ಶ್ರೀರಾಮಮಂದಿರ ಮತ್ತು ಶಂಕರಾಚಾರ್ಯ !

‘ಶಂಕರಾಚಾರ್ಯರಿಂದ ಪ್ರತಿಷ್ಠಾಪನೆ ಕಾರ್ಯಕ್ರಮ ಬಹಿಷ್ಕರಿಸಿದ್ದಾರೆ !’, ಈಗ ಇಂತಹ ವಾರ್ತೆಗಳು ಪ್ರಸಾರ ಮಾಧ್ಯಮಗಳಲ್ಲಿ ತೋರಿಸುತ್ತಿದ್ದಾರೆ. ಈ ವಾರ್ತೆ ನೋಡಿ ಸಾಮಾಜಿಕ ಜಾಲತಾಣದಲ್ಲಿ (ಸೋಶಿಯಲ್ ಮೀಡಿಯಾ) ಕೆಲವು ಜನರು ಆತುರದಿಂದ ಮತ್ತು ನಾಲಿಗೆ ಹರಿ ಬಿಟ್ಟು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ನೋಡಿ ಕೆಲವು ಅಂಶಗಳು ಮುಂದೆ ಇಡಲು ಇಚ್ಚಿಸುತ್ತೇವೆ. ಸಾಧ್ಯವಾದರೆ ಈ ಅಂಶಗಳನ್ನು ಶಾಂತವಾಗಿ ಓದಿರಿ ಮತ್ತು ತಿಳಿದುಕೊಳ್ಳಿ.

೧. ‘ನಾವು ಹೋಗಲು ಸಾಧ್ಯವಿಲ್ಲ, ಎಂದರೆ ಬಹಿಷ್ಕಾರ ಆಗುವುದಿಲ್ಲ !

ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಮೇಲೆ ಯಾರೂ ಬಹಿಷ್ಕಾರ ಹಾಕಿಲ್ಲ. ೪ ರಲ್ಲಿ ೩ ಪೀಠದ ಶಂಕರಾಚಾರ್ಯರು ಜನವರಿ ೨೨ ರಂದು ನಡೆಯುವ ಸಮಾರಂಭದಲ್ಲಿ ನಾವು ಉಪಸ್ಥಿತರಾಗಲು ಸಾಧ್ಯವಿಲ್ಲ’, ಎಂದು ಹೇಳಿದ್ದಾರೆ. ಇದರಲ್ಲಿನ ಜ್ಯೋತಿರ್ಪೀಠ, ಬದ್ರಿನಾಥದ ಜಗದ್ಗುರು ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಇವರಿಗೆ ಆಮಂತ್ರಣ ದೊರೆತಿಲ್ಲವೆಂದು ಹೇಳಿದ್ದಾರೆ. ಶೃಂಗೇರಿ ಆಚಾರ್ಯರು ಹೋಗುವರು ಅಥವಾ ಇಲ್ಲ ಇದರ ಬಗ್ಗೆ ಸ್ಪಷ್ಟ ನಿಲುವು ಮಂಡಿಸಿರುವುದು ನಾನು ಓದಿಲ್ಲ. ‘ನಾವು ಹೋಗಲು ಸಾಧ್ಯವಿಲ್ಲ’, ಎಂದರೆ ಬಹಿಷ್ಕಾರವಲ್ಲ. ಎಲ್ಲಾ ಆಚಾರ್ಯರು ತಮ್ಮ ತಮ್ಮ ಶುಭಾಶೀರ್ವಾದ ಇರುವುದಾಗಿ ಮತ್ತು ಯಾವುದೇ ಅಸಮಾಧಾನ ಇಲ್ಲದಿರುವುದು ಸ್ಪಷ್ಟಪಡಿಸಿದ್ದಾರೆ.

