ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಸಿನಿಂದ ಕಾರ್ಯಕರ್ತರಿಗೆ ಶ್ರೀರಾಮನವಮಿ ಹಾಗೂ ಹನುಮಾನ ಜಯಂತಿಯನ್ನು ಆಚರಿಸುವಂತೆ ಆದೇಶ

ಕಾಂಗ್ರೆಸ್ಸಿನ ಶಾಸಕ ಆರೀಫ ಮಸೂದರವರ ಆದೇಶಕ್ಕೆ ವಿರೋಧ

ಕಾಂಗ್ರೆಸ್ಸ ಇಲ್ಲಿಯವರೆಗೆ ಜಾತ್ಯಾತೀತತೆಯ ಹೆಸರಿನಲ್ಲಿ ಮುಸಲ್ಮಾನರ ಓಲೈಕೆ ಮಾಡಿತು. ಕಾಂಗ್ರೆಸ್ಸಿಗೆ ಈಗ ಇಫ್ತಾರ ಕೂಟಗಳನ್ನು ಏರ್ಪಡಿಸಿ ಪುನಃ ಅಧಿಕಾರ ಪಡೆಯಲು ಸಾಧ್ಯವಿಲ್ಲದಿರುವುದರಿಂದ ಹಿಂದೂಗಳನ್ನು ಸಂತೋಷಪಡಿಸಲು ಇಂತಹ ಪ್ರಯತ್ನಗಳನ್ನು ಮಾಡುವುದು ಆವಶ್ಯಕವಾಗಿದೆ; ಎಂಬುದು ತಿಳಿದೇ ಬಿಟ್ಟಿತು. ಆದರೆ ಹಿಂದೂಗಳಿಗೆ ‘ಇದು ಕಾಂಗ್ರೆಸ್ಸಿನ ಢೋಂಗಿತನ’ ಎಂಬುದು ತಿಳಿದಿದೆ !

ಕಾಂಗ್ರೆಸ್ಸಿನಲ್ಲಿರುವ ಹಿಂದೂ ಕಾರ್ಯಕರ್ತರು ಮುಸಲ್ಮಾನರ ಹಬ್ಬಗಳನ್ನು ಆಚರಿಸುವುದನ್ನು ಸ್ವೀಕರಿಸಿದ್ದರು; ಆದರೆ ಈಗ ಮುಸಲ್ಮಾನ ಶಾಸಕನಿಗೆ ಪಕ್ಷವು ಹಿಂದೂಗಳ ಹಬ್ಬಗಳನ್ನು ಆಚರಿಸುವುದು ಸ್ವೀಕಾರವಾಗುತ್ತಿಲ್ಲ. ಎಂಬುದನ್ನು ಕಾಂಗ್ರೆಸ್ಸಿನ ಹಿಂದೂ ಕಾರ್ಯಕರ್ತರು ಗಮನಕ್ಕೆ ತೆಗೆದುಕೊಳ್ಳಬೇಕು !

ಶಾಸಕ ಆರೀಫ ಮಸೂದರವರು ಯಾವಾಗಲಾದರೂ ಕಾಂಗ್ರೆಸ್ಸ ಇಫ್ತಾರ ಪಾರ್ಟಿಯನ್ನು ಏರ್ಪಡಿಸುವಾಗ ಏಕೆ ವಿರೋಧಿಸಲಿಲ್ಲ ? ಆದರೂ ಕಾಂಗ್ರೆಸ್ಸಿಗೆ ಆರೀಫ ಮಸೂದರವರು ಜಾತ್ಯಾತೀತ ವೃತ್ತಿಯವರೆಂದು ಏಕೆ ಅನಿಸುತ್ತದೆ ?

ಭೋಪಾಲ (ಮಧ್ಯಪ್ರದೇಶ) – ಮಧ್ಯಪ್ರದೇಶದಲ್ಲಿನ ಕಾಂಗ್ರೆಸ್ಸಿನ ನೇತಾರರು ಹಾಗೂ ಮಾಜಿ ಮುಖ್ಯಮಂತ್ರಿ ಕಮಲನಾಥರವರು ಪಕ್ಷದ ಕಾರ್ಯಕರ್ತರಿಗೆ ಶ್ರೀರಾಮನವಮಿ ಮತ್ತು ಹನುಮಾನ ಜಯಂತಿಯನ್ನು ಆಚರಿಸಲು ಲಿಖಿತ ಆದೇಶ ನೀಡಿದ್ದಾರೆ. ಈ ವಿಷಯದಲ್ಲಿ ಕಾಂಗ್ರೆಸ್ಸಿನ ಶಾಸಕರಾದ ಆರೀಫ ಮಸೂದರವರು ಆಕ್ಷೇಪವೆತ್ತಿ ‘ಇಂತಹ ಆದೇಶದಿಂದಾಗಿ ತಪ್ಪು ರೂಢಿ ನಿರ್ಮಾಣವಾಗುವುದು, ಎಂದು ಹೇಳಿದ್ದಾರೆ.

