ಕೊಲೆಗಾರರಿಗೆ ತಿಂಗಳೊಳಗೆ ಗಲ್ಲು ಶಿಕ್ಷೆ ಆಗಲಿ, ಇದಕ್ಕಾಗಿ ಕೇಂದ್ರ ಸರಕಾರದ ಜೊತೆಗೆ ಚರ್ಚಿಸುವೆವು ! – ಗಹಲೋತ

  • ಉದಯಪುರದ ಕನ್ಹೈಯ್ಯಲಾಲ ಶಿರಚ್ಛೇಧ ಪ್ರಕರಣ
  • ಕೊಲೆಗಾರರ ಪರ ವಕಾಲತ್ತು ವಹಿಸಲು ನ್ಯಾಯವಾದಿಗಳ ನಿರಾಕರಣೆ

ಉದಯಪುರ (ರಾಜಸ್ಥಾನ) – ಜೂನ್ ೩೦ ರಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗಹಲೋತ ಇವರು ಜಿಹಾದಿಗಳು ಕೊಲೆ ಮಾಡಿರುವ ಕನ್ಹೈಯ್ಯಲಾಲ ಅವರ ಮನೆಗೆ ಹೋಗಿ ಅವರ ಕುಟುಂಬದವರನ್ನು ಭೇಟಿ ಮಾಡಿದರು. ಕನ್ಹೈಯ್ಯಲಾಲ ಇವರಿಗೆ ಶ್ರದ್ಧಾಂಜಲಿ ಅರ್ಪಿಸಿ, ರಾಷ್ಟ್ರೀಯ ತನಿಖಾ ದಳವು ಈ ಘಟನೆಯ ಅನ್ವೇಷಣೆ ಪ್ರಾರಂಭಿಸಿದೆ. ಒಂದು ತಿಂಗಳ ಒಳಗೆ ಜಿಹಾದಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ರಾಜ್ಯ ಸರಕಾರದ ಇಚ್ಛೆ ಇದೆ. ಇದಕ್ಕಾಗಿ ನಾವು ಕೇಂದ್ರ ಸರ್ಕಾರದ ಜೊತೆಗೆ ಚರ್ಚಿಸುವೆವು. ಈ ಸಮಯದಲ್ಲಿ ಮುಖ್ಯ ಸಚಿವರಾದ ಉಷಾ ವರ್ಮ ಇವರು ಕನ್ಹೈಯ್ಯಲಾಲ ಇವರ ಪತ್ನಿ ಯಶೋದಾ ಇವರಿಗೆ ೫೦ ಲಕ್ಷ ರೂಪಾಯ ಚೆಕ್ ನೀಡಿದರು.