ಕೊಲೆಗಾರರಿಗೆ ತಿಂಗಳೊಳಗೆ ಗಲ್ಲು ಶಿಕ್ಷೆ ಆಗಲಿ, ಇದಕ್ಕಾಗಿ ಕೇಂದ್ರ ಸರಕಾರದ ಜೊತೆಗೆ ಚರ್ಚಿಸುವೆವು ! – ಗಹಲೋತ

ಜೂನ್ ೩೦ ರಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗಹಲೋತ ಇವರು ಜಿಹಾದಿಗಳು ಕೊಲೆ ಮಾಡಿರುವ ಕನ್ಹೈಯ್ಯಲಾಲ ಅವರ ಮನೆಗೆ ಹೋಗಿ ಅವರ ಕುಟುಂಬದವರನ್ನು ಭೇಟಿ ಮಾಡಿದರು. ಕನ್ಹೈಯ್ಯಲಾಲ ಇವರಿಗೆ ಶ್ರದ್ಧಾಂಜಲಿ ಅರ್ಪಿಸಿ, ರಾಷ್ಟ್ರೀಯ ತನಿಖಾ ದಳವು ಈ ಘಟನೆಯ ಅನ್ವೇಷಣೆ ಪ್ರಾರಂಭಿಸಿದೆ.

ಏಕನಾಥ ಶಿಂದೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ !

ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯದಲ್ಲಿ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಶಿವಸೇನೆಯಿಂದ ಬೇರ್ಪಟ್ಟ ನಾಯಕ ಏಕನಾಥ ಶಿಂದೆ ಅವರು ಜೂನ್ ೩೦ ರಂದು ಮಹಾರಾಷ್ಟ್ರದ ೩೦ ನೇ ನೂತನ ಮುಖ್ಯಮಂತ್ರಿಯಾಗಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅದೇ ರೀತಿ ಉಪಮುಖ್ಯಮಂತ್ರಿ ಎಂದು ದೇವೇಂದ್ರ ಫಡಣವಿಸ ಇವರು ಪ್ರಮಾಣವಚನ ಸ್ವೀಕರಿಸಿದರು.

ಪನಿರಸೆಲ್ವಮ್ ಇವರ ಗುಂಪಿನ ಮೇಲೆ ಬಾಟಲಿ ಎಸೆದ ಪಳನಿಸಾಮಿ ಗುಂಪು !

೨೦೧೬ ರಲ್ಲಿ ಅಣ್ಣಾದ್ರಮುಕನ ಮುಖ್ಯಸ್ಥೆ ಜೆ. ಜಯಲಲಿತಾ ನಿಧನರಾದಾಗಿನಿಂದಲೂ ಅಣ್ಣಾದ್ರಮುಕ ಪ್ರಕ್ಷದ ಮುಖ್ಯಸ್ಥ ಯಾರಾಗಬೇಕೆಂಬುದರ ಬಗ್ಗೆ ಪಕ್ಷದೊಳಗೆ ಘರ್ಷಣೆ ನಡೆಯುತ್ತಿದೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಸಿನಿಂದ ಕಾರ್ಯಕರ್ತರಿಗೆ ಶ್ರೀರಾಮನವಮಿ ಹಾಗೂ ಹನುಮಾನ ಜಯಂತಿಯನ್ನು ಆಚರಿಸುವಂತೆ ಆದೇಶ

ಮಧ್ಯಪ್ರದೇಶದಲ್ಲಿನ ಕಾಂಗ್ರೆಸ್ಸಿನ ನೇತಾರರು ಹಾಗೂ ಮಾಜಿ ಮುಖ್ಯಮಂತ್ರಿ ಕಮಲನಾಥರವರು ಪಕ್ಷದ ಕಾರ್ಯಕರ್ತರಿಗೆ ಶ್ರೀರಾಮನವಮಿ ಮತ್ತು ಹನುಮಾನ ಜಯಂತಿಯನ್ನು ಆಚರಿಸಲು ಲಿಖಿತ ಆದೇಶ ನೀಡಿದ್ದಾರೆ. ಈ ವಿಷಯದಲ್ಲಿ ಕಾಂಗ್ರೆಸ್ಸಿನ ಶಾಸಕರಾದ ಆರೀಫ ಮಸೂದರವರು ಆಕ್ಷೇಪವೆತ್ತಿ ‘ಇಂತಹ ಆದೇಶದಿಂದಾಗಿ ತಪ್ಪು ರೂಢಿ ನಿರ್ಮಾಣವಾಗುವುದು, ಎಂದು ಹೇಳಿದ್ದಾರೆ.

ಮಮತಾ ಬ್ಯಾನರ್ಜಿಯವರಿಂದ ಎಲ್ಲಾ ವಿರೋಧ ಪಕ್ಷದವರನ್ನು ಕೇಂದ್ರೀಯ ತನಿಖಾ ವ್ಯವಸ್ಥೆಯ ವಿರುದ್ಧ ಸಂಘಟಿತವಾಗಲು ಪುಕ್ಕಟ್ಟಿನ ಕರೆ !

