ಪೋರ್ಟ್ ಲೂಯಿಸ್ – ಮಾರಿಷಸನಲ್ಲಿ ಜನವರಿ ೨೨ ರಂದು ನಡೆಯುವ ಶ್ರೀರಾಮ ದೇವಸ್ಥಾನದ ಪ್ರಾಣ ಪ್ರತಿಷ್ಠಾಪನೆಯ ಉತ್ಸವಕ್ಕಾಗಿ ೨ ಗಂಟೆ ವಿಶೇಷ ರಜೆ ಘೋಷಿಸಲಾಗಿದೆ. ಮಾರಿಷಸನಲ್ಲಿ ಕಾರ್ಯನಿರ್ವಹಿಸುವ ಹಿಂದುಗಳಿಗೆ ನೀಡಿರುವ ಎರಡು ಗಂಟೆಯ ವಿಶೇಷ ರಜೆಯ ಸಮಯದಲ್ಲಿ ಪ್ರಾಣ ಪ್ರತಿಷ್ಠಾಪನೆ ಉತ್ಸವದ ನೇರ ಪ್ರಸಾರ ಮತ್ತು ಪೂಜಾವಿಧಿ ಮುಂತಾದ ಕಾರ್ಯಕ್ರಮ ವೀಕ್ಷಿಸಬಹುದು. ಮಾರಿಷಸ ಸರಕಾರದ ಈ ನಿರ್ಣಯದಿಂದ ಅಲ್ಲಿಯ ಹಿಂದೂಗಳು ಆನಂದ ವ್ಯಕ್ತಪಡಿಸಿದ್ದಾರೆ. ಈ ನಿರ್ಣಯದಿಂದ ಅವರು ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠಾಪನೆ ಉತ್ಸವದ ಕ್ಷಣಗಳ ಸಾಕ್ಷಿದಾರರಾಗುವ ಅವಕಾಶ ದೊರೆಯುವುದು.
#Mauritius : 2 hours leave for Shri Ram Lalla’s consecration ceremony !
राम मंदिर प्राण प्रतिष्ठा I रामलला I मॉरिशस #RamtempleConsecration #RamMandirPranPratishtha pic.twitter.com/eUdCIcsWdT
— Sanatan Prabhat (@SanatanPrabhat) January 13, 2024
ಮಾರಿಷಸನಲ್ಲಿನ ಹಿಂದೂ ಸಂಘಟನೆಗಳಿಂದ ಜನವರಿ ೨೨ ರಂದು ೨ ಗಂಟೆಯ ವಿಶೇಷ ರಜೆ ಕುರಿತು ಸರಕಾರಕ್ಕೆ ವಿನಂತಿಸಿತ್ತು. ಮಾರಿಷಸನಲ್ಲಿ ಶೇಕಡ ೪೮.೫ ರಷ್ಟು ಹಿಂದೂಗಳಿದ್ದಾರೆ. ಹಿಂದೂ ಧರ್ಮದ ಆಚರಣೆ ಎಲ್ಲಕ್ಕಿಂತ ಹೆಚ್ಚಾಗಿ ಮಾಡಲಾಗುತ್ತಿರುವ ಆಫ್ರಿಕನ್ ಖಂಡದಲ್ಲಿ ಮಾರಿಷಸ ಇದು ಏಕೈಕ ದೇಶವಾಗಿದೆ. ಭಾರತ ಮತ್ತು ನೇಪಾಳ ಈ ದೇಶದ ನಂತರ ಮಾರೀಷಸನಲ್ಲಿ ಎಲ್ಲಕ್ಕಿಂತ ಹೆಚ್ಚು ಹಿಂದುಗಳು ವಾಸಿಸುತ್ತಿದ್ದಾರೆ.