ಶ್ರೀರಾಮ ಮಂದಿರದಲ್ಲಿನ ಪ್ರಾಣಪ್ರತಿಷ್ಠಾಪನೆ ಸಮಾರಂಭದ ಪ್ರಯುಕ್ತ ಸನಾತನ ಸಂಸ್ಥೆಯಿಂದ ದೇಶಾದ್ಯಂತ ಶ್ರೀ ರಾಮನಾಮ ಸಂಕೀರ್ತನೆ ಅಭಿಯಾನ !

‘ನಮ್ಮ ಮನೆಗೆ ಸಾಕ್ಷಾತ್ ಪ್ರಭು ಶ್ರೀ ರಾಮ ಬರುವವರಿದ್ದಾರೆ’, ಈ ಭಾವದಿಂದ ಪ್ರತಿಯೊಬ್ಬರೂ ಪೂಜೆ ಪ್ರಾರ್ಥನೆ ಮತ್ತು ಶ್ರೀ ರಾಮನಾಮ ಸಂಕೀರ್ತನೆ ಮಾಡಬೇಕು ! – ಸನಾತನ ಸಂಸ್ಥೆಯ ಕರೆ

ಮುಂಬಯಿ – ಜನವರಿ ೧೬ ರಿಂದ ೨೨ ಈ ಕಾಲಾವಧಿಯಲ್ಲಿ ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಜೊತೆಗೆ ವಿವಿಧ ವಿಧಿಗಳು ಆರಂಬವಾಗಲಿದೆ. ಆದ್ದರಿಂದ ಸಂಪೂರ್ಣ ದೇಶದಲ್ಲಿ ಆನಂದದ ಮತ್ತು ಉತ್ಸಾಹದ ವಾತಾವರಣವಿದೆ. ಇದರ ಪ್ರಯುಕ್ತ ಸನಾತನ ಸಂಸ್ಥೆಯಿಂದ ದೇಶಾದ್ಯಂತ ‘ಶ್ರೀರಾಮ ಸಂಕೀರ್ತನೆ ಅಭಿಯಾನ’ದ ಮೂಲಕ ಅಲ್ಲಲ್ಲಿ ಶ್ರೀ ರಾಮನಾಮ ಜಪ, ಶ್ರೀರಾಮನಿಗೆ ರಾಮ ರಾಜ್ಯಕ್ಕಾಗಿ ಪ್ರಾರ್ಥನೆ ಹಾಗೂ ಶ್ರೀರಾಮನ ಗುಣಗಾನ ಮಾಡಲಾಗುವುದು. ಇದರ ಜೊತೆಗೆ ‘ನಮ್ಮ ಮನೆಗೆ ಸಾಕ್ಷಾತ್ ಪ್ರಭು ಶ್ರೀರಾಮ ಬರುವನು’, ಈ ಭಾವದಿಂದ ಪ್ರತಿಯೊಂದು ಕೃತಿ ಮಾಡಬೇಕು ಎಂದು ಸನಾತನ ಸಂಸ್ಥೆಯ ವತಿಯಿಂದ ಕರೆ ನೀಡಲಾಗಿದೆ. ಪ್ರಭು ಶ್ರೀರಾಮ ಮಂದಿರದಲ್ಲಿ ಅವತರಿಸುವ ಕ್ಷಣದ ಸಾಕ್ಷಿದಾರ ಆಗುವ ಭಾಗ್ಯ ನಮ್ಮೆಲ್ಲರಿಗೂ ಲಭಿಸುವುದು, ಇದಕ್ಕಾಗಿ ಶ್ರೀ ರಾಮನ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆ ವ್ಯಕ್ತಪಡಿಸಬೇಕು. ಹಾಗೂ ಯಾವ ಕಾರಸೇವಕರು ತಮ್ಮ ಪ್ರಾಣ ಬಲಿದಾನ ನೀಡಿ, ಶ್ರೀರಾಮ ಜನ್ಮಭೂಮಿ ಮುಕ್ತಗೊಳಿಸಿದ್ದಾರೆ, ಅವರ ಕುರಿತು ಕೂಡ ಕೃತಜ್ಞತೆ ವ್ಯಕ್ತಪಡಿಸಬೇಕು.

