವರ ಮಠ

ನಾವು (ಹಿಂದೂ)ಇಲ್ಲಿ ಶಾಶ್ವತವಾಗಿ ಉಳಿಯುವುದಿಲ್ಲ. ಇದರಿಂದ ನಾವು ನಮ್ಮ ಮಕ್ಕಳ ಮೇಲೆ ಸನಾತನ ಧರ್ಮದ ಸಂಸ್ಕಾರವನ್ನು ಮಾಡುವುದು ಆವಶ್ಯಕವಾಗಿದೆ. ಮುಂಬರುವ ಸಂತತಿಯ ಮೇಲೆ ಸಂಸ್ಕೃತಿಯ ಸಂಸ್ಕಾರವನ್ನು ಮಾಡಿದರೆ, ಹಿಂದೂ ಧರ್ಮದ ರಕ್ಷಣೆಯಾಗುವುದು ಎಂದು ಪೇಜಾವರ ಮಠದ ಸ್ವಾಮಿ ವಿಶ್ವಪ್ರಸನ್ನ ತೀರ್ಥರು ಹೇಳಿದ್ದಾರೆ.

ಶ್ರೀರಾಮ ಮಂದಿರದ ಉದ್ಘಾಟನೆಗೆ 55 ದೇಶಗಳ 100 ನಾಯಕರಿಗೆ ಆಹ್ವಾನ

ಶ್ರೀರಾಮ ಮಂದಿರದ ಉದ್ಘಾಟನೆ ಮತ್ತು ಶ್ರೀ ರಾಮಲಾಲ್ಲಾನ ಪ್ರಾಣಪ್ರತಿಷ್ಠಾಪನೆ ಸಮಾರಂಭದಲ್ಲಿ ದೇಶಾದ್ಯಂತದ 8 ಸಾವಿರ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ.

ಶ್ರೀರಾಮಮಂದಿರದ ವಿಷಯದಲ್ಲಿ ನಮ್ಮ ೪ ಶಂಕರಾಚಾರ್ಯರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ! – ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

ಶ್ರೀರಾಮಮಂದಿರದ ವಿಷಯದಲ್ಲಿ ನಮ್ಮ ನಾಲ್ಕೂ ಶಂಕರಾಚಾರ್ಯರ ನಡುವೆ ಭಿನ್ನಾಭಿಪ್ರಾಯ ಇದೆ ಎಂದು ವದಂತಿ ಹರಡಿಸಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಪ್ರಭು ಶ್ರೀರಾಮನ ಪ್ರತಿಷ್ಠಾಪನೆ ಶಾಸ್ತ್ರಾನುಸಾರ ನಡೆಯಬೇಕು ಎಂದು ಅಷ್ಟೇ ಹೇಳುವುದಿತ್ತು.

ರಾಜ್ಯದ ಕಾಂಗ್ರೆಸ್ ಸರಕಾರದಿಂದ ಅಯೋಧ್ಯೆಯಲ್ಲಿ ಶ್ರೀರಾಮ ಭಕ್ತರಿಗಾಗಿ ಯಾತ್ರಿ ನಿವಾಸ !

ರಾಜ್ಯದ ಕಾಂಗ್ರೆಸ್ ಸರಕಾರ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ದರ್ಶನಕ್ಕಾಗಿ ಹೋಗುವ ರಾಜ್ಯದ ಭಕ್ತರಿಗಾಗಿ ಅಯೋಧ್ಯೆಯಲ್ಲಿ ‘ಕರ್ನಾಟಕ ಯಾತ್ರಿ ನಿವಾಸ’ ನಿರ್ಮಿಸುವುದಾಗಿ ಘೋಷಿಸಿದೆ.

ಅಮರಾವತಿಯ ಜಗದ್ಗುರು ಸ್ವಾಮಿ ರಾಮ ರಾಜೇಶ್ವರಾಚಾರ್ಯ ಮಹಾರಾಜರಿಗೆ ಜೀವ ಬೆದರಿಕೆ !

