ಶ್ರೀರಾಮಮಂದಿರದ ವಿಷಯದಲ್ಲಿ ನಮ್ಮ ೪ ಶಂಕರಾಚಾರ್ಯರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ! – ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರ ಸ್ಪಷ್ಟೀಕರಣ !

ಗಂಗಾಸಾಗರ (ಬಂಗಾಳ) – ಶ್ರೀರಾಮಮಂದಿರದ ವಿಷಯದಲ್ಲಿ ನಮ್ಮ ನಾಲ್ಕೂ ಶಂಕರಾಚಾರ್ಯರ ನಡುವೆ ಭಿನ್ನಾಭಿಪ್ರಾಯ ಇದೆ ಎಂದು ವದಂತಿ ಹರಡಿಸಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಪ್ರಭು ಶ್ರೀರಾಮನ ಪ್ರತಿಷ್ಠಾಪನೆ ಶಾಸ್ತ್ರಾನುಸಾರ ನಡೆಯಬೇಕು ಎಂದು ಅಷ್ಟೇ ಹೇಳುವುದಿತ್ತು. ದೇವರ ಪ್ರತಿಮೆ ಅಥವಾ ವಿಗ್ರಹವನ್ನು ಶಾಸ್ತ್ರೊಕ್ತವಾಗಿ ದೇವರ ತೇಜವು ಬರುತ್ತಿರುತ್ತದೆ. ವಿಧಿವತ್ತಾಗಿ ಪೂಜೆ ಮತ್ತು ಪ್ರಾಣಪ್ರತಿಷ್ಠಾಪನೆ ಆಗದಿದ್ದರೆ, ಡಾಕಿನಿ, ಶಾಕಿನಿ, ಭೂತ-ಪ್ರೇತ ಪಿಶಾಚಿಗಳು ನಾಲ್ಕೂ ದಿಕ್ಕುಗಳಲ್ಲಿ ಹರಡಿ ಎಲ್ಲವನ್ನೂ ನಾಶಮಾಡುತ್ತವೆ. ಆದ್ದರಿಂದ ಪೂಜೆಯನ್ನು ಶಾಸ್ತ್ರೋಕ್ತವಾಗಿ ಮಾಡಬೇಕೆಂದು ನಮ್ಮ ಇಚ್ಛೆ ಹಾಗೂ ಇದನ್ನೇ ನಾಲ್ವರೂ ಹೇಳಲು ಬಯಸುತ್ತೇವೆ. ಅದರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಎಂದು ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರು‘ ಶ್ರೀರಾಮಮಂದಿರಕ್ಕೆ ನಾಲ್ಕು ಶಂಕರಾಚಾರ್ಯರ ವಿರೋಧವಿದೆ‘ ಎಂಬ ಸುದ್ದಿ ಸಮಾಜದಲ್ಲಿ ಹರಡಿದ ಮೇಲೆ ಎ.ಎನ್.ಐ ಸುದ್ದಿ ಸಂಸ್ಥೆಯ ಪ್ರತಿನಿಧಿಯೊಂದಿಗೆ ಹೇಳಿದರು.

(ಸೌಜನ್ಯ – The Economic Times)

ನಾನು ಯಾರಿಗೂ ಅಯೋಧ್ಯೆಗೆ ಹೋಗುವುದನ್ನು ತಡೆಯುತ್ತಿಲ್ಲ !

ಮಕರಸಂಕ್ರಾಂತಿ ನಿಮಿತ್ತ ಬಂಗಾಳದ ಗಂಗಾಸಾಗರ ಮೇಳ ನಡೆಯುತ್ತಿದೆ. ಈ ಮೇಳದಲ್ಲಿ ಪುಣ್ಯಸ್ನಾನ ಮಾಡಲು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಬಂದಿದ್ದಾರೆ. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ ೨೨ರಂದು ನಾನು ಅಯೋಧ್ಯೆಗೆ ಹೋಗುವುದಿಲ್ಲ. ಇದರ ಅರ್ಥ ನನಗೆ ಅಯೋಧ್ಯೆಯ ಮೇಲೆ ಕೋಪವಿದೆ ಎಂದಲ್ಲ. ನಾನು ಯಾರನ್ನೂ ಅಯೋಧ್ಯೆಗೆ ಹೋಗುವುದನ್ನು ತಡೆಯುವುದಿಲ್ಲ ಎಂದರು.