ದೆಹಲಿಯಲ್ಲಿ ಕಾನೂನುಬಾಹಿರವಾಗಿ ವಾಸ್ತವ್ಯವಿರುವ ನೈಜೀರಿಯಾದ ನೂರಕ್ಕಿಂತ ಹೆಚ್ಚುನಾಗರಿಕರು

ನೈಜೀರಿಯಾದ ನಾಗರಿಕರಿಂದ ಆನ್ಲೈನ್ ವ್ಯವಹಾರದ ಮುಖಾಂತರ ಭಾರತೀಯರ ಕೋಟಿಗಟ್ಟಲೆ ಹಣದ ವಂಚನೆ

ರಾಜಧಾನಿ ದೆಹಲಿಯಲ್ಲಿ ಈ ಸ್ಥಿತಿಯಾದರೆ ದೇಶದ ಇತರ ಕಡೆಗಳಲ್ಲಿನ ಸ್ಥಿತಿ ಹೇಗಿರಬಹುದು ಎಂಬುದರ ಕಲ್ಪನೆ ಮಾಡಬಹುದು! ಕಾನೂನುಬಾಹಿರವಾಗಿ ಭಾರತದಲ್ಲಿ ವಾಸ್ತವ್ಯವಿದ್ದು ಭಾರತೀಯರನ್ನು ವಂಚಿಸುವ ತನಕ ಪೊಲೀಸ್ ಮತ್ತು ಗುಪ್ತಚರ ಇಲಾಖೆ ಮಲಗಿದ್ದವೇನು ?

ನವದೆಹಲಿ : ದೆಹಲಿಯಲ್ಲಿ ನೂರಕ್ಕೂ ಹೆಚ್ಚು ನೈಜೀರಿಯಾದ ನಾಗರಿಕರು ಕಾನೂನುಬಾಹಿರವಾಗಿ ವಾಸ್ತವ್ಯ ಮಾಡುತ್ತಿದ್ದಾರೆ. ಇವರುಗಳಲ್ಲಿ ಕೆಲವರು ವೈದ್ಯಕೀಯ, ಪ್ರವಾಸೀ ಇತ್ಯಾದಿ ವೀಸಾ ತೆಗೆದುಕೊಂಡು ಭಾರತದಲ್ಲಿ ಬಂದಿದ್ದರು. ಮತ್ತು ವೀಸಾದ ಅವಧಿ ಮುಗಿದ ನಂತರವೂ ಅವರು ದೆಹಲಿಯಲ್ಲಿಯೇ ವಾಸಿಸುತ್ತಿದ್ದಾರೆ. ಅವರು ದೇಶಾದ್ಯಂತದ ಜನರನ್ನು ಆನ್ಲೈನ್ ವ್ಯವಹಾರದ ಮುಖಾಂತರ ಕೋಟ್ಯಾವಧಿ ಹಣ ವಂಚಿಸುತ್ತಿದ್ದಾರೆ. ಪೊಲೀಸರು ಅವರ ಬಗ್ಗೆ ಮಾಹಿತಿಯನ್ನು ಕಲೆಹಾಕಿದ್ದಾರೆ. ಇವರಲ್ಲಿ ಓಕೋರಿ ವಾಮ ಮೋಸೀಸ್ ಇವನನ್ನು ಬಂಧಿಸಲಾಗಿದೆ.

ಅವನ ವಿಚಾರಣೆಯ ವೇಳೆಯಲ್ಲಿ ವಂಚನೆಯ ವಿಷಯದ ಮಾಹಿತಿಯು ಸಿಕ್ಕಿದೆ. ಮೋಸೀಸ್ ಇವರ ಸ್ನೇಹಿತೆಯಾದ ಮೆಂಡಿಯು ಕಾನಪೂರ ದಿಂದ ಇವನಿಗೆ ಸಹಾಯ ಮಾಡುತ್ತಿದ್ದಳು. ಆಕೆಯನ್ನು ಸಹ ಬೇಗನೇ ಬಂಧಿಸಲಾಗುವುದು ಎಂದು ಪೋಲೀಸರು ಹೇಳಿದ್ದಾರೆ. ನೈಜೀರಿಯಾದ ಈ ಆರೋಪಿಗಳು ಭಾರತದಲ್ಲಿ ಚಾಲೂ ಸ್ಥಿತಿಯಲ್ಲಿರುವ ಸಿಮ್ ಕಾರ್ಡ್ ಅನ್ನು ಉಪಯೋಗಿಸಿ ಅದರಿಂದ ನಕಲಿ ಕಾಗದ ಪತ್ರವನ್ನು ತಯಾರಿಸಿ ಬ್ಯಾಂಕಿನಲ್ಲಿ ಖಾತೆಯನ್ನು ತೆರೆಯುತ್ತಿದ್ದರು ಮತ್ತು ಅದರ ಮುಖಾಂತರ ವಂಚನೆಯನ್ನು ಮಾಡುತ್ತಿದ್ದರು.