ದೆಹಲಿಯಲ್ಲಿ ಬ್ರಿಟಿಷ್ ಕಾಲದ ಕಾನೂನುಗಳನ್ನು ರದ್ದುಗೊಳಿಸುವಂತೆ ‘ಭಾರತ್ ಜೊಡೋ ಆಂದೋಲನ’ವನ್ನು ಆಯೋಜಿಸಲಾಗಿತ್ತು !

ಇಲ್ಲಿಯ ಜಂತರ್ ಮಂತರ್ ಪ್ರದೇಶದಲ್ಲಿ ಆಗಸ್ಟ್ ೮ ರಂದು ದೇಶದಲ್ಲಿ ಬ್ರಿಟೀಷರ ಕಾಲದ ಕಾನೂನುಗಳನ್ನು ರದ್ದುಗೊಳಿಸಲು ಆಯೋಜಿಸಲಾಗಿದ್ದ ‘ಭಾರತ್ ಜೊಡೋ ಆಂದೋಲನ’ದಲ್ಲಿ ಒಂದು ನಿರ್ದಿಷ್ಟ ಧರ್ಮದ ವಿರುದ್ಧ ತಥಾಕಥಿತ ಪ್ರಚೋದನಕಾರಿ ಘೋಷಣೆ ನೀಡಿದ ಆರೋಪದಲ್ಲಿ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ.

ದೆಹಲಿ : ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ರಕ್ತಪಾತದ ಸಿದ್ಧತೆಯಲ್ಲಿ ಭಯೋತ್ಪಾದಕರು !

ದೇಶದ ರಾಜಧಾನಿ ದೆಹಲಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕಾರ್ಯಕ್ರಮದ ಸಿದ್ಧತೆ ನಡೆಯುತ್ತಿರುವಾಗ ಭದ್ರತೆಯ ದೃಷ್ಟಿಯಲ್ಲಿಯೂ ಎಚ್ಚರಿಕೆಯನ್ನು ನಿರ್ವಹಿಸಲಾಗುತ್ತಿದೆ. ಭಯೋತ್ಪಾದಕರು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

ಪಾಕಿಸ್ತಾನದ ಶ್ರೀ ಗಣಪತಿ ದೇವಸ್ಥಾನವನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ೫೦ ಜನರ ಬಂಧನ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಭೋಂಗ ನಗರದ ಶ್ರೀ ಗಣಪತಿ ದೇವಸ್ಥಾನವನ್ನು ಮತಾಂಧರು ಧ್ವಂಸಗೊಳಿಸಿದ್ದರು. ಪ್ರಕರಣದಲ್ಲಿ ಮುಖ್ಯ ಸೂತ್ರಧಾರ ಸೇರಿದಂತೆ ೫೦ ಜನರನ್ನು ಬಂಧಿಸಲಾಗಿದೆ. ಒಟ್ಟು ೧೫೦ ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ.

ರಾಜ ಕುಂದ್ರಾ ಇವರ ಅಶ್ಲೀಲ (ಪಾರ್ನ್) ಚಿತ್ರ ನಿರ್ಮಿತಿಯ ಪ್ರಕರಣದಲ್ಲಿ ಗೋವಾದಲ್ಲಿನ ೩ ‘ಮೊಡೆಲ್ಸ್’ಗಳ (ರೂಪದರ್ಶಿಗಳ) ಸಹಭಾಗ

ರಾಜ ಕುಂದ್ರಾ ಇವರ ಅಶ್ಲೀಲ ಚಿತ್ರನಿರ್ಮಾಣದ ಪ್ರಕರಣದಲ್ಲಿ ಗೋವಾದ ೩ ಮೊಡೆಲ್ಸ್’ಗಳು(ರೂಪದರ್ಶಿಗಳು) ಸಹಭಾಗಿ ಆಗಿರುವ ಬಗ್ಗೆ ಮಾಹಿತಿಯು ಲಭ್ಯವಾಗಿದೆ. ಪೊಲೀಸರು ಅವರ ಹೆಸರುಗಳನ್ನು ಬಹಿರಂಗ ಪಡಿಸಲು ನಿರಾಕರಿಸಿದರೂ, ಅವರಲ್ಲಿ ಮೊದಲನೆಯ ‘ಮೊಡೆಲ್’ ಫೋಂಡಾ, ಎರಡನೆಯವಳು ಮಡಗಾವ್ ಮತ್ತು ಮೂರನೆಯವಳು ಪರ್ವರಿ ಯವರಾಗಿದ್ದಾರೆಂದು ಪೋಲಿಸರು ಹೇಳಿದ್ದಾರೆ.

ಅನಾಮಿಕ(ಬೇನಾಮಿ) ಕರೆಯ ಮೂಲಕ ಮುಂಬೈಯಲ್ಲಿ ನಾಲ್ಕು ಕಡೆಗಳಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ಸುಳ್ಳು ಮಾಹಿತಿಯನ್ನು ನೀಡಿದ ಇಬ್ಬರು ಯುವಕರ ಬಂಧನ !