ಪ್ರಭು ಶ್ರೀರಾಮತತ್ವದ ಆಧ್ಯಾತ್ಮಿಕ ಸ್ತರದಲ್ಲಿ ಹೆಚ್ಚೆಚ್ಚು ಲಾಭವಾಗಲು ಶ್ರೀ ರಾಮನ ಮಾಹಿತಿ ನೀಡುವ ಕಿರು ಗ್ರಂಥ, ಸನಾತನ ನಿರ್ಮಿತ ಶ್ರೀ ರಾಮನ ಚಿತ್ರ ಮತ್ತು ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ಈ ನಾಮಪಟ್ಟಿಗಳು ಲಭ್ಯವಾಗಿವೆ. ಎಲ್ಲಾ ರಾಮಭಕ್ತರು ಇದರ ಲಾಭ ಪಡೆಯಬೇಕು. ಜೊತೆಗೆ ಅಯೋಧ್ಯೆಯಲ್ಲಿನ ಸಮಾರಂಭದ ಆಮಂತ್ರಣ ಪಡೆದು ನಡೆಸಲಾಗುವ ಕಲಶ ಯಾತ್ರೆಯಲ್ಲಿ, ಅಕ್ಷತ ವಿತರಣೆ ಕಾರ್ಯಕ್ರಮ ಮುಂತಾದ ರಾಮ ಕಾರ್ಯದಲ್ಲಿ ಯಥಾ ಶಕ್ತಿ ಭಾಗವಹಿಸಬೇಕು, ಎಂದು ಸಹ ಸನಾತನ ಸಂಸ್ಥೆಯಿಂದ ಕರೆ ನೀಡಿದೆ.

ಶ್ರೀರಾಮನಾಮ ಸಂಕೀರ್ತನೆ ಅಭಿಯಾನದ ಆಯೋಜನೆ

೧. ಜನವರಿ ೧೫ ರಿಂದ ೨೧, ೨೦೨೪ ಈ ಕಾಲಾವಧಿಯಲ್ಲಿ ನಮ್ಮ ಹತ್ತಿರದ ಯಾವುದೇ ದೇವಸ್ಥಾನದಲ್ಲಿ ಒಟ್ಟಾಗಿ ಸೇರಿ ಸಾಮೂಹಿಕವಾಗಿ ‘ಶ್ರೀರಾಮ ಜಯ ರಾಮ ಜಯ ಜಯ ರಾಮ |’ ಈ ನಾಮಜಪ ಕಡಿಮೆ ಪಕ್ಷ ೩೦ ನಿಮಿಷ ಮಾಡಬೇಕು.

೨. ಜೊತೆಗೆ ನೆರೆದಿರುವ ರಾಮಭಕ್ತರಿಗೆ ‘ಪ್ರಭು ಶ್ರೀರಾಮನ ಗುಣಗಳನ್ನು ಅಳವಡಿಸಿಕೊಳ್ಳಿ’ ಈ ಬಗ್ಗೆ ಪ್ರತಿ ದಿನ ೫ ರಿಂದ ೧೦ ನಿಮಿಷ ವಿಷಯ ಮಂಡಿಸಬೇಕು.

೩. ಕೊನೆಗೆ ಎಲ್ಲರಿಂದ ಸಾಮೂಹಿಕವಾಗಿ ರಾಮ ರಾಜ್ಯಕ್ಕಾಗಿ ಪ್ರಾರ್ಥನೆ ಮಾಡಿಸಿ ಶ್ರೀರಾಮನ ಚರಣಗಳಲ್ಲಿ ಭಾವಪೂರ್ಣ ಕೃತಜ್ಞತೆ ವ್ಯಕ್ತಪಡಿಸಬೇಕು.

೪. ಯಾರಿಗೆ ಸಾಧ್ಯವಿದೆ, ಅವರು ವಾರಪೂರ್ತಿ ಅಥವಾ ಕನಿಷ್ಠ ಜನವರಿ ೨೨, ೨೦೨೪ ರಂದು ‘ತಮ್ಮ ಮನೆಗೆ ಸಾಕ್ಷಾತ ಪ್ರಭು ಶ್ರೀರಾಮ ಬರುವನು’ ಹೀಗೆ ಭಾವ ಇಟ್ಟು, ದೇವರ ಮನೆಯಲ್ಲಿ ಶ್ರೀರಾಮನ ಮೂರ್ತಿ ಅಥವಾ ಚಿತ್ರದ ಪೂಜೆ ಮಾಡಬೇಕು. ದೀಪಾವಳಿಯಂತೆ ಮನೆಯ ಹೊರಗೆ ಹಣತೆಗಳನ್ನು ಹಚ್ಚಬೇಕು. ಬಾಗಿಲಲ್ಲಿ ಅಥವಾ ಅಂಗಳದಲ್ಲಿ ಸಾತ್ವಿಕ ರಂಗೋಲಿ ಹಾಕುವುದು. ಮನೆಯ ಮೇಲೆ ಕೇಸರಿ ಧ್ವಜ ಹಾರಿಸಬೇಕು.