ವೈದ್ಯ ಪರೀಕ್ಷಿತ ಶೆವಡೆ

೨. ಮಾಧ್ಯಮಗಳಿಂದ ಈ ಇಲ್ಲಸಲ್ಲದ ಕಥೆಗಳು

ಧಾರ್ಮಿಕ ವಿಷಯಗಳಲ್ಲಿ ಈ ಪೀಠಗಳು ಸರ್ವೋಚ್ಛ ವಾಗಿರುವುದೆಂದು ಕೆಲವು ವಿಶೇಷ ‘ಪ್ರೋಟೋಕಾಲ್’ (ನಿಯಮ) ಇರುವುದು. ಅದನ್ನು ಪೂರ್ಣಗೊಳಿಸುವುದು ಸಾಧ್ಯ ಇಲ್ಲದಿರುವುದರಿಂದ ಈ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಯಾವುದೇ ವಿವಾದ ತಾವಾಗಿಯೇ ಉಪಸ್ಥಿತಗೊಳಿಸದೆ ಕಾರ್ಯಕ್ರಮದಿಂದ ದೂರ ಇರುವುದು ಅವರ ನಿರ್ಣಯ ನಿಜವೆಂದರೆ ಸ್ವಾಗತಾರ್ಹವಾಗಿದೆ; ಆದರೆ ಇದರಲ್ಲಿ ಮಾಧ್ಯಮಗಳು ಕೊಂಕೂ ಹುಡುಕದೆ ಇದ್ದರೆ ಆಶ್ಚರ್ಯ ! ಆದ್ದರಿಂದ ನಂತರ ಬಹಿಷ್ಕಾರದ ಕಥೆಗಳು ಮುಂದುವರೆದವು, ಆದರೆ ಅವರು ಹಾಕಲೇ ಇಲ್ಲ !

೩. ಶಂಕರಾರ್ಚಾರ್ಯರ ಶ್ರೀರಾಮ ಮಂದಿರದ ಕುರಿತಾದ ಕೊಡುಗೆ

‘ಈ ಶಂಕರಚಾರ್ಯರು ಶ್ರೀರಾಮ ಮಂದಿರದ ಕುರಿತು ಕೊಡುಗೆ ಏನು ?’, ಈ ಪ್ರಶ್ನೆ ಕೆಲವು ಅತಿಉತ್ಸಾಹಿ ಜನರು ಕೇಳುತ್ತಿದ್ದಾರೆ. ಅವರು ಸ್ವತಃ ಇದರ ಬಗ್ಗೆ ಅವರು ಅಭ್ಯಾಸ ಮಾಡಿದರೆ ಈ ಪ್ರಶ್ನೆಯೇ ಬರುತ್ತಿರಲಿಲ್ಲ. ಪುರಿ ಪೀಠಾಧೀಶ್ವರರು ಈ ವಿಷಯವಾಗಿ ಕೊಡುಗೆ ನೀಡಿದ್ದಾರೆ. ದ್ವಾರಕಾ ಮತ್ತು ಬದ್ರಿನಾಥ ಹೀಗೆ ಸಂಯುಕ್ತ ಜಗದ್ಗುರುಸ್ಥಾನ ಅಲಂಕರಿಸಿರುವ ಬ್ರಹ್ಮಿಭೂತ ಸ್ವರೂಪಾನಂದ ಸರಸ್ವತಿ ಮಹಾರಾಜ ಇವರು ಪದ ಯಾತ್ರೆಯಿಂದ ಜೈಲುವಾಸ ಮತ್ತು ಸಂತರನ್ನು ಒಗ್ಗೂಡಿಸಿ ಅವರ ನ್ಯಾಯಾಲಯದಲ್ಲಿನ ಹೋರಾಟ ಹೀಗೆ ಸುಧೀರ್ಘ ಕೊಡುಗೆ ಶ್ರೀರಾಮ ಜನ್ಮ ಭೂಮಿಯ ಬಗ್ಗೆ ಇರುವುದು. ರಾಜಕೀಯ ಮತ ಭೇದ ಇರುವುದರಿಂದ ಅವರು ವಿಶ್ವ ಹಿಂದೂ ಪರಿಷತ್ತಿನ ಸಹಭಾಗದ ಪರವಾಗಿ ಇರಲಿಲ್ಲ; ಆದರೆ ಇದರಿಂದ ಅವರ ಕೊಡುಗೆ ಕಡಿಮೆ ಆಗುವುದಿಲ್ಲ.

೪. ಶಂಕರಚಾರ್ಯ ಇವರು ಹಿಂದುತ್ವದ ಕೊಡುಗೆಯ ಬಗ್ಗೆ ಕೇಳುವುದು ಎಷ್ಟರಮಟ್ಟಿಗೆ ಸರಿ ಇದೆ ?

