ವಿಧಾನಸಭೆ ಚುನಾವಣೆಯಲ್ಲಿ ಭಾಜಪದ ಗೆಲುವು ಸಾಧಿಸಿದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಮತಾಂಧರಿಂದ ದಲಿತರ ಮೇಲೆ ಟೀಕೆ

ದಲಿತರು `ಹಿಂದೂ ರಾಷ್ಟ್ರಕ್ಕಾಗಿ’ ಮತದಾನ ಮಾಡಿದ್ದಾರೆ ಎಂದು ಟಿಕೆ !

ನವ ದೆಹಲಿ – ದೇಶದ 5 ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಭಾಜಪ 4 ರಾಜ್ಯಗಳಲ್ಲಿ ಮತ್ತೊಮ್ಮೆ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ. ಇದರಿಂದ ಈಗ ಸಾಮಾಜಿಕ ಜಾಲತಾಣದಲ್ಲಿ ಮತಾಂಧರಿಂದ ದಲಿತರನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದಾರೆ.

1. `ತಮಾಶಾಬಿನ’ ಈ ಹೆಸರಿನ ಟ್ವಿಟರ್ ಖಾತೆಯಿಂದ, ದಲಿತರು ಸಾಮಾಜಿಕ ನ್ಯಾಯ ಆಧಾರಿತ ಜಾತಿಯಿಂದ ತಮ್ಮನ್ನು ಹಿಂದುತ್ವ ಆಧಾರಿತ ದಲಿತ ರಾಜಕಾರಣದ ಕಡೆಗೆ ಸ್ಥಳಾಂತರಗೊಳಿಸಿದ್ದಾರೆ. ಇದು ಭಾಜಪಕ್ಕೆ ಎಲ್ಲಕ್ಕಿಂತ ದೊಡ್ಡ ರಾಜಕೀಯ ಲಾಭವಾಗಿದೆ.

2. `ಮೋಗಲ ಆದಿಲ’ ಎಂಬ ಖಾತೆಯಿಂದ `ದಲಿತರು ಈಗ `ಹಿಂದೂ ರಾಷ್ಟ್ರ’ಕ್ಕಾಗಿ ಮತದಾನ ಮಾಡುತ್ತಿದ್ದಾರೆ’, ಎಂದು ಬರೆಯಲಾಗಿದೆ.