ಇದು ಹಿಂದೂಗಳ ಧರ್ಮಗುರುಗಳಿಗೆ ಗುರಿಯಾಗಿಸಿಕೊಂಡು ಹಿಂದೂಗಳನ್ನು ದಾರಿ ತಪ್ಪಿಸುವ ಸಂಚಾಗಿದೆ. ಸರಕಾರ ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸಿ ಸಂತ, ಮಹಂತರ ರಕ್ಷಣೆಗೆ ಮುಂದಾಗಬೇಕು !

ಮೂರು ಶಂಕರಾಚಾರ್ಯರಿಂದ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಕಾರ್ಯಕ್ರಮಕ್ಕೆ ಬೆಂಬಲ !

ಮೂರು ಶಂಕರಾಚಾರ್ಯರು ಈ ಕಾರ್ಯಕ್ರಮಕ್ಕೆ ಬೆಂಬಲಿಸಿದ್ದಾರೆ, ಆದರೆ ಕೇವಲ ಜ್ಯೋತಿಷ್ಯ ಪೀಠದ ಶಂಕರಾಚಾರ್ಯರು ಇದಕ್ಕೆ ಧರ್ಮಶಾಸ್ತ್ರದ ಆಧಾರದಲ್ಲಿ ವಿರೋಧಿಸಿದ್ದಾರೆ.

ಮಾರಿಷಸನಲ್ಲಿ ಶ್ರೀ ರಾಮಲಲ್ಲ ಪ್ರಾಣಪ್ರತಿಷ್ಠಾಪನೆ ಉತ್ಸವಕ್ಕಾಗಿ ೨ ಗಂಟೆ ರಜೆ !

ಮಾರಿಷಸನಲ್ಲಿನ ಹಿಂದೂ ಸಂಘಟನೆಗಳಿಂದ ಜನವರಿ ೨೨ ರಂದು ೨ ಗಂಟೆಯ ವಿಶೇಷ ರಜೆ ಕುರಿತು ಸರಕಾರಕ್ಕೆ ವಿನಂತಿಸಿತ್ತು. ಮಾರಿಷಸನಲ್ಲಿ ಶೇಕಡ ೪೮.೫ ರಷ್ಟು ಹಿಂದೂಗಳಿದ್ದಾರೆ. ಹಿಂದೂ ಧರ್ಮದ ಆಚರಣೆ ಎಲ್ಲಕ್ಕಿಂತ ಹೆಚ್ಚಾಗಿ ಮಾಡಲಾಗುತ್ತಿರುವ ಆಫ್ರಿಕನ್ ಖಂಡದಲ್ಲಿ ಮಾರಿಷಸ ಇದು ಏಕೈಕ ದೇಶವಾಗಿದೆ.

ಶ್ರೀರಾಮಮಂದಿರ ಮತ್ತು ಶಂಕರಾಚಾರ್ಯ !

‘ಶಂಕರಾಚಾರ್ಯರಿಂದ ಪ್ರತಿಷ್ಠಾಪನೆ ಕಾರ್ಯಕ್ರಮ ಬಹಿಷ್ಕರಿಸಿದ್ದಾರೆ !’, ಈಗ ಇಂತಹ ವಾರ್ತೆಗಳು ಪ್ರಸಾರ ಮಾಧ್ಯಮಗಳಲ್ಲಿ ತೋರಿಸುತ್ತಿದ್ದಾರೆ. ಈ ವಾರ್ತೆ ನೋಡಿ ಸಾಮಾಜಿಕ ಜಾಲತಾಣದಲ್ಲಿ (ಸೋಶಿಯಲ್ ಮೀಡಿಯಾ) ಕೆಲವು ಜನರು ಆತುರದಿಂದ ಮತ್ತು ನಾಲಿಗೆ ಹರಿ ಬಿಟ್ಟು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.