ಮುಂಬಯಿ – ಭಗವಾನ್ ಶ್ರೀ ರಾಮ ಮತ್ತೆ ಅಯೋಧ್ಯೆಯ ಭೂವೈಕುಂಠದಲ್ಲಿ ಅವತರಿಸುವ ಪರಮ ದಿವ್ಯ ಕ್ಷಣ ಹತ್ತಿರ ಬರುತ್ತಿದೆ. ಆದ್ದರಿಂದ ದೇಶಾದ್ಯಂತ ಬಹಳ ಆನಂದದ ಮತ್ತು ರಾಮಮಯ ವಾತಾವರಣ ನಿರ್ಮಾಣವಾಗಿದೆ. ಇದರ ಹಿನ್ನೆಲೆಯಲ್ಲಿ ಹಿಂದೂ ಜನ ಜಾಗೃತಿ ಸಮಿತಿಯಿಂದ ‘ದೇಶಾದ್ಯಂತ ರಾಮರಾಜ್ಯಕಾಗಿ ಪ್ರಾರ್ಥನೆ ಮಾಡುವುದರ ಜೊತೆಗೆ ಸ್ಥಳೀಯ ದೇವಸ್ಥಾನದ ಸ್ವಚ್ಛತೆ ಮಾಡುವ ಉಪಕ್ರಮ ಹಮ್ಮಿಕೊಳ್ಳಲಾಗುವುದು’, ಹೀಗೆ ಜನಜಾಗೃತಿ ಸಮಿತಿಯಿಂದ ಪ್ರಸಿದ್ಧಿಗೊಳಿಸುವ ಕರಪತ್ರದ ಮೂಲಕ ಮಾಹಿತಿ ನೀಡಿದೆ. ಕಳೆದ ಅನೇಕ ವರ್ಷಗಳಿಂದ ವಿವಿಧ ಪ್ರಸಂಗಗಳಲ್ಲಿ ಸಮಿತಿಯ ವತಿಯಿಂದ ದೇಶಾದ್ಯಂತ ದೇವಸ್ಥಾನ ಸ್ವಚ್ಛತಾ ಅಭಿಯಾನ ನಡೆಸಲಾಗುತ್ತದೆ. ಈ ಸಮಯದಲ್ಲಿ ಸ್ವತಃ ಭಾರತದ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಇವರು ಕೂಡ ದೇವಸ್ಥಾನದ ಸ್ವಚ್ಛತೆಯ ಅಭಿಯಾನ ನಡೆಸಲು ಕರೆ ನೀಡಿದ್ದಾರೆ. ಈ ವರ್ಷ ಕೂಡ ಹಿಂದೂ ಜನಜಾಗೃತಿ ಸಮಿತಿಯಿಂದ ಜನವರಿ ೧೫ ರಿಂದ ೨೧ ಈ ಕಾಲಾವಧಿಯಲ್ಲಿ ದೇಶಾದ್ಯಂತ ಇರುವ ಸ್ಥಳೀಯ ದೇವಸ್ಥಾನ ಸ್ವಚ್ಛತೆ ಉಪಕ್ರಮ ನಡೆಸಲಾಗುವುದು. ದೇವಸ್ಥಾನದ ಸ್ವಚ್ಛತೆ ಮಾಡಿದ ನಂತರ ಒಟ್ಟಾಗಿ ಸೇರಿರುವ ಎಲ್ಲಾ ಹಿಂದುಗಳು ರಾಮರಾಜ್ಯ ಮತ್ತು ಹಿಂದೂ ರಾಷ್ಟ್ರದ ಪ್ರತಿಜ್ಞೆ ಮಾಡುವರು. ಕೊನೆಗೆ ಶ್ರೀ ರಾಮನ ಚರಣಗಳಲ್ಲಿ ಮನಪೂರ್ವಕ ಕೃತಜ್ಞತೆ ವ್ಯಕ್ತಪಡಿಸಲಾಗುವುದು.
.@HinduJagrutiOrg to undertake nationwide temple cleaning campaign from January 15th to 21st !
जय श्रीराम I अयोध्या I राम मंदिर प्राण प्रतिष्ठा I हर घर श्री राम #RamMandirPranPratishtha #SwachhTeerth pic.twitter.com/hNQTPjihPW
— Sanatan Prabhat (@SanatanPrabhat) January 14, 2024
ಪ್ರತಿಯೊಂದು ಮನೆಯಲ್ಲಿ ದೀಪ ಮತ್ತು ಕೇಸರಿ ಧ್ವಜ !
ಜನವರಿ ೨೨ ರಂದು ಸಮಿತಿಯ ಎಲ್ಲಾ ಕಾರ್ಯಕರ್ತರು, ಹಾಗೂ ಸಮವಿಚಾರಿ ಹಿಂದುತ್ವನಿಷ್ಠ ಮತ್ತು ರಾಮಭಕ್ತರು ಅವರ ನಿವಾಸದಲ್ಲಿ ಪ್ರಭು ಶ್ರೀರಾಮನಿಗಾಗಿ ದೀಪಾವಳಿಯಂತೆ ದೀಪ ಹಚ್ಚುವರು. ಹಾಗೂ ಮನೆಯ ಅಂಗಳದಲ್ಲಿ ಶ್ರೀರಾಮ ತತ್ವದ ಸಾತ್ವಿಕ ರಂಗೋಲಿ ಹಾಕುವುದು, ಮನೆಯ ಮೇಲೆ ಕೇಸರಿ ಧ್ವಜ ಹಾರಿಸುವುದು. ಶ್ರೀರಾಮನ ಪೂಜೆ ಭಕ್ತಿಭಾವದಿಂದ ಮಾಡುವುದು ಮತ್ತು ರಾಮರಾಜ್ಯಕ್ಕಾಗಿ ಸಾಮೂಹಿಕ ಪ್ರಾರ್ಥನೆ ಮುಂತಾದ ಕೃತಿಗಳು ಮಾಡುವುದು. ಅದರ ಜೊತೆಗೆ ಇತರ ಧಾರ್ಮಿಕ ಸಂಸ್ಥೆ ಮತ್ತು ಹಿಂದೂ ಸಂಘಟನೆಗಳಿಂದ ನಡೆಸಲಾಗುವ ಕಲಶಯಾತ್ರೆ, ಅಕ್ಷತಾ ವಿತರಣೆ ಮುಂತಾದ ಉಪಕ್ರಮಗಳಲ್ಲಿ ಯಥಾಶಕ್ತಿ ಸಹಭಾಗ ಮಾಡಲಾಗುವುದು.