‘ಈಗ ದೇಶದಲ್ಲಿ ಸಂಪೂರ್ಣ ಕ್ರಾಂತಿ ತರುವುದಿದೆ !’ (ಅಂತೆ) – ಅರವಿಂದ ಕೇಜ್ರಿವಾಲ

‘ಆಪ’ ಪಂಜಾಬದಲ್ಲಿ ಖಲಿಸ್ತಾನಿ ಉಗ್ರರ ಬೇರೂ ಸಮೇತ ಹೇಗೆ ಕಿತ್ತು ಓಗೆಯಲಿದೆ ? ಇದನ್ನು ಅವರು ಜನರಿಗೆ ತಿಳಿಸಬೇಕು !

ನವ ದೆಹಲಿ – ಪಂಜಾಬನ ಜನರು ಅದ್ಭುತವಾಗಿಯೇ ಮಾಡಿದ್ದಾರೆ. ಈ ಫಲಿತಾಂಶ ಎಂದರೆ ಒಂದು ದೊಡ್ಡ ಕ್ರಾಂತಿಯೇ ಆಗಿದೆ. ಶಿರೋಮಣಿ ಅಕಾಲಿದಳದ ಸುಖಬಿರ ಸಿಂಹ ಬಾದಲ್, ಕ್ಯಾಪ್ಟನ್ ಅಮರಿಂದರ್ ಸಿಂಹ, ಚಿರಣಜಿತ ಸಿಂಹ ಚನ್ನಿ, ಪ್ರಕಾಶ ಸಿಂಹ ಬಾದಲ, ನವಜ್ಯೋತ್ ಸಿಂಹ ಸಿದ್ದು ಮತ್ತು ವಿಕ್ರಂಸಿಂಹ ಮಜಿಠೀಯಾ ಇಂತಹ ದೊಡ್ಡ ಮುಖಂಡರು ಸೋತಿದ್ದಾರೆ. ಇದು ಒಂದು ದೊಡ್ಡ ಕ್ರಾಂತಿಯೇ ಆಗಿದೆ. ಇದು ಆಮ್ ಆದ್ಮಿ ಪಕ್ಷವಾಗಿದೆ, ಇದಕ್ಕೆ ಸವಾಲು ನೀಡಬೇಡಿ. ದೇಶದ ೭೫ ವರ್ಷ ವ್ಯರ್ಥವಾಗಿವೆ. ಇನ್ನು ವರ್ಷಗಳು ವ್ಯರ್ಥವಾಗಬಾರದು. ಈಗ ದೇಶದಲ್ಲಿ ಸಂಪೂರ್ಣ ಕ್ರಾಂತಿಯೇ ತರುವುದಿದೆ. ದೆಹಲಿ ಮತ್ತು ಪಂಜಾಬನ ಈ ಕ್ರಾಂತಿ ಸಂಪೂರ್ಣ ದೇಶದಲ್ಲಿ ಹರಡಲಿದೆ. ಎಲ್ಲಾ ಮಹಿಳೆಯರು, ಯುವಕರು ಮತ್ತು ರೈತರು ಇವರು ‘ಆಪ’ಗೆ ಬರಬೇಕು, ಎಂದು ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇವರು ಪಂಜಾಬನಲ್ಲಿ ಅವರ ಪಕ್ಷಕ್ಕೆ ಸಿಕ್ಕಿರುವ ಬಹುಮತದನಂತರ ಕರೆ ನೀಡಿದರು. ಅವರು ಅವರ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದರು.

ಕೇಜ್ರಿವಾಲ್ ಮಾತನ್ನು ಮುಂದುವರೆಸುತ್ತಾ,

೧. ಪಂಜಾಬದಲ್ಲಿ ನಮಗೆ ಬಹಳ ದೊಡ್ಡ ಗೆಲುವು ಸಿಕ್ಕಿದೆ. ಈಗ ಜನರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸದ ಅಹಂಕಾರ ರೂಪ ತಾಳಬಾರದು.

೨. ಕೆಲವು ಜನರು ನನ್ನನ್ನು ಬಯ್ಯುತ್ತಾರೆ. ಕೇಜ್ರಿವಾಲ್ ಕಪ್ಪಾಗಿದ್ದಾರೆ. ಕೇಜ್ರಿವಾಲ್ ಭಯೋತ್ಪಾದಕನಾಗಿದ್ದಾನೆ; ಆದರೆ ನಾವು ಅವರನ್ನು ಎಂದಿಗೂ ಬೈಯುವುದಿಲ್ಲ. ನಾವು ಉದ್ಧಟವಾಗಿಯೂ ವರ್ತಿಸುವುದಿಲ್ಲ. ನಾವು ಬೈಗುಳದ ಉತ್ತರ ಬೈಗುಳದಿಂದ ನೀಡುವುದಿಲ್ಲ. ಯಾರು ನಮಗೆ ಬೈಯುವರು ನೀವು ಅವರಿಗೆ ನೀವು, ‘ನಿಮ್ಮ ಬೈಗುಳ ನಿಮಗೆ ಇದೆ; ಅವು ನಮಗೆ ಒಪ್ಪಿಗೆ ಇಲ್ಲ.’ ಎಂದು ಹೇಳಿರಿ.

೩. ಇಂದು ನಮ್ಮ ಮಕ್ಕಳಿಗೆ ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್‌ಗೆ ಹೋಗಬೇಕಾಗುತ್ತಿದೆ; ಆದರೆ ನಾವು ಇಂತಹ ಭಾರತವನ್ನು ನಿರ್ಮಿಸೋಣ, ಅಲ್ಲಿ ಎಲ್ಲಾ ಮಕ್ಕಳಿಗೆ ಶಿಕ್ಷಣ ದೊರೆಯಲಿದೆ.