ರಾಜಸ್ಥಾನದಲ್ಲಿ ಅನ್ಯಾಯ ಆಗುತ್ತಿದೆ ಎಂದು ಹೇಳಿ ಪಾಕ್ ನಿರಾಶ್ರಿತ ಕುಟುಂಬಸಮೇತ ಆತ್ಮಹತ್ಯೆಯ ಮಾಡಿಕೊಳ್ಳುವ ಬೆದರಿಕೆ

ಪಾಕಿಸ್ತಾನದಿಂದ ವಲಸೆ ಬಂದಿರುವ ವ್ಯಕ್ತಿ ಸಂಶಯಿತನಾಗಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯ

ಪೊಲೀಸರು ಈ ವಿಷಯದ ಬಗ್ಗೆ ಸತ್ಯಾಂಶವನ್ನು ಹಿಂದೂಗಳಿಗೆ ಮನದಟ್ಟು ಮಾಡಿಕೊಡುವ ಅಗತ್ಯವಿದೆ.

ಜಾಲೌರ (ರಾಜಸ್ಥಾನ್) – ಇಲ್ಲಿಯ ನಿವಾಸಿ ಧಾನತಾ ಪ್ರದೇಶದಲ್ಲಿ ಪಾಕಿಸ್ತಾನದಿಂದ ಬಂದಿರುವ ಹಿಂದೂ ವಲಸಿಗನ ಒಂದು ವಿಡಿಯೋ ಪ್ರಸಾರಿತ ಆಗುತ್ತಿದೆ. ಇದರಲ್ಲಿ ತ್ರಿಲೋಕ ಚಂದ ರಾಣಾ ಎಂಬ ಹೆಸರಿನ ಪಾಕಿಸ್ತಾನಿ ಹಿಂದೂ ವ್ಯಕ್ತಿಯು ತನ್ನ ಇಡೀ ಕುಟುಂಬ ಸಹಿತವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾನೆ. ರಾಣಾನು ತನ್ನ ಕುಟುಂಬ ದವರ ಮೇಲೆ ಅನ್ಯಾಯವಾಗುತ್ತಿದೆ ಎಂದು ಆರೋಪ ಮಾಡಿದ್ದಾನೆ.

 

ತ್ರಿಲೋಕ ಚಂದ ರಾಣಾ ಇವನ ಪ್ರಕಾರ, ಅವರ ಸಂಬಂಧಿಕರೆ ಅವನನ್ನು ಭಾರತದಲ್ಲಿ ಕರೆಸಿಕೊಂಡಿದ್ದಾರೆ ಮತ್ತು ಅವರೇ ಈಗ ಅವರ ಮೇಲೆ ಅನ್ಯಾಯ ಮಾಡುತ್ತಿದ್ದಾರೆ. ಹಾಗಾಗಿ ಊರಿನ ಜನರು ಸಹ ಅವರಿಗೆ ತೊಂದರೆ ಕೊಡುತ್ತಿದ್ದಾರೆ. ಈ ಜನ ಅವರನ್ನು ಊರಿನಿಂದ ಹೊರಟು ಹೋಗುವಂತಹ ಅನಿವಾರ್ಯ ಪರಿಸ್ಥಿತಿಯನ್ನು ತಂದಿದ್ದಾರೆ. ನನ್ನನ್ನು ಮತ್ತೆ ಪಾಕಿಸ್ತಾನಕ್ಕೆ ಕಳುಹಿಸಿ ಅಥವಾ ನನಗೆ ಸಹಾಯ ಮಾಡಿ ಇಲ್ಲವಾದರೆ ನಾನು ಆತ್ಮಹತ್ಯೆಯನ್ನು ಮಾಡಿಕೊಳ್ಳುವೆ ಎಂದು ರಾಣಾನು ವಿಡಿಯೋದಲ್ಲಿ ಹೇಳುತ್ತಿರುವುದು ಕಾಣುತ್ತಿದೆ.

 ಗುಪ್ತಚರ ಇಲಾಖೆ ಪ್ರಾಥಮಿಕ ವಿಚಾರಣೆಯಲ್ಲಿ ತ್ರಿಲೋಕ ಚಂದ ರಾಣಾನು ಸಂಶಯಾಸ್ಪದ ವ್ಯಕ್ತಿ ಎಂದು ಮಾಹಿತಿ ಸಿಕ್ಕಿದೆ.

ತ್ರಿಲೋಕ ಚಂದ ರಾಣಾ ಇವನ ವಿಡಿಯೋ ಪ್ರಸಾರಿತ ಆದಮೇಲೆ ಗುಪ್ತಚರ ಇಲಾಖೆಯ ಅಧಿಕಾರಿಗಳು ಈ ಘಟನೆಯ ಬಗ್ಗೆ ವಿಚಾರಣೆಯನ್ನು ಮಾಡಿದರು, ಅದರಿಂದ ಗಮನಕ್ಕೆ ಬಂದಿರುವುದೇನೆಂದರೆ ಕಳೆದ ನಾಲ್ಕು ವರ್ಷಗಳಿಂದ ಅವನು ಇಲ್ಲಿ ಕಾನೂನುಬಾಹಿರವಾಗಿ ವಾಸವಾಗಿದ್ದಾನೆ. ಅವನ ಮೇಲೆ ಸಂಶಯಾಸ್ಪದ ಕೃತ್ಯ ಮಾಡಿರುವ ಆರೋಪವೂ ಇದೆ. ಅವನು ಊರಿನಲ್ಲಿರುವ ಜನರೊಂದಿಗೆ ಸಹ ಅನೇಕ ಸಲ ವಾದ-ವಿವಾದ ಮಾಡಿರುವ ಮಾಹಿತಿಯು ಸಹ ಸಿಕ್ಕಿದೆ. ಇದರ ಬಗ್ಗೆ ಅವನ ಪೊಲೀಸರಿಂದ ವಿಚಾರಣೆ ಸಹ ನಡೆದಿತ್ತು. ರಾಣಾನು ವಾಸವಿರುವ ಪ್ರದೇಶದಲ್ಲಿ ಪಾಕದಿಂದ ಬಂದಿರುವವರಿಗೆ ವಾಸಿಸುವ ಅನುಮತಿ ಇರಲಿಲ್ಲ. (ಇಂಥ ಕಾನೂನು ಇರುವಾಗಲೂ ಕಳೆದ ನಾಲ್ಕು ವರ್ಷದಿಂದ ರಾಣಾನು ಇಲ್ಲಿ ಹೇಗೆ ವಾಸವಾಗಿದ್ದನು? ಗುಪ್ತಚರ ಇಲಾಖೆ ಮತ್ತು ಪೊಲೀಸರು ಈ ಕಾಲಾವಧಿಯಲ್ಲಿ ಏನು ಮಾಡುತ್ತಿದ್ದರು ಮತ್ತು ಅವರು ಈಗ ಇದರ ಬಗ್ಗೆ ಸಹ ಏನು ಮಾಡಲಿದ್ದಾರೆಂಬುದನ್ನು ಸ್ಪಷ್ಟಪಡಿಸಬೇಕು. ಸಂಪಾದಕರು)