‘ಈ ಶಂಕರಾಚಾರ್ಯರ ಹಿಂದುತ್ವದ ವಿಷಯವಾಗಿ ಕೊಡುಗೆ ಏನು ? ಈ ಪ್ರಶ್ನೆ ಕೇಳುವ ಎಷ್ಟೋ ಮಹಾನುಭಾವರು ಮೊದಲು ಸ್ವತಃ ಇದರ ಬಗ್ಗೆ ಮಾಹಿತಿ ಪಡೆದಿದ್ದಾರೆಯೆ ? ನಾಲ್ಕು ಪೀಠದ ಶಂಕರಾಚಾರ್ಯರು ‘ಗೋರಕ್ಷಣೆ ಇಂದ ನಿರಂತರ ಸಂಚಾರ ನಡೆಸಿ ಜನ ಸಂಪರ್ಕ’ ಹೀಗೆ ಧರ್ಮಕಾರ್ಯ ಮಾಡುತ್ತಿರುತ್ತಾರೆ. ನಮಗೆ ಅವರ ಜಾಲತಾಣದಲ್ಲಿ ಕೂಡ ಇದರ ಮಾಹಿತಿ ಸಿಗುತ್ತದೆ. ಇನ್ನೊಂದು ಅಂದರೆ ‘ಈ ಪ್ರಶ್ನೆ ಕೇಳುವಾಗ ನಾವು ಸ್ವತಃ ಹೀಗೆ ನಿಖರವಾಗಿ ಯಾವ ಕಾರ್ಯ ಮಾಡುತ್ತಿದ್ದೇವೆ, ಯಾವ ಆಧಾರದಲ್ಲಿ ನಾವು ಅವರಿಗೆ ಈ ಪ್ರಶ್ನೆ ಮಾಡುತಿದ್ದೇವೆ ?’, ಇದರ ಬಗ್ಗೆ ನಾವು ಪ್ರಾಮಾಣಿಕವಾಗಿ ಆತ್ಮಪರೀಕ್ಷಣೆ ಮಾಡೋಣ.

೫. ಆಪಸ್ವರ ಪರಿಹರಿಸುವುದು ಮಹತ್ವದ್ದು.

ಮನೆಯಲ್ಲಿನ ೨ ಹಿರಿಯರಲ್ಲಿ ಏನಾದರೂ ಅಪಸ್ವರ ಕಂಡರೆ, ನಾವು ಅದನ್ನು ಪರಿಹರಿಸುವ ಪ್ರಯತ್ನ ಮಾಡುತ್ತೇವೆ ಅಥವಾ ಸಾಧ್ಯವಾಗದೇ ಇದ್ದಾಗ ಮೌನವಾಗಿ ಇರುತ್ತೇವೆಯೋ ಅಥವಾ ವೃತ್ತದಲ್ಲಿ ಹೋಗಿ ಇದರ ಬಗ್ಗೆ ಡಂಗುರ ಸಾರುತ್ತೇವೆ ಮತ್ತು ಅವರಿಗೆ ಯದ್ವಾತದ್ವ ಬೈಯುತ್ತೇವೆಯೆ ? ಇದರ ಉತ್ತರ ಪ್ರತಿಯೊಬ್ಬರೂ ತಾವು ಸ್ವತಃ ಹುಡುಕಬೇಕು. ಒಂದು ಕಡೆ ಯಾರಾದರೂ ಓರ್ವ ಸಂಸದ ರಾಮಾಯಣದಲ್ಲಿನ ಸಂದರ್ಭದ ವಿಡಂಬನೆ ಮಾಡುವಾಗ ‘ನಿರ್ಲಕ್ಷಿಸೋಣ’, ಇಂತಹ ನಿಲುವು ತಾಳಿದರೆ ನಾವು ನಮ್ಮ ಧರ್ಮದಲ್ಲಿ ಸರ್ವೋಚ್ಚಸ್ಥಾನದ ಕುರಿತು ಮಾತ್ರ ಟೀಕಿಸುವಾಗ ಇಷ್ಟೊಂದು ಕೆಳಮಟ್ಟದ ಭಾಷೆ ಉಪಯೋಗಿಸಬೇಕೇ ? ಇದರ ಬಗ್ಗೆ ನನಗೆ ಅಂತರವೇ ಸಿಗುತ್ತಿಲ್ಲ.

೬. ಲಗಾಮ ಇಲ್ಲದೆ ಬರಿಯುವ ಭಾಷೆಗಿಂತಲೂ ರಾಮನಾಮ ಜಪಿಸುವುದು ಅವಶ್ಯಕ !

