ಬೆಂಗಳೂರು – ಹಿಂದೂ ಪೋಷಕರು ತಮ್ಮ ಮಕ್ಕಳ ಹೆಸರನ್ನು ಇಡುವಾಗ, ವೇದ, ರಾಮಾಯಣ, ಮಹಾಭಾರತ ಮತ್ತು ಪುರಾಣಗಳಿಂದ ಹೆಸರುಗಳನ್ನು ಆಯ್ಕೆ ಮಾಡಬೇಕು. ಇದರಿಂದ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪರಿಚಯವಾಗುತ್ತದೆ, ದೊಡ್ಡ ಪ್ರಮಾಣದಲ್ಲಿ ಮಕ್ಕಳ ಯೋಗ್ಯವಲ್ಲದ ಹೆಸರುಗಳನ್ನು ಬದಲಾಯಿಸುವ ಅಭಿಯಾನವನ್ನು ಕೈಕೊಳ್ಳಬೇಕು. ನಾವು (ಹಿಂದೂ)ಇಲ್ಲಿ ಶಾಶ್ವತವಾಗಿ ಉಳಿಯುವುದಿಲ್ಲ. ಇದರಿಂದ ನಾವು ನಮ್ಮ ಮಕ್ಕಳ ಮೇಲೆ ಸನಾತನ ಧರ್ಮದ ಸಂಸ್ಕಾರವನ್ನು ಮಾಡುವುದು ಆವಶ್ಯಕವಾಗಿದೆ. ಮುಂಬರುವ ಸಂತತಿಯ ಮೇಲೆ ಸಂಸ್ಕೃತಿಯ ಸಂಸ್ಕಾರವನ್ನು ಮಾಡಿದರೆ, ಹಿಂದೂ ಧರ್ಮದ ರಕ್ಷಣೆಯಾಗುವುದು ಎಂದು ಪೇಜಾವರ ಮಠದ ಸ್ವಾಮಿ ವಿಶ್ವಪ್ರಸನ್ನ ತೀರ್ಥರು ಹೇಳಿದ್ದಾರೆ.
Ram temple trust member urges people to select names for children from Hindu texts #RamTemple #Hindu #News #NewsUpdate https://t.co/Xa64FGraBb
— Mid Day (@mid_day) January 9, 2024
ಶ್ರೀರಾಮ ಮಂದಿರದ ರಕ್ಷಣೆ, ಹಿಂದೂಗಳ ಮೇಲೆ ಇರುವ ದೊಡ್ಡ ಜವಾಬ್ದಾರಿ !
ಅವರು ತಮ್ಮ ಮಾತನ್ನು ಮುಂದುವರಿಸಿ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಕನಸು ನನಸಾಗಿದ್ದರೂ, ನಮ್ಮ ಜವಾಬ್ದಾರಿ ಮುಗಿಯಿತು ಎಂದು ಹಿಂದೂಗಳು ತಿಳಿಯಬಾರದು. ಭವಿಷ್ಯದಲ್ಲಿ ಈ ಮಂದಿರಕ್ಕೆ ಯಾರೂ ಹಾನಿಯನ್ನು ಮಾಡದಂತಹ ರಕ್ಷಣೆಯ ರಚನೆಯನ್ನು ನಿರ್ಮಿಸುವ ಜವಾಬ್ದಾರಿ ಹಿಂದೂಗಳದ್ದಾಗಿದೆ. ಎಲ್ಲಿಯವರೆಗೆ ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿರುವರೋ, ಅಲ್ಲಿಯವರೆಗೆ ಈ ದೇವಾಲಯವು ಅಸ್ತಿತ್ವದಲ್ಲಿರುತ್ತದೆ. ಅಫ್ಘಾನಿಸ್ತಾನದಲ್ಲಿ ಏನಾಗುತ್ತಿದೆ ಎಂಬುದನ್ನು ನಾವು ಗಮನಿಸಿದ್ದೇವೆ. ಅಲ್ಲಿ ಜಿಹಾದಿ ಭಯೋತ್ಪಾದಕರು ಬುದ್ಧನ ಪ್ರತಿಮೆಯನ್ನು ಧ್ವಂಸಗೊಳಿಸಿದರು. ಆದುದರಿಂದ ದೇವಸ್ಥಾನವನ್ನು ನಿರ್ಮಾಣ ಮಾಡುವುದು ಕಷ್ಟದ ಕೆಲಸವಲ್ಲ, ಅದನ್ನು ರಕ್ಷಿಸುವುದು ಕಷ್ಟವಾಗಿದ್ದೂ ಅದರ ಜವಾಬ್ದಾರಿ ಹಿಂದೂಗಳ ಮೇಲಿದೆ ಎಂದು ಹೇಳಿದರು.