ಬ್ಯಾಂಕುಗಳಿಗೆ ಕೋಟ್ಯಾಂತರ ರೂಪಾಯಿಗಳ ಮೋಸ ಮಾಡಿ ಪರಾರಿಯಾಗಿರುವ ನೀರವ ಮೋದಿಯ ಹಸ್ತಾಂತರ ಪ್ರಕ್ರಿಯೆ ಮತ್ತು ನ್ಯಾಯಾಲಯದ ನಿಲುವು

‘ಪಂಜಾಬ ನ್ಯಾಶನಲ್ ಬ್ಯಾಂಕ್ ಸಹಿತ ಇತರ ಬ್ಯಾಂಕುಗಳಿಗೆ ಕೋಟ್ಯಾಂತರ ರೂಪಾಯಿಗಳನ್ನು ಮೋಸ ಮಾಡಿ ಇಂಗ್ಲೆಂಡಿಗೆ ಓಡಿ ಹೋಗಿರುವ ವಜ್ರಗಳ ವ್ಯಾಪಾರಿ ನೀರವ ಮೋದಿಯನ್ನು ಭಾರತಕ್ಕೆ ವಾಪಸ್ಸು ತರುವವರಿದ್ದಾರೆ. ಲಂಡನ್ನಿನ ವೆಸ್ಟ ಮಿನಿಸ್ಟರ್ ನ್ಯಾಯಾಲಯವು ಅವನನ್ನು ಹಸ್ತಾಂತರಿಸುವ ಮಾರ್ಗವನ್ನು ಇತ್ತೀಚೆಗಷ್ಟೇ ಸುಗಮಗೊಳಿಸಿದೆ.

ಕಾಶ್ಮೀರ ಕಣಿವೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಸಭೆಯನ್ನು ಕರೆದಿರುವ ಕೇಂದ್ರ ಸರಕಾರ !

೨೦೧೯ ರ ಆಗಸ್ಟ್‍ನಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ೩೭೦ ನೇ ವಿಧಿಯನ್ನು ಕೇಂದ್ರ ಸರಕಾರವು ರದ್ದುಪಡಿಸಿದ ನಂತರ ಮೊದಲ ಬಾರಿಗೆ ಕಾಶ್ಮೀರ ಕಣಿವೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಸಭೆಯನ್ನು ಜೂನ್ ೨೪ ರಂದು ಕರೆಯಲಾಗಿದೆ. ಸಭೆಯು ದೆಹಲಿಯಲ್ಲಿ ನಡೆಯಲಿದೆ.

ಕಾಂಗ್ರೆಸ್ ಸಂಸದ ಸುಧಾಕರನ್ ೫೦ ವರ್ಷಗಳ ಹಿಂದೆ ನನ್ನ ಮಕ್ಕಳನ್ನು ಅಪಹರಿಸುವ ಸಂಚು ರೂಪಿಸಿದ್ದರು ! – ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆರೋಪ

ವಿಜಯನ್ ಅವರು ಆರೋಪ ಮಾಡುವಾಗ ಕಾಂಗ್ರೆಸ್ ಮುಖಂಡ ಪಿ. ರಾಮಕೃಷ್ಣನ್ ಮತ್ತು ಎಂ. ದಿವಾಕರನ್ ಸ್ವತಃ ಸುಧಾಕರನ್ ಅವರನ್ನು ಭ್ರಷ್ಟ, ಕೊಲೆಗಾರ ಮತ್ತು ಅಪಹರಣಕಾರ ಎಂದು ಹೇಳಿದ್ದರು. ಕಣ್ಣೂರಿನಲ್ಲಿ ಪಕ್ಷದ ಕಚೇರಿ ನಿರ್ಮಾಣದ ವೇಳೆ ಸುಧಾಕರನ್ ಅವರ ಮೇಲೆ ಭ್ರಷ್ಟಾಚಾರದ ಆರೋಪವಿದೆ ಎಂದೂ ಹೇಳಿದರು.

ಬಿಹಾರದ ಚಿರಾಗ್ ಪಾಸ್ವಾನ್ ರ ವಿರುದ್ಧ ಲೋಕ ಜನಶಕ್ತಿ ಪಕ್ಷದ ಐದೂ ಸಂಸದರಿಂದ ಬಂಡಾಯ !

ಬಿಹಾರದ ಲೋಕ ಜನಶಕ್ತಿ ಪಕ್ಷದ ಮುಖಂಡ ರಾಮ ವಿಲಾಸ ಪಾಸ್ವಾನ್ ಅವರ ನಿಧನದ ನಂತರ ಅವರ ಪಕ್ಷವು ವಿಭಜನೆಯ ಹಾದಿಯಲ್ಲಿದೆ. ಪಕ್ಷದ ಎಲ್ಲಾ ಐದು ಸಂಸದರು ರಾಮ ವಿಲಾಸ ಪಾಸ್ವಾನ್ ಅವರ ಪುತ್ರ ಮತ್ತು ಅವರ ರಾಜಕೀಯ ಉತ್ತರಾಧಿಕಾರಿ ಚಿರಾಗ್ ಪಾಸ್ವಾನ್ ವಿರುದ್ಧ ಬಂಡಾಯ ಎದ್ದಿದ್ದಾರೆ.