ಮೂರು ಶಂಕರಾಚಾರ್ಯರಿಂದ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಕಾರ್ಯಕ್ರಮಕ್ಕೆ ಬೆಂಬಲ !

  • ಕೇವಲ ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಇವರ ವಿರೋಧ !

  • ಶ್ರೀರಾಮಲಲ್ಲಾನ ದರ್ಶನಕ್ಕಾಗಿ ಮುಂಬರುವ ಸಮಯದಲ್ಲಿ ಹೋಗುವುದಾಗಿ ಎಲ್ಲಾ ಶಂಕರಾಚಾರ್ಯರರ ಸ್ಪಷ್ಟನೆ !

ನವ ದೆಹಲಿ – ಅಯೋಧ್ಯೆಯಲ್ಲಿ ಜನವರಿ ೨೨ ರಂದು ಶ್ರೀರಾಮ ಮಂದಿರದ ಉದ್ಘಾಟನೆ ಮತ್ತು ಶ್ರೀ ರಾಮಲಲ್ಲಾನ ಪ್ರತಿಷ್ಠಾಪನೆ ನಡೆಸಲಾಗುವುದು. ಈ ಕಾರ್ಯಕ್ರಮ ದೇಶದಲ್ಲಿನ ನಾಲ್ಕು ಶಂಕರಾಚಾರ್ಯರು ವಿರೋಧಿಸಿದ್ದಾರೆ ಎಂದು ಕೆಲವು ದಿನದಿಂದ ಪ್ರಸಾರ ಮಾಧ್ಯಮಗಳಲ್ಲಿ ಈ ವಾರ್ತೆ ಪ್ರಸಾರ ಮಾಡಲಾಗುತ್ತಿದೆ. ಆದರೆ ಪ್ರತ್ಯಕ್ಷದಲ್ಲಿ ಮೂರು ಶಂಕರಾಚಾರ್ಯರು ಈ ಕಾರ್ಯಕ್ರಮಕ್ಕೆ ಬೆಂಬಲಿಸಿದ್ದಾರೆ, ಆದರೆ ಕೇವಲ ಜ್ಯೋತಿಷ್ಯ ಪೀಠದ ಶಂಕರಾಚಾರ್ಯರು ಇದಕ್ಕೆ ಧರ್ಮಶಾಸ್ತ್ರದ ಆಧಾರದಲ್ಲಿ ವಿರೋಧಿಸಿದ್ದಾರೆ. ಈ ನಾಲ್ಕು ಪ್ರಮುಖ ಪೀಠದ ಶಂಕರಾಚಾರ್ಯರು ಕಾರ್ಯಕ್ರಮಕ್ಕೆ ಉಪಸ್ಥಿತರಿರುವುದಿಲ್ಲ; ಆದರೆ ”ನಾವು ಮುಂಬರುವ ಕಾಲದಲ್ಲಿ ಭಗವಾನ ಶ್ರೀ ರಾಮಲಲ್ಲಾನ ದರ್ಶನಕ್ಕೆ ಅವಶ್ಯವಾಗಿ ಹೋಗುವೆವು’, ಎಂದು ಅವರು ಸ್ಪಷ್ಟಪಡಿಸಿದ್ದಾರೆ.

೧. ಶೃಂಗೇರಿ ಪೀಠ, ಪುರಿ ಪೀಠ ಮತ್ತು ದ್ವಾರಕಾ ಪೀಠ ಈ ಪೀಠಗಳ ಶಂಕರಾಚಾರ್ಯರು ಈ ಕಾರ್ಯಕ್ರಮವನ್ನು ಬೆಂಬಲಿಸಿದ್ದಾರೆ. ಶೃಂಗೇರಿ ಪೀಠದ ಶಂಕರಾಚಾರ್ಯರು ಮತ್ತು ದ್ವಾರಕಾಪೀಠದ ಶಂಕರಾಚಾರ್ಯರು ಈ ಕಾರ್ಯಕ್ರಮದ ಬೆಂಬಲದ ಮನವಿ ಪ್ರಸಾರ ಮಾಡಿದ್ದಾರೆ. ಹಾಗೂ ಪುರಿ ಪೀಠದ ಶಂಕರಾಚಾರ್ಯರು ಕೂಡ ಈ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದ ವಾರ್ತೆ ಇದೆ.

೨. ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸದಾನಂದ ಸರಸ್ವತಿ ಇವರ ಪೀಠದಿಂದ ಪ್ರಸಾರ ಮಾಡಿರುವ ಮನವಿಯಲ್ಲಿ, ಭಗವಾನ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಅಯೋಧ್ಯೆಯ ಮಂದಿರದ ಗುಡಿಯಲ್ಲಿ ಆಗುತ್ತಿದೆ. ಈ ಘಟನೆ ಸನಾತನ ಧರ್ಮದ ಎಲ್ಲಾ ಅನುಯಾಯಿಗಳಿಗಾಗಿ ಅತ್ಯಾನಂದದ ವಿಷಯವಾಗಿದೆ. ಈ ಕಾರ್ಯಕ್ರಮಕ್ಕೆ ನಮ್ಮ ಪೂರ್ಣ ಬೆಂಬಲ ಇದೆ. ೫೦೦ ವರ್ಷಗಳ ನಂತರ ವಿವಾದ ಮುಗಿದಿದೆ. ಪ್ರಾಣಪ್ರತಿಷ್ಠಾಪನೆಯ ಸಂಪೂರ್ಣ ಕಾರ್ಯಕ್ರಮ ವೇದ ಶಾಸ್ತ್ರಗಳ ಪ್ರಕಾರ ಮತ್ತು ಧರ್ಮಶಾಸ್ತ್ರದ ಮಿತಿಗಳ ಪಾಲನೆ ಮಾಡಿ ವಿಧಿವತ್ತಾಗಿ ನಡೆಸಬೇಕು. ಶಂಕರಾಚಾರ್ಯರು ನೀಡಿರುವ ಹೇಳಿಕೆಯ ಸಂಬಂಧಿತ ಯಾವೆಲ್ಲ ವಾರ್ತೆಗಳು ಕೆಲವು ಸಮಾಚಾರ ಪತ್ರದಲ್ಲಿ ಪ್ರಸಾರ ಮಾಡಲಾಗಿವೆ, ಅವೆಲ್ಲವೂ ತಪ್ಪಾಗಿದ್ದು ಇಂತಹ ವಾರ್ತೆಗಳಿಗೆ ಶಂಕರಾಚಾರ್ಯರು ಅನುಮತಿ ನೀಡಿಲ್ಲ.

೩. ಶೃಂಗೇರಿ ಪೀಠದ ಶಂಕರಚಾರ್ಯ ಸ್ವಾಮಿ ಭಾರತಿ ತೀರ್ಥರು, ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ಸಂದರ್ಭದಲ್ಲಿ ನಾವು ಯಾವುದೇ ಹೇಳಿಕೆ ನೀಡಿರಲಿಲ್ಲ. ಸನಾತನ ಧರ್ಮದ ಶತ್ರುಗಳು ನಮ್ಮದೆಂದು ಕೆಲವು ಹೇಳಿಕೆಗಳು ನೀಡಿ ಗೊಂದಲ ನಿರ್ಮಾಣ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.