ಪನಿರಸೆಲ್ವಮ್ ಇವರ ಗುಂಪಿನ ಮೇಲೆ ಬಾಟಲಿ ಎಸೆದ ಪಳನಿಸಾಮಿ ಗುಂಪು !

ತಮಿಳುನಾಡಿನ ಅಣ್ಣಾದ್ರಮುಕ ಪಕ್ಷದಲ್ಲಿ ವರ್ಚಸ್ಸಿಗಾಗಿ ಸಂಘರ್ಷ !

ಅಣ್ಣಾದ್ರಮುಕ ಪಕ್ಷದ ನಾಯಕ ಓ. ಪನಿರಸೆಲ್ವಂ(ಎಡಬದಿ) ಮತ್ತು ಈ. ಪಾಲಾನಿಸಾಮಿ

(‘ಅಣ್ಣಾದ್ರಮುಕ’ ಎಂದರೆ ‘ಅಖಿಲ ಭಾರತೀಯ ಅಣ್ಣಾ ದ್ರಾವಿಡ ಮುನ್ನೇತ್ರ ಕಳಘಂ’ (ಅಖಿಲ ಭಾರತೀಯ ಅಣ್ಣಾ ದ್ರಾವಿಡ್ ಪ್ರಗತಿ ಸಂಘ))

ಚೆನ್ನೈ (ತಮಿಳುನಾಡು) – ೨೦೧೬ ರಲ್ಲಿ ಅಣ್ಣಾದ್ರಮುಕನ ಮುಖ್ಯಸ್ಥೆ ಜೆ. ಜಯಲಲಿತಾ ನಿಧನರಾದಾಗಿನಿಂದಲೂ ಅಣ್ಣಾದ್ರಮುಕ ಪ್ರಕ್ಷದ ಮುಖ್ಯಸ್ಥ ಯಾರಾಗಬೇಕೆಂಬುದರ ಬಗ್ಗೆ ಪಕ್ಷದೊಳಗೆ ಘರ್ಷಣೆ ನಡೆಯುತ್ತಿದೆ. ಅಣ್ಣಾದ್ರಮುಕ ಪಕ್ಷದಲ್ಲಿ ಒಂದೇ ನಾಯಕತ್ವದ ವಿಷಯದಲ್ಲಿ ಜೂನ್ ೨೩ ರಂದು ಘರ್ಷಣೆ ನಡೆಯಿತು. ಪಕ್ಷದ ಒಂದು ಸಭೆಯ ವೇಳೆ ವೇದಿಕೆಯಲ್ಲಿದ್ದ ಮಾಜಿ ಉಪಮುಖ್ಯಮಂತ್ರಿ ಹಾಗೂ ಪಕ್ಷದ ಮುಖಂಡ ಪನಿರಸೆಲ್ವಮ್ ಅವರ ಮೇಲೆ ಪಕ್ಷದ ಜಂಟಿ ಸಮನ್ವಯಕ ಇ. ಪಳನಿಸಾಮಿ ಬೆಂಬಲಿಗರು ಬಾಟಲಿಗಳನ್ನು ಎಸೆದಿದ್ದಾರೆ. ಪನಿರಸೆಲ್ವಮ್ ಅಲ್ಲಿಂದ ಪಲಾಯನ ಮಾಡಬೇಕಾಯಿತು. ಪಕ್ಷದಲ್ಲಿನ ಒಡಕು ತಪ್ಪಿಸಲು, ಪಕ್ಷದ ಸಭೆಯನ್ನು ಮುನ್ನಡೆಸಲು ತಮಿಳ ಮಗನ ಹುಸೇನ ಅವರನ್ನು ಪಕ್ಷದ ಸಭೆಯ ನೇತೃತ್ವಕ್ಕಾಗಿ ಸಭೆಯ ಅಧ್ಯಕ್ಷನೆಂದು ಆಯ್ಕೆ ಮಾಡಲಾಯಿತು. ಪಕ್ಷದ ಮುಂದಿನ ಸಭೆ ಜುಲೈ ೧೧ ರಂದು ನಡೆಯಲಿದೆ.


ಪಕ್ಷದಲ್ಲಿ ಏಕ ನಾಯಕತ್ವ ಇರಬೇಕು ಎಂಬ ಬೇಡಿಕೆ ಈ ಹಿಂದೆಯೂ ಇತ್ತು. ಇದನ್ನು ಪಳನಿಸಾಮಿ ಬೆಂಬಲಿಗರು ಮಾಡಿದ್ದರು. ಆ ಬಳಿಕ ಪನಿರಸೆಲ್ವಮ್ ಬೆಂಬಲಿಗರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಫಲಕಗಳನ್ನು ಹಾಕುತ್ತಿದ್ದರು. ‘ಪನಿರಸೆಲ್ವಮ್ ಅವರನ್ನು ದಿವಂಗತ ಜಯಲಲಿತಾ ಅವರು ನಾಯಕರನ್ನಾಗಿ ಆಯ್ಕೆ ಮಾಡಿದ್ದರು’, ಎಂದು ಅದರಲ್ಲಿ ಹೇಳಿತ್ತು.

ಸಂಪಾದಕೀಯ ನಿಲುವು

ಯಾವ ರಾಜಕೀಯ ಪಕ್ಷವು ಆಂತರಿಕ ರಾಜಕಾರಣದಲ್ಲಿ ತೊಡಗಿ ಪರಸ್ಪರರ ಮೇಲೆ ಹಲ್ಲೆ ಮಾಡುತ್ತಾರೆ, ಅವು ರಾಷ್ಟ್ರೀಯ ಹಿತಾಸಕ್ತಿಗಾಗಿ ಎಂದಾದರೂ ಪ್ರಯತ್ನಿಸಬಹುದೇ ? ಇಂತಹ ರಾಜಕೀಯ ಪಕ್ಷಗಳಿಂದಲೇ ಪ್ರಜಾಪ್ರಭುತ್ವ ವಿಫಲವಾಗುತ್ತಿದೆ. ಈ ಶೋಚನೀಯ ಪರಿಸ್ಥಿತಿಯಿಂದ ಸಾತ್ತ್ವಿಕ ರಾಜಕಾರಣಿಗಳ ‘ಹಿಂದೂ ರಾಷ್ಟ್ರ’ದ ಅನಿವಾರ್ಯತೆ ಗಮನಕ್ಕೆ ಬರುತ್ತದೆ !