ಅಗಸ್ಟ್ ೬ರ ತಡರಾತ್ರಿ ರೈಲ್ವೇ ಪೊಲೀಸರಿಗೆ ಅಜ್ಞಾತ ಕರೆಮಾಡಿ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ, ದಾದರ್, ಭಾಯಖಳಾ ಹಾಗೂ ನಟ ಅಮಿತಾಬ ಬಚ್ಚನ್ ರವರ ಮನೆಯ ಹೊರಗೆ ಬಾಂಬ್ ಇಡಲಾಗಿದೆ ಎಂದು ಸುಳ್ಳು ಹೇಳಿದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನದಲ್ಲಿ ಅನ್ಯಾಯ ಆಗುತ್ತಿದೆ ಎಂದು ಹೇಳಿ ಪಾಕ್ ನಿರಾಶ್ರಿತ ಕುಟುಂಬಸಮೇತ ಆತ್ಮಹತ್ಯೆಯ ಮಾಡಿಕೊಳ್ಳುವ ಬೆದರಿಕೆ

ಇಲ್ಲಿಯ ನಿವಾಸಿ ಧಾನತಾ ಪ್ರದೇಶದಲ್ಲಿ ಪಾಕಿಸ್ತಾನದಿಂದ ಬಂದಿರುವ ಹಿಂದೂ ವಲಸಿಗನ ಒಂದು ವಿಡಿಯೋ ಪ್ರಸಾರಿತ ಆಗುತ್ತಿದೆ. ಇದರಲ್ಲಿ ತ್ರಿಲೋಕ ಚಂದ ರಾಣಾ ಎಂಬ ಹೆಸರಿನ ಪಾಕಿಸ್ತಾನಿ ಹಿಂದೂ ವ್ಯಕ್ತಿಯು ತನ್ನ ಇಡೀ ಕುಟುಂಬ ಸಹಿತವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾನೆ. ರಾಣಾನು ತನ್ನ ಕುಟುಂಬ ದವರ ಮೇಲೆ ಅನ್ಯಾಯವಾಗುತ್ತಿದೆ ಎಂದು ಆರೋಪ ಮಾಡಿದ್ದಾನೆ.

ದೆಹಲಿಯಲ್ಲಿ ಕಾನೂನುಬಾಹಿರವಾಗಿ ವಾಸ್ತವ್ಯವಿರುವ ನೈಜೀರಿಯಾದ ನೂರಕ್ಕಿಂತ ಹೆಚ್ಚುನಾಗರಿಕರು

ದೆಹಲಿಯಲ್ಲಿ ನೂರಕ್ಕೂ ಹೆಚ್ಚು ನೈಜೀರಿಯಾದ ನಾಗರಿಕರು ಕಾನೂನುಬಾಹಿರವಾಗಿ ವಾಸ್ತವ್ಯ ಮಾಡುತ್ತಿದ್ದಾರೆ. ಇವರುಗಳಲ್ಲಿ ಕೆಲವರು ವೈದ್ಯಕೀಯ, ಪ್ರವಾಸೀ ಇತ್ಯಾದಿ ವೀಸಾ ತೆಗೆದುಕೊಂಡು ಭಾರತದಲ್ಲಿ ಬಂದಿದ್ದರು. ಮತ್ತು ವೀಸಾದ ಅವಧಿ ಮುಗಿದ ನಂತರವೂ ಅವರು ದೆಹಲಿಯಲ್ಲಿಯೇ ವಾಸಿಸುತ್ತಿದ್ದಾರೆ.

ಲಕ್ಷ್ಮಣಪುರಿಯಲ್ಲಿ ಬಾಂಬ್‌ ಹಾಕಿ ದೇವಸ್ಥಾನಗಳನ್ನು ಧ್ವಂಸ ಮಾಡುವ ಬೆದರಿಕೆ ಹಾಕಿದ ಜಿಹಾದಿಯ ಬಂಧನ

ಸ್ಥಳೀಯ ಅಲಿಗಂಜ್ ಹನುಮಾನ್ ದೇವಸ್ಥಾನ ಮತ್ತು ಮನಕಾಮೇಶ್ವರ ದೇವಸ್ಥಾನ ಸೇರಿದಂತೆ ನಗರದ ಇತರ ದೇವಸ್ಥಾನಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ಶಕೀಲ್ ಎಂಬ ಜಿಹಾದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ 6 ವರ್ಷಗಳಲ್ಲಿ ಕೇಂದ್ರೀಯ ಸಶಸ್ತ್ರ ಪೊಲೀಸ್ ದಳದ 680 ಸೈನಿಕರ ಆತ್ಮಹತ್ಯೆ !

ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೈನಿಕರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ಎಂಬುದರ ಅರ್ಥ ಅವರ ಮನೋಧೈರ್ಯ ಹೆಚ್ಚಿಸಲು ಹಾಗೂ ಅವರ ಸಮಸ್ಯೆಗಳನ್ನು ಬಗೆಹರಿಸಲು ಸರಕಾರ ಹಾಗೂ ಆಡಳಿತ ಕಡಿಮೆ ಬೀಳುತ್ತಿದೆ, ಎಂಬುದು ಗಮನಕ್ಕೆ ಬರುತ್ತದೆ !

ಕಳೆದ ಮೂರು ವರ್ಷಗಳಲ್ಲಿ ಪೊಲೀಸ್ ಕಸ್ಟಡಿಯಲ್ಲಿ 348 ಜನರ ಮೃತ್ಯು ! – ಕೇಂದ್ರ ಸರಕಾರ

ಈ ಸಾವಿನ ಹಿಂದಿನ ನಿರ್ದಿಷ್ಟವಾದ ಕಾರಣಗಳೇನು? ಒಂದು ವೇಳೆ ದೌರ್ಜನ್ಯದಿಂದ ಮೃತ್ಯುವಾಗಿದ್ದಲ್ಲಿ, ಸಂಬಂಧಪಟ್ಟವರ ಮೇಲೆ ಯಾವ ಕ್ರಮ ಕೈ ಗೊಳ್ಳಲಾಯಿತು ಎಂಬ ಮಾಹಿತಿಯನ್ನು ಸಹ ಕೇಂದ್ರ ಸರಕಾರವು ಜನತೆಗೆ ನೀಡಬೇಕು !