ಅಮರಾವತಿಯ ಜಗದ್ಗುರು ಸ್ವಾಮಿ ರಾಮ ರಾಜೇಶ್ವರಾಚಾರ್ಯ ಮಹಾರಾಜರಿಗೆ ಜೀವ ಬೆದರಿಕೆ !

ಮಹಾರಾಜರಿಗೆ ಪೊಲೀಸ್ ರಕ್ಷಣೆ ನೀಡುವಂತೆ ಅನುಯಾಯಿಗಳ ಆಗ್ರಹ

ಅಮರಾವತಿ – ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀ ರಾಮಲಲಾನ ಪ್ರಾಣಪ್ರತಿಷ್ಠಾಪನೆಯ ಸಮಾರಂಭಕ್ಕೆ ರುಕ್ಮಿಣಿ ವಿದರ್ಭ ಪೀಠದ ಪೀಠಾಧೀಶ್ವರ ಜಗದ್ಗುರು ಸ್ವಾಮಿ ರಾಮ್ ರಾಜೇಶ್ವರಾಚಾರ್ಯ ಮಹಾರಾಜ್ ಅವರಿಗೆ ಆಹ್ವಾನ ನೀಡಲಾಗಿದೆ. ಇದಾದ ಬಳಿಕ ಪತ್ರದ ಮೂಲಕ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಕುರಿತು ಮಹಾರಾಜರ ಅನುಯಾಯಿಗಳು ಅಪರಿಚಿತ ವ್ಯಕ್ತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

“ಆಪ್ ಜೊ ಅಯೋಧ್ಯಾ, ಅಯೋಧ್ಯಾ ಕರ ರಹೆ ಹೊ, ವಹ ಆಪಕೊ ಮಹಂಗಾ ಪಡೆಗಾ ಆಜ ನಹೀ ತೊ ಕಲ, ಕುಛ ದಿನೊ ಮೆ ಆಪಕಾ ಅಂತ ನಿರ್ಶಚಿತ ಹೆ’ (ನೀವೇನು ಅಯೋಧ್ಯೆ, ಅಯೋಧ್ಯೆ ಅಂತ ಮಾಡುತ್ತಿದ್ದಿರೋ ಅದರ ಬೆಲೆ ತೆತ್ತಬೇಕಾಗಬಹುದು, ಇಂದು ಅಥವಾ ಕೆಲವೇ ದಿನಗಳಲ್ಲಿ ನಿಮ್ಮ ಸಾವು ನಿಶ್ಚಿತ.) ಎಂದು ಪತ್ರದಲ್ಲಿ ಬರೆಯಲಾಗಿದೆ. ಆ ಪತ್ರವನ್ನು ಯಾರು ಕಳುಹಿಸಿದ್ದಾರೆ ಎಂದು ಪತ್ರದಲ್ಲಿ ನಮೂದಿಸಿಲ್ಲ. ‘ಈ ಘಟನೆಯ ಗಂಭೀರತೆಯನ್ನು ಪರಿಗಣಿಸಿ ಜಗದ್ಗುರು ಸ್ವಾಮಿ ರಾಮರಾಜೇಶ್ವರಾಚಾರ್ಯ ಮಹಾರಾಜರಿಗೆ ಆಡಳಿತದಿಂದ ಕೂಡಲೇ ಪೊಲೀಸ್ ರಕ್ಷಣೆ ನೀಡಬೇಕು’ ಎಂದು ವಿದರ್ಭ ಪೀಠ ಹಾಗೂ ಜಿಲ್ಲೆಯ ವಿವಿಧ ಸಂಘಟನೆಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ನೀಡಿವೆ.

ಸಂಪಾದಕೀಯ ನಿಲುವು

ಇದು ಹಿಂದೂಗಳ ಧರ್ಮಗುರುಗಳಿಗೆ ಗುರಿಯಾಗಿಸಿಕೊಂಡು ಹಿಂದೂಗಳನ್ನು ದಾರಿ ತಪ್ಪಿಸುವ ಸಂಚಾಗಿದೆ. ಸರಕಾರ ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸಿ ಸಂತ, ಮಹಂತರ ರಕ್ಷಣೆಗೆ ಮುಂದಾಗಬೇಕು !