ಲಕ್ಷ್ಮಣಪುರಿಯಲ್ಲಿ ಬಾಂಬ್‌ ಹಾಕಿ ದೇವಸ್ಥಾನಗಳನ್ನು ಧ್ವಂಸ ಮಾಡುವ ಬೆದರಿಕೆ ಹಾಕಿದ ಜಿಹಾದಿಯ ಬಂಧನ

ದೇಶದಲ್ಲಿ ಚರ್ಚ್, ಮಸೀದಿ, ಬೌದ್ಧ ವಿಹಾರ ಇತ್ಯಾದಿ ಧಾರ್ಮಿಕ ಶ್ರದ್ಧಾಸ್ಥಾನಗಳನ್ನು ಧ್ವಂಸ ಮಾಡುವ ಬೆದರಿಕೆಯನ್ನು ಜಿಹಾದಿ ಭಯೋತ್ಪಾದಕರು ನೀಡುವುದಿಲ್ಲ; ಏಕೆಂದರೆ ಹಿಂದೂಗಳೇ ಅವರ ಶತ್ರುಗಳು ಮತ್ತು ಅವರನ್ನು ನಾಶಪಡಿಸುವ ಮೂಲಕ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವುದು ಅವರ ಧ್ಯೇಯವಾಗಿದೆ. ಹಿಂದೂಗಳು ಇದನ್ನು ಗಮನದಲ್ಲಿಟ್ಟುಕೊಂಡು ಭಾರತದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಬೇಕು !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಸ್ಥಳೀಯ ಅಲಿಗಂಜ್ ಹನುಮಾನ್ ದೇವಸ್ಥಾನ ಮತ್ತು ಮನಕಾಮೇಶ್ವರ ದೇವಸ್ಥಾನ ಸೇರಿದಂತೆ ನಗರದ ಇತರ ದೇವಸ್ಥಾನಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ಶಕೀಲ್ ಎಂಬ ಜಿಹಾದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತ ದೆಹಲಿಯ ಸೀಲಮಪುರದ ನಿವಾಸಿ. ಭಯೋತ್ಪಾದನಾ ನಿಗ್ರಹ ದಳ ತನಿಖೆ ನಡೆಸುತ್ತಿದೆ. ಆತನ ಇತರ ಸಹಚರರನ್ನು ಹುಡುಕಲಾಗುತ್ತಿದೆ. ‘ಭಯೋತ್ಪಾದಕ ಸಂಘಟನೆಗಳೊಂದಿಗೆ ಶಕೀಲ್ ನಂಟಿದೆಯೇ ?’ ಎಂಬ ಮಾಹಿತಿ ಪಡೆಯಲಾಗುತ್ತಿದೆ. ದೇವಸ್ಥಾನಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ಪತ್ರದ ಪ್ರತಿಯನ್ನು (ಪೋಟೋಕಾಪಿಯನ್ನು) ಪೊಲೀಸರು ಶಕೀಲ್ ನಿಂದ ವಶಪಡಿಸಿಕೊಂಡಿದ್ದಾರೆ.