ಬಿಹಾರದಲ್ಲಿ ಮದ್ಯ ನಿಷೇಧವಿರುವಾಗ ಮದ್ಯವು ಸಹಜವಾಗಿ ಲಭ್ಯವಾಗುತ್ತಿದೆ ! – ಕೇಂದ್ರ ಸಚಿವ ಪಶುಪತಿ ಪಾರಸರವರ ದಾವೆ

ಮದ್ಯ ನಿಷೇಧವಿರುವ ರಾಜ್ಯದಲ್ಲಿ ಮದ್ಯವು ಸಹಜವಾಗಿ ಲಭ್ಯವಾಗುತ್ತದೆ, ಎಂಬುದು ಕೇಂದ್ರ ಸಚಿವರು ಹೇಳುತ್ತಿದ್ದಾರೆ ಹಾಗಾದರೆ ರಾಜ್ಯ ಸರಕಾರವು ಏನು ಮಾಡುತ್ತಿದೆ ? ಎಂಬ ಪ್ರಶ್ನೆ ಮೂಡುತ್ತದೆ !

ದೇಶದ ಹಲವು ರಾಜ್ಯಗಳಲ್ಲಿ ಇಂದು ಗೋಹತ್ಯೆಯ ಕಾಯಿದೆಯಿದೆ; ಆದರೂ ಕೂಡ ಗೋಹತ್ಯೆ ನಡೆಯುತ್ತದೆ, ಗೋಮಾಂಸದ ಕಳ್ಳಸಾಗಾಣಿಕೆಯಾಗುತ್ತದೆ. ಅದಕ್ಕೆ ಸರಕಾರ, ಆಡಳಿತ ಹಾಗೂ ಪೊಲೀಸರೇ ಹೊಣೆಯಾಗಿದ್ದಾರೆ !

ಕೇಂದ್ರ ಸಚಿವ ಪಶುಪತಿ ಪಾರಸ

ಪಾಟಲೀಪುತ್ರ (ಬಿಹಾರ) – ರಾಜ್ಯದೊಳಗೆ ಮದ್ಯದ ಕಳ್ಳಸಾಗಾಣಿಕೆಯಾಗುತ್ತದೆ ಹಾಗೂ ಅದರಿಂದ ಮದ್ಯದ ದೊಡ್ಡ ದಾಸ್ತಾನನ್ನು ನಿಯತವಾಗಿ ಜಪ್ತಿ ಮಾಡಲಾಗುತ್ತದೆ. ರಾಜ್ಯದಲ್ಲಿ ಮದ್ಯ ಮಾರಾಟವು ರಾಜಾರೋಷವಾಗಿ ನಡೆಯುತ್ತಿದೆ ಮತ್ತು ಈ ಸತ್ಯವನ್ನು ಯಾರೂ ಕೂಡ ನಿರಾಕರಿಸಲು ಸಾಧ್ಯವಿಲ್ಲ, ಎಂದು ಕೇಂದ್ರ ಸಚಿವ ಹಾಗೂ ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಪಶುಪತೀ ಪಾರಸರವರು ದಾವೆ ಮಾಡಿದರು. ಅವರ ಈ ದಾವೆಯಿಂದ ರಾಜ್ಯದಲ್ಲಿ ಮದ್ಯ ನಿಷೇಧದ ವಾಸ್ತವವು ತಿಳಿದು ಬಂದಿದೆ.

ಪಾರಸರವರು ತಮ್ಮ ಮಾತನ್ನು ಮುಂದುವರೆಸುತ್ತಾ, ರಾಜ್ಯದಲ್ಲಿ ಅಕ್ರಮವಾಗಿ ಮದ್ಯದ ಲಭ್ಯತೆ ಇದುವೇ ಮದ್ಯ ಕುಡಿಯುವ ಜನರನ್ನು ಬಂಧಿಸುವ ಕಾರಣವಾಗಿದೆ; ಆದರೆ ಕಲಬೆರಕೆಯಿರುವ ಮದ್ಯವನ್ನು ತಯಾರಿಸಿ ಮಾರಾಟ ಮಾಡುವ ಮದ್ಯ ಮಾಫಿಯಾದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ‘ರಾಜ್ಯದಲ್ಲಿ ಮದ್ಯ ಲಭ್ಯವಿಲ್ಲ’, ಎಂದು ಯಾರೂ ಕೂಡ ಹೇಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಅಕ್ರಮವಾಗಿ ಮದ್ಯ ಸಿಗುತ್ತಿತ್ತು ಹಾಗೂ ಅದರಿಂದ ಹಲವರನ್ನು ನಿಯತವಾಗಿ ಬಂಧಿಸಲಾಗುತ್ತಿತ್ತು. ಮದ್ಯ ನಿಷೇಧ ಕಾಯಿದೆಯು ರಾಜ್ಯದ ಹಿತಕ್ಕಾಗಿದೆ, ಎಂಬ ಬಗ್ಗೆ ತಿಳುವಳಿಕೆಯಿತ್ತು; ಆದರೆ ಹೀಗಿರುವಾಗಲೂ ರಾಜ್ಯದಲ್ಲಿ ಮದ್ಯವನ್ನು ಅಕ್ರಮ ಮಾರಾಟವಾಗುತ್ತಿದೆ.