ಮಮತಾ ಬ್ಯಾನರ್ಜಿಯವರಿಂದ ಎಲ್ಲಾ ವಿರೋಧ ಪಕ್ಷದವರನ್ನು ಕೇಂದ್ರೀಯ ತನಿಖಾ ವ್ಯವಸ್ಥೆಯ ವಿರುದ್ಧ ಸಂಘಟಿತವಾಗಲು ಪುಕ್ಕಟ್ಟಿನ ಕರೆ !

`ತನಿಖಾ ವ್ಯವಸ್ಥೆಯಿಂದ ಪಕ್ಷ ಮಾಡಿರುವ ಭ್ರಷ್ಟಾಚಾರ ಮತ್ತು ರಾಷ್ಟ್ರದ್ರೋಹಿ ಕಾರ್ಯಾಚರಣೆಗಳು ಬೆಳಕಿಗೆ ಬರುವುದು’, ಈ ಭಯದಿಂದ ಬ್ಯಾನರ್ಜಿ ತನಿಖಾ ವ್ಯವಸ್ಥೆಯನ್ನು ವಿರೋಧಿಸುತ್ತಿದ್ದಾರೆ, ಎಂಬುದನ್ನು ಅರಿಯರಿ ! – ಸಂಪಾದಕರು 

ಮಮತಾ ಬ್ಯಾನರ್ಜಿ

ಕೊಲಕಾತಾ (ಬಂಗಾಲ) – ಕೇಂದ್ರದ ಭಾಜಪ ಸರಕಾರ ಕೇಂದ್ರೀಯ ತನಿಖಾ ವ್ಯವಸ್ಥೆಯ ಮೂಲಕ ವಿರೋಧಿ ಪಕ್ಷದವರ ಮೇಲೆ ಅನ್ಯಾಯ ಮಾಡುತ್ತಿದ್ದಾರೆ, ಎಂಬ ನಿಲುವಿನಿಂದ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೇಶಾದ್ಯಂತ ಎಲ್ಲಾ ವಿರೋಧಿ ಪಕ್ಷದ ನಾಯಕರನ್ನು ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಭಾಜಪವನ್ನು ಎದುರಿಸಲು ಎಲ್ಲರೂ ಒಗ್ಗೂಡಲು ಕರೆ ನೀಡಿದ್ದಾರೆ.

1. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು ಪತ್ರದಲ್ಲಿ, ಕೇಂದ್ರೀಯ ತನಿಖಾ ವಿಭಾಗ, ಇಡಿ, ಕೇಂದ್ರ ದಕ್ಷತೆ ಆಯೋಗ (ಸಿವಿಸಿ) ಮತ್ತು ತೆರಿಗೆ ಇಲಾಖೆ ಇಂತಹ ಕೇಂದ್ರೀಯ ವ್ಯವಸ್ಥೆಯನ್ನು ಸೇಡು ತೀರಿಸಿಕೊಳ್ಳಲು, ದೇಶಾದ್ಯಂತ ರಾಜಕೀಯ ವಿರೋಧಿಗಳಿಗೆ ಗುರಿ ಮಾಡಲು, ತೊಂದರೆ ನೀಡಲು ಮತ್ತು ಇಕ್ಕಟ್ಟಿಗೆ ಸಿಕ್ಕಿಸಲು ಉಪಯೋಗ ಮಾಡುತ್ತಿದ್ದಾರೆ. ಆದ್ದರಿಂದ ನಾವೆಲ್ಲರೂ ಒಗ್ಗಟ್ಟಿನಿಂದ ಭಾಜಪದ ಕೇಂದ್ರೀಯ ಸಂಸ್ಥೆಯ ದುರುಪಯೋಗ ಮಾಡುವುದರಿಂದ ತಡೆಯಬೇಕು. ನಾವೆಲ್ಲರೂ ಅನುಕೂಲಕ್ಕೆ ತಕ್ಕಂತೆ ಒಂದು ಕಡೆಗೆ ಒಗ್ಗೂಡಿ ಮುಂದಿನ ಚರ್ಚೆ ನಡೆಸಬೇಕು ಎಂದಿದ್ದಾರೆ.

2. ಮಮತಾ ಬ್ಯಾನರ್ಜಿಯವರು, `ನನ್ನ ಮನಸ್ಸಿನಲ್ಲಿ ನ್ಯಾಯ ವ್ಯವಸ್ಥೆಯ ಬಗ್ಗೆ ಸರ್ವೋಚ್ಚ ಗೌರವ ಇದೆ; ಆದರೆ ಪ್ರಸ್ತುತ ಕೆಲವು ರಾಜಕೀಯ ಪಕ್ಷದ ಹಸ್ತಕ್ಷೇಪದಿಂದ ಜನರಿಗೆ ನ್ಯಾಯ ಸಿಗುತ್ತಿಲ್ಲ. ಇದು ನಮ್ಮ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ನ್ಯಾಯ ವ್ಯವಸ್ಥೆಯ, ಪ್ರಸಾರಮಾಧ್ಯಮಗಳು ಮತ್ತು ಜನರು ಇವರು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ ಸ್ತಂಭವಾಗಿದೆ ಮತ್ತು ಯಾವುದೇ ಭಾಗದಲ್ಲಿ ಬಿರುಕು ಬಿಟ್ಟರೆ ಸಂಪೂರ್ಣ ವ್ಯವಸ್ಥೆ ಕುಸಿಯುತ್ತದೆ.