‘ಸನಾತನ ಪ್ರಭಾತ’ ಹಿಂದೂಗಳ ಅಜ್ಞಾನವನ್ನು ದೂರಗೊಳಿಸುವ ಮಹಾನ್ ಕಾರ್ಯವನ್ನು ಮಾಡುತ್ತಿದೆ !
‘ಸನಾತನ ಪ್ರಭಾತ’ ಮತ್ತು ‘ಸನಾತನ ಸಂಸ್ಥೆ’ ಸಂಪೂರ್ಣ ಹಿಂದೂಸ್ಥಾನದಲ್ಲಿ ಹಿಂದೂ ಸಂಸ್ಕೃತಿ ಮತ್ತು ಧರ್ಮಸಂಸ್ಕಾರ ನೀಡುವ ಕಾರ್ಯವನ್ನು ಮಾಡುತ್ತಿದೆ. ಹಿಂದೂ ಸಮಾಜಕ್ಕೆ ಆವಶ್ಯಕವಿರುವ ಶುದ್ಧ, ಸಾತ್ವಿಕ, ಯೋಗ್ಯ ಮತ್ತು ಸತ್ಯ ಜ್ಞಾನವನ್ನು ನೀಡುವ ಮಹಾನ ಕಾರ್ಯವನ್ನು ಮಾಡುತ್ತಿದೆ. ಇಂದು ಹಿಂದೂಗಳಲ್ಲಿರುವ ಅಜ್ಞಾನವನ್ನು ದೂರಗೊಳಿಸಲು ಶುದ್ಧ ಜ್ಞಾನವನ್ನು ನೀಡುವ ಮಹಾನ ಕಾರ್ಯವನ್ನು ಈ ನಿಯತಕಾಲಿಕೆ ಮಾಡುತ್ತಿದೆ !’ – ಹ.ಭ.ಪ. ಸುಹಾಸಬುವಾ ವಝೆ, ಹೆಸರಾಂತ ಕೀರ್ತನಕಾರರು, ಬೋರಿ, ಗೋವಾ.
ಸನಾತನ ಆಶ್ರಮ ಸ್ವರ್ಗಕ್ಕಿಂತಲೂ ಶ್ರೇಷ್ಠವೆನಿಸಿತು !
‘ಸನಾತನ ಸಂಸ್ಥೆಯ ಸಂಸ್ಥಾಪಕರಾದ (ಪರಾತ್ಪರ ಗುರು) ಡಾ. ಜಯಂತ ಆಠವಲೆ ಇವರಿಂದಾಗಿ ನಮಗೆ ಹಿಂದೂ ಧರ್ಮದ ವಿಷಯದ ಎಲ್ಲ ಮಾಹಿತಿ ದೊರಕಿತು. (ಪರಾತ್ಪರ ಗುರು) ಡಾ. ಆಠವಲೆಯವರು ಹಿಂದೂಗಳ ಉದ್ಧಾರವನ್ನು ಮಾಡಿದ್ದಾರೆ. ಅವರು (ಪರಾತ್ಪರ ಗುರು ಡಾ. ಜಯಂತ ಆಠವಲೆ) ಭಗವಾನ ಶ್ರೀಕೃಷ್ಣನ ಅವತಾರವಾಗಿದ್ದಾರೆ. ಹಿಂದೂಗಳ ಮೇಲಿನ ಅನ್ಯಾಯವನ್ನು ದೂರಗೊಳಿಸಲು ಅವರ ಜನ್ಮವಾಗಿದೆ. ಸನಾತನ ಆಶ್ರಮಕ್ಕೆ ಭೇಟಿ ನೀಡಿದ ಬಳಿಕ ನನಗೆ ಅದು ‘ಸ್ವರ್ಗಕ್ಕಿಂತಲೂ ಶ್ರೇಷ್ಠ’ ಎನಿಸಿತು. ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು, ಎನ್ನುವ ಇಚ್ಛೆಯಿದೆ.’ – ಶ್ರೀ ಚಂದ್ರಕಾಂತ (ಭಾಯಿ) ಪಂಡಿತ, ಅಧ್ಯಕ್ಷ, ಗೋಮಂತಕ ಮಂದಿರ ಮತ್ತು ಧಾರ್ಮಿಕ ಸಂಸ್ಥೆ ಮಹಾಸಂಘ.