ನಾವು ಪ್ರತಿಯೊಂದು ವಿಷಯದ ಬಗ್ಗೆ ವ್ಯಕ್ತವಾಗಲೇ ಬೇಕೆ ? ೫೦೦ ವರ್ಷಗಳ ಸಂಘರ್ಷದ ನಂತರ ಭವ್ಯ ಮಂದಿರ ಕಟ್ಟಲಾಗುತ್ತಿದೆ. ನಾವು ಇಂತಹ ನಿರ್ಮಲ ಆನಂದ ಆಚರಿಸೋಣ. ಸರ್ವೋಚ್ಚ ಧಾರ್ಮಿಕ ಸ್ಥಾನದಲ್ಲಿನ ವ್ಯಕ್ತಿ ಏನು ಹೇಳುತ್ತಾರೆ, ಅದರ ಬಗ್ಗೆ ಟಿಕೆ ಟಿಪ್ಪಣಿ ಮಾಡುವಕಿಂತಲೂ ಅದೇ ಸಮಯ ವೈಯಕ್ತಿಕ ಉಪಾಸನೆಯಲ್ಲಿ ಉಪಯೋಗಿಸೋಣ ! ಇಲ್ಲೇ ಮಿತಿಮೀರಿದ ಭಾಷೆಯಲ್ಲಿ ಏನಾದರೂ ಬರೆಯುವ ಬದಲು ಅದೇ ಸಮಯ ರಾಮನ ನಾಮ ಜಪಿಸುವುದರಲ್ಲಿ ವ್ಯಯ ಮಾಡೋಣ. ‘ಪ್ರಸಾರ ಮಾಧ್ಯಮಗಳು ಉದ್ದೇಶ ಪೂರ್ವಕವಾಗಿ ಯಾವುದಾದರೂ ವಾತಾವರಣ ನಿರ್ಮಿಸುತ್ತಾರೆ, ಆಗ ಅದಕ್ಕೆ ನಾವು ಮರುಳಾಗಲೇಬೇಕು, ಹಿಗೇನು ನಿಯಮ ಇಲ್ಲ ಅಲ್ಲವೇ ? ಮಾ. ಪ್ರಧಾನ ಮಂತ್ರಿ ಯಮ, ನಿಯಮದ ಪಾಲನೆ ಮಾಡುತ್ತಾ ಮುಂದಿನ ೯ ದಿನ ಅನುಷ್ಠಾನದಲ್ಲಿ ಇರುವರು. ಅವರ ಬೆಂಬಲಿಗರು, ರಕ್ಷಕರು, ಹಿಂದುತ್ವನಿಷ್ಠರು ಎಂದಾದರೂ ಅವರ ಆದರ್ಶ ಇಡೋಣ. ನಂಬಿಕೆ ಇದ್ದರೆ ಇಂದೆ, ಈಗಲೇ, ತಕ್ಷಣ ಈ ವಿಷಯದ ಕುರಿತು ವ್ಯಕ್ತವಾಗುವುದನ್ನು ನಿಲ್ಲಿಸೋಣ. ಬಹಳ ವ್ಯಕ್ತಪಡಿಸುವ ಆಸೆ ಆದರೆ, ಆ ಸಮಯದಲ್ಲಿ ಒಂದು ಮಾಲೆ ರಾಮನಾಮದ ಜಪ ಮಾಡೋಣ. ಅತ್ಯಾವಶ್ಯಕವಾಗಿ ಇರುವುದರಿಂದ ನಾನು ಈ ವಿಷಯದ ಬಗ್ಗೆ ಸ್ಪಷ್ಟಪಡಿಸಿದ್ದೇನೆ. ಆದರೂ ಕೂಡ ಈ ಬರವಣಿಗೆ ಬರೆದಿರುವ ಪ್ರಾಯಶ್ಚಿತ್ತವೆಂದು ಒಂದು ಮಾಲೆ ಹೆಚ್ಚಾಗಿಯೇ ಜಪ ಮಾಡುವೆ. ನಿಮಗೆ ಇದು ಒಪ್ಪಿಗೆ ಇದೆಯೋ ನೋಡಿ.

ವೈದ್ಯ ಪರೀಕ್ಷಿತ ಶೇವಡೆ, ಆಯುರ್ವೇದ ವಾಚಸ್ಪತಿ , ಡೊಂಬಿವಲಿ (೧೩.೧.೨೦೨೪ )