೧. ಮಸೂದರವರು ಮಾತನಾಡುತ್ತ ರಾಜಕೀಯ ಪಕ್ಷಗಳು ಇಂತಹ ಲಿಖಿತ ಆದೇಶವನ್ನು ನೀಡುವುದು ಅಯೋಗ್ಯವಾಗಿದೆ. ನಾವು ಯಾವ ವಿಚಾರಸರಣಿಗಾಗಿ ಕಾರ್ಯ ಮಾಡುತ್ತಿದ್ದೇವೆಯೋ ಅದರಲ್ಲಿ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಮುಂದೆ ಹೋಗಲಿಕ್ಕಿರುತ್ತದೆ. ಈಗ ನೀವು ಕೇವಲ ಶ್ರೀರಾಮನವಮಿ ಮತ್ತು ಹನುಮಾನ ಚಾಲಿಸಾದ ಬಗ್ಗೆ ಉಲ್ಲೇಖಿಸಿದ್ದೀರಿ. ಆದರೆ ಅಂಬೇಡ್ಕರ ಜಯಂತಿ, ಗುಡ್ ಫ್ರಾಯಡೆ ಮತ್ತು ರಮಜಾನಿನ ಉಲ್ಲೇಖ ಮಾಡಲಿಲ್ಲ. ಇವು ಮೂರೂ ದೊಡ್ಡ ಉತ್ಸವಗಳಾಗಿವೆ. ಇತರರಲ್ಲಿ ಮತ್ತು ನಮ್ಮಲ್ಲಿ ವ್ಯತ್ಯಾಸವಿದೆ. ಇತರ ಪಕ್ಷಗಳು ಒಂದೇ ಧರ್ಮದ ಬಗ್ಗೆ ಮಾತನಾಡುತ್ತಾರೆ, ಆದರೆ ನಾವು ಎಲ್ಲ ಧರ್ಮಗಳ ಬಗ್ಗೆ ಮಾತನಾಡುತ್ತೇವೆ. ಇಂತಹ ಸಮಯದಲ್ಲಿ ನಾವು ಕೇವಲ ರಾಜಕೀಯ ವಿಷಯಗಳ ಬಗ್ಗೆಯೇ ಮಾತನಾಡಬೇಕು. ಧಾರ್ಮಿಕ ಹಬ್ಬಗಳು ನಡೆಯುತ್ತಿವೆ ಮತ್ತು ನಡೆಯುತ್ತಿರುವವು, ಅವುಗಳನ್ನು ಯಾರೂ ತಡೆಯಲು ಸಾಧ್ಯವಿಲ್ಲ, ಎಂದು ಹೇಳಿದರು.

೨. ರಾಜ್ಯದ ಗ್ರಹಮಂತ್ರಿಗಳು ಹಾಗೂ ಭಾಜಪದ ನೇತಾರರಾದ ಡಾ. ನರೋತ್ತಮ ಮಿಶ್ರಾರವರು ಮಸೂದರವರ ಮೇಲೆ ಟೀಕೆ ಮಾಡುತ್ತ, ‘ಒಂದು ಸಮಯದಲ್ಲಿ ಇಫ್ತಾರ ಪಾರ್ಟಿಗಳನ್ನು ಆಯೋಜಿಸುತ್ತಿದ್ದ ಪಕ್ಷವು ಈಗ ದೇವಸ್ಥಾನಗಳನ್ನು ಸುತ್ತಲು ಏಕೆ ಆರಂಭಿಸಿದೆ ?’ ಎಂಬುದು ಮಸೂದರವರಿಗೆ ಜೀರ್ಣವಾಗುತ್ತಿಲ್ಲ, ಎಂದು ಹೇಳಿದರು.