ನಾಗರಿಕರು ವದಂತಿಗಳಿಗೆ ಕಿವಿಗೊಡದೆ ಸನಾತನ ಆಶ್ರಮಕ್ಕೆ ಭೇಟಿ ನೀಡಿ ಆಶ್ರಮದ ಕಾರ್ಯವನ್ನು ಅರಿತುಕೊಳ್ಳಬೇಕು !
‘ಸನಾತನದ ಆಶ್ರಮದ ವಿಷಯದಲ್ಲಿ ನಾವು ಬಹಳ ಕೇಳಿದ್ದೆವು ಮತ್ತು ಸನಾತನ ಸಂಸ್ಥೆಯ ಮೇಲೆ ಬಹಳ ಆರೋಪಗಳನ್ನು ಹೊರಿಸಲಾಗಿದೆ. ಪ್ರತ್ಯಕ್ಷ ಆಶ್ರಮಕ್ಕೆ ಭೇಟಿ ನೀಡಿದ ನಂತರ ‘ಸನಾತನ ಸಂಸ್ಥೆ ಎಂದರೆ ಏನು?’ ಎನ್ನುವ ಅನುಭವ ನನಗೆ ಬಂದಿದೆ. ಪ್ರತಿಯೊಬ್ಬರೂ ಆಶ್ರಮಕ್ಕೆ ಭೇಟಿ ನೀಡಿ ಸನಾತನದ ಕಾರ್ಯವನ್ನು ತಿಳಿದುಕೊಳ್ಳಬೇಕು. ನಾಕರಿಕರು ಕಾರ್ಯವನ್ನು ಅರಿತುಕೊಳ್ಳದೇ ಸನಾತನ ಸಂಸ್ಥೆಯ ವಿರುದ್ಧದ ವದಂತಿಗಳಿಗೆ ಬಲಿ ಬೀಳಬಾರದು. ದಿನಪತ್ರಿಕೆ ‘ಸನಾತನ ಪ್ರಭಾತ’ದಲ್ಲಿರುವ ವಾರ್ತೆಗಳು ಓದುವಂತಹದ್ದಿರುತ್ತವೆ. ಅನಾವಶ್ಯಕ ವಾರ್ತೆಗಳನ್ನು ಓದುವುದಕ್ಕಿಂತ ದೈನಿಕ ‘ಸನಾತನ ಪ್ರಭಾತ’ದಲ್ಲಿರುವ ವಾರ್ತೆಗಳನ್ನು ಓದಿದರೆ ಒಳ್ಳೆಯ ಅನುಭವ ಬರುತ್ತದೆ. ದಿನಪತ್ರಿಕೆ ‘ಸನಾತನ ಪ್ರಭಾತ’ ಮೊದಲ ಪುಟದಿಂದ ಕೊನೆಯ ಪುಟದ ವರೆಗೆ ಓದಬೇಕು’. – ಶ್ರೀ ಗುರುದಾಸ ಪ್ರಭು, ಪತ್ರಕರ್ತರು, ಫೋಂಡಾ.
‘ಆಶ್ರಮದಲ್ಲಿ ಸನಾತನದ ಸಾಧಕರು ಪಡುತ್ತೊರುವ ಶ್ರಮ ಹಾಗೂ ಅವರ ಸಮರ್ಪಣಭಾವ ಮತ್ತು ತ್ಯಾಗ ಪ್ರಚಿತಿ ಸಿಕ್ಕಿತು !’ – ಶ್ರೀ. ಪ್ರವೀಣ ಚಂದ್ರಾ, ನೌಕಾ ದಳದ ನಿವೃತ್ತ ಅಧಿಕಾರಿ