`ತನಿಖಾ ವ್ಯವಸ್ಥೆಯಿಂದ ಪಕ್ಷ ಮಾಡಿರುವ ಭ್ರಷ್ಟಾಚಾರ ಮತ್ತು ರಾಷ್ಟ್ರದ್ರೋಹಿ ಕಾರ್ಯಾಚರಣೆಗಳು ಬೆಳಕಿಗೆ ಬರುವುದು’, ಈ ಭಯದಿಂದ ಬ್ಯಾನರ್ಜಿ ತನಿಖಾ ವ್ಯವಸ್ಥೆಯನ್ನು ವಿರೋಧಿಸುತ್ತಿದ್ದಾರೆ, ಎಂಬುದನ್ನು ಅರಿಯರಿ !

ವಿಧಾನಸಭೆ ಚುನಾವಣೆಯಲ್ಲಿ ಭಾಜಪದ ಗೆಲುವು ಸಾಧಿಸಿದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಮತಾಂಧರಿಂದ ದಲಿತರ ಮೇಲೆ ಟೀಕೆ

ದಲಿತರು `ಹಿಂದೂ ರಾಷ್ಟ್ರಕ್ಕಾಗಿ’ ಮತದಾನ ಮಾಡಿದ್ದಾರೆ ಎಂದು ಟಿಕೆ !

‘ಈಗ ದೇಶದಲ್ಲಿ ಸಂಪೂರ್ಣ ಕ್ರಾಂತಿ ತರುವುದಿದೆ !’ (ಅಂತೆ) – ಅರವಿಂದ ಕೇಜ್ರಿವಾಲ

‘ಆಪ’ ಪಂಜಾಬದಲ್ಲಿ ಖಲಿಸ್ತಾನಿ ಉಗ್ರರ ಬೇರೂ ಸಮೇತ ಹೇಗೆ ಕಿತ್ತು ಓಗೆಯಲಿದೆ ? ಇದನ್ನು ಅವರು ಜನರಿಗೆ ತಿಳಿಸಬೇಕು !

ಮಾರ್ಚ್ ೨೦೨೨ ರಲ್ಲಿ ನೈಸರ್ಗಿಕ ಮತ್ತು ರಾಜಕೀಯ ಭೂಕಂಪ ಸಂಭವಿಸುವ ಸಾಧ್ಯತೆ !

ಗ್ರಹ ಮತ್ತು ನಕ್ಷತ್ರಗಳ ಸ್ಥಿತಿಗಳಿಂದಾಗಿ ಮಾರ್ಚ್ ೨೦೨೨ರ ತಿಂಗಳಲ್ಲಿ ದೇಶದಲ್ಲಿ ನೈಸರ್ಗಿಕ ಮತ್ತು ರಾಜಕೀಯ ಭೂಕಂಪ ಸಂಭವಿಸುವ ಸಾಧ್ಯತೆಯನ್ನು ‘ಜ್ಯೋತಿಷ್ಯ ಜ್ಞಾನ’ ಈ ತ್ರೈಮಾಸಿಕದಲ್ಲಿ ಜ್ಯೋತಿಷಿ ಸಿದ್ಧೆಶ್ವರ ಮಾರಟಕರ ಇವರು ಭವಿಷ್ಯ ನುಡಿದಿದ್ದಾರೆ.

‘ಮಂಗಳಸೂತ್ರವು ಹಿಂದೂ ಮಹಿಳೆಯರ ಗುರುತಾಗಿರುವಂತೆಯೇ ಹಿಜಾಬ್ ಮುಸಲ್ಮಾನ ಮಹಿಳೆಯರ ಗುರುತಾಗಿದೆ !’ – ಕಾಂಗ್ರೆಸ್‌ನ ಶಾಸಕ ಟಿ.ಎನ್. ಪ್ರತಾಪನ್

ಯಾವುದನ್ನು ಯಾವುದರ ಜೊತೆಗೆ ಹೋಲಿಸಬೇಕು ಎಂಬುದೇ ತಿಳಿಯದಿರುವ ಕಾಂಗ್ರೆಸ್ಸಿನ ಶಾಸಕ ಪ್ರತಾಪನ್ ! ಈ ರೀತಿಯಲ್ಲಿ ಹೋಲಿಕೆ ಮಾಡಿ ಪ್ರತಾಪನರವರು ಮಹಾವಿದ್ಯಾಲಯದಲ್ಲಿ ಹಿಜಾಬ್ ಹಾಕುವುದನ್ನು ಬೆಂಬಲಿಸಲು ಸಾಧ್ಯವಿಲ್ಲ, ಎಂಬುದನ್ನು ಅವರು ಗಮನದಲ್ಲಿಡಬೇಕು !

‘ಮೋದಿ’ಯವರ ಭದ್ರತೆಯಲ್ಲಿ ಅಕ್ಷಮ್ಯ ಲೋಪ !

‘ಪ್ರಧಾನಿ ಯಾವ ಮಾರ್ಗದಲ್ಲಿ ಹೋಗುತ್ತಾರೆ ಎಂಬುದು ಆಂದೋಲನ ಮಾಡುತ್ತಿದ್ದ ರೈತರಿಗೆ ಹೇಗೆ ಗೊತ್ತಾಯಿತು ?’, ಎಂಬುದರ ತನಿಖೆಯಾಗಬೇಕು. ಪ್ರಧಾನಿಯವರ ಭೇಟಿಯ ಮಾಹಿತಿಯು ಪಂಜಾಬ ಸರಕಾರದ ಸಂಬಂಧಪಟ್ಟ ಸಚಿವರು, ಆಡಳಿತ ಅಧಿಕಾರಿಗಳು ಮತ್ತು ಪಂಜಾಬ ಪೊಲೀಸರ ಹಿರಿಯ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿತ್ತು.